For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳಿಗೆ ತಿಳಿದಿರಲಿ ಮನಿ ವ್ಯಾಲ್ಯೂ

|
Money Value
ಈಗ ಎಲ್ಲಾ ಕ್ರೆಡಿಡ್, ಡೆಬಿಟ್ ಗಳ ಕಾಲ. ಮಕ್ಕಳು ಇದನ್ನು ನೋಡುತ್ತಾ ಬೆಳೆಯುವುದರಿಂದ ಅವರಿಗೆ ಹಣದ ಬೆಲೆ ಏನೆಂಬುದೆ ತಿಳಿಯುವುದಿಲ್ಲ.

ಬ್ಯಾಂಕ್ ನಲ್ಲಿ ಸಾಕಷ್ಟು ಹಣ ಇದೆ ಎಂದು ಭಾವಿಸಿ ಮಿತಿ ಮೀರಿ ಖರ್ಚು ಮಾಡಲು ಕಲಿಯುತ್ತಾರೆ.ಆದ್ದರಿಂದ ಚಿಕ್ಕಂದಿನಿಂದಲೆ ನಿಮ್ಮ ಮಕ್ಕಳಿಗೆ ಹಣದ ಮೌಲ್ಯವನ್ನು ತಿಳಿಸಲು ಹೀಗೆ ಮಾಡಿ.

1. ಹಣಕಾಸಿಗೆ ಸಂಬಂಧಿಸಿದಂತೆ ಮಕ್ಕಳು 18 ವರ್ಷ ದಾಟಿದ ಬಳಿಕ ಚರ್ಚಿಸಿ. ಆದರೆ ಮನೆಯ ಖರ್ಚು ವೆಚ್ಚಗಳನ್ನು ಮಕ್ಕಳ ಗಮನಕ್ಕೆ ತನ್ನಿ. ಹೀಗೆ ಮಾಡುವುದರಿಂದ ಹಣದ ಬಗ್ಗೆ ಅವರಿಗೊಂದು ಐಡಿಯ ಬರುತ್ತದೆ.

2. ನಿಮ್ಮ ಕೈಗೆ ಎಟುಕದನ್ನು ಮಾತ್ರ ಮಕ್ಕಳಿಗೆ ತೆಗೆದು ಕೊಡಿ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ದುಡ್ಡುನ್ನು ವ್ಯರ್ಥ ಮಾಡಬಾರದು ಎಂಬುದನ್ನು ಮನದಟ್ಟು ಮಾಡಿ.

3. ಮಕ್ಕಳಿಗೆ ಹಣ ಉಳಿತಾಯ ಮಾಡುವುದನ್ನು ಕಲಿಸಿ. ಉಳಿತಾಯದ ಹಣ ಮುಂದಕ್ಕೆ ಹೇಗೆ ಉಪಕಾರಕ್ಕೆ ಬರುತ್ತದೆ ಎಂಬುದನ್ನು ಉದಾರಣೆಯ ಸಹಿತ ತಿಳಿಸಿ.

4. ಚಿಕ್ಕದಾದ ಹಣದ ಹುಂಡಿಯನ್ನು ನಿಮ್ಮ ಮಕ್ಕಳ ರೂಮಿನಲ್ಲಿ ಇಡುವುದರಿದ ಮಕ್ಕಳಿಗೆ ಕೊಡುವ ಪಾಕೆಟ್ ಮನಿಯನ್ನು ಹೆಚ್ಚಾಗಿ ಖರ್ಚು ಮಾಡದೆ ಉಳಿತಾಯ ಮಾಡುವ ಬುದ್ಧಿಯನ್ನು ಬೆಳೆಸಿಕೊಳ್ಳುತ್ತಾರೆ.

5. ಮಕ್ಕಳಿಗೆ ಹಣಕೊಟ್ಟು ಚಿಕ್ಕಪುಟ್ಟ ವಸ್ತುಗಳ ಶಾಪಿಂಗ್ ಮಾಡಲು ಹೇಳಿ. ಹೀಗೆ ಮಾಡುವುದರಿಂದ ಹಣವನ್ನು ಹೇಗೆ ಉಪಯೋಗಿಸಬೇಕು ಮತ್ತು ಒಳ್ಳೆಯ ವಸ್ತುಗಳನ್ನು ಹೇಗೆ ಖರೀದಿಸಬೇಕು ಎಂಬ ಜ್ಞಾನ ಸಿಗುತ್ತದೆ.

6. ಮಕ್ಕಳ ಹತ್ತಿರ ಹಣಕಾಸಿನ ವಿಷಯದ ಕುರಿಯು ಮಾತನಾಡುವುದು, ಹಣ ಹೇಗೆ ಬರುತ್ತೆ, ಹೇಗೆ ಹಣದ ಕ್ರೋಢೀಕರಣ ಮಾಡಬಹುದು ಇವುಗಳ ಕುರಿತು ಮಕ್ಕಳ ಹತ್ತಿರ ಮಾತನಾಡುವುದರಿಂದ ಮಕ್ಕಳಿಗೆ ಹಣದ ಮೌಲ್ಯದ ಕುರಿತು ತಿಳಿವಳಿಕೆ ಬರುವುದು.

English summary

Tips To Teach Your Children About Value of Money | Educating Your Children | ಮಕ್ಕಳಿಗೆ ಹಣದ ಮೌಲ್ಯ ತಿಳಿಸುವುದು ಹೇಗೆ? | ಮಕ್ಕಳಿಗೆ ಉತ್ತಮ ಶಿಕ್ಷಣ

Children should know the value of money.The regular use of credit or debit cards have made the kids think that you have pretty loaded bank balance. By teaching value of money you can make your children as responsible one. Lets check out the ways to teach your child the value of money.
Story first published: Thursday, September 29, 2011, 16:53 [IST]
X
Desktop Bottom Promotion