For Quick Alerts
ALLOW NOTIFICATIONS  
For Daily Alerts

ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...

By Jaya Subramanya
|

ಮಕ್ಕಳು ದೇವರಿಗೆ ಸಮಾನ ಎಂಬ ಮಾತಿದೆ. ಅವರ ಆಟ ಪಾಠ ಹಾವ ಭಾವ ಹೀಗೆ ಪ್ರತಿಯೊಂದೂ ಕಣ್ಣಿಗೆ ಆನಂದ ನೀಡುವ ಸಂಗತಿಗಳೇ. ಮಕ್ಕಳು ಬಾಲ್ಯದಲ್ಲಿ ತಮ್ಮ ಪೋಷಕರ ಒಡನಾಟವನ್ನು ಹೆಚ್ಚು ಹಚ್ಚಿಕೊಳ್ಳುವುದರಿಂದ ತಂದೆ ತಾಯಿ ತಮ್ಮೊಡನೇ ಇರಬೇಕು ಅವರೊಂದಿಗೆ ಹೆಚ್ಚುವರಿ ಸಮಯವನ್ನು ಕಳೆಯಬೇಕು ಎಂಬ ಇಂಗಿತ ಅವರಲ್ಲಿರುತ್ತದೆ. ಸಂಜೆಯ ಸಮಯದಲ್ಲಿ ತಮ್ಮೊಂದಿಗೆ ಆಟವಾಡುವುದು, ತಮ್ಮನ್ನು ಪಾರ್ಕ್‌ಗೆ ಕರೆದೊಯ್ಯುವುದು, ಶಾಲಾ ಚಟುವಟಿಕೆಗಳಲ್ಲಿ ತಮ್ಮ ಸಾಧನೆಯನ್ನು ನೋಡಿ ಹೆತ್ತವರು ಖುಷಿಪಡಬೇಕು ಎಂಬುದಾಗಿ ಮಕ್ಕಳು ಭಾವಿಸುತ್ತಾರೆ.

What Happens When Kids Are Ignored?

ಆದರೆ ಮುಂಚಿನ ದಿನಗಳಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳಿಗೆ ನೀಡುತ್ತಿದ್ದ ಕಾಳಜಿ ಸಮಯ ಈಗ ಇಲ್ಲವಾಗಿದೆ. ಪೋಷಕರಿಬ್ಬರೂ ದುಡಿಯುವುದರ ಕಡೆಗೆ ಗಮನ ನೀಡುವುದರಿಂದ ಮಕ್ಕಳ ಕಡೆಗೆ ಸಾಕಷ್ಟು ಗಮನ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಆಟಪಾಠಗಳನ್ನು ಕಣ್ತುಂಬಿಕೊಳ್ಳಲು ಈಗ ಅವರಲ್ಲಿ ಸಮಯವೇ ಇಲ್ಲ. ಇದರಿಂದ ಹೂವಿನಂತಹ ಮಕ್ಕಳ ಹೃದಯಕ್ಕೆ ಬರೆ ಎಳೆದಂತಾಗುತ್ತದೆ. ಅವರುಗಳು ಕೀಳರಿಮೆಯಿಂದ ಬಳಲುತ್ತಾರೆ. ತಾವು ಏಕಾಂಗಿಯೆಂಬ ಭಾವನೆಯಿಂದ ತತ್ತರಿಸಿ ಹೋಗುತ್ತಾರೆ. ಹೂವಿನಂತಹ ಆ ಮೃದು ಮನಸ್ಸಿಗೆ ಒಂದು ಸ್ವಲ್ಪ ವೇದನೆಯಾದರೂ ಅದು ಮಾಸಲಾಗದೇ ಇರುವ ಕಲೆಯಾಗಿ ಅಚ್ಚೊತ್ತದೆ.

ಇಂದಿನ ಲೇಖನದಲ್ಲಿ ಮಕ್ಕಳು ಪೋಷಕರ ಪಾಲನೆಯನ್ನು ಪಡೆದುಕೊಳ್ಳದೇ ಬೆಳೆದಾಗ ಏನು ಸಂಭವಿಸುತ್ತದೆ ಎಂಬುದನ್ನು ನಾವು ನಿಮಗೆ ವಿಷದವಾಗಿ ತಿಳಿಸಲಿದ್ದು ನಿಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ತಿಳಿಸಿಕೊಡಲಿದೆ. ಅಂತೆಯೇ ನಿಮ್ಮ ಮಗು ಈ ಕೆಳಗಿನ ಗುಣಗಳನ್ನು ಹೊಂದಿದೆ ಎಂದಾದಲ್ಲಿ ನೀವು ಆ ಮಗುವಿಗೆ ಸಾಕಷ್ಟು ಕಾಳಜಿ ಪ್ರಾಧಾನ್ಯತೆ ನೀಡುತ್ತಿಲ್ಲ ಎಂದೇ ಅರ್ಥವಾಗಿದೆ.

ಒಂಟಿ ಭಾವನೆ

ಪೋಷಕರು ತಮ್ಮದೇ ಕೆಲಸದಲ್ಲಿ ನಿರತರಾದಾಗ ಮಕ್ಕಳು ಒಬ್ಬಂಟಿಗರಾಗಿ ಬಿಡುತ್ತಾರೆ. ಈ ಒಂಟಿತನ ಅವರಿಗೆ ಸಾಕಷ್ಟು ನೋವನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಖಿನ್ನತೆ ಅವರಲ್ಲಿ ಉಂಟಾಗುತ್ತದೆ.

What Happens When Kids Are Ignored?

ಪ್ರೀತಿಯೇ ಅವರಿಗೆ ದೊರೆಯುವುದಿಲ್ಲ

ಅವರ ಭಾವನೆಗಳಿಗೆ ಸ್ಪಂದಿಸುವವರು ಇಲ್ಲದಾದಾಗ, ಪೋಷಕರು ವಿರಳವಾಗಿ ಮಕ್ಕಳಗೊಂದಿಗೆ ಸಮಯ ಕಳೆಯುವಾಗ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲವಾಗುತ್ತದೆ ಮತ್ತು ಅಸಡ್ಡೆಯನ್ನು ತೋರ್ಪಡಿಸುತ್ತಾರೆ.

ವ್ಯಗ್ರರಾಗುವುದು

ಪ್ರೀತಿ ದೊರೆಯದೇ ಇದ್ದ ಮಕ್ಕಳು ವ್ಯಗ್ರರಾಗುತ್ತಾರೆ. ಒಳಗೆ ಕೋಪವನ್ನು ಇಟ್ಟುಕೊಂಡು ಅದನ್ನು ಇತರ ಮಕ್ಕಳ ಮೇಲೆ ದೊಡ್ಡವರ ಮೇಲೆ ತೋರಿಸಿಕೊಳ್ಳಲು ಆರಂಭಿಸುತ್ತಾರೆ.

What Happens When Kids Are Ignored?

ಕೀಳರಿಮೆ

ತಮ್ಮ ಮೇಲೆ ಪ್ರೀತಿ ತೋರಿಸುವವರು ಇಲ್ಲ ನಮ್ಮನ್ನು ಬೆಂಬಲಿಸುವವರು ಇಲ್ಲ ಎಂದಾದಾಗ ಕೀಳರಿಮೆಯನ್ನು ಅವರು ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಆತ್ಮವಿಶ್ವಾಸವನ್ನೇ ಅವರು ಕಳೆದುಕೊಳ್ಳುತ್ತಾರೆ.

English summary

What Happens When Kids Are Ignored?

Even if you are busy, spending time with your kid is crucial as it plays a very important role in shaping the mind of your kid. Kids who are ignored may develop many disorders including depression. Kids need lots of love during their initial phases of growth. Now, let us discuss what happens when kids aren't given enough of affection.
Story first published: Thursday, May 5, 2016, 11:21 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more