For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ ಎರಡನೇ ಅಲೆ: ಇದು ಮಕ್ಕಳಿಗೆ ತುಂಬಾ ಅಪಾಯಕಾರಿ ಏಕೆ, ಲಕ್ಷಣಗಳೇನು?

|

ಕೊರೊನಾ ಲಸಿಕೆ ಬಂದ್ರು ಕೊರೊನಾ ವೈರಸ್ ಕುರಿತ ಆತಂಕ ಇನ್ನೂ ಕಡಿಮೆಯಾಗಿಲ್ಲ. ಈಗಾಗಲೇ ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚಾಗಿದ್ದು ಈ ರೂಪಾಂತರ ವೈರಸ್ ಬಗ್ಗೆ ನಾವು ತುಂಬಾ ಎಚ್ಚರವಾಗಿರಬೇಕು.

corona virus second wave

ಅದರಲ್ಲೂ ಈಗ ಬಂದಿರುವ ಕೊರೊನಾವೈರಸ್‌ ಮಕ್ಕಳಿಗೆ ಬೇಗನೆ ಹರಡುವುದರಿಂದ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು, ಟ್ಯೂಷನ್‌ ಕಳುಹಿಸಲು ಆತಂಕವಾಗುತ್ತಿದೆ. ಈಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಲಭ್ಯವಿದೆ, ಮಕ್ಕಳಿಗೆ ಇನ್ನು ಲಸಿಕೆ ಬಂದಿಲ್ಲ. ಆದರೆ ಈಗ ಬಂದಿರುವ ಕೊರೊನಾವೈರಸ್ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬುವುದನ್ನು ಅಧ್ಯಯನಗಳು ಹೇಳುತ್ತಿವೆ, ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಕೊರೊನಾವೈರಸ್ ದೊಡ್ಡವರಿಗಿಂತ ಮಕ್ಕಳಿಗೆ ಅಪಾಯಕಾರಿಯೇ?

ಹೊಸ ಕೊರೊನಾವೈರಸ್ ದೊಡ್ಡವರಿಗಿಂತ ಮಕ್ಕಳಿಗೆ ಅಪಾಯಕಾರಿಯೇ?

ಮೊದಲಿಗೆ ಬಂದ ಕೊರೊನಾವೈರಸ್ ವಯಸ್ಸಾದವರಿಗೆ ಹೆಚ್ಚು ಅಪಾಯಕಾರಿಯಾಗಿತ್ತು. ಮಕ್ಕಳಿಗೆ ಈ ಕೊರೊನಾವೈರಸ್ ಹೆಚ್ಚು ಬಾಧಿಸಿರಲಿಲ್ಲ, ಕೊರೊನಾ ಬಂದಿದ್ದರು ಮಕ್ಕಳನ್ನು ಬಲಿ ತೆಗೆದುಕೊಂಡಿರುವುದು ಕಡಿಮೆ. ಆದರೆ ಈಗ ಬಂದಿರುವ ಹೊಸ ಕೊರೊನಾವೈರಸ್ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿ ಅವರನ್ನು ಬೇಗನೆ ಅಸ್ವಸ್ಥರನ್ನಾಗಿ ಮಾಡುತ್ತಿದೆ.

ಈಗಾಗಲೇ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ 19 ಬಂದಿದ್ದು ಬೆಂಗಳೂರಿನಲ್ಲಿಯೇ 400 ಶಾಲಾ ಮಕ್ಕಳಿಗೆ ಕೋವಿಡ್ 19 ಬಂದಿದೆ. ಮಕ್ಕಳಿಗೆ ಶಾಲೆ ಇರುವುದೇ ಮಕ್ಕಳಲ್ಲಿ ಕೊರೊನಾ ಹರಡುತ್ತಿರಲು ಪ್ರಮುಖ ಕಾರಣವಾಗಿದೆ.

ರೂಪಾಂತರ ಕೊರೊನಾ ವೈರಸ್ ಎಷ್ಟು ಅಪಾಯಕಾರಿ?

ರೂಪಾಂತರ ಕೊರೊನಾ ವೈರಸ್ ಎಷ್ಟು ಅಪಾಯಕಾರಿ?

ರೂಪಾಂತರ ಕೊರೊನಾವೈರಸ್ ಭಾರತ, ಯುಕೆ, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಕಂಡು ಬರುತ್ತಿದ್ದು ವೈದ್ಯಕೀಯ ತಜ್ಞರ ಪ್ರಕಾರ ಈ ಕೊರೊನಾವೈರಸ್ ತುಂಬಾ ಅಪಾಯಕಾರಿಯಾಗಿದ್ದು ಈ ವೈರಸ್‌ ತಗುಲಿದರೆ ಹೆಚ್ಚು ಲಕ್ಷಣಗಳು ಕಂಡು ಬರುವುದು ಹಾಗೂ ಕೆಲವರು ಆಸ್ಪತ್ರೆಗೆ ಕೂಡ ದಾಖಲಾಗಬೇಕಾಗುವುದು.

ಈ ಕೊರೊನಾವೈರಸ್‌ ದೊಡ್ಡವರಿಗಿಂತ ಬೇಗ ಮಕ್ಕಳಲ್ಲಿ ಕಂಡು ಬರುವುದು.

ಈ ಕೊರೊನಾವೈರಸ್‌ನಿಂದ ಮಕ್ಕಳಿಗೆ ಆಗುವ ಅಪಾಯಗಳೇನು?

ಈ ಕೊರೊನಾವೈರಸ್‌ನಿಂದ ಮಕ್ಕಳಿಗೆ ಆಗುವ ಅಪಾಯಗಳೇನು?

ಇದರ ಕುರಿತು ಅಧ್ಯಯನಗಳು ನಡೆಯುತ್ತಿವೆ. ಈಗ ಮಕ್ಕಳಲ್ಲಿ ಕೋವಿಡ್ 19 ಪಾಸಿಟಿವ್ ಬಂದ್ರೆ ಅವರಲ್ಲಿ ಅದರ ಲಕ್ಷಣಗಳು ಹೆಚ್ಚಾಗಿ ಖಮಡು ಬರುತ್ತಿದೆ. ಕೊರೊನಾವೈರಸ್ 2-16 ವರ್ಷದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳಲ್ಲಿ MIS-C (Multisystem Inflammatory Syndrome) ಅಂದ್ರೆ ಅಪರೂಪದ ಅಟೋಇಮ್ಯೂನೆ ಕಂಡು ಬರುತ್ತಿದೆ. ಇದರಿಂದ ಈಗ ಮಕ್ಕಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಮೂರು ಮಕ್ಕಳಲ್ಲಿ ಒಬ್ಬರು ತುಂಬಾ ಅಸ್ವಸ್ಥರಾಗಿದ್ದು ಅವರಿಗೆ ತೀವ್ರ ಘಟಕದಲ್ಲಿಟ್ಟು ಚಿಕಿತ್ಸೆ ನೀಡಬೇಕಾಗಿದೆ ಎಂದು ಜರ್ನಲ್ ಆಫ್‌ ಟ್ರೋಪಿಕಲ್ ಪೀಡಿಯಾಟ್ರಿಕ್ ವರದಿ ಮಾಡಿದೆ.

ಮಕ್ಕಳಿಗೆ ಅಪಾಯ ಮಟ್ಟ ಹೆಚ್ಚಾಗಲು ಕಾರಣವೇನು?

ಮಕ್ಕಳಿಗೆ ಅಪಾಯ ಮಟ್ಟ ಹೆಚ್ಚಾಗಲು ಕಾರಣವೇನು?

ಈಗ ಮಕ್ಕಳು ಶಾಲೆಗೆ, ಟ್ಯೂಷನ್‌ಗೆ ಅಂತ ಹೋಗಲಾರಂಭಿಸಿದ್ದಾರೆ. ಮಕ್ಕಳೊಂದಿಗೆ ಆಟವಾಡಲು ಹೋಗುತ್ತಿದ್ದಾರೆ, ಅಲ್ಲದೆ ಮನೆಯಲ್ಲಿ ದೊಡ್ಡವರು ಕೂಡ ಆಫೀಸ್‌, ಮಾರ್ಕೆಟ್ ಅಂತ ಹೋಗಲಾರಂಭಿಸಿದ್ದಾರೆ, ಇವೆಲ್ಲಾ ಮಕ್ಕಳಿಗೆ ಕೊರೊನಾವೈರಸ್ ತಗುಲುವ ಅಪಾಯ ಹೆಚ್ಚಿಸಿದೆ.

ಮಕ್ಕಳಲ್ಲಿ ಕೊರೊನಾವೈರಸ್ ಲಕ್ಷಣಗಳು

ಮಕ್ಕಳಲ್ಲಿ ಕೊರೊನಾವೈರಸ್ ಲಕ್ಷಣಗಳು

ಮಕ್ಕಳಲ್ಲಿ ಜ್ವರ, ತಲೆನೋವು, ಕೆಮ್ಮು, ಶೀತ ಈ ರೀತಿಯ ಲಕ್ಷಣಗಳು ಕಂಡು ಬರುವುದು.

ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆಯಾದರೆ MIS-C ಲಕ್ಷಣಗಳು ಕಂಡು ಬರುವುದು.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ

* ತುಂಬಾ ಜ್ವರ

* ಮೈ ಮೇಲೆ ಗುಳ್ಳೆಗಳು

* ಕಣ್ಣುಗಳು ಕೆಂಪಾಗುವುದು

* ವಾಂತಿ, ಕಿಬ್ಬೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ

* ತುಟಿ ಒಣಗಿ ಚಿಕ್ಕ ಗುಳ್ಳೆಗಳು ಕಂಡು ಬರುವುದು

* ತುಂಬಾ ಕಿರಿಕಿರಿ ಮಾಡುವುದು

* ಸುಸ್ತು

* ಹಸಿವು ಇಲ್ಲದಿರುವುದು

* ವಾಂತಿ

* ತುಟಿ ಹಾಗೂ ತ್ವಚೆಯಲ್ಲಿ ಊತ

ಮಕ್ಕಳಿಗೆ ಲಸಿಕೆ ಯಾವಾಗ ದೊರೆಯಬಹುದು?

ಮಕ್ಕಳಿಗೆ ಲಸಿಕೆ ಯಾವಾಗ ದೊರೆಯಬಹುದು?

ಈಗ 45 ವರ್ಷ ಹಾಗೂ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಲಭ್ಯವಿದ್ದು ಮಕ್ಕಳಿಗೆ ಈ ಲಸಿಕೆ ಬೀರುವ ಪರಿಣಾಮ ಏನು ಎಂದು ಇನ್ನೂ ತಿಳಿದು ಬಂದಿಲ್ಲ. ಅಧ್ಯಯನ ನಡೆಸಿ ಇವರಿಗೆ ಲಸಿಕೆ ದೊರೆಯಲು ಸ್ವಲ್ಪ ಸಮಯ ಕೂಡ ಹಿಡಿಯಬಹುದು.

English summary

Corona Virus Second Wave: Why It Is More Dangerous For Kids And Symptoms

Why corona virus second wave more dangerous for kids and what are the symptoms, Read on...
X
Desktop Bottom Promotion