For Quick Alerts
ALLOW NOTIFICATIONS  
For Daily Alerts

ಮಕ್ಕಳು ಅತಿಯಾಗಿ ತಿನ್ನುತ್ತಿದ್ದಾರೆಯೇ? ಅವರಲ್ಲಿ ಬುಲೇಮಿಯಾ ರೋಗ ಲಕ್ಷಣವಿರಬಹುದು ಎಚ್ಚರ

|

ಊಟ-ತಿಂಡಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ರುಚಿ-ರುಚಿಯಾದ ಊಟ-ತಿಂಡಿಗಳು ಸಿಕ್ಕರಂತೂ ಸದಾ ಸವಿಯುತ್ತಲೇ ಇರಬೇಕು ಎನ್ನುವ ಮನೋಭಾವವನ್ನು ಹುಟ್ಟಿಸುತ್ತದೆ. ವಿವಿಧ ಬಗೆಯ ತಿಂಡಿ-ಊಟವನ್ನು ಸವಿಯಬೇಕು ಎನ್ನುವ ಹಂಬಲ ದೊಡ್ಡವರಿಗಿಂತ ಚಿಕ್ಕವರಲ್ಲಿ ಹೆಚ್ಚಿರುತ್ತದೆ. ವ್ಯಕ್ತಿಯಲ್ಲಿ ಒಂದು ಪ್ರಬುದ್ಧತೆ ಬಂದ ಮೇಲೆ ಅವನಿಗೆ ಮೂರು ಹೊತ್ತಿನ ಊಟ ಅಥವಾ ತಿಂಡಿ, ಅವುಗಳ ಮಧ್ಯೆ ಕೊಂಚ ಆಹಾರದ ವಸ್ತುಗಳು ದೊರೆತರೆ ಸಾಕು. ಪದೇ ಪದೇ ತಿನ್ನುತ್ತಲೇ ಇರಬೇಕು ಎನ್ನುವ ಹಂಬಲ ಇರುವುದಿಲ್ಲ. ಅದೇ ಮಕ್ಕಳಲ್ಲಿ ಈ ರೀತಿಯ ಭಾವನೆಗಳು ಇರುವುದಿಲ್ಲ. ವಿವಿಧ ಬಗೆಯ ತಿಂಡಿಯನ್ನು ತಿನ್ನುತ್ತಲೇ ಇರಬೇಕು ಎನ್ನುವ ಆಸೆ ಹೊಂದಿರುತ್ತಾರೆ.

eating disorder

ಆರು ವರ್ಷದ ಒಳಗಿನ ಮಕ್ಕಳಲ್ಲಿ ತಿನ್ನುವ ಹಂಬಲ ಅಷ್ಟಾಗಿ ಇರುವುದಿಲ್ಲ. ಅಮ್ಮ ನೀಡುವ ಊಟ-ತಿಂಡಿಯನ್ನು ಸವಿಯುತ್ತಾರೆ ಅಷ್ಟೆ. ಅದೇ 7ರಿಂದ 30 ವರ್ಷದ ಒಳಗೆ ಇರುವವರಲ್ಲಿ ತಿಂಡಿಯ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಹೊಸ ಹೊಸ ಭಕ್ಷ್ಯಗಳ ರುಚಿಯನ್ನು ನೋಡಬೇಕು. ತಮಗೆ ಇಷ್ಟವಾಗುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಹೀಗೆ ವಿವಿಧ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಕೆಲವರಿಗೆ ಈ ಆಸೆ ವಿಪರೀತವನ್ನು ಮೀರಿರುತ್ತದೆ ಎಂದರೆ ತಿನ್ನುವ ಆಸೆಯು ಅವರಿಗೊಂದು ಗೀಳಾಗಿ ಪರಿವರ್ತನೆ ಹೊಂದುವುದು. ನಿಜ, ಯಾವ ಮಕ್ಕಳಲ್ಲಿ ತಿನ್ನುವ ಗೀಳು ಇರುತ್ತದೆಯೋ ಅವರಿಗೆ ತಾವು ಸೇವಿಸುವ ಊಟ-ತಿಂಡಿಯು ರುಚಿಕರವಾಗಿ ಇರಬೇಕು ಎನ್ನುವ ಹಂಬಲ ಇರುವುದಿಲ್ಲ. ಏನೇ ಆಗಿರಲಿ, ಹೇಗೇ ಇರಲಿ ತಿನ್ನುತ್ತಲೇ ಇರಬೇಕು ಅಷ್ಟೆ. ಇಂತಹ ಒಂದು ಮಾನಸಿಕ ಸಮಸ್ಯೆಗೆ ಅನೋರೆಕ್ಸಿಯಾ ಅಥವಾ ಬುಲೇಮಿಯಾ ಎಂದು ಕರೆಯುತ್ತಾರೆ.

ಸಿಕ್ಕಲೆಲ್ಲಾ ತಿನ್ನುತ್ತಲೇ ಇರುತ್ತಾರೆ?

ಸಿಕ್ಕಲೆಲ್ಲಾ ತಿನ್ನುತ್ತಲೇ ಇರುತ್ತಾರೆ?

ಆರಂಭದಲ್ಲಿ ಏನನ್ನು ತಿನ್ನಲು ಬಯಸದ ಮಕ್ಕಳಿಗೆ ಪಾಲಕರು ಒತ್ತಾಯ ಪೂರ್ವಕವಾಗಿ ಊಟ ಮಾಡಿಸುತ್ತಾರೆ. ಆದರೆ ನಂತರ ಅವರ ಬೆಳವಣಿಗೆ ಆಗುತ್ತಿದ್ದಂತೆ ಅವರ ಪಾಲಿನ ಊಟ-ತಿಂಡಿಯನ್ನು ಅವರೇ ಮಾಡುವಷ್ಟು ಸಾಮರ್ಥ್ಯ ಬೆಳೆಯುತ್ತದೆ. ಅಂತಹ ಸಮಯದಿಂದ ಅವರು ಸಿಕ್ಕಿದ್ದನ್ನು ತಿನ್ನುತ್ತಾ, ಯಾವ ಜಾಗದಲ್ಲಿ ತಿನ್ನುತ್ತಿದ್ದೇನೆ? ಏನು ತಿನ್ನುತ್ತಿದ್ದೇನೆ ಎನ್ನುವ ಪರಿವಿಲ್ಲದೆಯೇ ಏನಾದರೂ ಬಾಯಾಡಿಸುತ್ತಲೇ ಇರುತ್ತಾರೆ. ಆಗ ಅವರಿಗೇ ತಿಳಿಯದೆ ಒಂದು ಬಗೆಯ ಮಾನಸಿಕ ಅಸ್ವಸ್ಥತೆಯ ಚಿಹ್ನೆಗೆ ಒಳಗಾಗುವರು. ಹಾಗಾದರೆ ಈ ಚಿಹ್ನೆಯನ್ನು ಗುರುತಿಸುವುದು ಹೇಗೆ? ಈ ಸಮಸ್ಯೆ ಇರುವವರ ವರ್ತನೆ ಹೇಗಿರುತ್ತದೆ? ಎನ್ನುವುದನ್ನು ಈ ಮುಂದಿನ ವಿವರಣೆಯಿಂದ ತಿಳಿಯಿರಿ.

ಹದಿಹರೆಯದ ವಯಸ್ಸಿನಲ್ಲಿ ಇರುವ ಮಕ್ಕಳ ಆಹಾರ ಪದ್ಧತಿಯ ಕಡೆಗೆ ಗಮನ ನೀಡಿ

ಹದಿಹರೆಯದ ವಯಸ್ಸಿನಲ್ಲಿ ಇರುವ ಮಕ್ಕಳ ಆಹಾರ ಪದ್ಧತಿಯ ಕಡೆಗೆ ಗಮನ ನೀಡಿ

ತಿನ್ನುವ ಹವ್ಯಾಸವು ಭಾವನಾತ್ಮಕ ಸಂಕೇತವಾಗಿರಬಹುದು. ನಿರಂತರವಾಗಿ ತಿನ್ನುತ್ತಲೇ ಇರುವುದರಿಂದ ಅದೊಂದು ಚಟ, ಸಮಸ್ಯೆ ಹಾಗೂ ಅತಿರೇಖ ಎನ್ನಿಸಿಕೊಳ್ಳುವುದರ ಮಟ್ಟಿಗೆ ಸಾಗುವುದು. ಹಾಗಾಗಿ ಯಾವುದೇ ಸಮಸ್ಯೆ ಬಂದರೂ ಅದನ್ನು ಪ್ರಾರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡಿದರೆ ಶಮನವಾಗುತ್ತದೆ. ತಿನ್ನುವ ಸಮಸ್ಯೆಯು ಒಂದು ಮೂಕವಾದ ಅಥವಾ ಸದ್ದಿಲ್ಲದೆ ನಡೆಯುವ ಒಂದು ಸಮಸ್ಯೆ. ಅದನ್ನು ಪೋಷಕರು ಗುರುತಿಸಬೇಕು. ಮಕ್ಕಳು ಎಷ್ಟು ಬಾರಿ? ಯಾವ ಪ್ರಮಾಣದಲ್ಲಿ? ಏನನ್ನು ತಿನ್ನುತ್ತಾರೆ? ಯಾವ ಸ್ಥಳದಲ್ಲಿ ಮಾತ್ರ ಆಹಾರ ಸೇವಿಸಲು ಇಚ್ಛಿಸುತ್ತಾರೆ? ಎನ್ನುವುದರ ಬಗ್ಗೆ ಸಾಕಷ್ಟು ಗಮನ ನೀಡುವ ಅಗತ್ಯವಿರುತ್ತದೆ.

ಮಕ್ಕಳು ಊಟ ತಯಾರಿಸುವಲ್ಲಿ ಆಸಕ್ತಿ ತೋರಬಹುದು

ಮಕ್ಕಳು ಊಟ ತಯಾರಿಸುವಲ್ಲಿ ಆಸಕ್ತಿ ತೋರಬಹುದು

ಯಾರು ತಿನ್ನುವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಅಥವಾ ತಿನ್ನುವ ಒಂದು ಅನಾರೋಗ್ಯ ಸಮಸ್ಯೆಯನ್ನು ಹೊಂದಿರುತ್ತಾರೋ ಅವರು ಅಡುಗೆ ಮಾಡಲು ಅಥವಾ ಊಟ ತಯಾರಿಸುವುದರ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇದೊಂದು ವಿಚಿತ್ರ ಸಂಗತಿ ಎನಿಸಬಹುದು ಆದರೆ ಈ ರೋಗ ಲಕ್ಷಣವು ಸಾಮಾನ್ಯವಾದುದ್ದಲ್ಲ. ಆಡುವ ಹಾಗೂ ಸ್ವತಂತ್ರವಾಗಿ ಕುಣಿದಾಡುವ ವಯಸ್ಸಿನಲ್ಲಿ ಮಕ್ಕಳು ತಿನ್ನುವುದು ಹಾಗೂ ಊಟ ತಯಾರಿಸುವುದರ ಬಗ್ಗೆಯೇ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದರೆ ಕೊಂಚ ನಿಗಾ ವಹಿಸಬೇಕು.

ಮಕ್ಕಳ ಬೆಳವಣಿಗೆಯ ಹಂತದಲ್ಲೂ ತೂಕ ನಿಶ್ಚಲವಾಗಿರುವುದು

ಮಕ್ಕಳ ಬೆಳವಣಿಗೆಯ ಹಂತದಲ್ಲೂ ತೂಕ ನಿಶ್ಚಲವಾಗಿರುವುದು

ಮಕ್ಕಳು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಾ ಹೋದಂತೆ ದೇಹದಲ್ಲಿ ಗಾತ್ರ ಹಾಗೂ ತೂಕವು ಹೆಚ್ಚುತ್ತಾ ಹೋಗುವುದು. ಅದು ಆರೋಗ್ಯಕರ ಬೆಳವಣಿಗೆಯಲ್ಲಿ ಒಂದಾಗಿರುತ್ತದೆ. ಅದೇ ಮಗು ಮಿತಿ ಮೀರಿ ತಿನ್ನುತ್ತಿರುತ್ತದೆ. ಆದರೆ ದೇಹದ ತೂಕ ಮಾತ್ರ ಏರಿಕೆ ಕಾಣದು, ಬದಲಿಗೆ ತೂಕ ನಷ್ಟವನ್ನು ಅನುಭವಿಸುತ್ತಿದೆ ಎಂದಾದರೆ ಅದು ಬುಲೇಮಿಯಾ ರೋಗ ಲಕ್ಷಣದ ಆರಂಭಿಕ ಚಿಹ್ನೆಯಾಗಿರುತ್ತದೆ. ಹಾಗಾಗಿ ಈ ರೀತಿಯ ಚಿಹ್ನೆ ಅಥವಾ ಬದಲಾವಣೆಯು ನಿಮ್ಮ ಮಕ್ಕಳಲ್ಲಿ ಆದರೆ ನೀವು ಮೊದಲು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಸೂಕ್ತ.

ಎಲ್ಲರೊಂದಿಗೆ ಊಟ ಮಾಡುವುದನ್ನು ನಿಲ್ಲಿಸುತ್ತದೆ

ಎಲ್ಲರೊಂದಿಗೆ ಊಟ ಮಾಡುವುದನ್ನು ನಿಲ್ಲಿಸುತ್ತದೆ

ಈ ರೀತಿಯ ಆರೋಗ್ಯ ಸಮಸ್ಯೆ ಇರುವ ಮಕ್ಕಳು ಮನೆಯ ಸದಸ್ಯರು ನಿಗದಿತ ಸಮಯದಲ್ಲಿ ಊಟ-ತಿಂಡಿ ಮಾಡುವ ಹಾಗೆ ಮಾಡುವುದಿಲ್ಲ. ಅವರೊಂದಿಗೆ ಆ ಸಮಯಕ್ಕೆ ಊಟವನ್ನು ಮಾಡುವುದಿಲ್ಲ. ಮನಸ್ಸಿಗೆ ಬಂದಂತೆ ಆಹಾರವನ್ನು ಸೇವಿಸುತ್ತಲೇ ಇರುತ್ತಾರೆ. ಅವರಿಗೆ ಊಟ-ತಿಂಡಿ ತಿನ್ನಲು ನಿಗದಿತ ಸಮಯ ಅಥವಾ ಹಸಿವು ಉಂಟಾಗಬೇಕು ಎನ್ನುವುದರ ಯೋಚನೆಯು ಬರುವುದಿಲ್ಲ. ಅವರ ಆಹಾರ ಸೇವನೆಯ ವಿಪರೀಮಿತ ವರ್ತನೆ ಎಲ್ಲಿಯವರೆಗೆ ಇರುತ್ತದೆ ಎಂದರೆ, ಅವರು ಶೌಚಾಲಯದಲ್ಲಿ ಇರುವಾಗಲೂ ಬಾಯಲ್ಲಿ ಏನಾದರೂ ಮೆಲುಕು ಹಾಕುತ್ತಲೇ ಇರುತ್ತಾರೆ. ಅವರಿಗೆ ಶೌಚಾಲಯ ಎನ್ನುವ ಹೇಸಿಗೆಯೂ ಉಂಟಾಗದು.

ಊಟ-ತಿಂಡಿಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ

ಊಟ-ತಿಂಡಿಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ

ಇವರಿಗೆ ಊಟ ತಿಂಡಿಯ ಬಗ್ಗೆ ಸಾಕಷ್ಟು ಮೋಹ ಇರುತ್ತದೆ. ಸಸ್ಯಹಾರ, ಮಾಂಸಹಾರ ಎನ್ನುವ ಬೇಧ ಇರುವುದಿಲ್ಲ. ಯಾವುದು ಸಿಕ್ಕರೂ ಅದರ ರುಚಿ ನೋಡುತ್ತಾರೆ. ಇವರಲ್ಲಿ ಗಟ್ಟಿ ಊಟಕ್ಕಿಂತ ಕುರುಕಲು ತಿಂಡಿ ಹಗುರವಾದ ಆಹಾರ ಮತ್ತು ಪಾನೀಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಅವರು ಏನೇ ಮಾಡಲೀ, ಎಲ್ಲಿಗೇ ಹೋಗಲೀ ಒಂದಿಷ್ಟು ತಿಂಡಿಯು ಅವರ ಜೊತೆಗೆ ಇರಬೇಕು. ಅವುಗಳ ಸೇವನೆ ಇಲ್ಲದೆ ಅವರ ಯಾವ ಕೆಲಸವೂ ಸಾಗುವುದಿಲ್ಲ ಎನ್ನುವ ಸ್ಥಿತಿಗೆ ಬಂದಿರುತ್ತಾರೆ. ಇವು ಸಹ ಅವರಲ್ಲಿರುವ ಅಸ್ವಸ್ಥತೆಯನ್ನು ಗುರುತಿಸಲು ಇರುವ ಒಂದು ಚಿಹ್ನೆ ಎನ್ನಬಹುದು.

English summary

Signs of An Eating Disorder In Children

Eating disorders like anorexia, bulimia, binge-eating disorders affect a large population between the ages of 14 to 30. Body image issues, instances of shaming and bullying on social media can drive people to problems and even impact their mental health. However, what many don't realize is that the disorder stems from adolescence, just when kids tend to be picky and fixated about their eating habits.
X
Desktop Bottom Promotion