For Quick Alerts
ALLOW NOTIFICATIONS  
For Daily Alerts

ಮಗುವಿನಲ್ಲಿ ಜಾಂಡೀಸ್ ನಿವಾರಿಸುವುದು ಹೇಗೆ?

|
Natural Remedies for Jaundice in Newborns
ಸುಮಾರು 70 % ನವಜಾತ ಶಿಶುವಿನಲ್ಲಿ ಜಾಂಡೀಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜಾಂಡೀಸ್ ಸಮಸ್ಯೆಗೆ ಒಳಗಾದ ಮಗುವಿಗೆ ಫೋಟೊಥೆರಪಿ ಚಿಕಿತ್ಸೆ ಕೂಡ ಲಭ್ಯವಿದೆ. ಆದರೆ ಮನೆಯಲ್ಲಿಯೆ ಜಾಂಡೀಸ್ ನಿವಾರಣೆಗೆ ಕೆಲವು ವಿಧಾನವನ್ನು ಅನುಸರಿಸಬಹುದು.

ನವಜಾತ ಶಿಶುವಿನಲ್ಲಿ ಜಾಂಡೀಸ್ ಗುಣಪಡಿಸುವ ನೈಸರ್ಗಿಕ ವಿಧಾನ:

* ಎದೆಹಾಲು ನೀಡುವುದು: ರಕ್ತದಲ್ಲಿ ಸೇರಿಕೊಂಡ ಬಿಲಿರುಬಿನ್ ಅಂಶವೇ ಜಾಂಡೀಸ್ ಮೂಲ. ಈ ಬಿಲಿರುಬಿನ್ ಅಂಶವನ್ನು ಹೋಗಿಸಲು ಮಗುವಿನ ಲಿವರ್ ನಲ್ಲಿ ಅವಶ್ಯಕ ಶಕ್ತಿಯಿರುವುದಿಲ್ಲ. ಆದ ಕಾರಣ ಮೂತ್ರದ ಮೂಲಕವೇ ಬಿಲಿರುಬಿನ್ ದೇಹದಿಂದ ಹೊರಕ್ಕೆ ಹೋಗಬೇಕಾಗುತ್ತದೆ. ಎದೆಹಾಲು ಅಥವಾ ದ್ರವರೂಪದ ಆಹಾರ ನೀಡಿದರೆ ಮೂತ್ರದ ಮೂಲಕ ಹೊರಬರಲು ಸಹಾಯ ಮಾಡುತ್ತದೆ.
2-3 ಗಂಟೆಗಳಿಗೊಮ್ಮೆ ಹಾಲು ನೀಡಬೇಕು. ಜಾಂಡೀಸ್ ಇರುವ ಮಕ್ಕಳು ಹೆಚ್ಚು ನಿದ್ದೆಗೆ ಹೋಗುವುದರಿಂದ ಆಗಾಗ್ಗೆ ಹಾಲು ನೀಡುವುದನ್ನು ಮರೆಯಬಾರದು.

* ಸೂರ್ಯನ ಕಿರಣ: ಸೂರ್ಯನ ಕಿರಣ ನವಜಾತ ಶಿಶುವಿನಲ್ಲಿ ಕಾಣಿಸಿಕೊಂಡ ಜಾಂಡೀಸ್ ಹೋಗಲಾಡಿಸುವ ನೈಸರ್ಗಿಕ ವಿಧಾನ. ಮಗುವಿನಲ್ಲಿ ಜಾಂಡೀಸ್ ಗೆ ಕಾರಣವಾಗಿರುವ ಬಿಲಿರುಬಿನ್ ಅಂಶವನ್ನು ಕಡಿಮೆ ಮಾಡುವಲ್ಲಿ ಸೂರ್ಯನ ಕಿರಣ ಹೆಚ್ಚು ಸಹಕಾರಿ. 1-2 ಗಂಟೆ ಅವಧಿ ಸೂರ್ಯನ ಬೆಚ್ಚಗಿನ ಕಿರಣ ಬೀಳುವೆಡೆ ಮಗುವನ್ನು ಮಲಗಿಸಬೇಕು. ಮಗುವಿಗೆ ಬಟ್ಟೆ ಹಾಕದೆ ಮಲಗಿಸಬೇಕು. ಆದರೆ ಸೂರ್ಯನ ಕಿರಣ ನೇರವಾಗಿ ಬೀಳುವ ಜಾಗದಲ್ಲಿ ಮಲಗಿಸಬಾರದು.

* ಕೆಲವು ನವಜಾತ ಶಿಶುಗಳು ಎದೆಹಾಲು ಕುಡಿಯಲು ಹಠ ಮಾಡುತ್ತವೆ. ಅಂತಹ ಸಮಯದಲ್ಲಿ ಚಮಚವನ್ನು ಉಪಯೋಗಿಸಿಕೊಂಡು ಮಗುವಿಗೆ ಹಾಲು ನೀಡಬೇಕಾಗುತ್ತದೆ.

English summary

Natural Remedies for Jaundice in Newborns | Jaundice Problem | ನವಜಾತ ಶಿಶುವಿನಲ್ಲಿ ನೈಸರ್ಗಿಕವಾಗಿ ಜಾಂಡೀಸ್ ನಿವಾರಣೆ ಹೇಗೆ | ಜಾಂಡೀಸ್ ಸಮಸ್ಯೆ

Infant jaundice, commonly known as newborn jaundice occurs when the bilirubin (yellow bile pigment) levels in the body is high. Newborn jaundice is observed in almost 70% of babies. Phototherapy is one of the common medical treatment for jaundice in newborn babies but there are home remedies to cure jaundice in babies. Lets check out the natural remedies to cure jaundice in newborn babies.
Story first published: Monday, November 7, 2011, 17:02 [IST]
X
Desktop Bottom Promotion