For Quick Alerts
ALLOW NOTIFICATIONS  
For Daily Alerts

ತಂದೆಯಾಗಲು ಮುಂದೂಡಿದರೆ-ಹೆಂಡತಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮಬೀರುವುದು!

|

ಗಂಡ ಮಕ್ಕಳಿಗೆ ಬೆಳೆದು ದೊಡ್ಡವರಾಗಿ ತಮ್ಮ ತಂದೆಯಂತೆಯೇ ವಂಶೋದ್ದಾರಕ್ಕಾಗಿ ತಾವೂ ಕೂಡ ಒಂದೆರಡು ಮಕ್ಕಳಿಗೆ ತಂದೆಯಾಗುವ ಕನಸು ಹೊತ್ತು ಅದನ್ನು ಸಾಕಾರಗೊಳಿಸುವ ಎಲ್ಲಾ ಹಕ್ಕೂ ಇವೆ . ಆದರೆ ಕೆಲವೊಮ್ಮೆ ಇದು ಕೆಲವರಲ್ಲಿ ವಿವಿಧ ಕಾರಣಗಳಿಂದ ಸ್ವಲ್ಪ ತಡವಾಗಿ ಸಾಕಾರಗೊಳ್ಳುತ್ತದೆ. ಅದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಪರಿಣಾಮ ಅನುಭವಿಸುವುದು ಮಾತ್ರ ನಿಮ್ಮ ಬಾಳ ಸಂಗಾತಿ . ಏಕೆಂದರೆ ಅದು ಪ್ರಕೃತಿಯ ನಿಯಮ. ತಂದೆ ತಾಯಿಯಾಗಲು ಇಂತಿಷ್ಟೇ ವಯಸ್ಸು ಎಂದಿರುತ್ತದೆ.

ಅದರಂತೆ ತಂದೆಯಾಗಬೇಕಾದ ಒಬ್ಬ ಮನುಷ್ಯ ತನ್ನ ಸರಿಯಾದ ಸಮಯದ ಜವಾಬ್ದಾರಿಯನ್ನು ಮರೆತು ತನ್ನ ಪಿತೃ ಪರಿಪಾಲನೆಯನ್ನು ಮುಂದೂಡಿದರೆ ಅದರಿಂದ ತನ್ನ ಸಂಗಾತಿಗೆ ಎದುರಾಗುವ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಅಂದರೆ ಗರ್ಭಧಾರಣೆಯ ಸಂಕಷ್ಟಕ್ಕೆ ಸಂಬಂಧಿತ ಗರ್ಭಾವಸ್ಥೆಯ ಮಧುಮೇಹ , ಪ್ರಿಕ್ಲಾಂಪ್ಸಿಯ ಮತ್ತು ಪ್ರಸವ ಜನನ. ಇಂತಹ ಹಲವಾರು ಸಮಸ್ಯೆಗಳಿಗೆ ಆತನೇ ಕಾರಣನಾಗುತ್ತಾನೆ . ಇಂತಹ ಸಂಧರ್ಭದಲ್ಲಿ ಹುಟ್ಟಿದ ಮಕ್ಕಳು ಸಾಮಾನ್ಯವಾಗಿ ಬೆಳೆದು ಪ್ರೌಢಾವಸ್ತೆಗೆ ಬರುವ ಸಮಯದಲ್ಲಿ ಅವರಿಗೆ ಬಾಲ್ಯದ ಕ್ಯಾನ್ಸರ್ , ಮಾನಸಿಕ ಮತ್ತು ಅರಿವಿನ ಅಸ್ವಸ್ಥತೆಗಳು ಮತ್ತು ಆಟಿಸಂ ನಂತಹ ಸಮಸ್ಯೆಗಳು ಕಾಣಿಸುತ್ತವೆ .

men who delay fatherhood can put their partners at risk

ಬಚ್ ಮನ್ ರು ಹೇಳುವ ಹಾಗೆ ಈ ಎಲ್ಲಾ ಸಮಸ್ಯೆಗಳು ಉದ್ಭವವಾಗುವುದು ನಿಸರ್ಗದ ನಿಯಮದಂತೆ ವಯಸ್ಸಾದಂತೆ ಕಡಿಮೆ ಆಗುವ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನು , ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಕಡಿಮೆ ಆಗುವುದರಿಂದ ಸಂಶೋಧನೆಯ ಪ್ರಕಾರ ತಂದೆ ತಾಯಿಯಾಗುವ ಕರ್ತವ್ಯವನ್ನು ಬಾಳ ಸಂಗಾತಿಗಳು ನಿರ್ಧಿಷ್ಟ ವಯಸ್ಸಿನಲ್ಲಿಯೇ ಪೂರ್ಣಗೊಳಿಸಬೇಕು . " ಬಯೋಲಾಜಿಕಲ್ ಕ್ಲಾಕ್ " ನ ಅನುಸರಣೆಯಂತೆ ಯಾರು ತಂದೆಯಾಗಲು ಕಾಲವನ್ನು ಮುಂದೂಡುತ್ತಾ ಹೋಗುತ್ತಾನೋ ಅವನ ಹೆಂಡತಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಮುಂದೆ ಬಹಳ ಗಂಭೀರವಾದ ಪರಿಣಾಮ ಬೀರುತ್ತದೆ.

Most Read: ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

men who delay fatherhood can put their partners at risk

ಯಾವ ಗಂಡಸರು ತಮ್ಮ ಇತರೆ ಜವಾಬ್ದಾರಿಗಳಿಂದ ಅಥವಾ ಇತರೆ ಕಾರಗಳಿಂದ ತಂದೆಯಾಗುವುದನ್ನು ಮುಂದೂಡುತ್ತಾರೋ ಅವರು ತಮ್ಮ 35 ನೇ ವಯಸ್ಸಿಗಿಂತ ಮುಂಚೆ ಸ್ಪರ್ಮ್ ಬ್ಯಾಂಕಿಂಗ್ (ತಮ್ಮ ವೀರ್ಯ ಶೇಖರಣೆ ಸೌಲಭ್ಯ ) ಸೌಲಭ್ಯಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ಒಳಿತೆಂದು ಒಂದು ಬಗೆಯ ಸಂಶೋಧನೆ ಹೇಳುತ್ತದೆ . ಆ ಸಂಶೋಧಕರು ಹೇಳುವ ಹಾಗೆ 40 ವರ್ಷ ದಾಟಿದ ಸಂಗಾತಿಗಳಲ್ಲಿ ಪಲವತ್ತತೆ ಕಡಿಮೆ ಆಗುತ್ತಾ ಬರುತ್ತದೆ . ಗರ್ಭ ಧರಿಸುವುದರಿಂದ ಹಿಡಿದು ಮಕ್ಕಳಾದ ಮೇಲೆ ಆ ಮಕ್ಕಳಿಗೂ ಕೂಡ ಸಾಮಾನ್ಯ ರೀತಿಯ ದೌರ್ಬಲ್ಯ ಕಾಡಲು ಶುರುವಾಗುತ್ತದೆ .

ರಾಟ್ ಗರ್ ವಿಶ್ವವಿದ್ಯಾಲಯದ ರಾಬರ್ಟ್ ವುಡ್ ಜಾನ್ಸನ್ ಮೆಡಿಕಲ್ ಸ್ಕೂಲ್ ನಲ್ಲಿನ ವುಮೆನ್ಸ್ ಹೆಲ್ತ್ ಇನ್ಸ್ಟಿಟ್ಯೂಟ್ ನ ಡೈರೆಕ್ಟರ್ ಆಗಿರುವ ಗ್ಲೋರಿಯಾ ಬಚ್ಚ್ ಮನ್ ಹೇಳುವ ಪ್ರಕಾರ ಮಹಿಳೆಯರಿಗೆ ಯಾವ ರೀತಿಯಲ್ಲಿ ೩೫ ವರ್ಷವಾದ ನಂತರ ಮಕ್ಕಳಾಗುವಿಕೆಯಲ್ಲಿ ತೊಂದರೆ ಕಾಣಿಸುತ್ತದೋ ಮತ್ತು ಅದರ ಪರಿಣಾಮ ಹುಟ್ಟಿದ ಮಕ್ಕಳ ಮೇಲೂ ಆಗುತ್ತದೋ ಅದೇ ರೀತಿಯಲ್ಲಿ ಪುರುಷರಿಗೂ ಕೂಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಅದರ ಪರಿಣಾಮ ಕೂಡ ಮಕ್ಕಳ ಮೇಲೆ ಆಗುತ್ತದೆ . ಜರ್ನಲ್ ಮ್ಯಾಚು ರಿಟಸ್ ನಲ್ಲಿ ಪ್ರಕಟವಾದ ವರದಿಯಂತೆ ವಿಶ್ಲೇಷಿಸಬೇಕೆಂದರೆ ಯಾವ ಪುರುಷರು ೪೫ ವರ್ಷ ದಾಟಿದ ನಂತರ ತಂದೆಯಾಗಲು ಬಯಸುತ್ತಾರೋ ಅವರಿಂದ ಅವರಿಗಷ್ಟೇ ಅಲ್ಲದೆ ಅಂತಹವರ ಸಂಗಾತಿಗೂ ಮಕ್ಕಳಿಗೂ ಆರೋಗ್ಯದಲ್ಲಿ ತೊಂದರೆ ತಪ್ಪಿದ್ದಲ್ಲ.

ಸಂಗಾತಿಗೆ ಗರ್ಭಧಾರಣೆಯ ಸಂಕಷ್ಟಕ್ಕೆ ಸಂಬಂಧಿತ ಗರ್ಭಾವಸ್ಥೆಯ ಮಧುಮೇಹ , ಪ್ರಿಕ್ಲಾಂಪ್ಸಿಯ ಮತ್ತು ಪ್ರಸವ ಜನನ ದ ಸಮಸ್ಯೆ ಕಾಡಿದರೆ ಮಗುವಿನ ವಿಷಯದಲ್ಲಿ ಅವಧಿಗೆ ಮುಂಚೆಗಿನ ಜನನ , ಅವಧಿಗೆ ಬಹಳ ಸಮಯದ ನಂತರ ದ ಜನನ , ನಿರ್ಧಿಷ್ಟ ತೂಕಕ್ಕಿಂತ ಕಡಿಮೆ ತೂಕದ ಮಗುವಿನ ಜನನ , ವಿವಿಧ ಬಗೆಯ ರೋಗಗಳನ್ನು ಹೊತ್ತ ಮಗುವಿನ ಜನನ , ಹೃದಯದ ತೊಂದರೆ ಹೊತ್ತ ಮಗುವಿನ ಜನನ ಮತ್ತು ಸೀಳು ತುಟಿ ಹೊಂದಿರುವ ಮಗುವಿನ ಜನನ . ಈ ರೀತಿಯ ಸಮಸ್ಯೆಗಳು ಕಾಡತೊಡಗುತ್ತವೆ . ಇಂತಹ ಸಂದರ್ಭದಲ್ಲಿ ಹುಟ್ಟಿದ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಅವರಿಗೆ ಬಾಲ್ಯದ ಕ್ಯಾನ್ಸರ್ , ಮಾನಸಿಕ ಮತ್ತು ಅರಿವಿನ ಅಸ್ವಸ್ಥತೆಗಳು ಮತ್ತು ಆಟಿಸಂ ನಂತಹ ಸಮಸ್ಯೆಗಳು ಬಲವಾಗಿ ಕಾಡತೊಡಗುತ್ತವೆ .

ಬಚ್ ಮನ್ ರ ಪ್ರಕಾರ ಈ ಎಲ್ಲಾ ಸಮಸ್ಯೆಗಳು ಕಾಣಲು ಕಾರಣ ವಯಸ್ಸು . ಹೌದು ವಯಸ್ಸಾದಂತೆ ಸಾಮಾನ್ಯವಾಗಿ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಕಡಿಮೆ ಆಗುತ್ತಾ ಬರುತ್ತದೆ . ಇದರ ಜೊತೆಗೆ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಕೂಡ ಕಡಿಮೆ ಆಗುತ್ತಾ ಬರುತ್ತದೆ . ಉದಾಹರಣೆಗೆ ಹೇಗೆ ಮನುಷ್ಯರಿಗೆ ವಯಸ್ಸಾದಂತೆ ಮಾಂಸಖಂಡಗಳು ಕುಗ್ಗುತ್ತಾ ಬರುತ್ತವೆ , ಮತ್ತು ನಿಶ್ಯಕ್ತಿ ಆವರಿಸ ತೊಡಗುತ್ತದೆಯೋ ಅದೇ ರೀತಿ ವೀರ್ಯದ ವಿಷಯದಲ್ಲೂ ಆಗುತ್ತದೆ ಎಂಬುದು ಅವರ ಅಭಿಪ್ರಾಯ. ಇದು ಹೇಗೆಂದರೆ ಅವರ ಸಂಗಾತಿ ಇನ್ನೂ ಕೇವಲ ೨೫ ವರ್ಷವಿದ್ದರೂ ಪುರುಷರು ಮಾತ್ರ ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಎದುರಿಸುತ್ತಾರೆ.

Most Read: ಪುರುಷರಲ್ಲಿ ನಪುಂಸಕತ್ವ-ವೈದ್ಯರನ್ನು ಭೇಟಿ ಮಾಡಲು ತಡ ಮಾಡದಿರಿ!

men who delay fatherhood can put their partners at risk

ಇಂತಹ ವಿಷಯಗಳಲ್ಲಿ ಸಾಮಾನ್ಯವಾಗಿ ಹೆಂಗಸರೇ ಗಂಡಸರಿಗಿಂತ ತಮ್ಮ ಸಂತಾನೋತ್ಪತ್ತಿಯ ವಿಷಯ ಬಂದರೆ ಹೆಚ್ಚು ತಿಳಿದುಕೊಂಡಿರುತ್ತಾರೆ ಮತ್ತು ಕಾಲಕಾಲಕ್ಕೆ ಪರೀಕ್ಷೆಗಳನ್ನು ಕೂಡ ಮಾಡಿಸಿಕೊಂಡಿರುತ್ತಾರೆ . ಆದರೆ ಗಂಡಸರು ತಮಗೆ ಮಕ್ಕಳಾಗಲು ತೊಂದರೆ ಕಾಣಿಸಿದರಷ್ಟೇ ವೈದ್ಯರ ಬಳಿಗೆ ಹೋಗುತ್ತಾರೆ ಎನ್ನುತ್ತದೆ ಅಧ್ಯಯನ.

ಆದ್ದರಿಂದ ಇಂತಹ ಸಮಸ್ಯೆ ಹೊತ್ತುಕೊಂಡಿರುವ ಗಂಡಸರಿಗೆ ಮೊದಲು ಕೋನ್ಸೆಲ್ಲಿಂಗ್ ಮಾಡಿ ಅವರ ವಯಸ್ಸಿಗೆ ಅನುಗುಣವಾಗಿ ಅವರು ಎದುರಿಸುತ್ತಿರುವ ಸಮಸ್ಯೆಯ ಆಳವನ್ನು ಅರ್ಥ ಮಾಡಿಕೊಂಡು ಅವರಿಗೆ ಮತ್ತು ಅವರ ಸಂಗಾತಿಗೆ ಗರ್ಭ ಧರಿಸಲು ಮತ್ತು ಮಕ್ಕಳಾಗಲು ವೈದ್ಯಕೀಯ ರೀತಿಯಲ್ಲಿ ಪರಿಹಾರದ ಮುಖಾಂತರ ಬಹಳ ಅನುಕೂಲ ಮಾಡಿಕೊಡುತ್ತಾರೆ .

English summary

men who delay fatherhood can put their partners at risk

According to a new study published in the journal Maturitas, men who delay fatherhood can put their partners at risk for increased pregnancy complications such as gestational diabetes, preeclampsia and preterm birth. Men who delay fatherhood while starting a family have a ticking “biological clock”—just like women—that may affect the health of their partners and children, according to the researchers. Men who delay fatherhood should consult their doctor and consider banking sperm before age 35, said the study which reviewed 40 years of research on the effect of parental age on fertility, pregnancy and the health of children.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more