ಸಣ್ಣ ಮಕ್ಕಳು ತಲೆ ನೋವು ಎಂದು ಅಳುತ್ತಿದ್ದರೆ, ನಿರ್ಲಕ್ಷ್ಯ ಮಾಡಬೇಡಿ!

By: Hemanth
Subscribe to Boldsky

ತಲೆನೋವು ಎನ್ನುವುದು ತುಂಬಾ ಕಿರಿಕಿರಿ ಉಂಟು ಮಾಡಿ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವಂತಹದ್ದಾಗಿದೆ. ಇದನ್ನು ಸಹಿಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕೆಲವೊಂದು ಮಾತ್ರೆ ತೆಗೆದುಕೊಳ್ಳುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡವರಲ್ಲಿ ಕಾಣಿಸಿಕೊಳ್ಳುವಂತಹ ತಲೆನೋವು ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಆತಂಕದ ವಿಷಯವಾಗಿ ಬಿಟ್ಟಿದೆ.

ಹಿಂಡಿ ಹಿಪ್ಪೆ ಮಾಡುವ ತಲೆ ನೋವಿಗೆ ಅದ್ಭುತ ತೈಲ....

ಅಧ್ಯಯನದ ವರದಿಯ ಪ್ರಕಾರ ಸರಿಸುಮಾರು 5-14ನೇ ವಯಸ್ಸಿನ ಮಕ್ಕಳೂ ತಲೆನೋವಿನ ಅನುಭವಕ್ಕೆ ಒಳಗಾಗುವ ಸಾಧ್ಯತೆ ಶೇ.15-20ರಷ್ಟಿದೆ. ಇಂತಹ ತಲೆನೋವನ್ನು ಮಕ್ಕಳ ತಲೆನೋವು ಎಂದು ಕರೆಯಲಾಗುತ್ತದೆ. ಮಕ್ಕಳಲ್ಲಿ ದೊಡ್ಡವರಂತೆ ಕಾಣಿಸಿಕೊಳ್ಳುವಂತಹ ತಲೆನೋವಿಗೆ ಕಾರಣಗಳು ಏನು ಎನ್ನುವ ಪ್ರಶ್ನೆ ಬರುತ್ತದೆ. ಆದರೆ ಮಕ್ಕಳಲ್ಲಿ ಹಲವಾರು ರೀತಿಯ ತಲೆನೋವು ಕಾಣಿಸಿಕೊಳ್ಳುವುದು ಮತ್ತು ಇದಕ್ಕೆಲ್ಲಾ ಬೇರೆಯದೇ ಆಗಿರುವ ಕಾರಣಗಳು ಇವೆ.....

ತಲೆನೋವಿದೆ ಇದೇ ಕಾರಣ!

ತಲೆನೋವಿದೆ ಇದೇ ಕಾರಣ!

ಕೆಲವು ಮಕ್ಕಳಲ್ಲಿ ಅತಿಯಾಗಿ ಅಳುವುದರಿಂದ, ನಿರ್ಜಲೀಕರಣ, ಊಟ ಮಾಡದೆ ಇರುವುದು, ಒತ್ತಡ ಮತ್ತು ದೇಹಕ್ಕೆ ದಣಿವು ಆಗಿರುವುದರಿಂದ ತಲೆನೋವು ಕಾಣಿಸಿಕೊಳ್ಳುವುದು.

ತಲೆನೋವಿನಲ್ಲೂ ಇದೆ ಎರಡು ವಿಧ!

ತಲೆನೋವಿನಲ್ಲೂ ಇದೆ ಎರಡು ವಿಧ!

ತಲೆನೋವನ್ನು ಮೊದಲ ವಿಧ ಮತ್ತು ದ್ವಿತೀಯ ವಿಧವೆಂದು ಕರೆಯಲಾಗುತ್ತದೆ. ದ್ವಿತೀಯ ವಿಧದ ತಲೆನೋವು ಬೇರೆ ಯಾವುದೇ ಆರೋಗ್ಯ ಸಮಸ್ಯೆಯ ಕಾರಣವಾಗಿರಬಹುದು ಮತ್ತು ಪ್ರಥಮ ವಿಧದ ತಲೆನೋವು ಸಾಮಾನ್ಯವಾಗಿ ಬರುವಂತಹ ತಲೆನೋವಾಗಿದೆ.

ಮೈಗ್ರೇನ್ ತಲೆನೋವು...

ಮೈಗ್ರೇನ್ ತಲೆನೋವು...

ಮೈಗ್ರೇನ್ ಮೊದಲ ಹಂತದ ತಲೆನೋವಾಗಿದೆ. ಒತ್ತಡದಿಂದ ಬರುವಂತಹ ತಲೆನೋವನ್ನು ಮೊದಲ ಹಂತದ ತಲೆನೋವು ಎಂದು ಪರಿಗಣಿಸಲಾಗುತ್ತದೆ. ಒತ್ತಡದಿಂದ ಬರುವಂತಹ ತಲೆನೋವು ತಲೆ ಹಾಗೂ ಹಣೆಯಲ್ಲಿ ನೋವನ್ನು ಉಂಟು ಮಾಡುತ್ತದೆ.

ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು

ಮಕ್ಕಳಿಗೂ ಕಾಡಬಹುದು ಮೈಗ್ರೇನ್ ತಲೆನೋವು

ಮಕ್ಕಳಿಗೂ ಕಾಡಬಹುದು ಮೈಗ್ರೇನ್ ತಲೆನೋವು

ಶೇ.10ರಷ್ಟು ಮಕ್ಕಳು ಮೈಗ್ರೇನ್ ತಲೆನೋವಿಗೆ ಒಳಗಾಗುತ್ತಾರೆ. ಈ ರೀತಿಯ ತಲೆನೋವು ತಲೆಯಲ್ಲಿ ಮೆದು ಸ್ಪರ್ಶ ಉಂಟು ಮಾಡುತ್ತದೆ. ಇದರಿಂದ ನೋವು ಉಂಟಾಗಬಹುದು. ಕೆಲವು ಗಂಟೆಗಳ ಕಾಲ ನೋವು ಉಂಟಾಗಿ ವಾಂತಿ ಕೂಡ ಆಗಬಹುದು.

ಇದು, ದ್ವಿತೀಯ ಹಂತದ ತಲೆನೋವು..

ಇದು, ದ್ವಿತೀಯ ಹಂತದ ತಲೆನೋವು..

ದ್ವಿತೀಯ ಹಂತದ ತಲೆನೋವು ಸೋಂಕು, ಆತಂಕ, ಖಿನ್ನತೆ, ಸೈನಸ್ ಸಮಸ್ಯೆ ಮತ್ತು ಕುತ್ತಿಗೆ ಅಥವಾ ತಲೆಯ ಭಾಗದಲ್ಲಿ ಉಂಟಾಗುವ ಸಣ್ಣ ಆಘಾತದಿಂದ ಆಗಬಹುದು.

ಮಕ್ಕಳಲ್ಲಿ ತಲೆನೋವು ಕೆಲವು ದಿನಗಳ ಕಾಲ ಕಾಣಿಸಿಕೊಳ್ಳಬಹುದು

ಮಕ್ಕಳಲ್ಲಿ ತಲೆನೋವು ಕೆಲವು ದಿನಗಳ ಕಾಲ ಕಾಣಿಸಿಕೊಳ್ಳಬಹುದು

10 ವರ್ಷದ ದಾಟಿದ ಮಕ್ಕಳಲ್ಲಿ ತಲೆನೋವು ಕೆಲವು ದಿನಗಳ ಕಾಲ ಕಾಣಿಸಿಕೊಳ್ಳಬಹುದು. ಇಂತಹ ತಲೆನೋವನ್ನು ಗೊಂಚಲು ತಲೆನೋವು ಎಂದು ಕರೆಯಬಹುದು. ಈ ತಲೆನೋವು 7 ದಿನ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರಬಹುದು. ಕಣ್ಣಿನ ಹಿಂದಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕಣ್ಣು ಕೆಂಪಾಗುವುದು ಮತ್ತು ನೀರು ಬರುವುದು ಇದರ ಲಕ್ಷಣವಾಗಿದೆ. ಕಣ್ಣು ಮತ್ತು ಹಣೆ ಊದಿಕೊಳ್ಳಬಹುದು.

ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ...

ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ...

ಪದೇ ಪದೇ ತಲೆನೋವು ಕಾಣಿಸಿಕೊಳ್ಳಲು ಗಡ್ಡೆಯು ಕಾರಣವಾಗಿರಬಹುದು. ಮಗು ಪದೇ ಪದೇ ತಲೆನೋವಿನ ಬಗ್ಗೆ ದೂರುತ್ತಾ ಇದ್ದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು.

English summary

Headaches In Children: Facts

Most of us see only adults suffering from headaches but even children do suffer pain in the head sometimes. Around 15-20% of the kids between 5-14 years tend to experience headaches. They are categorsied as pediatric headaches. But what causes them? Well, there are types of headaches and each one has a different cause behind it. Some headaches are throbbing and pounding pains whereas some are chronic headaches. Here are more facts about headaches in children.
Please Wait while comments are loading...
Subscribe Newsletter