For Quick Alerts
ALLOW NOTIFICATIONS  
For Daily Alerts

ಮಕ್ಕಳ ಪೋಷಣೆಯಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು

|

ಪೋಷಕರ ಪಾತ್ರ ಎನ್ನುವುದು ಮನಸ್ಸಿಗೆ ಹೆಚ್ಚು ಖುಷಿ ನೀಡುವ ಹಾಗೂ ಅಷ್ಟೇ ಜವಾಬ್ದಾರಿಯುತವಾದ ಪಾತ್ರವಾಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ಮನೆಯ ಪರಿಸರ ಹಾಗೂ ಮನೆಯಲ್ಲಿ ಇರುವ ವ್ಯಕ್ತಿಗಳ ವರ್ತನೆ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಆದ್ದರಿಂದ ಅವರ ಸೂಕ್ಷ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ತುಂಬುವ ಕೆಲಸವನ್ನು ಪೋಷಕರು ಮಾಡಬೇಕಾಗುತ್ತದೆ.

ಮಕ್ಕಳು ಎಂದ ಮೇಲೆ ತುಂಟಾಟ ಇದ್ದೇ ಇರುತ್ತದೆ, ಕೆಲವು ಮಕ್ಕಳು ಸ್ವಲ್ಪ ಕೀಟಲೆ ಮಾಡಿದರೆ, ಕೆಲ ಮಕ್ಕಳು ಅಪ್ಪ-ಅಮ್ಮನ ತಲೆಯೇ ಕೆಟ್ಟು ಹೋಗಬೇಕು ಅಷ್ಟೊಂದು ಕೀಟಲೆ ಮಾಡುತ್ತಾರೆ. ಮನೆಯ ವಸ್ತುಗಳನ್ನು ಹಾಳು ಮಾಡುವುದು, ಹೊರಗಡೆ ಕರೆದುಕೊಂಡು ಹೋದಾಗ ಕಣ್ಣಿಗೆ ಕಂಡ ವಸ್ತುಗಳೆನ್ನೆಲ್ಲಾ ಬೇಕೆಂದು ಹಠ ಮಾಡುವುದು, ಕೋಪಗೊಳ್ಳುವುದು, ಚೀರುವುದು ಮಾಡುತ್ತಾರೆ. ಮಕ್ಕಳು ಈ ರೀತಿ ಹಠ ಮಾಡಿದಾಗ ಕೋಪಗೊಂಡು ಹೊಡೆಯಲು ಹೋಗಬೇಡಿ. ಹೊಡೆಯುವುದರಿಂದ ಮಕ್ಕಳು ಬುದ್ಧಿ ಕಲಿಯುತ್ತಾರೆ ಎಂಬ ಕಲ್ಪನೆ ಮೊದಲು ಬಿಡಿ.

Challenging Parenting Problems And Their Solutions

ಇನ್ನು ಈಗೀನ ಮಕ್ಕಳು ಗ್ಯಾಡ್ಜೆಟ್‌ ಚಟ ಬೆಳೆಸಿರುತ್ತಾರೆ. ಮಕ್ಕಳಲ್ಲಿರುವ ಹಠ, ಮೊಂಡುತನ, ಗ್ಯಾಡ್ಜೆಟ್ ಚಟ ಮುಂತಾದ ಕೆಟ್ಟ ಅಭ್ಯಾಸಗಳ್ನು ಬಿಡಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ಮೊಂಡುತನ

1. ಮೊಂಡುತನ

ಮಕ್ಕಳು ತಮಗೆ ಬಯಸಿದ್ದು ಸಿಗದೇ ಹೋದಾಗ, ಬೇಜಾರಾದಾಗ ಮೊಂಡುತನ ತೋರುತ್ತಾರೆ. ಈ ರೀತಿ ಮೊಂಡುತನ ತೋರಿದಾಗ ಗದರಿಸುವ ಬದಲು ಈ ಟೆಕ್ನಿಕ್ ಪ್ರಯೋಗಿಸಿ ನೋಡಿ.

* ಮಗುವಿನ ಬಳಿ ನೀನು ತಪ್ಪು ಮಾಡುತ್ತಿದ್ದೀಯಾ ಅಂತೆಲ್ಲಾ ಗದರಬೇಡಿ, ಯಾವುದೇ ಪ್ರತಿಕ್ರಿಯೆ ತೋರಬೇಡಿ, ಶಾಂತವಾಗಿರಿ.

* ನಿಮ್ಮ ಮಗು ಅಳುತ್ತಿದ್ದರೆ 'ನೀನು ಅಳು ನಿಲ್ಲಿಸಿದರೆ ಮಾತ್ರ ನಾನು ನೀನು ಹೇಳುವುದನ್ನು ಕೇಳುತ್ತೇನೆ' ಅಂತ ಹೇಳಿ ನೋಡಿ.

* ನಿಮ್ಮ ಮಗುವಿಗೆ ಗಮನವನ್ನು ಬೇರೆ ಕಡೆಗೆ ತಿರುಗಿಸಿ.

* ಮಗು ಮೊಂಡುತನ ಮಾಡಿದಾಗ ಅದು ಹೇಳಿದಂತೆ ಕೇಳಲು ಹೋಗಬೇಡಿ, ಈ ರೀತಿ ಮಾಡುತ್ತಾ ಮಕ್ಕಳು ಅದನ್ನೇ ತಮ್ಮ ಸ್ವಭಾವನ್ನಾಗಿಸುತ್ತೇವೆ, ಮಗುವಿನ ಈ ಸ್ವಭಾವದಿಂದ ಅದು ಬೆಳೆಯುತ್ತಿದ್ದಂತೆ ಮಗುವಿಗೂ, ನಿಮಗೂ ತೊಂದರೆ ಉಂಟಾಗುವುದು.

2. ಹೇಳಿದ ಮಾತು ಕೇಳದಿರುವುದು

2. ಹೇಳಿದ ಮಾತು ಕೇಳದಿರುವುದು

ಮಕ್ಕಳ ಸ್ವತಂತ್ರ ಮನೋಭಾವ ಬೆಳೆಯುತ್ತಿದ್ದಂತೆ ಕೆಲವೊಮ್ಮೆ ಹೇಳಿದ ಮಾತು ಕೇಳುವುದಿಲ್ಲ. ಮಕ್ಕಳು ಹೀಗೆ ಮಾಡುವಾಗ ಅವರ ಮೇಲೆ ಕೋಪಗೊಂಡು ಹಾರಾಡುವುದಕ್ಕಿಂತ ನೀವು ಮಾಡಬೇಕಾಗಿರುವುದು ಇಷ್ಟೇ.

* ನಿಮ್ಮ ಮಗುವಿನ ಅಭಿಪ್ರಾಯಕ್ಕೂ ಬೆಲೆ ಕೊಡಿ.

* ನಿಮ್ಮ ಮಾತು ಅವನು/ಅವಳು ಎಕೆ ಕೇಳುತ್ತಿಲ್ಲ ಅಂತ ಸಮಧಾನವಾಗಿ ಕೇಳಿ, ಮಗುವಿನ ಅಭಿಪ್ರಾಯ ವ್ಯಕ್ತಪಡಿಸಲು ಪ್ರೋತ್ಸಾಹಿಸಿ.

* ನೀವು ಹೇಳಿದ ಮಾತು ಕೇಳುತ್ತಿಲ್ಲ ಅಂತ ಕೋಪಗೊಳ್ಳುವುದರಿಂದ ಅವರು ಮತ್ತಷ್ಟು ಹಠಮಾರಿಗಳಾಗುತ್ತಾರೆ.

3. ಕೋಪದಿಂದ ಚೀರಾಡುವುದು

3. ಕೋಪದಿಂದ ಚೀರಾಡುವುದು

ಕೆಲ ಮಕ್ಕಳಿಗೆ ಕೊಪ ಬಂದರೆ ಚೀರಾಡುವುದು, ನೆಲದಲ್ಲಿ ಬಿದ್ದು ಹೊರಳಾಡುವುದು ಮಾಡುತ್ತಾರೆ. ಇಂಥ ಮಕ್ಕಳನ್ನು ನಿಭಾಯಿಸುವುದು ಸುಲಭ ಮಾತಲ್ಲ. ನೀವು ಹೇಳಿದ್ದನ್ನು ಕೇಳಲ್ಲ, ಕೈಗೆ ಸಿಕ್ಕಿದ್ದನ್ನು ಬೀಳಿಸಿ ಹೊಡೆದು ಹಾಕುತ್ತವೆ, ಮಕ್ಕಳು ಬೇರೆಯವರ ಮುಂದೆ ಈ ರೀತಿ ವರ್ತಿಸಿದಾಗ ನಿಮಗೆ ಮುಜುಗರ ಉಂಟಾಗುವುದು. ಆದರೂ ಸ್ವಲ್ಪ ತಾಳ್ಮೆ ತಂದುಕೊಂಡು ಅವರೊಂದಿಗೆ ಈ ರೀತಿ ವರ್ತಿಸಿ ಆಗ ಅವರ ಸ್ವಭಾವದಲ್ಲಿ ಬದಲಾವಣೆಯಾಗುವುದು:

* ನಿಮ್ಮ ಮಗುವಿನ ಹತ್ತಿರ ಯಾವ ಕಾರಣಕ್ಕೆ ಸಿಟ್ಟು ಬಂತು ಅಂತ ಕೇಳಿ ತಿಳಿದುಕೊಳ್ಳಿ.

* ಶಾಲೆಗೆ ಹೋಗುವ ಮಕ್ಕಳು ಕೆಲವೊಮ್ಮೆ ಹೋಂ ವರ್ಕ್‌, ಪ್ರಾಜೆಕ್ಟ್ ಅಂತ ಮಾನಸಿಕ ಒತ್ತಡದಲ್ಲಿರುತ್ತಾರೆ. ಅವರ ಮಾನಸಿಕ ಒತ್ತಡಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಿ. ಸಾಧ್ಯವಾದರೆ ನಿಮ್ಮ ಮಗುವಿನ ತರಗತಿ ಟೀಚರ್‌ ಜತೆಗೆ ಮಾತನಾಡಿ.

* ಒಂದು ವೇಳೆ ದಿನದಿಂದ ದಿನಕ್ಕೆ ಮಗುವಿನ ಕೋಪ ಸ್ವಭಾವ ಹೆಚ್ಚಾಗುತ್ತಿದ್ದರೆ ಕೋಪವನ್ನು ನಿಯಂತ್ರಿಸಲು ಮಕ್ಕಳ ಕೌನ್ಸಿಲರ್ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು.

4. ಸುಳ್ಳು ಹೇಳುವುದು

4. ಸುಳ್ಳು ಹೇಳುವುದು

ಮಕ್ಕಳು ಕೆಲವೊಮ್ಮೆ ಸುಳ್ಳು ಹೇಳುತ್ತಾರೆ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ನಿಮಗೆ ಗೊತ್ತಾದರೆ ಅವರ ಸುಳ್ಳಿಗೆ ಪ್ರೋತ್ಸಾಹ ನೀಡಬೇಡಿ. ನಿಮ್ಮ ಮಗು ಆಗಾಗ ಸುಳ್ಳು ಹೇಳುತ್ತಿದ್ದರೆ ನಿಮ್ಮಿಂದ ಏನೋ ಬಚ್ಚಿಡುತ್ತಿದೆ ಎಂದು ಅರ್ಥ ಮಕ್ಕಳು ಸುಳ್ಳು ಹೇಳುತ್ತಿರುವುದು ನಿಮ್ಮ ಗಮನಕ್ಕೆ ಬಂದಾಗ ಈ ರೀತಿ ಮಾಡಿ:

* ಸುಳ್ಳು ಹೇಳುತ್ತಿದ್ದೀಯಾ? ಅಂತ ಗದರಿಸಬೇಡಿ, ಬದಲಿಗೆ ಈ ಸುಳ್ಳು ಏಕೆ ಹೇಳಿದೆ ಅಂತ ಸಮಧಾನವಾಗಿ ಕೇಳಿ.

* ಮಗುವಿಗೆ ಸರಿ-ತಪ್ಪುವಿನ ಬಗ್ಗೆ ತಿಳಿ ಹೇಳಿ.

* ನೀವು ಬೈಯುವುದಿಲ್ಲ, ಹೊಡೆಯುವುದಿಲ್ಲ ಅಂತ ಮಕ್ಕಳಿಗೆ ಭರವಸೆ ಸಿಕ್ಕರೆ ಅವರು ಸುಳ್ಳು ಹೇಳುವುದಿಲ್ಲ.

5. ಒಡಹುಟ್ಟಿದವರ ಜತೆ ಕಿತ್ತಾಟ

5. ಒಡಹುಟ್ಟಿದವರ ಜತೆ ಕಿತ್ತಾಟ

ಮನೆಯಲ್ಲಿ ಎರಡು ಮಕ್ಕಳಿದ್ದರೆ ಕಿತ್ತಾಟ ಸಾಮಾನ್ಯ. ಒಬ್ಬರು ತೆಗೆದ ವಸ್ತುವೇ ಮತ್ತೊಬ್ಬರಿಗೆ ಬೇಕು. ಇಬ್ಬರಿಗೆ ಒಂದೇ ರೀತಿಯ ಆಟ ಸಾಮಾನು ಕೊಡಿಸಿದರೂ ಕಿತ್ತಾಟ ಇದ್ದೇ ಇರುತ್ತದೆ. ಇವರ ಕಿತ್ತಾಟ ನೋಡಿ ರೋಸಿ ಹೋಗುವುದುಂಟು. ಮಕ್ಕಳು ಹೀಗೆ ಕಿತ್ತಾಡುವಾಗ ಪೊಷಕರು ಒಬ್ಬರ ಪರ ನಿಂತರೆ ಮತ್ತೊಬ್ಬರಿಗೆ ಬೇಜಾರು. ಮಕ್ಕಳು ಕಿತ್ತಾಡುವಾಗ ಈ ರೂಲ್ಸ್ ಪಾಲಿಸಿ.

* ಯಾರ ಪರ ವಹಿಸಿ ಮಾತನಾಡಬೇಡಿ. ಸಮಧಾನವಾಗಿ ಕುಳಿತು ಇಬ್ಬರ ದೂರುಗಳನ್ನು ಆಲಿಸಿ, ನಂತರ ಇಬ್ಬರನ್ನು ಸಮಧಾನ ಮಾಡಿ ಕಿತ್ತಾಡದೆ ಆಡುವಂತೆ ಹೇಳಿ.

* ಇಬ್ಬರು ಕಿತ್ತಾಡಿದರೆ ನೀವು ಕೇಳಿದ ವಸ್ತು ಕೊಡಿಸುವುದಿಲ್ಲಾ ಅಂತ, ಇಲ್ಲಾ ಅವರು ಯಾವ ವಸ್ತುವಿಗೆ ಕಿತ್ತಾಡುತ್ತಿದ್ದಾರೋ ಅದನ್ನು ತೆಗೆದುಕೊಂಡು ಕಿತ್ತಾಡಿದರೆ ಆಡಲು ಇಬ್ಬರಿಗೂ ಕೊಡುವುದಿಲ್ಲ ಅಂತ ಹೇಳಿ. ಇದರಿಂದ ಮಕ್ಕಳು ಸುಮ್ಮನಾಗುತ್ತಾರೆ.

6. ಮಕ್ಕಳ ತಿನ್ನುವ ಅಭ್ಯಾಸ

6. ಮಕ್ಕಳ ತಿನ್ನುವ ಅಭ್ಯಾಸ

ಪೋಷಕರ ಮುಂದೆ ಇರುವ ದೊಡ್ಡ ಸವಾಲು ಅಂದರೆ ಮಕ್ಕಳಿಗೆ ಪೋಷಕಾಂಶವಿರುವ ಆಹಾರವನ್ನು ತಿನ್ನಿಸುವುದು. ಮಿಠಾಯಿ, ಐಸ್‌ಕ್ರೀಮ್, ಕುರುಕುಲು ತಿಂಡಿಗಳು, ಮ್ಯಾಗಿ ಇವುಗಳನ್ನು ತಿನ್ನಲು ತೋರುವ ಆಸಕ್ತಿಯನ್ನು ಮಕ್ಕಳು ಹಣ್ಣು, ಮತ್ತಿತರ ಆರೋಗ್ಯಕರ ಆಹಾರ ತಿನ್ನಲು ತೋರುವುದಿಲ್ಲ. ಮಕ್ಕಳು ಆಹಾರ ತಿನ್ನದಿದ್ದಾಗ ಈ ರೀತಿ ಮಾಡಿ:

* ಮಗುವಿಗೆ ಇದೇ ಆಹಾರ ತಿನ್ನಿ ಅಂತ ಒತ್ತಾಯ ಮಾಡಬೇಡಿ.

* ಪೋಷಕಾಂಶವಿರುವ ಆಹಾರವನ್ನು ಮಕ್ಕಳು ಇಷ್ಟ ಪಡುವ ರೀತಿಯಲ್ಲಿ ಮಾಡಿಕೊಡಿ. ಹೊರಗಿನ ಆಹಾರಗಳನ್ನು ಕೊಂಡು ತರುವುದಕ್ಕಿಂತ ಮನೆ ಆಹಾರ ಕೊಡಿ.

* ನೀವು ಆರೋಗ್ಯಕರ ಆಹಾರಕ್ರಮ ಪಾಲಿಸುತ್ತಿದ್ದರೆ ಮಕ್ಕಳು ಕುಡ ಅದನ್ನೇ ಪಾಲಿಸುತ್ತದೆ.

7. ಗ್ಯಾಡ್ಜೆಟ್ ಹುಚ್ಚು

7. ಗ್ಯಾಡ್ಜೆಟ್ ಹುಚ್ಚು

ಈಗೀನ ಮಕ್ಕಳಿಗೆ ಗ್ಯಾಡ್ಜೆಟ್ ಹುಚ್ಚು ತುಂಬಾ ಇರುತ್ತದೆ. ಮೊಬೈಲ್ ಕೈಯಲ್ಲಿ ಸಿಕ್ಕರೆ ಸಾಕು ಬೇರೆ ಯಾವುದೇ ಆಟ ಸಾಮಾನು ಬೇಡ. ಕೆಲವೊಂದು ಪೋಷಕರು ಕೂಡ ಮಕ್ಕಳು ಹಠ ಮಾಡದೆ ಒಂದು ಕಡೆ ಕೂರಲಿ ಅಂತ ಮೊಬೈಲ್ ಕೊಡುವುದುಂಟು. ಈ ರೀತಿ ಮಾಡಿದರೆ ಮಕ್ಕಳ ಕ್ರಿಯಾಶೀಲತೆಯನ್ನು ಹಾಳು ಮಾಡಿದಂತೆ. ಮಕ್ಕಳು ಗ್ಯಾಡ್ಜೆಟ್‌ ಚಟ ಬಿಡಿಸಲು ಮೊದಲು ನೀವು ಇದನ್ನ ಮಾಡಿ.

* ನೀವು ಮೊಬೈಲ್ ಬಳಸುವುದನ್ನು ಮಕ್ಕಳ ಮುಂದೆ ಕಡಿಮೆ ಮಾಡಿ. ನೀವು ಮೊಬೈಲ್‌ ತುಂಬಾ ಬಳಸುತ್ತಿದ್ದು, ಮಕ್ಕಳಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಕೇಳುವುದಿಲ್ಲ.

* ನಿಮ್ಮ ಮಕ್ಕಳು ಮನೆಯಿಂದ ಹೊರಗಡೆ ಹೋಗಿ ಆಟ ಆಡುವುದನ್ನು ಪ್ರೋತ್ಸಾಹಿಸಿ. ಅವರ ಜತೆ ನೀವೂ ಆಡಿ. ಈ ರೀತಿಯ ಆಟಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಒಳ್ಳೆಯದು.

* ಸ್ವಲ್ಪದೊಡ್ಡ ಮಕ್ಕಳಾದರೆ ಗ್ಯಾಡ್ಜೆಟ್ ಇಷ್ಟು ಸಮಯ ಮಾತ್ರ ಬಳಸಬೇಕೆಂಬ ರೂಲ್ ತನ್ನಿ.

 8. ಕಲಿಕೆಯಲ್ಲಿ ಹಿಂದೇಟು

8. ಕಲಿಕೆಯಲ್ಲಿ ಹಿಂದೇಟು

ಕೆಲ ಮಕ್ಕಳು ಕಲಿಯಲು ಆಸಕ್ತಿಯೇ ತೋರುವುದಿಲ್ಲ, ಹೋಂವರ್ಕ್ ಮಾಡಲ್ಲ, ಟೀಚರ್ ಪಾಠ ಮಾಡುವಾಗ ಲಕ್ಷ್ಯ ಕೊಡುವುದಿಲ್ಲ, ಮನೆಗೆ ಬಂದರೆ ಪುಸ್ತಕ ಮುಟ್ಟಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದೇಟು ಹಾಕಿದಾಗ ಶಾಲೆಯಿಂದ ಪೋಷಕರನ್ನು ಕರೆಸಿ ಹೇಳುತ್ತಾರೆ, ಇದರಿಂದ ನಿಮಗೆ ಮತ್ತಷ್ಟು ಕಿರಿಕಿರಿ ಆಗುವುದು. ಹಾಗಂತ ಕೋಪಗೊಳ್ಳಬೇಡಿ, ಬದಲಿಗೆ ಊಈ ರೀತಿ ವರ್ತಿಸಿ:

* ಮಕ್ಕಳ ಮೇಲೆ ಓದು-ಓದು ಅಂತ ಒತ್ತಡ ಹಾಕಬೇಡಿ.

* ಓದಿನ ಮಹತ್ವದ ಬಗ್ಗೆ ತಿಳಿ ಹೇಳಿ, ಅವರಲ್ಲಿ ದೊಡ್ಡ-ದೊಡ್ಡ ಕನಸುಗಳನ್ನು ತುಂಬಿ, ಓದಿದರೆ ಮಾತ್ರ ಅ ಕನಸು ನನಸಾಗಲು ಸಾಧ್ಯ ಅಂತ ಹೇಳಿ.

* ನಿಮ್ಮ ಮಗುವಿನಲ್ಲಿರುವ ಇತರ ಕೌಶಲ್ಯ ಗಮನಿಸಿ, ಕೆಲ ಮಕ್ಕಳು ಓದಲು ಸ್ವಲ್ಪ ಹಿಂದೆ ಬಿದ್ದರೂ, ಸ್ಪೋರ್ಟ್ಸ್, ನಾಟಕ ಅಂತ ಚುರುಕು ಇರುತ್ತಾರೆ, ಅವರಲ್ಲಿರುವ ಸುಪ್ತ ಕಲೆ ಗುರುತಿಸಿ ಅದನ್ನು ಬೆಳೆಸಲು ಪ್ರಯತ್ನ ಮಾಡಿ.

 9. ಬೇರೆಯವರ ಕುರಿತು ಸದಾ ದೂರುವುದು

9. ಬೇರೆಯವರ ಕುರಿತು ಸದಾ ದೂರುವುದು

ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು, ಹಾಗಂತ ತುಂಬಾ ದೂರುವ ಗುಣ ಇರಬಾರದು. ಮಕ್ಕಳು ದಿನಾ ಬಂದು ಒಂದೆಲ್ಲಾ ಒಂದು ದೂರು ಹೇಳುದ್ದರೆ ನೀವು ಹೀಗೆ ವರ್ತಿಸಿ:

* ಅವರು ದೂರು ಹೇಳುವಾಗ ನಿರ್ಲಕ್ಷ್ಯ ತೋರಬೇಡಿ, ಯಾವ ಕಾರಣಕ್ಕೆ ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ಅವರಿಗೆ ಒಮದು ಪರಿಹಾರ ನೀಡಿ.

* ಅವನ/ಅವಳ ಸಮಸ್ಯೆಗಳೇನು ಅಂತ ಕೇಳಿ ತಿಳಿದುಕೊಳ್ಳಿ. ನಿನ್ನ ಸಮಸ್ಯೆ ಅಷ್ಟೇನು ದೊಡ್ಡ ಸಮಸ್ಯೆಯಲ್ಲ ಅಂತ ಮನವರಿಕೆ ಮಾಡಿ.

10.ಅಂತರ್ಮುಖಿ ಸ್ವಭಾವ

10.ಅಂತರ್ಮುಖಿ ಸ್ವಭಾವ

ಇದು ತುಂಬಾ ಅಪಾಯಕಾರಿಯಾದ ಸ್ವಭಾವವಾಗಿದೆ, ಇಂಥ ಮಕ್ಕಳು ಬೇರೆ ಮಕ್ಕಳ ಜತೆ ಬೆರೆಯುವುದಿಲ್ಲ, ಸದಾ ಒಂಟಿಯಾಗಿರುತ್ತಾರೆ, ಈ ರೀತಿಯ ಸ್ವಭಾವನ್ನು ಬೆಳೆಯಲು ಬಿಡಬೇಡಿ. ಮಕ್ಕಳಲ್ಲಿ ಈ ಗುಣ ಕಂಡು ಬಂದರೆ ಹೀಗೆ ಮಾಡಿ:

* ಅವನು/ಅವಳನ್ನು ಅದೇ ಪ್ರಾಯದ ಮಕ್ಕಳ ಜತೆ ಆಡುವಂತೆ ಪ್ರೋತ್ಸಾಹಿಸಿ, ಹಾಗಂತ ಒತ್ತಾಯ ಮಾಡಬೇಡಿ. ಚಾರಣ, ಓದುವುದು, ಸಂಗೀತ ಕೇಳುವುದು ಈ ರೀತಿಯ ಉತ್ತಮ ಹವ್ಯಾಸಗಳನ್ನು ಬೆಳೆಸಿ.

* ಮಗ/ಮಗಳ ಸ್ವಭಾವಕ್ಕೆ ಗೌರವ ನೀಡಿ, ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಿ.

English summary

Challenging Parenting Problems And Their Solutions

Parenting is amzing joyride but little tricky also.Let us discuss 10 most challenging parenting issues in this article and have a look at how you can deal with them with a smile on your face.
X
Desktop Bottom Promotion