For Quick Alerts
ALLOW NOTIFICATIONS  
For Daily Alerts

ತಂದೆಯ ಕೆಟ್ಟ ಚಟಗಳೇ, ಮಗುವಿನ ಭವಿಷ್ಯಕ್ಕೆ ಮುಳ್ಳಾಗಬಹುದು!

By Manu
|

ನವ ಮಾಸಗಳನ್ನು ತನ್ನ ಒಡಲಲ್ಲಿ ಹೊತ್ತು ಕಂದಮ್ಮನನ್ನು ಹೆರುವ ಸ್ತ್ರೀ ಹೇಗೆ ಮಗುವಿನ ಸಂಪೂರ್ಣ ಆರೋಗ್ಯ ವೃದ್ಧಿಗೆ ಹೇಗೆ ಕಾರಣಳೋ ಅಂತೆಯೇ ಮಗುವಿನ ತಂದೆ ಕೂಡ ಕಂದಮ್ಮನ ಭದ್ರ ಭವಿಷ್ಯಕ್ಕೆ ಮೂಲ ಕಾರಣರಾಗಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ವಿಷಯವಾಗಿದೆ. ತಂದೆಯು ಕೆಟ್ಟ ಚಟಗಳಿಗೆ ದಾಸನಾಗಿದ್ದರೆ ಅಂತೆಯೇ ಅನಾರೋಗ್ಯಕರ ಜೀವನ ಶೈಲಿಯನ್ನು ಆತ ಹೊಂದಿದ್ದರೆ ಇದು ಮಗುವಿನ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದಾಗಿ ಈ ಅಧ್ಯಯನ ದೃಢೀಕರಿಸಿದೆ.

How A Man's Age Affects His Kids

ಗರ್ಭದಲ್ಲಿರುವ ಹಾರ್ಮೋನಲ್ ಮತ್ತು ನ್ಯೂಟ್ರಿಶನಲ್ ಪರಿಸರ ಅಂಶಗಳು ಮಗುವಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಅಂತೆಯೇ ತಾಯಿಯ ಮಾನಸಿಕ ಸ್ಥಿತಿ ಕೂಡ ಗರ್ಭದ ಮೇಲೆ ಪ್ರಭಾವ ಬೀರುವುದರಿಂದ ತಾಯಿಯು ಮಾನಸಿಕವಾಗಿ ಅನಾರೋಗ್ಯವಾಗಿದ್ದಾಳೆ ಅಂದರೆ ಮಗುವಿನ ಜನನ ಸಮಯದಲ್ಲಿ ಇದು ತೊಂದರೆಯನ್ನು ಉಂಟುಮಾಡುವುದರ ಜೊತೆಗೆ ಜನಿಸಿದ ಮಗುವಿನಲ್ಲೂ ಕೆಲವೊಂದು ವೈಕಲ್ಯಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

ಇದೇ ರೀತಿಯಲ್ಲಿ ಪುರುಷರ ಜೀವನ ಶೈಲಿಯು ಅವರುಗಳ ವೀರ್ಯದ ಗುಣಮಟ್ಟದ ಮೇಲೆ ಹಾಗೂ ಮುಂದಿನ ತಲೆಮಾರುಗಳ ಡಿಎನ್‌ಎ ಮೇಲೆ ಕೂಡ ಪರಿಣಾಮ ಬೀರಬಹುದಾಗಿದೆ. ಪುರುಷರ ಜೀವನ ಶೈಲಿ, ಅವರ ವಯಸ್ಸು ಮತ್ತು ಇತರ ಕೆಲವೊಂದು ನಿರ್ದಿಷ್ಟ ಅಂಶಗಳು ಅವರ ಮರುಉತ್ಪನ್ನದ ಗುಣಮಟ್ಟದ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ. ಕೇಳಿ ಇಲ್ಲಿ, ಮಕ್ಕಳೆದುರು ಧೂಮಪಾನ ಮಾಡಬೇಡಿ

ಈ ಅಧ್ಯಯನ ಹೇಳುವಂತೆ ಪುರುಷರ ಜೀವನ ಶೈಲಿಯು ಮುಂದಿನ ತಲೆಮಾರುಗಳ ಮೇಲೂ ಪರಿಣಾಮವನ್ನು ಬೀರಬಹುದಾಗಿದೆ ಎಂದಾಗಿದೆ. ತಂದೆಯು ಹೆಚ್ಚು ಮದ್ಯವ್ಯಸನಿಯಾಗಿದ್ದರೆ, ಭ್ರೂಣವು ಆಲ್ಕೋಹಾಲ್ ಸ್ಪೆಕ್ಟ್ರಮ್ ಅನಾರೋಗ್ಯದಿಂದ ಬಳಲು ಸಾಧ್ಯತೆ ಇರುತ್ತದೆ.

ತಂದೆಯ ಹೆಚ್ಚಾದ ಮದ್ಯಪಾನವು ಮಗುವಿನಲ್ಲಿ ಕಡಿಮೆ ತೂಕ ಮತ್ತು ಅವರ ಮಕ್ಕಳಲ್ಲಿ ಅರಿವಿನ ಕ್ರಿಯೆಯಲ್ಲಿ ದುರ್ಬಲತೆಯನ್ನು ಉಂಟುಮಾಡಲಿದೆ. ತಂದೆಯ ವಯಸ್ಸು ಕೂಡ ಮಗುವಿನ ಮೇಲೆ ಕೆಲವೊಂದು ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ಮಕ್ಕಳಲ್ಲಿ ಸ್ವಲೀನತೆ ಮತ್ತು ಸ್ಕಿಜೋಫ್ರೇನಿಯಾವನ್ನು ಉಂಟುಮಾಡುತ್ತದೆ.

ತಂದೆಯು ಹೆಚ್ಚು ಸ್ಥೂಲಕಾಯರಾಗಿದ್ದರೆ, ಅವರುಗಳ ಮಕ್ಕಳಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮೇಲೆ ಉಂಟಾಗುವ ತೊಂದರೆಗೆ ಕಾರಣರಾಗಿರುತ್ತಾರೆ. ಅವರುಗಳು ಹೆಚ್ಚು ಖಿನ್ನತೆ ಮತ್ತು ಒತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರೆ ಮಕ್ಕಳ ಮೇಲೂ ಇದು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಈ ರೀತಿಯಾಗಿ ಪುರುಷರ ಜೀವನ ಶೈಲಿಯು ಅವರುಗಳು ಭವಿಷ್ಯದ ತಲೆಮಾರುಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದಾಗಿ ಹೊಸ ಅಧ್ಯಯನ ತಿಳಿಸಿದೆ.

English summary

How A Man's Age Affects His Kids

A new study warns that the lifestyle of a father and his alcohol dependence may affect the health of the future generations too. This study claims that bad habits may cause birth defects.
X
Desktop Bottom Promotion