For Quick Alerts
ALLOW NOTIFICATIONS  
For Daily Alerts

ಸಮುದ್ರ ಖಾದ್ಯ ಸೇವಿಸಿದರೆ, ಪುರುಷರ ಫಲವತ್ತತೆ ಹೆಚ್ಚಾಗುವುದು

|

ಜೀವನದ ಒತ್ತಡ, ಕಲುಷಿತ ವಾತಾವರಣ, ಕೆಟ್ಟ ಆಹಾರ ಪದ್ಧತಿ ಮತ್ತು ಜೀವನ ಕ್ರಮದಿಂದಾಗಿ ಇಂದಿನ ದಿನಗಳಲ್ಲಿ ಪುರುಷರಲ್ಲಿ ಹೆಚ್ಚಾಗಿ ಫಲವತ್ತತೆ ಸಮಸ್ಯೆಯು ಕಾಡುತ್ತಾ ಇರುತ್ತದೆ. ಮಹಿಳೆಯರಂತೆ ಪುರುಷರಿಗೂ ಫಲವತ್ತತೆ ಸಮಸ್ಯೆಯು ಕಾಡಬಹುದು. ಇದಕ್ಕಾಗಿ ಹಲವಾರು ರೀತಿಯ ಚಿಕಿತ್ಸೆಗಳು ಇಂದು ವೈದ್ಯಕೀಯ ಲೋಕದಲ್ಲಿ ಲಭ್ಯವಿದೆ. ಇದು ತುಂಬಾ ಪರಿಣಾಮಕಾರಿ ಎಂದು ಹೇಳಲು ಕೂಡ ಸಾಧ್ಯವಾಗದು. ಆದರೆ ಪುರುಷರು ಕೆಲವೊಂದು ಪ್ರಕೃತಿ ಸಹಜ ಆಹಾರವನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಫಲವತ್ತತೆಯು ಸಮಸ್ಯೆಯು ನಿವಾರಣೆ ಆಗುವುದು.

ಸಿಂಪಿ ಮತ್ತು ಚಿಪ್ಪುಮೀನನ್ನು ಹೆಚ್ಚಾಗಿ ಸೇವಿಸಿ

ಸಿಂಪಿ ಮತ್ತು ಚಿಪ್ಪುಮೀನನ್ನು ಹೆಚ್ಚಾಗಿ ಸೇವಿಸಿ

ಮಾಂಸಹಾರಿಗಳಿಗೆ ಸಮುದ್ರಖಾದ್ಯವೆಂದರೆ ತುಂಬಾ ಇಷ್ಟ. ಅದರಲ್ಲೂ ಸಿಂಪಿ ಮತ್ತು ಚಿಪ್ಪುಮೀನನ್ನು ಹೆಚ್ಚಿನವರು ತುಂಬಾ ಇಷ್ಟಪಡುವರು. ಇದರಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಪುರುಷರಲ್ಲಿ ಇರುವಂತಹ ಫಲವತ್ತತೆ ಕೊರತೆಯನ್ನು ಇದು ನಿವಾರಣೆ ಮಾಡುವುದು. ಹೀಗಾಗಿ ಬಾಯಿಗೆ ರುಚಿಯೊಂದಿಗೆ ನಿಮ್ಮ ಸಮಸ್ಯೆಯು ನಿವಾರಣೆ ಆಗುವುದು. ಸಿಂಪಿ ಮತ್ತು ಚಿಪ್ಪು ಮೀನುಗಳನ್ನು ಸೇವನೆ ಮಾಡಿದರೆ ಅದರಿಂದ ವೀರ್ಯ ಉತ್ಪತ್ತಿ ಮತ್ತು ಚಲನೆ ಹೆಚ್ಚಾಗುವುದು. ಸಮುದ್ರಖಾದ್ಯಗಳನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಕೆ ಮಾಡುವಂತಹ ಪುರುಷರಲ್ಲಿ ವೀರ್ಯದ ಉತ್ಪತ್ತಿಯು ಗಣನೀಯವಾಗಿ ಹೆಚ್ಚಿದೆ. ಸಿಂಪಿಯನ್ನು ನೀವು ಹೆಚ್ಚು ಸೇವನೆ ಮಾಡಿದರೆ ಅದರಿಂದ ವೀರ್ಯವು ಅಧಿಕವಾಗುವುದು.

Most Read: ಪುರುಷರ ಫಲವತ್ತತೆ ಹೆಚ್ಚಿಸುವ ನೈಸರ್ಗಿಕ ಆಹಾರ ಪದಾರ್ಥಗಳು

ಸಮುದ್ರ ಖಾದ್ಯವು ಪುರುಷರ ಫಲವತ್ತತೆ ಸುಧಾರಿಸುವುದು ಹೇಗೆ?

ಸಮುದ್ರ ಖಾದ್ಯವು ಪುರುಷರ ಫಲವತ್ತತೆ ಸುಧಾರಿಸುವುದು ಹೇಗೆ?

ಸಮುದ್ರಖಾದ್ಯವು ಹಲವಾರು ಕಾರಣಗಳಿಂದಾಗಿ ಪುರುಷರಲ್ಲಿ ಫಲವತ್ತತೆ ಹೆಚ್ಚು ಮಾಡುವುದು. ಇದಕ್ಕೆ ಅತೀ ಮುಖ್ಯ ಕಾರಣವೇನೆಂದರೆ ಅದರಲ್ಲಿ ಇರುವಂತಹ ಸತುವಿನ ಅಂಶ. ಸತು ವೀರ್ಯದ ಉತ್ಪತ್ತಿ ಮತ್ತು ಚಲನೆಗೆ ಬೇಕಾಗಿರುವಂತಹ ಪ್ರಮುಖ ಪೋಷಕಾಂಶ ಆಗಿದೆ. ಫಲವತ್ತತೆ ಸಮಸ್ಯೆ ಎದುರಿಸುವಂತಹ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಯೆಂದರೆ ಸತುವಿನ ಕೊರತೆ. ಯಾಕೆಂದರೆ ಅವರ ಆಹಾರ ಕ್ರಮದಲ್ಲಿ ಸಮುದ್ರ ಖಾದ್ಯದ ಕೊರತೆ ಇರುವುದು. ಫಲವತ್ತತೆ ಸಮಸ್ಯೆ ನಿವಾರಣೆ ಮಾಡಲು ಸರಿಯಾಗಿ ಸಮುದ್ರ ಖಾದ್ಯ ಸೇವನೆ ಮಾಡಿ.

ಹೆಚ್ಚಿನ ಮಟ್ಟದ ಒಮೆಗಾ-3 ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು

ಹೆಚ್ಚಿನ ಮಟ್ಟದ ಒಮೆಗಾ-3 ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು

ಸಮುದ್ರ ಖಾದ್ಯದಲ್ಲಿ ಹೆಚ್ಚಿನ ಮಟ್ಟದ ಒಮೆಗಾ-3 ಕೊಬ್ಬಿನಾಮ್ಲವು ಇರುವ ಕಾರಣದಿಂದಾಗಿ ಇದು ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು. ಇದು ವೀರ್ಯದ ಕೋಶಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ವೀರ್ಯವನ್ನು ಉತ್ಪತ್ತಿ ಮಾಡಲು ದೇಹವು ಒಮೆಗಾ-3 ಕೊಬ್ಬಿನಾಮ್ಲವನ್ನು ಪ್ರಮುಖವಾಗಿ ಬಳಸಿಕೊಳ್ಳುವುದು ಮತ್ತು ಇದರ ಕೊರತೆಯಿಂದಾಗಿ ದೇಹದಲ್ಲಿ ಗರ್ಭಧಾರಣೆ ಮಾಡಿಸುವಷ್ಟು ವೀರ್ಯವು ಉತ್ಪಾದನೆ ಆಗದೆ ಇರಬಹುದು. ಸಾಲ್ಮನ್, ಸಾರ್ಡಿಸ್ ಮತ್ತು ಬಂಗುಡೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕವಾಗಿದೆ. ಮೀನಿನ ಎಣ್ಣೆಯಲ್ಲಿ ಕೂಡ ಒಮೆಗಾ-3 ಕೊಬ್ಬಿನಾಮ್ಲವು ಇದೆ.

ಹೆಚ್ಚಿನ ಮಟ್ಟದ ಒಮೆಗಾ-3 ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು

ಹೆಚ್ಚಿನ ಮಟ್ಟದ ಒಮೆಗಾ-3 ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು

ಇದು ನಮ್ಮ ದೈನಂದಿನ ಅಗತ್ಯತೆಗೆ ಸಾಕಾಗುವುದು. ಮೀನನ್ನು ಗ್ರಿಲ್ ನಲ್ಲಿ ಫ್ರೈ ಮಾಡಿಕೊಂಡು ತಿಂದು ಪುರುಷರು ಫಲವತ್ತತೆ ಹೆಚ್ಚಿಸಿಕೊಳ್ಳಬಹುದು. ದೈನಂದಿನ ಅಗತ್ಯತೆಗೆ ಬೇಕಾಗಿರುವಂತಹ ಒಮೆಗಾ-3 ಕೊಬ್ಬಿನಾಮ್ಲ ಮತ್ತು ಸತುವನ್ನು ನಾವು ಸಮುದ್ರಖಾದ್ಯದಿಂದ ಪಡೆದುಕೊಳ್ಳಬಹುದು. ಇದರಿಂದ ದಿನಕ್ಕೊಂದು ಮೀನು ತಿನ್ನಿ. ನಿಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆಯಾಗಿರುವಂತಹ ಮೀನಿನಲ್ಲಿ ಫಲವತ್ತತೆ ಹೆಚ್ಚು ಮಾಡುವಂತಹ ಹಲವಾರು ರೀತಿಯ ಪೋಷಕಾಂಶಗಳು ಇರಬಹುದು. ಸಿಂಪಿಯಂತಹ ಕೆಲವೊಂದು ಸಮುದ್ರ ಖಾದ್ಯಗಳು ತುಂಬಾ ಪರಿಣಾಮಕಾರಿ. ಇದರಿಂದ ಫಲವತ್ತತೆ ಮಾತ್ರ ಹೆಚ್ಚುವುದಲ್ಲದೆ, ಮನಸ್ಥಿತಿ ಕೂಡ ಸುಧಾರಣೆ ಆಗುವುದು.

Most Read: ಸಣ್ಣ ವಯಸ್ಸಿನಲ್ಲಿ ಸೆಕ್ಸ್‌ನಲ್ಲಿ ಭಾಗಿಯಾದರೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ...

ಆದರೆ ಕೆಲವೊಂದು ಆಯ್ಕೆಗಳು ನಿಮಗೆ ತುಂಬಾ ಅಪಾಯಕಾರಿಯಾಗಬಹುದು

ಆದರೆ ಕೆಲವೊಂದು ಆಯ್ಕೆಗಳು ನಿಮಗೆ ತುಂಬಾ ಅಪಾಯಕಾರಿಯಾಗಬಹುದು

ದುರಾದೃಷ್ಟವೆಂದರೆ ಎಲ್ಲಾ ಸಮುದ್ರ ಖಾದ್ಯಗಳು ಒಂದೇ ರೀತಿಯಾಗಿ ಇರುವುದಿಲ್ಲ. ಅಧ್ಯಯನಗಳು ಹೇಳಿರುವ ಪ್ರಕಾರ ಕೆಲವೊಂದು ಹಸಿ ಮೀನುಗಳಲ್ಲಿ ಪಾದರಸದ ಅಂಶವು ಹೆಚ್ಚಾಗಿ ಇರುವುದು. ನೀರಿನಲ್ಲಿ ಇರುವಂತಹ ಪ್ರಾಣಿಗಳಲ್ಲಿ ಇದು ಸಾಮಾನ್ಯ ವಾಗಿರುವುದು. ಅತಿಯಾಗಿ ಪಾದರಸವು ಪುರುಷರಲ್ಲಿ ಫಲವತ್ತತೆ ಕಡಿಮೆ ಮಾಡಬಹುದು ಮತ್ತು ವೀರ್ಯವನ್ನು ಕೊಲ್ಲಬಹುದು. ಇದರಿಂದಾಗಿ ಪಾದರಸವು ಕಡಿಮೆ ಇರುವಂತಹ ಮೀನುಗಳನ್ನು ಸೇವನೆ ಮಾಡಿ. ಸುಶಿ ಶೈಲಿಯ ಆಹಾರವನ್ನು ಕಡೆಗಣಿಸಿ. ಯಾಕೆಂದರೆ ಇದರಲ್ಲಿ ಅತೀ ಹೆಚ್ಚಿನ ಪಾದರಸದ ಅಂಶವು ಇದೆ ಎಂದು ಅಧ್ಯಯನಗಳು ಹೇಳಿವೆ.

ಸಂತಾನೋತ್ಪತ್ತಿಯ ಆರೋಗ್ಯಕ್ಕಾಗಿ ಸಮುದ್ರಖಾದ್ಯ ಸೇವಿಸಿ

ಸಂತಾನೋತ್ಪತ್ತಿಯ ಆರೋಗ್ಯಕ್ಕಾಗಿ ಸಮುದ್ರಖಾದ್ಯ ಸೇವಿಸಿ

ಕಡಿಮೆ ಸಮಯದಲ್ಲಿ ಗರ್ಭ ಧರಿಸುವಂತೆ ಆಗಲು ನೀವು ಫಲವತ್ತತೆ ಹೆಚ್ಚು ಮಾಡುವಂತಹ ಆಹಾರದೊಂದಿಗೆ ಆರೋಗ್ಯಕರ ಆಹಾರ ಸೇವಿಸುವುದು ಕೂಡ ಅತ್ಯಗತ್ಯವಾಗಿರುವುದು. ಸಮುದ್ರ ಖಾದ್ಯದಿಂದಾಗಿ ನಿಮ್ಮ ವೀರ್ಯದ ಗಣತಿಯು ಹೆಚ್ಚಾಗುವುದು. ಇದರೊಂದಿಗೆ ನೀವು ಕೆಲವೊಂದು ಸಪ್ಲಿಮೆಂಟ್ ಗಳನ್ನು ಕೂಡ ತೆಗೆದುಕೊಳ್ಳಬೇಕು. ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವಂತಹ ಕೆಲವೊಂದು ಸಪ್ಲಿಮೆಂಟ್ ಗಳು ನೈಸರ್ಗಿಕವಾಗಿ ವೀರ್ಯದ ಗುಣಮಟ್ಟ ಮತ್ತು ಗಣತಿ ಹೆಚ್ಚಿಸುವುದು. ಇದರಿಂದ ಮಹಿಳೆಯರು ಬೇಗನೆ ಗರ್ಭ ಧರಿಸಬಹುದು. ಇದರಿಂದ ನೀವು ಸಮುದ್ರ ಖಾದ್ಯದ ಜತೆಗೆ ವೀರ್ಯದ ಗಣತಿ ಹೆಚ್ಚಿಸುವ ಮತ್ತು ಗುಣಮಟ್ಟ ಸುಧಾರಿಸುವ ಮಾತ್ರೆಗಳನ್ನು ಸೇವನೆ ಮಾಡಿ. ಇದರಿಂದ ನಿಮ್ಮ ಫಲವತ್ತತೆ ಹೆಚ್ಚಾಗುವುದು.

English summary

Improve Male Fertility with Seafood

Seafood improves male fertility for several reasons. The most obvious reason is its high concentrations on zinc, an essential nutrient needed for proper sperm production and motility. Men with poor fertility often have zinc deficiencies, resulting from a lack of seafood in their diet. Cure low fertility simply by eating more seafood.
Story first published: Monday, January 21, 2019, 16:13 [IST]
X
Desktop Bottom Promotion