For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳೇನು? ಚಿಕಿತ್ಸೆಯೇನು, ತಡೆಗಟ್ಟುವುದು ಹೇಗೆ?

|

ರಾಜ್ಯದಲ್ಲಿ ಮಕ್ಕಳಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಪೋಷಕರು ಮಕ್ಕಳ ಆರೋಗ್ಯದ ಕಡೆಗೆ ತುಂಬಾನೇ ಗಮನ ಹರಿಸಬೇಕಾಗಿದೆ. ಏಕೆಂದರೆ ಡೆಂಗ್ಯೂ ಕಾಯಿಲೆ ಮಕ್ಕಳ ಪ್ರಾಣಕ್ಕೆ ಕೂಡ ಅಪಾಯಕಾರಿಯಾಗಬಹುದು.

ಈ ಲೇಖನದಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು, ಚಿಕಿತ್ಸೆ, ತಡೆಗಟ್ಟುವ ವಿಧಾನ ಇವುಗಳ ಕುರಿತು ಹೆಚ್ಚಿನ ಮಾಹಿತಿ ನೀಡಲಾಗಿದೆ ನೋಡಿ:

 Dengue Fever in kids

ಡೆಂಗ್ಯೂ ಜ್ವರ ಎಂದರೇನು? ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಈಡಿಸ್‌ ಎಂಬ ಸೊಳ್ಳೆ ಕಚ್ಚಿದಾಗ ಬರುವ ಜ್ವರವಾಗಿದೆ. ಈ ಸೊಳ್ಳೆಯ ಹೊಟ್ಟೆಯ ಭಾಗದಲ್ಲಿ ಗೆರೆಗಳಿದ್ದು ಇದನ್ನು ಹುಲಿ ಪಟ್ಟೆಯ ಸೊಳ್ಳೆ ಎಂದು ಕೂಡ ಕರೆಯಲಾಗುವುದು. ನಿಂತ ನೀರಿನಲ್ಲಿ ಈ ಸೊಳ್ಳೆ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಈ ಸೊಳ್ಳೆ ಮನುಷ್ಯರಿಗೆ ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ. ಮುಂಜಾನೆ ಅಥವಾ ಸೂರ್ಯ ಮುಳುಗುವ ಮುನ್ನ ಕಚ್ಚುವುದು.

ಈ ಸೊಳ್ಳೆ ಡೆಂಗ್ಯೂ ಕಾಯಿಲೆಯ ವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ. ಡೆಂಗ್ಯೂ ವೈರಸ್‌ ಅನ್ನು ಕೂಡ ತನ್ನೊಂದಿಗೆ ಕೊಂಡೊಯ್ಯುದ್ದು ಮನುಷ್ಯರಿಗೆ ಹರಡುವುದು. ಡೆಂಗ್ಯೂ ರೋಗಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದಾಗಲೂ ಡೆಂಗ್ಯೂ ಬರುವುದು. ವಿಶ್ವ ಸಂಸ್ಥೆಯ ಪ್ರಕಾರ ಪ್ರತೀವರ್ಷ 3 ಮಿಲಿಯನ್‌ಗಿಂತಲೂ ಅಧಿಕ ಜನರಿಗೆ ಡೆಂಗ್ಯೂ ಕಾಯಿಲೆ ಬರುತ್ತದೆ. ಸೊಳ್ಳೆ ಕಚ್ಚಿದಾಗ ಡೆಂಗ್ಯೂ ವೈರಸ್‌ ರಕ್ತವನ್ನು ಸೇರುತ್ತದೆ. ಈ ವೈರಸ್‌ ಬಿಳಿ ರಕ್ತವನ್ನು ಸೇರಿದಾಗ ಲಿವರ್, ತ್ವಚೆ, ಮೂಳೆಯ ಮಜ್ಜ ಇವುಗಳಿಗೆ ಹರಡುತ್ತದೆ.

ಈ ವೈರಸ್‌ ನಮ್ಮ ದೇಹವನ್ನು ಸೇರಿದಾಗ ನಮ್ಮ ದೇಹದಲ್ಲಿರುವ ಪ್ರತಿಕಾಯ ಇದರ ವಿರುದ್ಧ ಹೋರಾಡಿ ಕೊಲ್ಲಲು 2-10 ದಿನಗಳನ್ನು ತೆಗೆದುಕೊಳ್ಳುವುದು. ಆದರೆ ಡೆಂಗ್ಯೂ ವೈರಸ್‌ ಪ್ರಬಲವಾಗಿದ್ದರೆ ಜ್ವರ ಕಂಡು ಬರುವುದು, ಕೆಲವರಿಗೆ ಪ್ರಾಣಕ್ಕೆ ಅಪಾಯವನ್ನು ತರುವಷ್ಟು ರೋಗ ಸ್ಥಿತಿ ಗಂಭೀರವಾಗಿರುತ್ತದೆ. ಆಗ ಕೂಡಲೇ ಚಿಕಿತ್ಸೆ ನೀಡಬೇಕಾಗುವುದು. ಇನ್ನು ತಾಯಿಗೆ ಡೆಂಗ್ಯೂ ಇದ್ದರೆ ಅದು ಹುಟ್ಟುವ ಮಗುವಿಗೆ ಬರುವುದಿಲ್ಲ. ರಕ್ತವನ್ನು ನೀಡಿದಾಗ, ಅಥವಾ ಅಂಗಾಂಗಗಳ ಕಸಿ ಮಾಡುವಾಗ ರಕ್ತ ಅಥವಾ ಅಂಗಾಂಗ ದಾನ ಮಾಡಿದ ವ್ಯಕ್ತಿಗೆ ಡೆಂಗ್ಯೂ ಇದ್ದರೆ ರೋಗ ಹರಡುವುದು.

ಮಕ್ಕಳಲ್ಲಿ ಡೆಂಗ್ಯೂ ರೋಗದ ಲಕ್ಷಣಗಳೇನು?

ಮಕ್ಕಳಲ್ಲಿ ಡೆಂಗ್ಯೂ ರೋಗದ ಲಕ್ಷಣಗಳೇನು?

ಡೆಂಗ್ಯೂ ವೈರಸ್‌ ತಗುಲಿದ 4 ದಿನಗಳಲ್ಲಿ ಜ್ವರ ಕಂಡು ಬರುವುದು. ದೊಡ್ಡವರಲ್ಲಿ-ಮಕ್ಕಳಲ್ಲಿ ಶೇ.8ರಷ್ಟು ರೋಗ ಲಕ್ಷಣಗಳು ಸಾಮಾನ್ಯವಾಗಿವೆ. ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ.

ಜ್ವರ

ಡೆಂಗ್ಯೂ ಜ್ವರ ಇನ್‌ಫ್ಲುಯಂಜಾ ಜ್ವರದ ರೀತಿಯಲ್ಲಿಯೇ ಕಂಡು ಬರುವುದು. 100 ಡಿಗ್ರಿಗಿಂತಲೂ ಅಧಿಕ ಮೈ ಉಷ್ಣತೆ, ಮೂಗು ಸೊರುವುದು, ಕೆಮ್ಮು, ತಲೆಸುತ್ತು ಈ ಲಕ್ಷಣಗಳು ಕಂಡು ಬರುವುದು.

ಮಕ್ಕಳ ವರ್ತನೆಯಲ್ಲಿ ವ್ಯತ್ಯಾಸ

ಮಗು ತುಂಬಾ ಕಿರಿಕಿರಿ ಮಾಡಬಹದು. ತುಂಬಾ ಹಠ ಮಾಡುವುದು, ಅಳುವುದು ಮಾಡಬಹುದು. ಸರಿಯಾಗಿ ತಿನ್ನುವುದಿಲ್ಲ, ನಿದ್ದೆಯಲ್ಲಿ ಬದಲಾವಣೆ ಜೊತೆಗೆ ಜ್ವರ ಕಂಡು ಬರುವುದು.

ಮೈಕೈ ನೋವು ಕಂಡು ಬರುವುದು

ಮಗುವಿನ ಕೈ ಕಾಲುಗಳಲ್ಲಿ ನೋವು ಕಂಡು ಬರುವುದು. ಕಣ್ಣುಗಳು ಮಂಕಾಗುವುದು, ಬೆನ್ನು ನೋವು, ತಲೆ ನೋವು, ಬೆನ್ನು ಮೂಳೆ ಮುರಿದಂಥ ಅನುಭವ ಮುಂತಾದ ಲಕ್ಷಣಗಳು ಕಂಡು ಬರುಬಹುದು.

ವಾಂತಿ-ಬೇಧಿ

ಮಗು ಕಿಬ್ಬೊಟ್ಟೆ ನೋವು ಎಂದು ಹೇಳಬಹುದು. ಒಂದು ವರ್ಷದ ಕೆಳಗಿನ ಮಕ್ಕಳಾದರೆ ತುಂಬಾ ಅಳುತ್ತವೆ. ದೊಡ್ಡ ಮಗುವಾದರೆ ಹೊಟ್ಟೆ ನೋವು ಎಂದು ಹೇಳುತ್ತದೆ. ವಾಂತಿ-ಬೇಧಿ ಕೂಡ ಉಂಟಾಗುವುದು.

ತ್ವಚೆಯಲ್ಲಿ ಬದಲಾವಣೆ

ತ್ವಚೆಯಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡು ಬರುವುದು. ಪಾದ ಹಾಗೂ ಕಾಲುಗಳಲ್ಲಿ ತುಂಬಾ ತುರಿಕೆ ಕಂಡು ಬರುವುದು.

ರಕ್ತಸ್ರಾವ

ಮಕ್ಕಳಲ್ಲಿ ಪ್ಲೇಟ್‌ಲೆಟ್ ಕಡಿಮೆಯಾದಾಗ ದವಡೆ ಅಥವಾ ಮೂಗಿನ ಭಾಗದಲ್ಲಿ ರಕ್ತಸ್ರಾವ ಕಂಡು ಬರುವುದು.

ಡೆಂಗ್ಯೂವಿನ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿ.

 ಡೆಂಗ್ಯೂವಿನ ಅಪಾಯಕಾರಿ ಲಕ್ಷಣಗಳು

ಡೆಂಗ್ಯೂವಿನ ಅಪಾಯಕಾರಿ ಲಕ್ಷಣಗಳು

*ಕಣ್ಣಿನ ರಕ್ತ ನಾಳಗಳಲ್ಲಿ ರಕ್ತ ಕಡಿಮೆಯಾಗುವುದು

* ರಕ್ತ ಸ್ರಾವ

* ರಕ್ತದೊತ್ತಡ ಕಡಿಮೆಯಾಗುವುದು

* ಅಂಗ ವೈಫಲ್ಯದಿಂದ ಕೋಮಾಕ್ಕೆ ಜಾರುವುದು

ಡೆಂಗ್ಯೂನ ಈ ಲಕ್ಷಣಗಳು ಕಂಡು ಬಂದರೆ ಮಗುವಿಗೆ ತಯರ್ತು ಚಿಕಿತ್ಸೆ ಅವಶ್ಯಕ.

ಮಗುವಿನಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು?

ಮಗುವಿನಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು?

* ಮಗುವನ್ನು ಬೆಡ್‌ ಮೇಲೆ ಮಲಗಿಸಿ, ಮಗು ತುಂಬಾ ಸುಸ್ತು ಆಗಲು ಬಿಡಬೇಡಿ. ಮಗುವಿಗೆ ತುಂಬಾ ವಿಶ್ರಾಂತಿ ಅವಶ್ಯಕ.

* ಮಗು ಇಷ್ಟಪಟ್ಟು ತಿನ್ನ ಬಯಸುವ ಆಹಾರ ನೀಡಿ. ಸಾಕಷ್ಟು ನಿರು ಕುಡಿಸಿ. ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡುತ್ತಿದೆ ಎಂಬುವುದನ್ನು ಗಮನಿಸಿ. ಮೂತ್ರ ಕ್ಲಿಯರ್ ಆಗಿರಬೇಕು.

* ಮಗು ಎದೆ ಹಾಲು ಕುಡಿಯುತ್ತಿದ್ದರೆ ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಡಿ. ದೊಡ್ಡ ಮಗುವಾದರೆ ಸಾಕಷ್ಟು ನೀರು, ತಾಜಾ ಹಣ್ಣಿನ ಜ್ಯೂಸ್ ಕೊಡಿ.

* ಮಗುವಿಗೆ ಜ್ವರ ಹೆಚ್ಚಾದರೆ ಪ್ಯಾರಾಸಿಟಮೋಲ್ ಜೊತೆಗೆ ಬಟ್ಟೆಯನ್ನು ನೆನೆಸಿ ಹಣೆಗೆ ಇಡಿ. ಮೈಯನ್ನು ಕೂಡ ಒರೆಸಿ. ಇದರಿಂದ ದೇಹದ ಉಷ್ಣತೆ ಹೆಚ್ಚುವುದನ್ನು ತಡೆಗಟ್ಟಬಹುದು.

* ಮಗುವಿಗೆ ತುಂಬಾ ನೋವು ನಿವಾರಕಗಳನ್ನು ನೀಡಬೇಡಿ. ಇದರಿಂದ ಪ್ಲೇಟ್‌ಲೆಟ್‌ ಕಡಿಮೆಯಾಗಬಹುದು.

* ಸ್ವ ಚಿಕಿತ್ಸೆ ಮಾಡಬೇಡಿ, ತಜ್ಞ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯಿರಿ.

ಮಗುವಿಗೆ ಡೆಂಗ್ಯೂಗೆ ಚಿಕಿತ್ಸೆಯೇನು?

ಮಗುವಿಗೆ ಡೆಂಗ್ಯೂಗೆ ಚಿಕಿತ್ಸೆಯೇನು?

* ವೈದ್ಯರು ನೀಡಿರುವ ಔಷಧಿ ಜೊತೆಗೆ ಸಾಕಷ್ಟು ನಿರು ಕುಡಿಸಬೇಕು.

* ನಿದ್ದೆ ಚೆನ್ನಾಗಿ ಮಾಡುವಂತೆ ನೋಡಿಕೊಳ್ಳಬೇಕು.

* ಆರೋಗ್ಯಕರ ಆಹಾರ ನೀಡಿ. ಸೂಪ್‌, ಕಿವಿ ಫ್ರೂಟ್, ಪಪ್ಪಾಯಿ ಇವುಗಳನ್ನು ನೀಡಿ.

* ಪ್ಲೇಟ್‌ಲೆಟ್‌ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಡಿಮೆಯಾದರೆ ಪ್ಲೇಟ್‌ಲೆಟ್‌ ಕೊಡಿಸಬೇಕಾಗುವುದು.

* ಆಕ್ಸಿಜನ್‌ ಥೆರಪಿ ಕೂಡ ನೀಡಬಹುದು.

* ಆಸ್ಪತ್ರೆಗೆ ದಾಖಲಾದ ಬಳಿಕ ರೋಗ ಲಕ್ಷಣಗಳು ಕಡಿಮೆಯಾಗದಿದ್ದರೆ ಮಕ್ಕಳು ರಕ್ತ ನೀಡುವಂತೆ ಸೂಚಿಸಲಾಗುವುದು.

ಡೆಂಗ್ಯೂ ಜ್ವರದಿಂದ ಉಂಟಾಗುವ ಅಪಾಯಗಳು

ಡೆಂಗ್ಯೂ ಜ್ವರದಿಂದ ಉಂಟಾಗುವ ಅಪಾಯಗಳು

* ರಕ್ತ ಹೆಪ್ಪುಗಟ್ಟುವುದು

* ಕೋಮಾಕ್ಕೆ ಜಾರುವುದು

* ಹೃದಯ, ಲಿವರ್, ಶ್ವಾಸಕೋಶ, ಮೆದುಳಿಗೆ ಹಾನಿಯುಂಟಾಗಬಹುದು

* ಪ್ಲೇಟ್‌ಲೆಟ್ಸ್‌ ತುಂಬಾ ಕಡಿಮೆಯಾಗುವುದು

* ಸಾವು ಕೂಡ ಸಂಭವಿಸಬಹುದು.

ಡೆಂಗ್ಯೂ ಕಾಯಿಲೆ ಬಂದಾಗ ನಿರ್ಲಕ್ಷ್ಯ ಮಾಡಲೇ ಬಾರದು. ಕೂಡಲೇ ಚಿಕಿತ್ಸೆ ನೀಡಿದರೆ ರೋಗ ಲಕ್ಷಣಗಳು ಉಲ್ಭಣವಾಗುವುದನ್ನು ತಡೆಗಟ್ಟಬಹುದು.

 ಡೆಂಗ್ಯೂ ತಡೆಗಟ್ಟುವುದು ಹೇಗೆ?

ಡೆಂಗ್ಯೂ ತಡೆಗಟ್ಟುವುದು ಹೇಗೆ?

* ಸೋಲ್ಳೆಗಳು ಕಚ್ಚದಂತೆ ತುಂಬು ತೋಳಿನ ಬಟ್ಟೆ ಹಾಕಿ ಕೊಡಬೇಕು. ಮಕ್ಕಳಿಗೆ ಸಡಿಲವಾದ ಲೈಟ್ ಕಲರ್ ಬಟ್ಟೆಗಳು ಸೊಳ್ಳೆ ಕಡಿತ ತಪ್ಪಿಸಲು ಸಹಕಾರಿಯಾಗಿದೆ. ಕಪ್ಪು ಬಣ್ಣದ ಕಡೆಗೆ ಸೊಳ್ಳೆಗಳು ಬೇಗನೆ ಆಕರ್ಷಿಸುವುದರಿಂದ ಬಿಳಿ ಅಥವಾ ಬ್ರೈಟ್ ಕಲರ್ಬಟ್ಟೆ ಧರಿಸಿ.

* ಮನೆ ಸುತ್ತ-ಮುತ್ತ ಸ್ವಚ್ಛವಾಗಿಡಿ. ಸೊಳ್ಳೆ ಮೊಟ್ಟೆ ಹಾಕಿ ಮರಿ ಹಾಕಲು ಅವಕಾಶ ನೀಡಬೇಡಿ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯ ಸುತ್ತ ಏನಾದರೂ ಹಳೆಯ ಡಬ್ಬಿ-ಇತರ ವಸ್ತುಗಳನ್ನು ಬಿಸಾಡಿದ್ದರೆ ಅವುಗಳನ್ನು ಸೂಕ್ತ ವಿಲೇವಾರಿ ಮಾಡಿ. ಅವುಗಳಲ್ಲಿ ನೀರು ನಿಲ್ಲಲು ಬಿಡಬಾರದು.

* ಕೀಟ ನಾಶಕಗಳನ್ನು ಬಳಸಿ. ತೆಂಗಿನ ಚಿಪ್ಪು ಮನೆಯ ಸಮೀಪ ಬಿಸಾಡಬೇಡಿ.

* ದಿನಾ ಸ್ನಾನ ಮಾಡಿಸಿ, ಬೆವರಿನ ವಾಸನೆ ಸೊಳ್ಳೆಗಳನ್ನು ಆಕರ್ಷಿಸುವುದು.

* ಹಗಲಿನಲ್ಲಿ ಮಲಗಿಸುವಾಗ ಕೂಡ ಸೊಳ್ಳೆ ಪರದೆ ಬಳಸಿ.

* ಇನ್ನು ಮಕ್ಕಳ ಬಟ್ಟೆಗಳಿಗೆ ಹಚ್ಚಲು ಕೆಲವೊಂದು ಕ್ರೀಮ್‌, ಸ್ಪ್ರೇ ಸಿಗುತ್ತವೆ. ಅವುಗಳನ್ನು ಬಳಸಿ. ಆದರೆ ಅವುಗಳು ಮಕ್ಕಳ ತ್ವಚೆಗೆ ತಾಗದಂತೆ ಎಚ್ಚರವಹಿಸಿ.

* ಮನೆ ಕಿಟಕಿಗಳಿಗೆ, ಡೋರ್‌ಗೆ ಸೊಳ್ಳೆ ಪರದೆ ಹಾಕಿಸಬಹುದು.

* ಸೊಳ್ಳೆ ಹೆಚ್ಚಿರುವ ಕಡೆ ಓಡಾಡುವಾಗ ತುಂಬಾ ಮುನ್ನೆಚ್ಚರಿಕೆ ವಹಿಸಿ.

* ಕೊಳಚೆ ನೀರು ಇರುವ ಕಡೆ, ನಿಂತ ನೀರು ಕಡೆ ಮಕ್ಕಳನ್ನು ಆಡಲು ಬಿಡಬೇಡಿ.

* ಸೊಳ್ಳೆಗಳನ್ನು ತಡೆಗಟ್ಟಲು ಕಾಯಿಲ್ ಅಥವಾ ಲಿಕ್ವಡ್ ಸೊಳ್ಳೆ ನಿವಾರಕಗಳನ್ನು ಬಳಸಿ.

ಕೊನೆಯದಾಗಿ: ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ ಮುಂತಾದ ಸಮಸ್ಯೆಗಳು ಸೊಳ್ಳೆಯಿಂದ ಬರುವುದರಿಂದ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ.

English summary

Dengue Fever in kids Signs, Symptoms, Diagnosis, Treatment and Prevention in Kannada

Dengue Fever in kids Signs, Symptoms, Diagnosis, Treatment and Prevention in Kannada, read on.. .
Story first published: Wednesday, September 22, 2021, 20:45 [IST]
X
Desktop Bottom Promotion