For Quick Alerts
ALLOW NOTIFICATIONS  
For Daily Alerts

ವಾಯು ಪ್ರದೂಷಣೆ, ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯಕಾರಿ!

By Arshad
|

ಮಗು ಹುಟ್ಟಿದ ಬಳಿಕ ಅಳುವ ಮೂಲಕ ಸ್ವತಂತ್ರವಾಗಿ ಉಸಿರೆಳೆದ ಸಂಕೇತವನ್ನು ನೀಡುತ್ತದೆ. ಆದರೆ ಕಲವು ಸಂದರ್ಭಗಳಲ್ಲಿ ಹುಟ್ಟಿದ ಮಗು ಎಷ್ಟೋ ಹೊತ್ತಿನವರೆಗೆ ಜೀವವಿರುವ ಯಾವುದೇ ಸೂಚನೆಯನ್ನೇ ನೀಡುವುದಿಲ್ಲ ಇಂತಹ ಪ್ರಕರಣಗಳಿಗೆ stillbirth ಎಂದು ಕರೆಯುತ್ತಾರೆ.

Does Air Pollution Cause Stillbirths?

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ನಗರಗಳಲ್ಲಿ ಜನಿಸುತ್ತಿರುವ ಮಕ್ಕಳಲ್ಲಿ ಈ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು ಇದಕ್ಕೆ ವಾಯುವಿನ ಪ್ರದೂಷಣೆ ಪ್ರಮುಖ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಏಳರಿಂದ ಒಂಭತ್ತು ತಿಂಗಳ ಅವಧಿಯಲ್ಲಿ ಗರ್ಭಿಣಿ ಸೇವಿಸಿದ ಹವೆ ಪ್ರದೂಷಣೆಯಿಂದ ಕೂಡಿದ್ದರೆ ಈ ಸಂಭವ ಹೆಚ್ಚು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಈ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಸಂಶೋಧನೆಗಳ ಪ್ರಕಾರ ಈ ಸ್ಥಿತಿಯನ್ನು ತಡೆಗಟ್ಟಬಹುದು. ವಾಯುವಿನಲ್ಲಿ ಪ್ರದೂಷಣೆ ಇಂದು ಎಲ್ಲರ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು, ಅದರಲ್ಲೂ ಗರ್ಭಿಣಿಯರು ಇದರ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಿರುವುದು ಚಿಂತನೆಯ ವಿಷಯವಾಗಿದೆ.

ಸಂಶೋಧಕರು ಇದಕ್ಕಾಗಿ stillbirth ಪ್ರಕರಣಗಳು ಕಂಡುಬಂದ ಸ್ಥಳಗಳಲ್ಲಿ ವಾಯುವಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಿದರು. ಆಗ ಈ ಪ್ರಕರಣಗಳಿಗೂ ವಾಯುವಿನಲ್ಲಿರುವ ಹಾನಿಕಾರಕ ಕಣಗಳಿಗೂ ನಿಕಟ ಸಂಬಂಧವಿರುವುದನ್ನು ಕಂಡುಕೊಳ್ಳಲಾಯಿತು.

ಗಾಳಿಯಲ್ಲಿರುವ ಓಜೋನ್, ನೈಟ್ರೋಜನ್ ಡೈಯಾಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮೊದಲಾದ ಕಣಗಳು ಈ ಸ್ಥಿತಿಗೆ ಹೆಚ್ಚು ಕಾರಣವಾಗಿದ್ದು ಈ ಗಾಳಿಯನ್ನು ಸೇವಿಸಿದ ಏಳು ತಿಂಗಳ ಗರ್ಭಿಣಿಯರಿಗೆ stillbirth ಆಗುವ ಸಾಧ್ಯತೆಗಳು ಅಪಾರವಾಗಿ ಹೆಚ್ಚುತ್ತವೆ. ಪ್ರಸ್ತುತ ಸಾಕ್ಷಾಧಾರಗಳು ಈ ವಿಷಯಕ್ಕೆ ಪೂರ್ಣವಾಗಿ ಬೆಂಬಲಿಸುತ್ತವೆ ಎಂದು ಹೇಳಲಾಗದಾದರೂ ತಜ್ಞರು ಏಳನೆಯ ತಿಂಗಳಾಗುತ್ತಿದ್ದಂತೆಯೇ ಈ ಪ್ರದೂಷಣೆ ಇರುವ ಗಾಳಿ ಇರುವ ಸ್ಥಳದಿಂದ ದೂರ ಹೋಗುವುದು ಉತ್ತಮ ಎಂಬ ಅಭಿಪ್ರಾಯ ನೀಡುತ್ತಾರೆ.

ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆಗಳು ಇನ್ನೂ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಾಗಿದೆ. ಆದರೂ ಏಳನೆಯ ತಿಂಗಳಾಗುತ್ತಿದ್ದಂತೆಯೇ ಸ್ವಚ್ಛ ಗಾಳಿ ಮತ್ತು ಸುಂದರ ಪರಿಸರವಿರುವ ಸ್ಥಳದಲ್ಲಿ ಹೆರಿಗೆಯಾಗುವವರೆಗೂ ವಾಸ್ತವ್ಯ ಬದಲಿಸಿಕೊಳ್ಳುವುದು ಬರಲಿರುವ ಮಗುವಿನ ಭವಿಷ್ಯದ ದೃಷ್ಟಿಯಿಂದ ಶ್ರೇಯಸ್ಕರವಾಗಿದೆ.

English summary

Does Air Pollution Cause Stillbirths?

A new study says that air pollution could also increase the risk of certain birth defects like still births. This study claims that the risk could increase especially when the mother is exposed to dangerous air pollutants during the third trimester. Researchers claim that such still births are preventable. Today, still birth is one of major concerns of would-be mothers and the increasing rate of air pollution could be one major reason that is causing worry.
X
Desktop Bottom Promotion