For Quick Alerts
ALLOW NOTIFICATIONS  
For Daily Alerts

ಭ್ರೂಣಕ್ಕೆ 24 ವಾರವಾದರೂ ಗರ್ಭಪಾತಕ್ಕೆ ಅವಕಾಶ

|

ಪ್ರತಿಯೊಬ್ಬ ಹೆಣ್ಣು ತಾನು ತಾಯಿಯಾಗಬೇಕು, ತನ್ನ ಮಡಿಲಿನಲ್ಲಿ ಮುದ್ದಾದ ಮಗು ಆಡಿ-ನಲಿದು ಬೆಳೆಯಬೇಕು ಎಂದು ಬಯಸುತ್ತಾಳೆ. ತಾಯಿಯಾಗುವುದು ಹೆಣ್ಣಿನ ಪಾಲಿನ ಅದೃಷ್ಟ. ಆದರೆ ಕೆಲವೊಮ್ಮೆ ಆ ತಾಯ್ತನವೇ ಅವಳ ಪಾಲಿನ ದುರಾದೃಷ್ಟವಾಗಿರುತ್ತದೆ.

ಹೆಣ್ಣು ತಾನು ತಾಯಿಯಾಗಬೇಕೆಂದು ಬಯಸಿ ತಾಯಿಯಾದಾಗ ಮಾತ್ರ ಅದನ್ನು ಅವಳು ಆನಂದಿಸಲು ಸಾಧ್ಯ. ಆದರೆ ಕೆಲವೊಂದು ಪರಿಸ್ಥಿತಿಗೆ ಬಲಿಪಶು ಆದಾಗ ಅವಳು ತಾಯಿಯಾದರೆ ಅದು ಅವಳ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವುದು, ಹಾಗಾಗಿ ಅವಳು ಕೂಡ ಮಗುವನ್ನು ತೆಗಿಸಲು ಅಥವಾ ಅಬಾರ್ಷನ್ ಮಾಡಿಸಲು ಬಯಸುತ್ತಾಳೆ.

Abortion limit increased from 20 to 24 weeks

ಇದುವರೆಗೆ ಗರ್ಭಧಾರಣೆಯಾಗಿ 20 ವಾರಗಳು ಕಳೆದಿದ್ದರೆ ಗರ್ಭಪಾತ ಮಾಡುತ್ತಿರಲಿಲ್ಲ, ಏಕೆಂದರೆ ಅದರ ಬಳಿಕ ಗರ್ಭಪಾತ ಮಾಡಿದರೆ ಅವಳ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಎಂದು ಗರ್ಭಪಾತಕ್ಕೆ ಅವಕಾಶ ನೀಡುತ್ತಿರಲಿಲ್ಲ.

ಆದರೆ ಅಪ್ರಾಪ್ತೆ ಗರ್ಭ ಧರಿಸಿದಾಗ ಅಥವಾ ರೇಪ್‌ ಆಗಿ ಗರ್ಭಧರಿಸಿ ಆ ಗರ್ಭದ ವಿಷಯ 20 ವಾರಗಳ ಬಳಿಕ ತಿಳಿದು ಬಂದರೆ ಗರ್ಭಪಾತ ಮಾಡಿಸುತ್ತಿರಲಿಲ್ಲ. ಆದರೆ ಇದೀಗ ರೇಪ್ ಸಂತ್ರಸ್ತೆ, ಅಪ್ರಾಪ್ತೆ ಈ ರೀತಿಯ ಹೆಣ್ಮಕ್ಕಳು ಗರ್ಭಧರಿಸಿದ್ದರೆ ಆ ಗರ್ಭ ತೆಗೆಯಲು 24 ವಾರಗಳವರೆಗೆ ಅವಕಾಶ ನೀಡಲಾಗಿದೆ, ಇದು ಸೆಪ್ಟೆಂಬರ್ 24ರಿಂದ ಜಾರಿಗೆ ಬಂದಿದೆ.

 ಗರ್ಭಪಾತ ಕಾಯ್ದೆ 2020ಕ್ಕೆ ಯೂನಿಯನ್‌ ಕ್ಯಾಬಿನೆಟ್‌ ಅನುಮತಿ

ಗರ್ಭಪಾತ ಕಾಯ್ದೆ 2020ಕ್ಕೆ ಯೂನಿಯನ್‌ ಕ್ಯಾಬಿನೆಟ್‌ ಅನುಮತಿ

ಯಾವ ಮಹಿಳೆ ಗರ್ಭಪಾತ ಮಾಡಿಸುತ್ತಾಳೋ ಅವಳ ಹೆಸರು ಹಾಗೂ ವಿಳಾಸವನ್ನು ಕೂಡ ಗೌಪ್ಯವಾಗಿ ಇಡಲಾಗುವುದು.

ತಿದ್ದುಪಡಿ ಮಾಡಲಾದ ಗರ್ಭಪಾತ ಕಾಯ್ದೆ 2020ಕ್ಕೆ ಯೂನಿಯನ್‌ ಕ್ಯಾಬಿನೆಟ್‌ ಅನುಮತಿಯನ್ನು ನೀಡಿದೆ. ಈ ಹಿಂದೆ ಈ ರೀತಿಯ ಕೇಸ್‌ಗಳಲ್ಲಿ ಗರ್ಭಪಾತ ಮಾಡಿಸಲು 20 ವಾರಗಳವರೆಗೆ ಮಾತ್ರ ಅನುಮತಿ ಇತ್ತು. ಮುಂದಿನ ಪಾರ್ಲಿಮೆಂಟ್‌ ಸೆಷನ್‌ನಲ್ಲಿ ಈ ಬಿಲ್‌ ಪರಿಚಯಿಸಲಾಗುವುದು.

ಇದರಿಂದ ಅನೇಕ ಹೆಣ್ಮಕ್ಕಳಿಗೆ ಅನುಕೂಲವಾಗಲಿದೆ

ಇದರಿಂದ ಅನೇಕ ಹೆಣ್ಮಕ್ಕಳಿಗೆ ಅನುಕೂಲವಾಗಲಿದೆ

ಈ ತಿದ್ದುಪಡಿಯಾದ ಕಾನೂನು ಪರಿಸ್ಥಿತಿಗೆ ಬಲಿಪಶುವಾದ ಹೆಣ್ಮಕ್ಕಳಿಗೆ, ರೇಪ್‌ ಸಂತ್ರಸ್ತೆ, ಅಪ್ರಾಪ್ತೆ ಇವರುಗಳು ಗರ್ಭಧಾರಣೆಯಾಗಿ 24 ವಾರಗಳಾದರೂ ಗರ್ಭಪಾತ ಮಾಡಿಸಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಬಲಿಪಶುವಾದ ಹೆಣ್ಮಕ್ಕಳ ಬದುಕು ಮತ್ತಷ್ಟು ಕಷ್ಟಕರವಾಗುವುದನ್ನು ತಪ್ಪಿಸಬಹುದಾಗಿದೆ. ಈ ಕಾನೂನು ಅನೇಕ ಹೆಣ್ಮಕ್ಕಳಿಗೆ ಅನುಕೂಲಕರವಾಗಿದೆ.

ಹೆಣ್ಣಕ್ಕಳನ್ನು ಅಸುರಕ್ಷತೆಯಿಂದ ಸುರಕ್ಷತೆ ಕಡೆಗೆ ಕೊಂಡೊಯ್ಯಲು ಸಹಕಾರಿ

ಹೆಣ್ಣಕ್ಕಳನ್ನು ಅಸುರಕ್ಷತೆಯಿಂದ ಸುರಕ್ಷತೆ ಕಡೆಗೆ ಕೊಂಡೊಯ್ಯಲು ಸಹಕಾರಿ

ಎಷ್ಟೋ ಕೇಸ್‌ಗಳಲ್ಲಿ ಸಂತ್ರಸ್ತೆ ಗರ್ಭಧಾರಣೆಯ ವಿಷಯ 4-5 ತಿಂಗಳಾದ ಮೇಲೆ ವಿಷಯ ಗೊತ್ತಾಗುವುದು. ಆಗ ಗರ್ಭಪಾತ ಮಾಡಿಸಲು ಸಾಧ್ಯವಿಲ್ಲವೆಂದು ಅವಳು ಮಗುವಿಗೆ ಜನ್ಮ ನೀಡಬೇಕಾಗುವುದು. ಮುಂದೆ ಅಂಥ ಮಕ್ಕಳು ಅನಾಥ ಆಶ್ರಮ ಸೇರಬೇಕಾಗುವುದು, ಇವಳ ಬದುಕು ಕೂಡ ಹಾಳಾಗುವುದು, ಆದರೆ ಈಗ ಬಂದಿರುವ ಕಾನೂನಿಂದ ಇಂಥ ಹೆಣ್ಮಕ್ಕಳಿಗೆ ತುಂಬಾ ಪ್ರಯೋಜನವಾಗಿದೆ. ಅವಳನ್ನು ಅಸುರಕ್ಷತೆಯಿಂದ ಸುರಕ್ಷತೆ ಕಡೆಗೆ ಕೊಂಡೊಯ್ಯಲು ಇದು ಸಹಾಯವಾಗುವುದು ಅಲ್ವಾ?

ಈ ರೀತಿಯ ಗರ್ಭಪಾತ ಇಂಥ ಕೇಸ್‌ಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಸಾಮಾನ್ಯ ಮಹಿಳೆಯರಿಗೆ ಗರ್ಭಪಾತದ ಅವಧಿ ವಿಸ್ತರಿಸಿಲ್ಲ.

English summary

Abortion limit increased from 20 to 24 weeks, Cabinet approves Bills

Abortion limit increased from 20 to 24 weeks, Cabinet approves Bills.
X
Desktop Bottom Promotion