For Quick Alerts
ALLOW NOTIFICATIONS  
For Daily Alerts

ವಿಶ್ವ ಸ್ತನ್ಯಪಾನ ವಾರ 2020: ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?

By Lekhaka
|

ಮಕ್ಕಳು ದೇವರು ನೀಡಿದ ಸಂತೋಷದ ವರ ಎಂದು ಹೇಳಲಾಗುತ್ತದೆ. ಆದರೆ ಈ ಸಂತೋಷವು ಸ್ವಲ್ಪ ಕಿರಿಕಿರಿ ರಗಳೆ ಎಲ್ಲವನ್ನು ನೀಡುತ್ತವೆ. ಆದರೂ ಈ ರಗಳೆ ಮತ್ತು ಕಿರಿಕಿರಿಗಳು ಸಹ ನಮ್ಮ ಸಂತೋಷದ ಭಾಗವಾಗಿರುತ್ತವೆ. ಮಕ್ಕಳು ಚೆನ್ನಾಗಿ ಬೆಳೆಯಬೇಕೆಂದರೆ ತಾಯಿಯ ಎದೆ ಹಾಲು ನೀಡಬೇಕಾದುದು ಅತ್ಯಗತ್ಯ. ಆದರೂ ಅನಿವಾರ್ಯವೆಂದುಕೊಂಡು ನಾವು ನಮ್ಮ ಮಗುವಿಗೆ ಬಾಟಲಿ ಹಾಲನ್ನು ನೀಡುತ್ತೇವೆ.

ಇದು ಅವರ ಹಸಿವನ್ನು ನೀಗಿಸಲು ಇರಬಹುದು, ಅಥವಾ ತಾಯಿಯ ಎದೆಹಾಲಿನ ಅಲಭ್ಯತೆ ಇರಬಹುದು, ಅಥವಾ ತಾಯಿ ಮಗುವಿನಿಂದ ದೂರವಿರಬೇಕಾಗಿ ಬಂದಂತಹ ಸಂದರ್ಭದಲ್ಲಿ ನಾವು ಬಾಟಲಿ ಹಾಲಿನ ಮೊರೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

2020ನೇ ಸಾಲಿನಲ್ಲಿ ಆಗಸ್ಟ್ 1ರಿಂದ 7ರವರೆಗೆ ಎದೆಹಾಲು ಉಣಿಸುವ ಅಥವಾ ವಿಶ್ವ ಸ್ತನ್ಯಪಾನ ವಾರವಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಇದರ ವಿಶೇಷ ಬನ್ನಿ ಇಂದು ಬಾಟಲಿ ಹಾಲು ಏಕೆ ಬೇಡ ಎಂಬುದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ.

ಮಗುವಿಗೆ ಬಾಟಲಿ ಹಾಲು ಕೊಡುತ್ತಿದ್ದೀರಾ?

Breast feeding vs bottle feeding — what’s best for the baby?

ಬಾಟಲಿಗಳು ಮೊಲೆ ತೊಟ್ಟಿನ ಗೊಂದಲವನ್ನು ಸೃಷ್ಟಿಸುತ್ತವೆ
ಒಂದು ವೇಳೆ ನೀವು ಎದೆ ಹಾಲು ಮತ್ತು ಬಾಟಲಿ ಹಾಲು ಎರಡನ್ನೂ ನಿಮ್ಮ ಮಗುವಿಗೆ ನೀಡುತ್ತಿದ್ದಲ್ಲಿ, ಅದರಿಂದ ನಿಮ್ಮ ಮಗುವಿಗೆ ತನ್ನ ತಾಯಿಯ ಮೊಲೆ ಮತ್ತು ಬಾಟಲಿಯ ನಿಪ್ಪಲ್ ಎರಡರ ನಡುವೆ ವ್ಯತ್ಯಾಸ ಗುರುತಿಸಲು ಕಷ್ಟವಾಗುತ್ತದೆ. ಮೊದಲ ಬಾರಿಗೆ ತಾಯಿಯಾದ ಹೆಂಗಸರಲ್ಲಿ, ಆರಂಭದಲ್ಲಿ ಎದೆ ಹಾಲು ನೀಡುವ ಕ್ರಿಯೆಯು ತೀವ್ರ ಯಾತನಾದಾಯಕವಾಗಿರುತ್ತದೆ. ಆದರೆ ಒಂದು ವಿಚಾರ ನೆನಪಿಡಿ, ನಿಮ್ಮ ಮಗು ಫೀಡಿಂಗ್ ಬಾಟಲಿಯಲ್ಲಿ ಹಾಲನ್ನು ಕುಡಿಯಲು ಅಭ್ಯಾಸ ಮಾಡಿಕೊಂಡರೆ, ನಿಮ್ಮ ಎದೆಹಾಲನ್ನು ಕುಡಿಯುವುದಕ್ಕೆ ಮನಸ್ಸು ಮಾಡುವುದಿಲ್ಲ. ಇದರಿಂದ ಮಗುವು ಎದೆ ಹಾಲಿನ ಜೊತೆಗೆ ಲಭ್ಯವಾಗುವ ಸಮೃದ್ಧ ಪೋಷಕಾಂಶಗಳು ಮತ್ತು ಕಿಣ್ವಗಳ ಲಾಭವನ್ನು ಕಳೆದುಕೊಳ್ಳುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

ಬಾಟಲಿಗಳು ಅಧಿಕ ಹಾಲನ್ನು ನೀಡಬಹುದು
ನಿಮ್ಮ ಮಗು ಆರೋಗ್ಯವಾಗಿರಬೇಕು ಎಂದು ಅದಕ್ಕೆ ಹಾಲನ್ನು ಅಧಿಕವಾಗಿ ಸೇವಿಸಲು ನೀಡಬಾರದು. ಅಧಿಕ ಪ್ರಮಾಣದ ಹಾಲು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಬಾಟಲಿ ಹಾಲನ್ನು ನೀಡುವಾಗ ಮಗುವು ಎಷ್ಟು ಹಾಲನ್ನು ಸೇವಿಸುತ್ತದೆ ಎಂದು ಲೆಕ್ಕ ಹಾಕಬಹುದು. ಬಹಳಷ್ಟು ಮಂದಿ, ಮಗುವು ಎಷ್ಟು ಹಾಲು ಸೇವಿಸುತ್ತದೆ ಎಂದುಕೊಂಡು, ಬಾಟಲಿ ಖಾಲಿಯಾದ ತಕ್ಷಣ, ಮಗುವಿಗೆ ಹಾಲು ಕುಡಿಯುವುದನ್ನು ನಿಲ್ಲಿಸಿಬಿಡುತ್ತಾರೆ. ಇದರಿಂದ ಮಗುವಿಗೆ ಅಗತ್ಯವಾದ ಪ್ರಮಾಣದ ಹಾಲು ಲಭ್ಯವಾಗದೆ ಹೋಗಬಹುದು. ಆದರೆ ತಾಯಿಯ ಎದೆ ಹಾಲು ಕುಡಿಯುವ ಮಗು ಸಂತೋಷವಾಗಿ ತನಗೆ ಎಷ್ಟು ಬೇಕೊ, ಅಷ್ಟು ಹಾಲನ್ನು ಕುಡಿಯುತ್ತದೆ.

ಬಾಟಲಿ ಹಾಲು ಹೊಟ್ಟೆನೋವನ್ನು ತರಬಹುದು

ತಜ್ಞರ ಪ್ರಕಾರ ಬಾಟಲಿಯಲ್ಲಿ ಹಾಲನ್ನು ಸೇವಿಸುವಾಗ ಮಗುವಿನ ಹೊಟ್ಟೆಗೆ ಹಾಲಿನ ಜೊತೆಗೆ ಗಾಳಿಯು ಸಹ ಹೋಗಿ ಸೇರಿಕೊಳ್ಳುತ್ತದೆ. ಇದರಿಂದ ಮಗುವಿಗೆ ಹೊಟ್ಟೆಯಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಮತ್ತು ಕರುಳಿನಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಮಗುವು ತಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಾಟಲಿಯಲ್ಲಿ ಹಾಲು ಬೇಡ ಎಂದು ಹೇಳುತ್ತಾರೆ.

ಬಾಟಲಿಗಳು ಇನ್‌ಫೆಕ್ಷನ್ ಉಂಟು ಮಾಡಬಹುದು
ಗಾಳಿಯಲ್ಲಿರುವ ಬ್ಯಾಕ್ಟೀರಿಯಾವು ತೆರೆದ ಬಾಟಲಿಯಲ್ಲಿರುವ ನಿಪ್ಪಲ್‌ನಲ್ಲಿ ತಾತ್ಕಾಲಿಕವಾಗಿ ನೆಲೆಯನ್ನು ಕಂಡುಕೊಳ್ಳುತ್ತದೆ. ಆದ್ದರಿಂದ ಬಾಟಲಿಯನ್ನು ಆಗಾಗ ಚೆನ್ನಾಗಿ ತೊಳೆಯಬೇಕಾದುದು ಅನಿವಾರ್ಯ. ಇದನ್ನು ಸರಿಯಾಗಿ ಶುಚಿಗೊಳಿಸದಿದ್ದಲ್ಲಿ, ಮಗುವಿಗೆ ನಾವೇ ನಮ್ಮ ಕೈಯ್ಯಾರೆ ಇನ್‌ಫೆಕ್ಷನ್‌ಗಳನ್ನು ನೀಡಿದಂತಾಗುತ್ತದೆ.

ಬಾಟಲಿಗಳು ಸೌಂದರ್ಯಕ್ಕೆ ಕುಂದು ತರಬಹುದು
ಸಿಲಿಕಾನ್ ನಿಪ್ಪಲ್‌ಗಳನ್ನು ಎಳೆ ಮಗುವಾದಾಗಿನಿಂದ ಚೀಪುವ ಮಕ್ಕಳ ಮುಖದಲ್ಲಿನ ಮೂಳೆಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಇವುಗಳಿಂದ ದವಡೆಗಳು ಮತ್ತು ಮುಖ ವಿಕಾರ ಸ್ವರೂಪಕ್ಕೆ ಸಹ ತಿರುಗಬಹುದು. ಹಾಗಾಗಿ ನಿಮ್ಮ ಮಗುವಿನ ಸೌಂದರ್ಯವನ್ನು ಸಹ ಹಾಳು ಮಾಡುವ ಈ ಬಾಟಲಿ ಹಾಲನ್ನು ಅವರಿಗೆ ನೀಡಬೇಡಿ.

English summary

world breastfeeding week 2020: Breast feeding vs bottle feeding — what’s best for the baby?

Handling your infant or even your toddler a bottle of milk is a common practice. But did you know that the bottle is doing more harm than good to your baby. Here’s why you should aviod bottled milk for baby
X
Desktop Bottom Promotion