For Quick Alerts
ALLOW NOTIFICATIONS  
For Daily Alerts

ಕೋರ್ಬೆವ್ಯಾಕ್ಸ್‌ ಕೊರೊನಾ ಲಸಿಕೆ ದರವನ್ನು ಪ್ರತಿ ಡೋಸ್‌ಗೆ 840ರಿಂದ 250 ರೂ.ಗೆ ಇಳಿಸಲಾಗಿದೆ.

|

ಭಾರತದಲ್ಲಿ 5 ವರ್ಷದ ಮೇಲಿನ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ನೀಡಲು ಅನುಮತಿ ಸಿಕ್ಕಿದ್ದು 5-12 ವರ್ಷದೊಳಗಿನ ಮಕ್ಕಳಿಗೆ ನೀಡಲು ಕೋರ್ಬೆವ್ಯಾಕ್ಸ್‌ (Corbevax) ಲಸಿಕೆಗೆ ಅನುಮತಿ ಸಿಕ್ಕಿದೆ.

ಈಗಾಗಲೇ ಈ ಲಸಿಕೆ ಪಡೆಯಲು ಹಲವು ಪೋಷಕರು ತಮ್ಮ ಮಕ್ಕಳ ಹೆಸರನ್ನು ನೋಂದಣಿ ಮಾಡಿದ್ದಾರೆ. ಇದೀಗ ಈ ಲಸಿಕೆಯ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಕೋರ್ಬೆವ್ಯಾಕ್ಸ್‌ ಕೊರೊನಾ ಲಸಿಕೆಯ ಈಗೀನ ಬೆಲೆಯೆಷ್ಟು?

ಕೋರ್ಬೆವ್ಯಾಕ್ಸ್‌ ಕೊರೊನಾ ಲಸಿಕೆಯ ಈಗೀನ ಬೆಲೆಯೆಷ್ಟು?

ಕೋರ್ಬೆವ್ಯಾಕ್ಸ್‌ ಕೊರೊನಾ ಲಸಿಕೆಗೆ ರು. 250 ಬೆಲೆಗೆ ಇಳಿಸಿದೆ. ಹಿಂದೆ ಎಲ್ಲಾ ಟ್ಯಾಕ್ಸ್ ಸೇರಿ ಇದರ ಬೆಲೆ 840 ರುಪಾಯಿ ಆಗಿತ್ತು.

ಲಸಿಕಾ ಕೇಂದ್ರದಲ್ಲಿ 1 ಡೋಸ್‌ ಲಸಿಕೆಯ ಬೆಲೆಯೆಷ್ಟು?

ಲಸಿಕಾ ಕೇಂದ್ರದಲ್ಲಿ 1 ಡೋಸ್‌ ಲಸಿಕೆಯ ಬೆಲೆಯೆಷ್ಟು?

ಕೊರೊನಾ ಲಸಿಕೆ ಕೇಂದ್ರಗಳಲ್ಲಿ ಒಂದು ಡೋಸ್‌ ಬೆಲೆ ರು. 400 ಇತ್ತು. ಇದೀಗ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಈ ಲಸಿಕೆಯನ್ನು ಹೈದರಾಬಾದ್‌ ಮೂಲದ ಫಾರ್ಮಾ ಕಂಪನಿ ತಯಾರಿಸಿದೆ. ಈ ಲಸಿಕೆಯ ಮೊದಲ ಬೆಲೆ ರೂ. 990 ಆಗಿತ್ತು.

ಸಿಂಗಲ್ ಡೋಸ್‌ ವಯಲ್‌ನ ಲಸಿಕೆ

ಸಿಂಗಲ್ ಡೋಸ್‌ ವಯಲ್‌ನ ಲಸಿಕೆ

ಲಸಿಕೆ ವೇಸ್ಟ್‌ ಆಗುವುದನ್ನು ತಪ್ಪಿಸಲು ಸಿಂಗಲ್‌ ಡೋಸ್ ವಯಲ್ ಬಳಸಲಾಗುತ್ತಿದೆ.

ಇಲ್ಲದಿದ್ದರೆ ಒಂದು ವಯಲ್‌ ಪಡೆಯಬೇಕೆಂದರೆ ಇಂತಿಷ್ಟು ಜನರು ಬೇಕಾಗುತ್ತಿತ್ತು, ಇಲ್ಲದಿದ್ದರೆ ಔಷಧಿ ವ್ಯರ್ಥವಾಗುವ ಸಾಧ್ಯತೆ ಇತ್ತು. ಇದೀಗ ಒಂದು ವಯಲ್‌ನಲ್ಲಿ ಒಂದೇ ಡೋಸ್‌ ಲಸಿಕೆ ಇರುವುದರಿಂದ ಲಸಿಕೆ ವ್ಯರ್ಥವಾಗುವುದಿಲ್ಲ.

ಕೋರ್ಬೆವ್ಯಾಕ್ಸ್‌ಗೆ ನೋಂದಣಿ ಹೇಗೆ?

ಕೋರ್ಬೆವ್ಯಾಕ್ಸ್‌ಗೆ ನೋಂದಣಿ ಹೇಗೆ?

ಮಕ್ಕಳಿಗೆ ನೀಡಲಾಗುತ್ತಿರುವ ಈ ಕೊರೊನಾ ಲಸಿಕೆಗೂ ಅಷ್ಟೇ ಇತರ ಕೊರೊನಾ ಲಸಿಕೆ ಪಡೆಯಲು ಹೇಗೆ Co-WIN ಪೋರ್ಟಲ್‌ನಲ್ಲಿ ನೋಂದಣಿ ಮಾಡುತ್ತಿದ್ದರೂ ಅದೇ ವಿಧಾನ ಇಲ್ಲಿ ಕೂಡ.

ಈ ಕಂಪನಿಯು ಈಗಾಗಲೇ 100 ಮಿಲಿಯನ್‌ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಿದೆ.

ಈ ಲಸಿಕೆ ಮಕ್ಕಳಿಗೆ ನೀಡಲು ಸುರಕ್ಷಿತವಾಗಿದೆ ಎಂಬುವುದು ಕ್ಲಿನಿಕಲ್‌ ಟ್ರಯಲ್‌ನಿಂದ ಸಾಬೀತಾಗಿದೆ.

English summary

Corbevax COVID-19 vaccine price slashed to Rs 250 per dose from 840

Corbevax COVID-19 vaccine price slashed to Rs 250 per dose from 840, Read on...
X
Desktop Bottom Promotion