For Quick Alerts
ALLOW NOTIFICATIONS  
For Daily Alerts

ಅಂಡಾಣುವಿನ ಗುಣಮಟ್ಟ ಮತ್ತು ಫಲವತ್ತತೆ ವೃದ್ಧಿಸಲು ಟಿಪ್ಸ್

|

ಗರ್ಭ ಧರಿಸಲು ಮಹಿಳೆಯ ಅಂಡಾಣು ಫಲಿತಗೊಳ್ಳಲು ಪೂರಕವಾಗುವಷ್ಟು ಆರೋಗ್ಯವನ್ನು ಹೊಂದಿರಲೇಬೇಕು. ಕಾರಣಾಂತರಗಳಿಂದ ಅಂಡಾಣುವಿನ ಗುಣಮಟ್ಟ ಅಗತ್ಯವಿರುವಷ್ಟಿಲ್ಲದಿದ್ದರೆ ಗರ್ಭಧಾರಣೆಯಾಗುವ ಸಾಧ್ಯತೆಗಳು ಅತಿ ಕಡಿಮೆಯಾಗಿರುತ್ತವೆ.

Improve Egg Quality

ಈ ನಿಟ್ಟಿನಲ್ಲಿ ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸುವುದು ಅಗತ್ಯವಾಗುತ್ತದೆ ಅಲ್ಲದೇ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟು, ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಹೇಗೆ?, ಈ ಬಗ್ಗೆ ಕೆಲವು ಅಮೂಲ್ಯ ಸಲಹೆಗಳು ನಿಮಗೆ ಅತ್ಯಗತ್ಯ. ಗರ್ಭ ಧರಿಸಲು ಇಚ್ಛಿಸುವ ಮಹಿಳೆಯರಿಗೆ ಈ ಸಲಹೆಗಳು ಅತಿ ಅಗತ್ಯವಾಗಿವೆ. ಬನ್ನಿ ನೋಡೋಣ.

1. ಧೂಮಪಾನದಿಂದ ದೂರವಿರಿ

1. ಧೂಮಪಾನದಿಂದ ದೂರವಿರಿ

ಧೂಮಪಾನದ, ಅದರಲ್ಲೂ ಸಿಗರೇಟಿನ ಧೂಮ ನಿಮ್ಮ ಅಂಡಾಶಯಗಳಲ್ಲಿರುವ ಅಂಡಾಣುಗಳನ್ನು ಶಾಶ್ವತವಾಗಿ ನಷ್ಟಪಡಿಸುವ ಗತಿಯನ್ನು ಹೆಚ್ಚಿಸುತ್ತದೆ. ಸಿಗರೇಟಿನ ಧೂಮದಲ್ಲಿರುವ ಕೆಲವು ರಾಸಾಯನಿಕಗಳು ಮಹಿಳೆಯ ಅಂಡಾಣುವಿನಲ್ಲಿರುವ ಕೆಲವು ಡಿ ಎನ್ ಎ ಗಳಾಗಿ ರೂಪಾಂತರಗೊಳ್ಳುತ್ತವೆ ಹಾಗೂ ಅಂಡಾಣು ಫಲಿತಗೊಳ್ಳಲು ತಕ್ಕುದಲ್ಲ ಎಂಬ ತಪ್ಪು ಸೂಚನೆಯನ್ನು ನೀಡುತ್ತವೆ.

ಪರಿಣಾಮವಾಗಿ ಈ ಅಂಡಾಣು ಫಲಿತಗೊಳ್ಳದೇ ವಿಸರ್ಜಿಸಲ್ಪಡುತ್ತದೆ. ಹೆಣ್ಣುಮಗು ಹುಟ್ಟುವಾಗಲೇ ಅದರ ದೇಹದಲ್ಲಿ ನಿಯಮಿತ ಸಂಖ್ಯೆಯ ಅಂಡಾಣುಗಳು ಅಡಕವಾಗಿರುತ್ತವೆ. ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ತಿಂಗಳಿಗೊಂದರಂತೆ ಇವು ಬಿಡುಗಡೆ ಪಡೆಯುತ್ತವೆ ಹಾಗೂ ರಜೋನಿವೃತ್ತಿ ಪಡೆಯುವವರೆಗೂ ಇದು ಮುಂದುವರೆಯುತ್ತದೆ.

ವಯಸ್ಸಾದಂತೆ ಅಂಡಾಣುಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಗುತ್ತದೆ. ಹಾಗಾಗಿ ಇರುವ ಅಂಡಾಣುಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಧೂಮಪಾನ ವರ್ಜಿಸಬೇಕು.

2. ಮಾನಸಿಕ ಒತ್ತಡವನ್ನು ನಿರ್ವಹಿಸಿ

2. ಮಾನಸಿಕ ಒತ್ತಡವನ್ನು ನಿರ್ವಹಿಸಿ

ಮಾನಸಿಕ ಒತ್ತಡದಿಂದ ಮೆದುಳಿನಲ್ಲಿ ಕಾರ್ಟಿಸೋಲ್ ಎಂಬ ರಸದೂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಹಾಗೂ ಇದು ಅಂಡಾಣು ಬಿಡುಗಡೆಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಅಂಡಾಣು ಉತ್ಪತ್ತಿಯಾಗುವುದನ್ನೂ ತಡೆಯಬಹುದು.

ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗಾಸನ, ಧ್ಯಾನ, ವ್ಯಾಯಾಮ, ಬೆಚ್ಚಗಿನ ನೀರಿನ ಸ್ನಾನ ಮೊದಲಾದ ಕ್ರಮಗಳನ್ನು ಅನುಸರಿಸುವ ಮೂಲಕ ಆದಷ್ಟೂ ಮಾನಸಿಕ ಒತ್ತಡಕ್ಕೆ ಒಳಗಾಗದೇ ಇರುವಂತೆ ನೋಡಿಕೊಳ್ಳಬೇಕು.

3. ಆರೋಗ್ಯಕರ ಆಹಾರ ಸೇವಿಸಿ

3. ಆರೋಗ್ಯಕರ ಆಹಾರ ಸೇವಿಸಿ

ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವ ಆಹಾರಗಳನ್ನೇ ಸೇವಿಸಿ. ಇದರ ಮೂಲಕ ಅಂಡಾಣುಗಳೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಫಲವತ್ತತೆಯೂ ಹೆಚ್ಚುತ್ತದೆ.

ನಿಮ್ಮ ಆಹಾರದಲ್ಲಿ ಸಾಕಷ್ಟು ಹಸಿರು ಎಲೆಗಳು, ಇಡಿಯ ಧಾನ್ಯಗಳು, ಬಿಳಿ ಮಾಂಸದ ಪದಾರ್ಥ, ಒಣ ಫಲಗಳು, ತಾಜಾ ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳು ಮತ್ತು ಹಣ್ಣುಗಳಿರಬೇಕು.

ಟ್ರಾನ್ಸ್ ಫ್ಯಾಟ್ ಎಂಬ ಸಂಸ್ಕರಿಸಿದ ಆಹಾರದಲ್ಲಿರುವ ಕೊಬ್ಬಿನ ಪದಾರ್ಥಗಳನ್ನು ವರ್ಜಿಸಿ. ಸಂಸ್ಕರಿತ ಮಾಂಸ ಹಾಗೂ ಸಿದ್ಧ ಆಹಾರಗಳು, ಅತಿಯಾದ ಸಕ್ಕರೆ ಮತ್ತು ಅತಿಯಾದ ಉಪ್ಪು ಸಹಾ ನಿಮಗೆ ಸಲ್ಲದು.

4. ಸಾಮಾನ್ಯ ಬಾಡಿ ಮಾಸ್ ಇಂಡೆಕ್ಸ್ ನಷ್ಟೇ ತೂಕ ಇರುವಂತೆ ನೋಡಿಕೊಳ್ಳಿ

4. ಸಾಮಾನ್ಯ ಬಾಡಿ ಮಾಸ್ ಇಂಡೆಕ್ಸ್ ನಷ್ಟೇ ತೂಕ ಇರುವಂತೆ ನೋಡಿಕೊಳ್ಳಿ

ನಿಮ್ಮ ಎತ್ತರಕ್ಕೆ ತಕ್ಕ ತೂಕ ಅಥವಾ ಬಾಡಿ ಮಾಸ್ ಇಂಡೆಕ್ಸ್ (BMI (body mass index) ಕೋಷ್ಟಕದಲ್ಲಿರುವ ಮಿತಿಗಳ ಒಳಗೇ ನಿಮ್ಮ ತೂಕ ಇರುವಂತೆ ಕಾಪಾಡಿಕೊಳ್ಳಿ. ಸ್ಥೂಲಕಾಯಕ್ಕೂ ಅಂಡಾಣುವಿಕ ಗುಣಮಟ್ಟ ಕುಂದುವುದಕ್ಕೂ ನಿಕಟ ಸಂಬಂಧವಿದೆ.

ಸ್ಥೂಲಕಾಯದಿಂದ ಉತ್ಕರ್ಷಣಶೀಲ ಒತ್ತಡ (oxidative stress) ಹೆಚ್ಚುತ್ತದೆ ಹಾಗೂ ಜೀವಕೋಶದ ಮೈಟೋಕಾಂಡ್ರಿಯಾದ ಕಾರ್ಯನಿರ್ವಹಣೆ (mitochondrial function)ಯ ಮೇಲೂ ಪ್ರಭಾವ ಬೀರುತ್ತದೆ.

ಸ್ಥೂಲದೇಹದಕ್ಕೆ ಕೆಲವಾರು ರಸದೂತಗಳ ಅಸಮತೋಲನವೂ ಕಾರಣವಾಗಿರಬಹುದು. ಈ ಅಸಮತೋಲನದ ಅಂಡಾಣು ಬಿಡುಗಡೆಯ ಮೇಲೂ ಪ್ರಭಾವ ಬೀರುತ್ತದೆ. ನಿಮ್ಮ ಬಿ ಎಮ್. ಐ 18.5-24.9 ರ ಒಳಗೇ ಇರುವಂತೆ ತೂಕವನ್ನು ಕಾಪಾಡಿಕೊಳ್ಳಿ. ಈ ತೂಕ ಗರ್ಭಧಾರಣೆಗೆ ಹೆಚ್ಚು ಅನುಕೂಲಕರವಾಗಿದೆ. ಅಂದಾಜು 5'6" ಎತ್ತರ ವಿರುವ ಮಹಿಳೆ ತೂಕ 52-69 ಕೇಜಿಗಳ ನಡುವೆ ಇರಬೇಕು

5. ರಕ್ತಪರಿಚಲನೆಯನ್ನು ಹೆಚ್ಚಿಸಿಕೊಳ್ಳಿ

5. ರಕ್ತಪರಿಚಲನೆಯನ್ನು ಹೆಚ್ಚಿಸಿಕೊಳ್ಳಿ

ಆರೋಗ್ಯಕರ ಅಂಡಾಣುವಿನ ಕಾರ್ಯನಿರ್ವಹಣೆಗೆ ರಕ್ತಪರಿಚಲನೆ ಉತ್ತಮಗೊಂಡಿರುವುದೂ ಅಗತ್ಯವಾಗಿದೆ. ರಕ್ತಪರಿಚಲನೆ ಕೆಲವಾರು ಕಾರಣಗಳಿಂದ ಕುಗ್ಗಬಹುದು. ನಿರ್ಜಲೀಕರಣ ಇದಕ್ಕೆ ಮೊದಲ ಕಾರಣ.

ಹಾಗಾಗಿ ದಿನಕ್ಕೆ ಎಂಟು ಲೋಟಕ್ಕೂ ಕಡಿಮೆ ಇಲ್ಲದಂತೆ ನೀರು ಕುಡಿಯುತ್ತಿರಿ. ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಯೋಗಾಸನಗಳನ್ನು ನಿತ್ಯವೂ ಅನುಸರಿಸಿ. ಪದ್ಮಾಸನ, ಬಾಲಾಸನ, ಪಶ್ಚಿಮೋತ್ತಾಸನ ಇವೆಲ್ಲವೂ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತವೆ ಹಾಗೂ ಫಲವತ್ತತೆಯನ್ನು ಹೆಚ್ಚಿಸಲೂ ನೆರವಾಗುತ್ತವೆ.

6. ಹೆಚ್ಚುವರಿ ಔಷಧಿಗಳನ್ನು ಸೇವಿಸಿ

6. ಹೆಚ್ಚುವರಿ ಔಷಧಿಗಳನ್ನು ಸೇವಿಸಿ

ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸಲು ಇಂದು ಕೆಲವಾರು ಔಷಧಿಗಳು ಲಭ್ಯವಿದೆ. ವೈದ್ಯರ ಸಲಹೆ ಮೇರೆಗೆ ಇವುಗಳಲ್ಲಿ ನಿಮ್ಮ ಆರೋಗ್ಯಕ್ಕೆ ಸೂಕ್ತವಾದುದನ್ನು ಸೇವಿಸಲು ತೊಡಗಿ.

Coenzyme Q10, melatonin ಮತ್ತು ಮೀನೆಣ್ಣೆ ಇವುಗಳಲ್ಲಿ ಪ್ರಮುಖವಾಗಿವೆ. CoQ10 ಎಂಬುದು ಮೈಟೋಕಾಂಡ್ರಿಯಲ್ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಆಂಟಿ ಆಕ್ಸಿಡೆಂಟುಗಳು ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ.

(ಪ್ರಮಾಣ 200 mg, 3x ಪ್ರತಿದಿನ). ಮೆಲಟೋನಿನ್ ಸಹಾ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ಮೀನೆಣ್ಣೆ (EPA/DHA) ಸಹಾ ಅಂಡಾಣುವಿನ ಗುಣಮಟ್ಟ ಹೆಚ್ಚಿಸುತ್ತವೆ ಹಾಗೂ ಗರ್ಭಾಶಯದ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪ್ರಮಾಣ (1200-1500mg EPA + DHA ಪ್ರತಿದಿನ , ಆದರೆ 3000 mg/day ಕ್ಕೂ ಮೀರಬಾರದು).

7. ನಿಮ್ಮ ಅಂಡಾಣುವನ್ನು ಶೈತ್ಯಾಗಾರದಲ್ಲಿ ಸಂಗ್ರಹಿಸಿಡಿ

7. ನಿಮ್ಮ ಅಂಡಾಣುವನ್ನು ಶೈತ್ಯಾಗಾರದಲ್ಲಿ ಸಂಗ್ರಹಿಸಿಡಿ

ಒಂದು ವೇಳೆ ಕಾರಣಾಂತರಗಳಿಂದ ಈಗ ನಿಮಗೆ ಮಗು ಬೇಡವಾಗಿದ್ದು ಮುಂದಿನ ಸಮಯಕ್ಕೆ ಮುಂದೂಡುವ ಯೋಚನೆ ಇದ್ದರೆ ನಿಮ್ಮ ಫಲವತ್ತಾಗಿರುವ ದಿನಗಳಲ್ಲಿ ಅಂಡಾಣುವನ್ನು ಶೈತ್ಯಾಗಾರದಲ್ಲಿ ಸಂಗ್ರಹಿಸಿ ಇರಿಸುವ ವ್ಯವಸ್ಥೆ ಮಾಡಿಕೊಳ್ಳಿ. ವಯಸ್ಸಾದಂತೆ ಮಹಿಳೆಯ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ.

ಆದರೆ ಹಿಂದಿನ ಆರೋಗ್ಯಕರ ವಯಸ್ಸಿನಲ್ಲಿ ಕಾಪಾಡಿಕೊಂಡಿದ್ದ ಅಂಡಾಣು ಈಗಲೂ ಆರೋಗ್ಯಕರವಾಗಿದ್ದು ಫಲವತ್ತಾಗುವ ಕ್ಷಮತೆಯನ್ನು ಉಳಿಸಿಕೊಂಡಿರುತ್ತದೆ.

ಈ ವ್ಯವಸ್ಥೆಗೆ cryopreservation ಎಂದು ಕರೆಯುತ್ತಾರೆ. ಚಿಕ್ಕ ವಯಸ್ಸಿದ್ದಾಗಲೇ ಈ ವ್ಯವಸ್ಥೆಯನ್ನು ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಇದು ಆಪತ್ಭಾಂಧವ ಕ್ರಮವಾಗಿ ಪರಿಣಮಿಸಬಹುದು.

English summary

Tips to Improve Egg Quality and Boost Fertility

Here we are discussing about how to improve egg quality and boost fertilityWomen often ask if there is a natural or ‘at home remedy’ for boosting egg quality and improving fertility and the changes of pregnancy. Read more.
X
Desktop Bottom Promotion