For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಕಾಡುವ ಮಲಬದ್ಧತೆ ಹೋಗಲಾಡಿಸುವುದು ಹೇಗೆ?

|

ಮಕ್ಕಳಲ್ಲಿ ಕಾಡುವ ಮಲಬದ್ಧತೆ ಸಮಸ್ಯೆ ಪೋಷಕರಿಗೆ ತುಂಬಾ ಚಿಂತೆಗೀಡು ಮಾಡುತ್ತದೆ. ಮಕ್ಕಳು ಪ್ರತಿದಿನ ಮಲವಿಸರ್ಜನೆ ಮಾಡದಿದ್ದರೆ ಅವರು ಏಕೆ ಮಾಡುತ್ತಿಲ್ಲ, ಇದರಿಂದ ಅವರಿಗೆ ಹೊಟ್ಟೆ ನೋವು ಬರಬಹುದೇ ಎಂಬ ಚಿಂತೆ ಪೋಷಕರದ್ದು. ಇನ್ನು ಕೆಲವು ಮಕ್ಕಳು ಸರಿಯಾಗಿ ನೀರು ಕುಡಿಯದೇ ಇರುವುದರಿಂದ 2-3 ದಿನಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗುತ್ತಾರೆ.

Constipation: Child Over One Year of Age

ಮಕ್ಕಳು ಆಟದಲ್ಲಿ ತುಂಬಾ ಬ್ಯುಸಿಯಾಗಿದ್ದರೆ, ಇಲ್ಲಾ ಅವರಿಗೆ ಪ್ರತಿದಿನ ಟಾಯ್ಲೆಟ್‌ಗೆ ಹೋಗುವ ಅಭ್ಯಾಸ ಮಾಡಿಸದೇ ಹೋದರೂ ಮಕ್ಕಳು ಪ್ರತಿದಿನ ಮಲವಿಸರ್ಜನೆಗೆ ಹೋಗುವುದಿಲ್ಲ. ತಾಯಿಯ ಎದೆ ಹಾಲು ಮಾತ್ರ ಕುಡಿಯುವಾಗ ಕೆಲ ಮಕ್ಕಳು 3-4 ದಿನವಾದರೂ ಮಲವಿಸರ್ಜನೆ ಮಾಡುವುದಿಲ್ಲ. ಹೀಗಾದರೆ ಭಯ ಪಡುವ ಅಗ್ಯತವಿಲ್ಲವೆಂದು ಮಕ್ಕಳ ತಜ್ಞರು ಹೇಳುತ್ತಾರೆ.

ಮಕ್ಕಳಿಗೆ 6 ತಿಂಗಳ ಬಳಿಕ ಹಣ್ಣು, ತರಕಾರಿಗಳನ್ನು ನೀಡಲು ಪ್ರಾರಂಭಿಸಿದ ಮೇಲೆ ಅವರು ಪ್ರತಿದಿನ ಟಾಯ್ಲೆಟ್‌ಗೆ ಹೋಗುತ್ತಾರೆ, ಆದರೂ ಕೆಲ ಮಕ್ಕಳು ಎರಡು ಮೂರು ದಿನವಾದರೂ ಹೋಗುವುದಿಲ್ಲ, ಅಲ್ಲದೆ ಮಲವಿಸರ್ಜನೆಗೆ ಮಾಡುವಾಗ ನೋವಿನಿಂದ ಅಳುತ್ತಾರೆ, ಈ ರೀತಿ ಉಂಟಾದರೆ ಪೋಷಕರಿಗೆ ಆತ ಕ ಉಂಟಾಗುವುದು.

ಇಲ್ಲಿ ನಾವು ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಗೆ ಕಾರಣವೇನು, ಇದನ್ನು ಹೇಗೆ ಹೋಗಲಾಡಿಸಬಹುದು, ಯಾವ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಮಲಬದ್ಧತೆ ಲಕ್ಷಣಗಳು

ಮಲಬದ್ಧತೆ ಲಕ್ಷಣಗಳು

ಮಲಬದ್ಧತೆ ಸಮಸ್ಯೆ ಮಕ್ಕಳಲ್ಲಿ ಅವರ ಮಲ ವಿಸರ್ಜನೆಯ ಅಭ್ಯಾಸವನ್ನೇ ಬದಲಾಯಿಸುತ್ತದೆ. ಮಲ ತುಂಬಾ ಗಟ್ಟಿಯಾಗಿದ್ದರೆ, ಮಾಡುವಾಗ ತುಂಬಾ ನೋವಾಗುತ್ತಿದ್ದರೆ ಮಕ್ಕಳು ಸರಿಯಾಗಿ ಮಲವಿಸರ್ಜನೆ ಮಾಡದೆ

ಮಲಬದ್ಧತೆ ಸಮಸ್ಯೆ ಕಾಡುವುದು.

  • ಕಿಬ್ಬೊಟ್ಟೆಯಲ್ಲಿ ನೋವು
  • 2-3 ದಿನಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗುವುದು
  • ಮಲವಿಸರ್ಜನೆ ಮಾಡುವಾಗ ನೋವುಂಟಾಗುವುದು ಹಾಗೂ ಮಲ ತುಂಬಾ ಗಟ್ಟಿಯಾಗಿರುವುದು
  • ಆಟ ಅಡುತ್ತಿರುವ ಮಗು ಇದ್ದಕ್ಕಿದ್ದಂತೆ ಸುಮ್ಮನೆಯಾಗುವುದು ಇವೆಲ್ಲಾ ಮಲಬದ್ಧತೆಯ ಲಕ್ಷಣಗಳು.
  • ಏನು ಮಾಡಬೇಕು?

    ಏನು ಮಾಡಬೇಕು?

    • ಮಗುವಿಗೆ ಟಾಯ್ಲೆಟ್ ಅಭ್ಯಾಸ ಮಾಡಿಸಬೇಕು. ಮಗುವಿಗೆ ಊಟ ನೀಡಿದ ಬಳಿಕ 5 ನಿಮಿಷ ಟಾಯ್ಲೆಟ್‌ನಲ್ಲಿ ಕೂರಿಸಿ. ಮಗು ಊಟ ಮಾಡಿದ ಇಪ್ಪತ್ತು ನಿಮಿಷದ ಬಳಿಕ ಹೀಗೆ ಮಾಡಿ. ಬೆಳಗ್ಗೆ ಅಥವಾ ಮಧ್ಯಾಹ್ನ ಊಟ ಮಾಡಿಸಿದ ಮೇಲೆ ಹೀಗೆ ಮಾಡಿ. ಪ್ರತಿದಿನ ಒಂದೇ ಸಮಯಕ್ಕೆ ಟಾಯ್ಲೆಟ್‌ಗೆ ಕರೆದುಕೊಂಡು ಹೋಗಿ. ಅವರು ಕೂರುವಾಗ ಫೂಟ್‌ಸ್ಟೀಲ್ ಇಡಿ, ಮುಂದೆಕ್ಕೆ ಬಾಗಿ ಕೂರಲು ಬಿಡಬೇಡಿ.
    • ಮಗು ಟಾಯ್ಲೆಟ್‌ಗೆ ಹೋಗುವಂತೆ ಉತ್ತೇಜಿಸಿ. ಅದಕ್ಕೆ ಗೊಂಬೆ ಕೊಡುವುದು, ಚಾಕೋಲೇಟ್ ಕೊಡುವುದು ಮಾಡಿ. ಈ ರೀತಿ ಮಾಡುವುದರಿಂದ ಅವರು ಪ್ರತಿನಿತ್ಯ ಹೀಗುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಮಗುವಿನ ಮಲ ಬೇಯಿಸಿದ ಆಲೂಗಡ್ಡೆ ರೀತಿ ಮೃದುವಾಗಿರಬೇಕು, ಗಟ್ಟಿಯಾಗಿರಬಾರದು.
    • ಮಗುವಿಗೆ ಹಣ್ಣು, ತರಕಾರಿಗಳನ್ನು ನೀಡಿ, ಒಣ ದ್ರಾಕ್ಷಿ, ಧಾನ್ಯಗಳು ಇವೆಲ್ಲಾ ಮಲವಿಸರ್ಜನೆ ಮಾಡುವಂತೆ ಮಾಡುವಲ್ಲಿ ಸಹಕಾರಿ.
    • ಮಗುವಿಗೆ ಸಾಕಷ್ಟು ನೀರು ಕುಡಿಸಿ, ಅದು ಕುಡಿಯದಿದ್ದರೂ ಏನಾದರೂ ಆಟವಾಡಿಸುತ್ತಾ ಕುಡಿಸಿ. ಒಣ ಪ್ಲಮ್‌ನ ಜ್ಯೂಸ್‌ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ.
    • ಮಗು ಮಲವಿಸರ್ಜನೆಗೆ ಹೋಗದಿದ್ದರೆ ಟೆನ್ಷನ್ ಮಾಡಿಕೊಳ್ಳಬೇಡಿ, ಮಗುವನ್ನು ಅದೇ ದಿನ ಬೇರೆ ಸಮಯದಲ್ಲಿ ಕೂರಿಸಿ ಮಾಡುವುದು.
    • ಏನು ಮಾಡಬಾರದು?

      ಏನು ಮಾಡಬಾರದು?

      ಮಗುವಿಗೆ ಲ್ಯಾಕ್ಸಾಟಿವ್ಸ್ ವೈದ್ಯರ ಸಲಹೆ ಇಲ್ಲದೆ ನೀಡಬೇಡಿ.ಕೆಲ ಮಕ್ಕಳಿಗೆ ಹೊರಗಿನ ಹಾಲು ಹಾಕಿದರೂ ಮಲವಿಸರ್ಜನೆಗೆ ಕಷ್ಟವಾಗಬಹುದು,ಅಂಥ ಹಾಲನ್ನು ನೀಡಲು ಹೋಗಬೇಡಿ.

      ಮಗು ಮಲವಿಸರ್ಜನೆ ಚಡ್ಡಿಯಲ್ಲಿಯೇ ಮಾಡಿದರೆ ಕೋಪಗೊಳ್ಳಬೇಡಿ, ಮಕ್ಕಳು ಬೇಕು ಅಂತ ಮಾಡುವುದಿಲ್ಲ, ಅವರಿಗೆ ಮಲವಿಸರ್ಜನೆಯ ಅನುಭವ ಬಂದಾಗ ಹೇಳುತ್ತಾರೆ, ಅದೇ ಬೈಯ್ಯುವುದು ಮಾಡಿದರೆ ಅವರು ಭಯದಿಂದ ಮಲವಿಸರ್ಜನೆ ತಡೆ ಹಿಡಿಯಲು ಪ್ರಯತ್ನಿಸುತ್ತಾರೆ.

      ಮಗುವಿಗೆ ಅದರ ಇಷ್ಟದ ವಸ್ತು, ಆಟಿಕೆ ಕೊಡುತ್ತೇನೆ ಎಂದು ಹೇಳಿ

      ಮಗುವಿಗೆ ಅದರ ಇಷ್ಟದ ವಸ್ತು, ಆಟಿಕೆ ಕೊಡುತ್ತೇನೆ ಎಂದು ಹೇಳಿ

      ಮಗುವಿಗೆ ನೀನು ಟಾಯ್ಲೆಟ್‌ ಮಾಡಿದರೆ ಅದು ಇಷ್ಟಪಡುವ ವಸ್ತು ಕೊಡುತ್ತೇನೆ ಎಂದು ಹೇಳಿ ಖುಷಿಯಾಗುವುದು. ಅಲ್ಲದೆ ಮಕ್ಕಳಿಗೆ ತಾಜಾ ಫ್ರೂಟ್‌ ಜ್ಯೂಸ್ ಕೊಡಿ. ಇವೆಲ್ಲಾ ಮಲವಿಸರ್ಜನೆ ಸರಿಯಾಗಿ ಆಗಲು ಸಹಕಾರಿ.

      ಯಾವಾಗ ವೈದ್ಯರಿಗೆ ತೋರಿಸಬೇಕು?

      ಯಾವಾಗ ವೈದ್ಯರಿಗೆ ತೋರಿಸಬೇಕು?

      • ಮಗುವಿನ ಮಲವಿಸರ್ಜನೆ ಮಾಡಿದಾಗ ರಕ್ತ ಕಂಡು ಬಂದರೆ
      • ಆಗಾಗ ಮಲಬದ್ಧತೆ ಕಾಡುತ್ತಿದ್ದರೆ
      • 3 ದಿನಕ್ಕಿಂತ ಹೆಚ್ಚು ದಿನ ಟಾಯ್ಲೆಟ್‌ಗೆ ಹೋಗದೇ ಇದ್ದರೆ
      • ಮಲವಿಸರ್ಜನೆ ಮಾಡುವಾಗ ಮಗು ನೋವಿನಿಂದ ಅಳುತ್ತಿದ್ದರೆ
      • ಔಷಧಿ ತೆಗೆದುಕೊಂಡರೂ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ
      • ಸಲಹೆ: ಮಕ್ಕಳಿಗೆ ಮಲಬದ್ಧತೆ ಉಂಟಾದಾಗ ಆತಂಕ ಪಡಬೇಡಿ, ಸೊಪ್ಪು, ತರಕಾರಿ, ಹಣ್ಣುಗಳನ್ನು ನೀಡಿ, ಫ್ರೂಟ್‌ ಜ್ಯೂಸ್‌ ನೀಡಿ, ನೀರು ಕುಡಿಸಿ, ಇವೆಲ್ಲಾ ಮಲ ವಿಸರ್ಜನೆ ಸರಿಯಾಗಿ ಹೋಗುವಂತೆ ಮಾಡುವುದು.

English summary

Constipation in Children Over One Year of Age: Symptoms and Treatment

Constipation is a change in the child's stool or bowel habits. The child may have constipation if his or her stools are too hard, too infrequent, too painful, too large, too wide or if he cannot push it all out.
X
Desktop Bottom Promotion