For Quick Alerts
ALLOW NOTIFICATIONS  
For Daily Alerts

ಮಕ್ಕಳ ಹಠಮಾರಿತನ ಸ್ವಭಾವಕ್ಕೆ ಮೀನು ಸಹಕಾರಿಯೇ?

By Jaya
|

ಮಕ್ಕಳು ಹಠಮಾರಿಗಳಾಗಿರುವುದು ಪಾಲಕರಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅತಿಯಾದ ಮೊಂಡುತನ, ಕೇಳಿದ್ದೆಲ್ಲಾ ಬೇಕು ಎಂಬ ಹಠ, ಕೋಪಗೊಳ್ಳುವುದು, ಕೈಗೆ ಸಿಕ್ಕಿದ್ದನ್ನೆಲ್ಲಾ ಬಿಸಾಡುವುದು ಹೀಗೆ ಮಕ್ಕಳು ಬೇಗನೇ ವ್ಯಗ್ರರಾಗಿಬಿಡುತ್ತಾರೆ. ಹೋದಲ್ಲೆಲ್ಲಾ ಮಕ್ಕಳ ಈ ಸ್ವಭಾವದಿಂದ ಪಾಲಕರು ಮುಜುಗರವನ್ನು ಅನುಭವಿಸುತ್ತಾರೆ. ಅವರಿಗೆ ಹೊಡೆದಷ್ಟೂ ಬೈಯ್ದಷ್ಟೂ ಮಕ್ಕಳು ಇನ್ನಷ್ಟು ಮೊಂಡಾಟವನ್ನು ತೋರ್ಪಡಿಸುತ್ತಾರೆ.

Can Fish Reduce Your Child’s Aggression?

ತಮ್ಮ ಓರಗೆಯ ಮಕ್ಕಳು ಈ ರೀತಿಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದರೆ ಮಕ್ಕಳು ಇಂತಹ ನಡವಳಿಕೆಗೆ ಬೇಗನೇ ಬಲಿಯಾಗುತ್ತಾರೆ. ಹಾಗಿದ್ದರೆ ಅವರ ಈ ಸ್ವಭಾವವನ್ನು ತಿದ್ದಲು ಓಲೈಸುವಿಕೆ ಉತ್ತಮ ಸಲಹೆಯಾಗಿದ್ದರೆ ವೈದ್ಯ ಲೋಕ ಹೇಳುವಂತೆ ಒಮೇಗಾ - 3 ಆಸಿಡ್ ಉಳ್ಳ ಆಹಾರ ಪದಾರ್ಥ ಪರಿಣಾಮಕಾರಿ ಎಂದು ತಿಳಿಸಿದೆ.

ಒಮೇಗಾ - 3 ಫ್ಯಾಟಿ ಆಸಿಡ್ ಉಳ್ಳ ಆಹಾರಗಳಿಂದ ಮಕ್ಕಳ ಕೋಪೋದ್ರೇಕವನ್ನು ಕಡಿಮೆ ಮಾಡಬಹುದು ಎಂಬುದಾಗಿ ಅಧ್ಯಯನ ತಿಳಿಸಿದ್ದು ಮಕ್ಕಳಲ್ಲಿ ಶಾಂತತೆಯನ್ನು ಉಂಟುಮಾಡಲು ಇದು ಸಹಕಾರಿಯಾಗಿದೆ ಎಂಬುದಾಗಿ ತಿಳಿಸಿದೆ. ಸಮುದ್ರ ಆಹಾರಗಳಾದ ಟ್ಯೂನಾ ಮತ್ತು ಮೀನು ಒಮೇಗಾ-3 ಫ್ಯಾಟಿ ಆಸಿಡ್ ಅನ್ನು ಒಳಗೊಂಡಿರುತ್ತವೆ. ಅಂತೆಯೇ ಕೆಲವೊಂದು ನಟ್ಸ್‎ಗಳಲ್ಲೂ ಈ ಅಂಶವಿದೆ.

ಒಮೇಗಾ - 3 ಆಸಿಡ್ ಆಹಾರಗಳು ಮಕ್ಕಳ ಕೋಪವನ್ನು ನಿಯಂತ್ರಿಸಿ ಅವರನ್ನು ಶಾಂತಗೊಳಿಸುತ್ತದೆ ಎಂಬುದಾಗಿ ತಿಳಿಸಿದೆ. ಅವರ ವರ್ತನೆಗೆ ಅನುಗುಣವಾದ ಆಹಾರವನ್ನು ಮಕ್ಕಳು ಸೇವಿಸಿದಲ್ಲಿ ಅವರ ಕೋಪದ ತೀವ್ರತೆಯು ಶಾಂತವಾಗುತ್ತದೆ ಎಂಬುದಾಗಿ ಅಧ್ಯಯನ ತಿಳಿಸಿದೆ.

ಆಹಾರಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ 3 ತಿಂಗಳ ನಂತರ ಮಕ್ಕಳಲ್ಲಿ ಬದಲಾವಣೆಯನ್ನು ಸಂಶೋಧಕರು ಕಂಡುಕೊಂಡಿದ್ದಾರೆ. 11 ವರ್ಷಗಳ 300 ಮಕ್ಕಳನ್ನು ಈ ಪರೀಕ್ಷೆಗೆ ಒಳಪಡಿಸಲಾಗಿದ್ದು ಅಧ್ಯಯನದ ಮುನ್ನ ಅವರಲ್ಲಿ ಕೋಪದ ತೀವ್ರತೆ ಅಧಿಕವಾಗಿತ್ತು.

ಅವರಿಗೆ ಬೇರೆ ಬೇರೆ ವಿಧಗಳಲ್ಲಿ ಈ ಆಸಿಡ್‎ಗಳುಳ್ಳ ಆಹಾರಗಳನ್ನು ನೀಡಲಾಯಿತು ಮತ್ತು ನಡವಳಿಕೆಯನ್ನು ಪರೀಕ್ಷಿಸಲಾಯಿತು. ಅಧ್ಯಯನದ ನಂತರ, ಮಕ್ಕಳ ಬದಲಾವಣೆಯಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಬದಲಾವಣೆಯನ್ನು ಉಂಟುಮಾಡಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೆ ಅರಿವಿನ ವರ್ತನೆಯ ಚಿಕಿತ್ಸೆಯೊಂದಿಗೆ ಸೇರಿಸಿದಾಗ, ಪರಿಣಾಮಗಳು ಇನ್ನಷ್ಟು ಉತ್ತಮವಾಯಿತು. ಮಕ್ಕಳಲ್ಲಿರುವ ಆಕ್ರಮಣಶೀಲತೆ ಮಟ್ಟ ನಿಯಂತ್ರಣಕ್ಕೆ ಬಂದಿತ್ತು.

English summary

Can Fish Reduce Your Child’s Aggression?

A new study states that foods that contain omega-3 fatty acids may help in minimising the impulsiveness an aggression in kids. This study claims that the impulsive nature and emotional volatility in kids may be controlled a bit with the help of foods that are rich in omega 3 fatty acids.
Story first published: Saturday, May 21, 2016, 19:26 [IST]
X
Desktop Bottom Promotion