For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಕೆಟ್ಟ ವರ್ತನೆಗಳು ಕಂಡುಬರಲು ಕಾರಣಗಳೇನು?

By Arpitha
|

ಪೋಷಕರು ಮಕ್ಕಳ ಕೆಟ್ಟ ವರ್ತನೆಯನ್ನು ನೋಡಿ ಇನ್ನಷ್ಟು ಬೈಯುತ್ತಾರೆ ಆದರೆ ಈ ರೀತಿಯ ವರ್ತನೆಗೆ ಕಾರಣಗಳಿರುತ್ತವೆ. ತಂದೆ ತಾಯಿಯಿಂದ ಬೈಸಿಕೊಳ್ಳಬೇಕು ಎಂದು ಮಕ್ಕಳು ಈ ರೀತಿ ವರ್ತಿಸುವುದಿಲ್ಲ. ಮಕ್ಕಳು ಈ ಪ್ರಪಂಚಕ್ಕೆ ಹೊಸಬರು. ಹೇಗೆ ಇರಬೇಕು ಎಂಬುದರ ಬಗ್ಗೆ ಅವರಿಗೆ ಯಾವುದೇ ರೀತಿ ತಿಳುವಳಿಕೆ ಇರುವುದಿಲ್ಲ.

ಪೋಷಕರನ್ನು ಹೇಗೆ ಮೆಚ್ಚಿಸಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಕೆಲವು ಮಕ್ಕಳು ತಮ್ಮ ಆಟದ ಸಾಮಾನಿನ ಬಗ್ಗೆ ತಮ್ಮದೇ ಆದ ಹಠವನ್ನು ಹೊಂದಿರುತ್ತಾರೆ.ಇತರರೊಂದಿಗೆ ಅದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿರುವುದಿಲ್ಲ. ಕೆಲವು ಮಕ್ಕಳು ಭಾವನಾತ್ಮಕವಾಗಿದ್ದರೆ ಇನ್ನು ಕೆಲವರು ತುಂಬಾ ಜೋರಾಗಿರುತ್ತಾರೆ. ಪೋಷಕರ ಸಣ್ಣ ತಪ್ಪುಗಳಿಂದ ಮಕ್ಕಳ ಜೀವನ ಅಭದ್ರ

ಹೀಗೆ ಸಾಕಷ್ಟು ವಿಷಯಗಳು ಪೋಷಕರನ್ನು ಚಿಂತೆಗೀಡು ಮಾಡಿಬಿಡುತ್ತವೆ. ಆದರೆ ಸಣ್ಣ ಮಗು ಮತ್ತು ದೊಡ್ಡ ಮಕ್ಕಳು ಎಲ್ಲರಲ್ಲೂ ಈ ರೀತಿ ಕೆಟ್ಟ ವರ್ತನೆಗೆ ಕಾರಣಗಳಿರುತ್ತವೆ ಮತ್ತು ಅದು ಕೆಲವು ದಿನಗಳ ನಂತರ ತಾನಾಗಿಯೇ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಈ ರೀತಿಯ ಹಠಮಾರಿ ಗುಣಗಳು ಬಂದಾಗ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಯತ್ನಿಸಿ.

Reasons For Bad Behaviour In Children

ಕುತೂಹಲ
ಮಕ್ಕಳಲ್ಲಿ ಕಂಡುಬರುವ ವಿಚಿತ್ರ ವರ್ತನೆಗೆ ಕುತೂಹಲ ಕಾರಣ. ಮಕ್ಕಳು ತಮ್ಮ ಸುತ್ತಲಿನ ಆಗುಹೋಗುಗಳ ಬಗ್ಗೆ ಬಹಳ ಕುತೂಹಲ ಹೊಂದಿರುತ್ತವೆ. ಅದರ ಬಗ್ಗೆ ತಿಳಿದುಕೊಳ್ಳಲು ಬೇರೆಬೇರೆ ರೀತಿಯಲ್ಲಿ ಪ್ರಯತ್ನ ಮಾಡಲು ಪ್ರಾರಂಭಿಸುತ್ತವೆ. ಇದು ಪೋಷಕರಿಗೆ ಕಿರಿಕಿರಿ ಎನಿಸಬಹುದು. ಆದರೂ ಮಕ್ಕಳ ಕುತೂಹಲ ಬಗೆಹರಿಸಲು ಪ್ರಯತ್ನಿಸಿದಲ್ಲಿ ಅವರ ವಿಚಿತ್ರ ವರ್ತನೆಯನ್ನು ತಡೆಯಬಹುದು.

ಅಭಿವ್ಯಕ್ತಿ
ಕೆಲವು ಮಕ್ಕಳಿಗೆ ತಮ್ಮ ಭಾವನೆಯನ್ನು ಹೊರಹಾಕಲು ಕಷ್ಟವಾಗಿ ಕೂಗುವುದು ಅಥವಾ ಹುಯಿಲಿಡುವುದನ್ನು ಮಾಡುತ್ತವೆ.

ಪ್ರಚೋದನೆ
ಕೆಲವು ಮಕ್ಕಳಿಗೆ ತಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಡಲು ಕಷ್ಟವಾಗುತ್ತದೆ.ತಮಗೆ ಸಿಗುವ ಪ್ರಚೋದನೆಯನ್ನು ತಡೆದುಕೊಳ್ಳುವ ಶಕ್ತಿ ಇರುವದಿಲ್ಲ.ಅದನ್ನು ಮಕ್ಕಳು ಸಿಟ್ಟು ಮತ್ತು ಹತಾಶೆಯ ಮೂಲಕ ತೋರಿಸಿಕೊಳ್ಳುತ್ತವೆ. ಅಪ್ಪ ಅಮ್ಮನ ಜಗಳ, ಮಕ್ಕಳ ಸಂಕಟ ಕೇಳುವವರು ಯಾರು?

ಸ್ವಾತಂತ್ರ
ಕೆಲವು ಮಕ್ಕಳಿಗೆ ಪೋಷಕರ ಅತಿಯಾದ ನಿರ್ಬಂಧಗಳು ಕಿರಿಕಿರಿಯನ್ನುಂಟು ಮಾಡಬಹುದು. ಇದನ್ನು ಮಕ್ಕಳು ಕೆಟ್ಟ ವರ್ತನೆಯ ಮೂಲಕ ತೋರಿಸಿಕೊಳ್ಳುತ್ತವೆ. ಆದ್ದರಿಂದ ಮಕ್ಕಳ ಈ ರೀತಿಯ ವಿಚಿತ್ರ ವರ್ತನೆಗೆ ಕಾರಣವೇನಿರಬಹುದು ಎಂಬುದನ್ನು ತಿಳಿದುಕೊಂಡರೆ ಅವರನ್ನು ಸಮಾಧಾನದಿಂದ, ಮುದ್ದಿನಿಂದ ತಿಳಿಹೇಳಿ ಪರಿವರ್ತಿಸಲು ಪ್ರಯತ್ನಿಸಬಹುದು.

English summary

Reasons For Bad Behaviour In Children

Some parents misunderstand children's behaviour. In fact, there are reasons for bad behaviour in children. They don't deliberately do things to get scolded by parents. Firstly, kids are young and new to this planet. They know very little about being good or bad.
X
Desktop Bottom Promotion