For Quick Alerts
ALLOW NOTIFICATIONS  
For Daily Alerts

ಐವಿಎಫ್‌ ಮೂಲಕ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಈ ಅಂಶಗಳು ಗೊತ್ತಿದ್ದರೆ ಬೇಗ ಫಲ ಸಿಗುವುದು

|

ಕೆಲವು ವರ್ಷಗಳ ಹಿಂದೆಕ್ಕೆ ಹೋಲಿಸಿದರೆ ಈ 10 ವರ್ಷಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅನೇಕ ಕಾರಣಗಳಿಂದಾಗಿ ಈ ಸಮಸ್ಯೆ ಕಂಡು ಬರುತ್ತಿದೆ. ತುಂಬಾ ತಡವಾಗಿ ಮದುವೆಯಾಗುವುದು, ಬೇಗ ಮದುವೆಯಾಗಿದ್ದರೂ ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್‌ ತುಂಬಾ ವರ್ಷಗಳರೆಗೆ ಮುಂದೂಡುವುದು, ಪ್ರಾರಂಭದಲ್ಲಿ ಮಕ್ಕಳು ಬೇಡವೆಂದು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಗರ್ಭಪಾತ ಸಮಸ್ಯೆ, ಅನಾರೋಗ್ಯ ಹೀಗೆ ನಾನಾ ಕಾರಣಗಳಿಂದಾಗಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ.

IVF Treatment

ಆದರೆ ವಿಜ್ಞಾನಕ್ಕೆ ಥ್ಯಾಂಕ್ಸ್ ಹೇಳಲೇಬೇಕು. ಏಕೆಂದರೆ ಎಷ್ಟೋ ಹೆಣ್ಮಕ್ಕಳು ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ತಾಯಿ ಭಾಗ್ಯ ಕಾಣುವಂತಾಗಿದೆ. ಚಿಕಿತ್ಸೆ, ಐವಿಎಫ್ ಈ ಎಲ್ಲಾ ತಂತ್ರಜ್ಞಾನಗಳು ಎಷ್ಟೋ ಹೆಣ್ಮಕ್ಕಳಿಗೆ ತಾಯ್ತನದ ಭಾಗ್ಯ ಕರುಣಿಸಿದೆ.

ಬಂಜೆತನ ಹೋಗಲಾಡಿಸಲು ನೀಡಲಾಗುತ್ತಿರುವ ಚಿಕಿತ್ಸೆಗಳು

ಬಂಜೆತನ ಹೋಗಲಾಡಿಸಲು ನೀಡಲಾಗುತ್ತಿರುವ ಚಿಕಿತ್ಸೆಗಳು

* ಕ್ಲೋಮಿಫೆನ್ ಸಿಟ್ರೇಟ್ (Clomiphene citrate)

ಈ ಮಾತ್ರೆ ತೆಗೆದುಕೊಳ್ಳುವುದರಿಂದ ಅಂಡಾಣುಗಳ ಉತ್ಪತ್ತಿ ಹೆಚ್ಚಿಸುತ್ತೆ. ಅಂಡಾಣುಗಳ ಸಂಖ್ಯೆ ಕಡಿಮೆ ಇದ್ದು ಮಕ್ಕಳಾಗದಿದ್ದರೆ ಈ ಚಿಕಿತ್ಸೆ ಮೂಲಕ ಅಂಡಾಣುಗಳ ಸಂಖ್ಯೆ ಹೆಚ್ಚಿಸಿ ಗರ್ಭಧರಿಸಬಹುದು.

* ಗೊನಡೋಟ್ರೋಪಿನ್ಸ್ (Gonadotropins)

ಇಂಜೆಕ್ಷನ್‌ ಮೂಲಕ ಅಂಡಾಣುಗಳ ಉತ್ಪತ್ತಿ ಹೆಚ್ಚಿಸಲಾಗುವುದು.

* ಮೆಟ್‌ಫೋರ್ಮಿನ್ (Metformin)

ಇನ್ಸುಲಿನ್ ಅಡೆತನದಿಂದಾಗಿ ಬಂಜೆತನ ಉಂಟಾಗಿದ್ದರೆ ಈ ಚಿಕಿತ್ಸೆ ನೀಡಲಾಗುವುದು.

* ಲೆಟ್ರೋಜೋಲ್ (Letrozole )

ಇದು ಕ್ಲೋಮಿಫೆನ್ ಸಿಟ್ರೇಟ್‌ನಂತೆ ಕೆಲಸ ಮಾಡುತ್ತದೆ.

* ಬ್ರೊಮೋಕ್ರಿಪ್ಟೈನ್‌

ಪಿಟ್ಯೂಟರಿ ಗ್ರಂಥಿಯಲ್ಲಿ ಅಧಿಕ ಪ್ರೊಲ್ಯಾಕ್ಟಿನ್‌ ಉತ್ಪತ್ತಿಯಾದಾಗ ಓವ್ಯೂಲೇಷನ್‌ (ಅಂಡಾಣು ಉತ್ಪತ್ತಿ)ನಲ್ಲಿ ತೊಂದರೆಯಾಗುವುದು, ಅದನ್ನು ತಡೆಗಟ್ಟಲು ಈ ಚಿಕಿತ್ಸೆ ಸಹಕಾರಿಯಾಗಿದೆ.

ಬಂಜೆತನಕ್ಕೆ ಐವಿಎಫ್‌ ಚಿಕಿತ್ಸೆ

ಬಂಜೆತನಕ್ಕೆ ಐವಿಎಫ್‌ ಚಿಕಿತ್ಸೆ

ಇದರಲ್ಲಿ ಇನ್‌ ವಿಟ್ರೋ ತಂತ್ರಜ್ಞಾನದ ಮೂಲಕ ಅಂಡಾಣು ಹಾಗೂ ವೀರ್ಯಾಣು ಮಾಡಿ ಅದನ್ನು ಟ್ಯೂಬ್‌ನಲ್ಲಿ ಹಾಕಿ ಭ್ರೂಣ ತಯಾರಿಸಿ ನಂತರ ಮಹಿಳೆಯ ಗರ್ಭಕೋಶದೊಳಗೆ ಹಾಕಲಾಗುವುದು. ಮಹಿಳೆ ಈ ರೀತಿ ಗರ್ಭಧರಿಸಿದರೆ ಗರ್ಭಾವಸ್ಥೆಯಲ್ಲಿ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ.

ಆದರೆ ಇದು ದುಬಾರಿ ಚಿಕಿತ್ಸೆಯ ವಿಧಾನವಾಗಿದೆ. ಈ ವಿಧಾನದಲ್ಲಿ ಕೆಲವೊಮ್ಮೆ ಮೊದಲ ಬಾರಿಗೆ ಚಿಕಿತ್ಸೆ ಫಲಕಾರಿಯಾಗದೆಯೂ ಇರಬಹುದು. ಐವಿಎಫ್‌ ಚಿಕಿತ್ಸೆ ಮೂಲಕ ಮಕ್ಕಳ ಪಡೆಯಬಯಸುವವರು, ಆ ಚಿಕಿತ್ಸೆ ಯಶಸ್ವಿಯಾಗಲು ಈ ಅಂಶಗಳನ್ನು ಗಮನಿಸಬೇಕಾಗಿ ಪರಿಣಿತರು ಹೇಳುತ್ತಾರೆ:

ಐವಿಎಫ್‌ ಚಿಕಿತ್ಸೆ ಒಳಪಡುವವರು ಗಮನಿಸಬೇಕಾದ ಅಂಶಗಳು

ಐವಿಎಫ್‌ ಚಿಕಿತ್ಸೆ ಒಳಪಡುವವರು ಗಮನಿಸಬೇಕಾದ ಅಂಶಗಳು

1. ಆಹಾರಕ್ರಮ

ಐವಿಎಫ್‌ ಚಿಕಿತ್ಸೆಗೆ ಒಳಪಡುವವರು ಆಹಾರಕ್ರಮದ ಕಡೆ ತುಂಬಾನೇ ಗಮನ ಹರಿಸಬೇಕು. ಜಂಕ್‌ ಫುಡ್‌ಗಳನ್ನುತಿನ್ನಲೇಬಾರದು. ಹಣ್ಣು, ಸೊಪ್ಪು, ತರಕಾರಿ, ಪೋಷಕಾಂಶವಿರುವ ಆಹಾರಗಳನ್ನು ಸೇವಿಸಬೇಕು.

ಧೂಮಪಾನ, ಮದ್ಯಪಾನ ಮಾಡಬಾರದು

ಧೂಮಪಾನ, ಮದ್ಯಪಾನ ಸಂಪೂರ್ಣವಾಗಿ ವರ್ಜಿಸಬೇಕು.

ದೇಹದಲ್ಲಿ ನೀರಿನಂಶ ಕಾಪಾಡಿ

ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಬರೀ ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ತಾಜಾ ಜ್ಯೂಸ್‌ ಸಕ್ಕರೆ ಹಾಕದೆ ಮಾಡಿ ಕುಡಿಯಿರಿ.

ನಿದ್ದೆ ಸರಿಯಾಗಿ ಮಾಡಿ

ಯಾರು ಗರ್ಭಿಣಿಯಾಗಲು ಬಯಸುತ್ತಾರೋ ಅವರಿಗೆ ಒಳ್ಳೆಯ ನಿದ್ದೆ ಕೂಡ ಮುಖ್ಯವಾಗಿದೆ. ದಿನದಲ್ಲಿ 8 ಗಂಟೆ ನಿದ್ದೆ ಮಾಡಿ. ದೇಹಕ್ಕೆ ವಿಶ್ರಾಂತಿ ನೀಡಿ.

ಮಾನಸಿಕ ಒತ್ತಡ ಹೊರಹಾಕಿ

ಇದು ತುಂಬಾ ಮುಖ್ಯ, ನೀವು ಬಂಜೆತನಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ ರಿಲ್ಯಾಕ್ಸ್ ಆಗಿರಬೇಕು. ಮಾನಸಿಕ ಒತ್ತಡಕ್ಕೆ ಒಳಗಾಗಬಾರದು. ಅದಕ್ಕಾಗಿ ಧ್ಯಾನ ಮಾಡಿ. ತಜ್ಞರ ಸಲಹೆ ಮೇರೆಗೆ ಕೆಲವೊಂದು ಸುರಕ್ಷಿತ ಯೋಗಾ ಭಂಗಿಗಳನ್ನು ಮಾಡಿ.

ಈ ಎಲ್ಲಾ ಅಂಶದ ಕಡೆ ಗಮನ ನೀಡಿದರೆ ಮಗು ಪಡೆಯಬೇಕೆಂಬ ಹಂಬಲ ಬೇಗನೆ ನೆರವೇರುವುದು.

English summary

Expert Wants To Knows These Things about IVF Treatment in Kannada

Expert Wants To Knows These Things about IVF Treatment in Kannada, read on...
X
Desktop Bottom Promotion