For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು-ನೀವು ತಿಳಿಯಲೇ ಬೇಕಾದ ಸಂಗತಿಗಳು

By Hemanth
|

ಮಹಿಳೆಯಾಗಲಿ ಅಥವಾ ಪುರುಷನಾಗಲಿ ಇಂದಿನ ದಿನಗಳಲ್ಲಿ ಬಂಜೆತನವೆನ್ನುವುದು ಇಬ್ಬರಲ್ಲೂ ಕಂಡುಬರುತ್ತದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ನಮ್ಮ ಜೀವನ ಶೈಲಿ, ವಾಸಿಸುತ್ತಿರುವ ವಾತಾವರಣ ಮತ್ತು ಆಹಾರ ಕ್ರಮ ಇತ್ಯಾದಿಗಳು. ಮದುವೆಯಾಗಿ ಮಕ್ಕಳನ್ನು ಪಡೆಯಬೇಕೆಂಬ ಆಸೆಯಲ್ಲಿ ಇರುವಂತಹ ದಂಪತಿಗೆ ಹೆಚ್ಚಿನ ಸಂದರ್ಭಗಳಲ್ಲಿ ನಿರಾಶೆಯಾಗುವುದು ಸಹಜ. ಯಾಕೆಂದರೆ ಯಾರಾದರೊಬ್ಬರಲ್ಲಿ ಬಂಜೆತನ ಕಾಣಿಸಿಕೊಳ್ಳುವುದು ಸಾಮಾನ್ಯವೆನ್ನುವಂತಾಗಿದೆ. ಮಕ್ಕಳಾಗದಿರಲು ವೀರ್ಯದ ಗಣನೆ ಕಡಿಮೆಯಾಗಿರುವುದು, ವೀರ್ಯದ ದುರ್ಬಲತೆ ಇತ್ಯಾದಿಗಳು ಕಾರಣವಾಗಿದೆ. ಹೀಗಿದ್ದಾಗ ಮಕ್ಕಳನ್ನು ಪಡೆಯುವುದು ತುಂಬಾ ಕಷ್ಟವಾಗುತ್ತದೆ. ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದ್ದರೂ ಇದು ತುಂಬಾ ದುಬಾರಿಯೆನಿಸುತ್ತದೆ. ದುಡಿದಿರುವುದನ್ನಲ್ಲಾ ಇದಕ್ಕಾಗಿಯೇ ಸುರಿಯಬೇಕಾಗುತ್ತದೆ

ಹಿಂದಿನ ಕಾಲದಲ್ಲಿ ಎಲ್ಲಾ ಮಹಿಳೆಯರಲ್ಲಿ ಮಾತ್ರ ಬಂಜೆತನ ಕಾಣಿಸಿಕೊಳ್ಳುತ್ತದೆ ಎನ್ನುವ ಕಾಲವೊಂದಿತ್ತು. ಆಗ ದಂಪತಿಗೆ ಮಕ್ಕಳಗಾದಿದ್ದರೆ ಮಹಿಳೆಯನ್ನೇ ದೂಷಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ವೈದ್ಯಕೀಯ ಬೆಳವಣಿಗೆಗಳಿಂದ ಪುರುಷರಲ್ಲಿಯೂ ಬಂಜೆತನ ಉಂಟು ಎನ್ನುವುದು ಬೆಳಕಿಗೆ ಬಂತು. ಬಂಜೆತನವಿರುವ ಪುರುಷರ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಕೋಪ, ನಿರಾಸಕ್ತಿ, ಮತ್ತು ಖಿನ್ನತೆಯಿಂದಾಗಿ ದಾಂಪತ್ಯ ಜೀವನದಲ್ಲಿ ಸರಿಯಾಗಿ ಲೈಂಗಿಕ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಬಂಜೆತವು ಅತ್ಯಂತ ಕೆಟ್ಟ ಮಟ್ಟಕ್ಕೆ ತಲುಪುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಚಿಕಿತ್ಸೆ ಪಡೆದುಕೊಂಡು ಆರೋಗ್ಯಕರ ಜೀವನಶೈಲಿಯನ್ನು ನಡೆಸಬಹುದಾಗಿದೆ....

ವೀರ್ಯದ ಗುಣಮಟ್ಟ

ವೀರ್ಯದ ಗುಣಮಟ್ಟ

ಸಾಮಾನ್ಯವಾಗಿ ವೀರ್ಯದ ಗುಣಮಟ್ಟವನ್ನು ಅಳೆಯುವುದು ಅಂಡಾಣುಗಳನ್ನು ಪರೀಕ್ಷೆ ಮಾಡುವುದಕ್ಕಿಂತಲೂ ತುಂಬಾ ಸುಲಭ. ಪುರುಷರು ಹೆಚ್ಚಿನ ಲಿಂಗಾಣುಗಳನ್ನು ಹೊಂದಿರುವರು ಮತ್ತು ದಶಕದಿಂದಲೂ ಅದನ್ನು ಅವರು ಪೂರೈಸಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಆತ ತನ್ನ ಐಷಾರಾಮಿ ಜೀವನವನ್ನು ನಡೆಸಬಹುದಾಗಿದೆ. ನಮ್ಮ ವಯಸ್ಸಿಗೆ ಸಂಬಂಧಿಸಿದಂತೆ ಕೆಲವು ತಿಂಗಳು ಅಥವಾ ವರ್ಷಕ್ಕೆ ಇದು ನಿರ್ಧರಿತವಾಗುವುದು.

ವಿಟಮಿನ್‌ಗಳು ಹಾಗೂ ಸ್ಮೂಥಿಗಳನ್ನು ನೀಡುವುದರಿಂದ ಪುರುಷರಲ್ಲಿನ ಫಲವತ್ತತೆಯು ಹೆಚ್ಚಾಗುವುದಿಲ್ಲ

ವಿಟಮಿನ್‌ಗಳು ಹಾಗೂ ಸ್ಮೂಥಿಗಳನ್ನು ನೀಡುವುದರಿಂದ ಪುರುಷರಲ್ಲಿನ ಫಲವತ್ತತೆಯು ಹೆಚ್ಚಾಗುವುದಿಲ್ಲ

ಆತ ಈ ಪ್ರಕ್ರಿಯೆಯಲ್ಲಿ ಯಾವ ರೀತಿಯಲ್ಲಿ ಭಾಗಿಯಾಗುವನು ಮತ್ತು ತನ್ನ ಬಗ್ಗೆ ಹೇಗೆ ಆತ ಕಾಳಜಿ ವಹಿಸಿಕೊಳ್ಳುವನು ಎಂದು ತಿಳಿಯುವುದು. ಸ್ವಯಂ ಆರೈಕೆ ಮತ್ತು ಒತ್ತಡ ನಿವಾರಣೆಗಾಗಿ ಪುರುಷ ಸಂಗಾತಿಗಳಿಗೆ ಹೆಚ್ಚಿನ ನೆರವು ಬೇಕಾಗಿರುವುದು. ಈ ಮಾದರಿ ಪರೀಕ್ಷೆ ಮಾಡಿ ಕೊಳ್ಳುವುದರಿಂದ ಮತ್ತು ಅದರ ಬಳಿಕ ಆತನಿಗೆ ತನ್ನ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿ ಬರಬಹುದು. ಪುರುಷರಲ್ಲಿನ ಫಲವತ್ತತೆ ಹೆಚ್ಚು ಮಾಡಲು ಕೆಲವೊಂದು ಸಲಹೆಗಳು ಇಲ್ಲಿದೆ. ಕೇವಲ ವಿಟಮಿನ್ ಗಳು ಹಾಗೂ ಸ್ಮೂಥಿಗಳನ್ನು ನೀಡುವುದರಿಂದ ಪುರುಷರಲ್ಲಿನ ಫಲವತ್ತತೆಯು ಹೆಚ್ಚಾಗುವುದಿಲ್ಲ. ಪುರುಷರು ತಮ್ಮ ಜೀವನದಲ್ಲಿ ಫಲವತ್ತತೆ ಹೆಚ್ಚು ಮಾಡಲು ಇಲ್ಲಿ ನಾವು ಮೂರು ಅಂಶಗಳನ್ನು ಸೂಚಿಸಲಿದ್ದೇವೆ... ಮುಂದೆ ಓದಿ

ಸ್ವಾತಂತ್ರ್ಯವನ್ನು ಕಸಿದುಕೊಳ್ಳದಿರಲಿ

ಸ್ವಾತಂತ್ರ್ಯವನ್ನು ಕಸಿದುಕೊಳ್ಳದಿರಲಿ

ಆತ ಅತೀ ಪ್ರಾಮುಖ್ಯ ಮತ್ತು ಪ್ರಶಂಸೆಗೆ ಅರ್ಹ ಎಂದು ಮನವರಿಕೆ ಮಾಡಿಕೊಡಿ. ಮಗುವನ್ನು ಪಡೆಯುವುದು ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಂಡಂತೆ ಮತ್ತು ತನ್ನ ಸಂಗಾತಿಯಿಂದ ಹೆಚ್ಚು ಗಮನ ಸಿಗದು ಎಂದು ಭಾವಿಸುವರು. ಇದರಿಂದಾಗಿ ಆತನು ಮಗು ತನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳದಿರಲಿ ಎಂದು ಭಾವಿಸುತ್ತಲಿರುತ್ತಾನೆ. ಮಗು ಹುಟ್ಟಿದ ಬಳಿಕ ಕೂಡ ಆತ ತುಂಬಾ ಮುಖ್ಯವಾಗಿ ಇರಬೇಕು ಎಂದು ತಿಳಿಯಬೇಕು. ಈ ಎರಡು ವಿಚಾರದ ಬಗ್ಗೆ ಚರ್ಚಿಸಲು ನೀವು ಹೆಚ್ಚಿನ ಪ್ರಾದಾನ್ಯತೆ ನೀಡಿ ಮತ್ತು ಏನು ನಡೆಯುತ್ತಿದೆ ಎನ್ನುವ ಬಗ್ಗೆ ನೀವು ಆತನೊಂದಿಗೆ ಚರ್ಚೆ ಮಾಡಿಕೊಳ್ಳಿ. ನೀವು ತುಂಬಾ ಪ್ರಾಮಾಣಿಕವಾಗಿರಬೇಕು ಮತ್ತು ನಿಮ್ಮೊಂದಿಗೆ ಪ್ರಶ್ನೆ ಮಾಡಿಕೊಳ್ಳಿ. ಈ ಪ್ರಕ್ರಿಯೆಯಲ್ಲಿ ಆತನ ಪಾತ್ರದ ಬಗ್ಗೆ ನೀವು ಪ್ರಶಂಸೆ ಮಾಡುತ್ತಲಿದ್ದೀರಾ ಅಥವಾ ನಿಮ್ಮ ನಿರಾಶೆಯನ್ನು ಆತನ ಮೇಲೆ ಹಾಕುತ್ತಲಿದ್ದೀರಾ ಎಂದು ಸರಿಯಾಗಿ ತಿಳಿದುಕೊಳ್ಳಿ.

Most Read:ಇಂತಹ ಆಹಾರಗಳಿಂದ ದೂರವಿರಿ! ಇಲ್ಲಾಂದ್ರೆ ವೀರ್ಯಾಣುಗಳ ಮೇಲೆ ಅಪಾಯ ಕಾಡಬಹುದು

ಪ್ರತಿನಿತ್ಯ ಕುಡಿಯುವ ಶುದ್ಧ ನೀರಿನ ಪ್ರಮಾಣವನ್ನು 1-2 ಲೀಟರ್ ಗೆ ಹೆಚ್ಚಿಸಿಕೊಳ್ಳಬೇಕು

ಪ್ರತಿನಿತ್ಯ ಕುಡಿಯುವ ಶುದ್ಧ ನೀರಿನ ಪ್ರಮಾಣವನ್ನು 1-2 ಲೀಟರ್ ಗೆ ಹೆಚ್ಚಿಸಿಕೊಳ್ಳಬೇಕು

ಆತನ ದೇಹದೊಳಗೆ ಏನು ಹೋಗುತ್ತದೆಯಾ ಅದು ಹೊರಗೆ ಬರುವುದರ ಮೇಲೆ ಪರಿಣಾಮ ಬೀರುವುದು. ವೀರ್ಯದ ಗಣತಿಯನ್ನು ಹೆಚ್ಚು ಮಾಡಲು ಬಯಸುವಂತಹ ಪುರುಷರು ಮುಖ್ಯವಾಗಿ ಪ್ರತಿನಿತ್ಯ ಕುಡಿಯುವ ಶುದ್ಧ ನೀರಿನ ಪ್ರಮಾಣವನ್ನು 1-2 ಲೀಟರ್ ಗೆ ಹೆಚ್ಚಿಸಿಕೊಳ್ಳಬೇಕು ಮತ್ತು ಸೋಡಾ, ಕೃತಕ ಸಿಹಿ ಪಾನೀಯ ಮತ್ತು ಎನರ್ಜಿ ಡ್ರಿಂಕ್ಸ್ ಗಳನ್ನು ಕಡೆಗಣಿಸಬೇಕು. ಇದರ ಬಳಿಕ ಕಾಫಿಯಂತಹ ಪಾನೀಯಗಳನ್ನು ಕುಡಿಯಬೇಕು. ಇದು ಪುರುಷರಿಗೆ ನೆರವಾಗುವುದು. ಪುರುಷರು ಎಳನೀರು ಮತ್ತು ಸಿಹಿ ಹಾಕದೆ ಇರುವಂತಹ ಗ್ರೀನ್ ಟೀ ಸೇವನೆ ಮಾಡಿದರೆ ಒಳ್ಳೆಯದು. ಹೆಚ್ಚು ನೀರು ಕುಡಿದರೆ ಅದರಿಂದ ದೇಹದ ಒಳಗಿನ ಅಂಗಾಂಗಗಳು ಗುಣಮಟ್ಟದ ವೀರ್ಯವನ್ನು ಬಿಡುಗಡೆ ಮಾಡಲುನೆರವಾಗುವುದು.

ವೀರ್ಯದ ಗಣತಿ

ವೀರ್ಯದ ಗಣತಿ

ವಸ್ತುಗಳು ಚಲಿಸುವಂತೆ ಮಾಡಲು ಅವನಿಗೆ ನೆರವಾಗಿ ಮತ್ತು ನಿಶ್ಚಲತೆಯನ್ನು ಕಡೆಗಣಿಸಿ. ಇದು ಸ್ವಲ್ಪ ವಿಚಿತ್ರವೆಂದು ನಿಮಗೆ ಅನಿಸಿದರೂ ಅದನ್ನು ನೀವು ಎದುರಿಸಬೇಕು. ಪುರುಷನು ಇಡೀ ದಿನ ಕುಳಿತುಕೊಂಡಿದ್ದರೆ ಆಗ ವೀರ್ಯವು ಹಾಗೆ ಇರುವುದು. ಇದರಿಂದಾಗಿ ಹೆಚ್ಚು ವೀರ್ಯವು ಸ್ಖಲನವು ಆಗುತ್ತಲಿದ್ದರೆ ಆಗ ಆ ನಾಳವು ಕೂಡ ತುಂಬಾ ಶುದ್ಧವಾಗಿ ಇರುವುದು ಎಂದು ಮೂತ್ರ ತಜ್ಞರು ಹೇಳುತ್ತಾರೆ. ಹೆಚ್ಚು ಕುಳಿತುಕೊಳ್ಳುವ ಪರಿಣಾಮ ಹೆಚ್ಚು ಬಿಸಿಯು ಉಂಟಾಗುವುದು. ಇದರಿಂದಾಗಿ ವೀರ್ಯದ ಗಣತಿಯು ಕಡಿಮೆ ಆಗುವುದು. ವೀರ್ಯದ ಚಲನಶೀಲತೆಯು ಇದರಿಂದ ಕುಗ್ಗುವುದು. ಆತನಿಗೆ ಸಲಹೆ ಮಾಡಿ ಅಥವಾ ನೀವು ಹಳೆಯ ಮತ್ತು ಹಾನಿಗೀಡಾದ ವೀರ್ಯವನ್ನು ಹೊರಹಾಕಲು ನೆರವಾಗುವುದು. ಇದರಿಂದ ವೀರ್ಯದ ಗುಣಮಟ್ಟವು ಹೆಚ್ಚಾಗುವುದು ಮತ್ತು ನೀವಿಬ್ಬರು ಮತ್ತಷ್ಟು ಹತ್ತಿರವಾಗಲು ಇದು ನೆರವಾಗುವುದು. ಇದರಿಂದ ನಿಮ್ಮ ಲಾಭವು ದ್ವಿಗುಣವಾಗುವುದು.

ಚೆನ್ನಾಗಿ ಬಾಳೆಹಣ್ಣು ಸೇವಿಸಿ

ಚೆನ್ನಾಗಿ ಬಾಳೆಹಣ್ಣು ಸೇವಿಸಿ

ಬಾಳೆಹಣ್ಣು ನಮಗೆ ನಿಸರ್ಗ ನೀಡಿರುವ ಹಲವಾರು ಆಹಾರಗಳ ಆಕಾರ ಆ ಆಕಾರ ಪಡೆದಿರುವ ಅಂಗಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಉದಾಹರಣೆಗೆ ಅಕ್ರೋಟು ಮೆದುಳಿಗೆ, ಬೀನ್ಸ್ ಕಾಳುಗಳು ಮೂತ್ರಪಿಂಡಗಳಿಗೆ ಇತ್ಯಾದಿ. ಅಂತೆಯೇ ಬಾಳೆಹಣ್ಣು ಪುರುಷಾಂಗದ ಆಕಾರವನ್ನು ಹೆಚ್ಚು ಹೋಲುತ್ತದೆ ಹಾಗೂ ಇದರಲ್ಲಿರುವ ಪೋಷಕಾಂಶಗಳು ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿರುವ ವಿಟಮಿನ್ ಬಿ1, ಸಿ ಹಾಗೂ ಮೆಗ್ನೀಶಿಯಂ ವೀರ್ಯಾಣುಗಳ ಸಂಖ್ಯೆ ಹಾಗೂ ಹೆಚ್ಚು ಕಾರ್ಯಶೀಲತೆ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ಬ್ರೋಮೆಲಿಯಾಡ್ ಎಂಬ ಪೋಷಕಾಂಶವಿದೆ, ಇದು ಒಂದು ಅಪರೂಪದ ಕಿಣ್ವವಾಗಿದ್ದು ಲೈಂಗಿಕ ರಸದೂತಗಳನ್ನು ನಿಯಂತ್ರಿಸುವ ಗುಣ ಹೊಂದಿದೆ.

ಧೂಮಪಾನ

ಧೂಮಪಾನ

ಮದ್ಯಪಾನದಂತೆ ಧೂಮಪಾನ ಕೂಡ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಲೈಂಗಿಕ ಆಸಕ್ತಿ ಮೇಲೂ ಪರಿಣಾಮ ಬೀರಬಲ್ಲದು. ಸಿಗರೇಟಿನಲ್ಲಿರುವ ನಿಕೋಟಿನ್ ಎನ್ನುವ ಅಂಶವು ರಕ್ತನಾಳಗಳನ್ನು ಕುಗ್ಗಿಸಿ ನಿಮ್ಮ ಜನನಾಂಗಕ್ಕೆ ರಕ್ತ ಪರಿಚಲನೆಯಾಗದಂತೆ ತಡೆಯುತ್ತದೆ. ಬಂಜೆತನವನ್ನು ದೂರವಿಡಬೇಕಾದರೆ ನೀವು ಸಿಗರೇಟ್ ನ್ನು ದೂರಕ್ಕೆ ಎಸೆಯಬೇಕು.

ಅನಾರೋಗ್ಯಕರ ಆಹಾರ

ಅನಾರೋಗ್ಯಕರ ಆಹಾರ

ಆರೋಗ್ಯ ಸಮಸ್ಯೆಯಿಂದಾಗಿ ಉಂಟಾಗುವಂತಹ ಬಂಜೆತವನ್ನು ನಾವು ಆರೋಗ್ಯಕರ ಜೀವನಶೈಲಿಯಿಂದ ಪರಿಹರಿಸಿಕೊಳ್ಳಬಹುದಾಗಿದೆ. ಸರಿಯಾದ ಆಹಾರ ಪಥ್ಯ ಮತ್ತು ವ್ಯಾಯಾಮದಿಂದ ಬಂಜೆತನ ದೂರವಿಡಬಹುದು. ವ್ಯಾಯಾಮ ಮಾಡದೆ ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರೆ ಆಗ ಖಂಡಿತವಾಗಿಯೂ ಬಂಜೆತನ ಬರಲಿದೆ. ಆರೋಗ್ಯಕರ ಜೀವನಶೈಲಿ, ಆಹಾರ ಹಾಗೂ ವ್ಯಾಯಾಮದಿಂದ ದೇಹದ ತೂಕ ನಿಯಂತ್ರಣದಲ್ಲಿ ಇಟ್ಟುಕೊಂಡು ಬಂಜೆತನ ಬರದಂತೆ ನೋಡಿಕೊಳ್ಳಬಹುದು.

English summary

Tips to Increase Male Fertility-things you must know

As women are the ones who get pregnant there is a lot of attention on their health and wellbeing. But when a couple are planning a pregnancy, it’s important that men are healthy too. Improving your health can improve your fertility (ability to get pregnant) and the future health of your child.
Story first published: Tuesday, February 12, 2019, 15:14 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more