For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ ಪುರುಷರು ತಂದೆ ಆಗದಿರುವುದು!

|

ಒಂದು ಮಗುವನ್ನು ಪಡೆಯುವುದು ಇಬ್ಬರು ವ್ಯಕ್ತಿಗಳ ವೈಯಕ್ತಿಯ ನಿರ್ಧಾರವಾಗಿದೆ. ಗರ್ಭವತಿಯಾದ ಬಳಿಕ ಮಗುವನ್ನು ಹೆರುವವರೆಗೂ ತಾಯಿಯಾಗುವವಳೇ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರುತ್ತಾಳಾದಳೂ, ಗರ್ಭ ಮೂಡಲು ತಂದೆಯಾಗುವವನೇ ಪ್ರಮುಖ ಕಾರಣವಾಗಿರುತ್ತಾನೆ. ಅತಿ ಮುಖ್ಯವಾಗಿ, ಗರ್ಭಾಂಕುರವಾಗಬೇಕಾದರೆ ತಂದೆಯಾಗುವವನ ವೀರ್ಯಾಣುಗಳು ಆರೋಗ್ಯಕರ, ಕನಿಷ್ಟ ಸಂಖ್ಯೆಗೂ ಮೀರಿದ ಸಾಂದ್ರತೆ ಹಾಗೂ ಹೆಚ್ಚು ಚಲನಶೀಲವಾಗಿರಬೇಕಾಗಿರುತ್ತದೆ,

ಆಗಲೇ ಮಹಿಳೆಯ ಅಂಡಾಣು ಫಲಿತಗೊಳ್ಳಲು ಸಾಧ್ಯವಾಗುತ್ತದೆ. ಈ ಕ್ರಿಯೆ ಸಾಧ್ಯವಾಗಬೇಕಾದರೆ ಪುರುಷನ ನಿಮಿರುತನ, ವೀರ್ಯಾಣುಗಳ ಸಂಖ್ಯೆ, ವೀರ್ಯಾಣುಗಳ ಆಕಾರ ಹಾಗೂ ಸೂಕ್ತ ದಾರಿಯಲ್ಲಿ ಮುಂದುವರೆದು ಅಂಡಾಣುವಿನೊಡನೆ ಮಿಲನಗೊಳ್ಳಲು ಅಗತ್ಯವಿರುವ ಸಾಮರ್ಥ ಹೊಂದಿರುವುದು ಮೊದಲಾದ ಅಂಶಗಳೆಲ್ಲವೂ ಪರಿಗಣಿಸಲ್ಪಡುತ್ತವೆ.

ಒಂದು ವೇಳೆ ಈ ಕ್ರಿಯೆಯ ಯಾವುದೋ ಹಂತದಲ್ಲಿ ಅಥವಾ ವೀರ್ಯಾಣುಗಳ ಗುಣಮಟ್ಟದಲ್ಲಿ ಕೊರತೆ ಕಂಡುಬಂದರೆ ಗರ್ಭಾಂಕುರವಾಗಲು ಅಡ್ಡಿಯಾಗುತ್ತದೆ. ವಾಸ್ತವವಾಗಿ ಮಗುವನ್ನು ಪಡೆಯಲೆಂದೇ ಮಹಿಳೆಯೊಂದಿಗೆ ಕೂಡುವ ಪುರುಷರ ಸಂಖ್ಯೆ ಕಡಿಮೆ ಇದ್ದು ಅನೈಚ್ಛಿಕವಾಗಿ ಮಹಿಳೆ ಗರ್ಭವತಿಯಾಗಲು ಕಾರಣರಾಗಿರುವ ಪುರುಷರ ಸಂಖ್ಯೆಯೇ ಹೆಚ್ಚು. ತನ್ನ ಮಗುವನ್ನು ಮುಂದಿನ ಹದಿನೆಂಟರಿಂದ ಇಪ್ಪತ್ತು ವರ್ಷಗಳವರೆಗೆ ಆತನ ತಾಯಿಯೊಂದಿಗೆ ಜವಾಬ್ದಾರಿ ಹೊರಲು ಹೆಚ್ಚಿನವರು ತಕ್ಷಣಕ್ಕೆ ತಯಾರಿರುವುದಿಲ್ಲ. ಅಷ್ಟಕ್ಕೂ, ತಂದೆಯಾಗುವುದನ್ನು ಕೆಲವು ಪುರುಷರೇಕೆ ಇಷ್ಟಪಡುವುದಿಲ್ಲ?

ತಂದೆಯಾಗುವುದನ್ನು ತಡೆಯಲು ಇವರಲ್ಲಿ ಏನಾದರೂ ಕಾರಣವಿದೆಯೇ? ಇಂದಿನ ಜನಾಂಗದ ಯುವಕರಂತೂ ತಂದೆಯಾಗುವುದು ಎಂದರೆ ಒಂದು ಸಾಫ್ಟ್ ವೇರ್ ಮೇಲ್ದರ್ಜೆಗೇರಿಸಿದಂತೆ ಎಂದೇ ಅಂದುಕೊಂಡಿದ್ದಾರೆ. ಉತ್ತಮ ತಂದೆಯಾಗುವ ಭಾಗ್ಯ ಎಲ್ಲರಿಗೂ ಒದಗಿ ಬರುವುದಿಲ್ಲ. ವಾಸ್ತವವೆಂದರೆ ಉತ್ತಮ ಜೀವನ ನಡೆಸಿದ ಪ್ರತಿ ಯಶಸ್ವೀ ತಂದೆ ತನ್ನ ಸಮಯವನ್ನು ತನ್ನ ಮಕ್ಕಳೊಂದಿಗೆ ಕಳೆಯಲಿಚ್ಛಿಸುವುದಿಲ್ಲ, ಬದಲಿಗೆ ತಮ್ಮ ಜೀವನವನ್ನು ಸಮತೋಲನದಲ್ಲಿರಿಸುವುದನ್ನು ಮಕ್ಕಳೊಂದಿಗೆ ಸಮಯ ಕಳೆಯುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಇಂದು ನಮ್ಮ ಸಮಾಜದಲ್ಲಿ ತಂದೆಯಾಗಬಯಸದ ಲಕ್ಷಾಂತರ ಯುವಕರಿದ್ದಾರೆ ಹಾಗೂ ಇದಕ್ಕೆ ಅಗತ್ಯ ವೀರ್ಯಾಣುಗಳ ಸಂಖ್ಯೆಯ ಕೊರತೆ ಅಥವಾ ಆರ್ಥಿಕ ಸಾಮರ್ಥ್ಯದ ಕೊರತೆಯೂ ಕಾರಣವಾಗಿರಬಹುದು. ಇನ್ನೊಂದು ಕಡೆಯಿಂದ, ಈ ಕೊರತೆ ಇಲ್ಲದ ಯುವಕರು ಸಹಾ ಪುಟ್ಟ ಮಕ್ಕಳನ್ನು ಒಂದು ಅನಿರೀಕ್ಷಿತ ಹೊರೆಯನ್ನಾಗಿ ಪರಿಗಣಿಸುತ್ತಾರೆ. ಬನ್ನಿ, ಈ ಯುವಕರೇಕೆ ತಂದೆಯಾಗುವತ್ತ ಮನಸ್ಸು ಮಾಡುತ್ತಿಲ್ಲ ಎಂಬ ವಿಷಯದ ಕಾರಣಗಳ ಬಗ್ಗೆ ಚರ್ಚಿಸೋಣ....

ವೀರ್ಯಾಣುಗಳ ಸಂಖ್ಯೆಯ ಕೊರತೆ

ವೀರ್ಯಾಣುಗಳ ಸಂಖ್ಯೆಯ ಕೊರತೆ

ಒಂದು ಮಗುವನ್ನು ಪಡೆಯಲು ದಂಪತಿಗಳು ಬಹಳಷ್ಟು ಪ್ರಯತ್ನಿಸಿದರೂ ಯಶಸ್ಸು ಕಂಡುಬರದೇ ಇದ್ದರೆ ಇದಕ್ಕೆ ಪುರುಷರ ವೀರ್ಯಾಣುಗಳ ಸಂಖ್ಯೆ ಅಗತ್ಯಸಂಖ್ಯೆಗೂ ಕಡಿಮೆ ಇರುವುದು ಕಾರಣವಾಗಿರಬಹುದು. ಈ ವೈಫಲ್ಯ ದಂಪತಿಗಳಿಬ್ಬರನ್ನೂ ಖಿನ್ನರಾಗಿಸಬಹುದು. ಒಂದು ವೇಳೆ ತನ್ನಲಿಯೇ ಕೊರತೆ ಇದೆ ಎಂದು ಪುರುಷನ ವೈದ್ಯಕೀಯ ಪರೀಕ್ಷೆಯಿಂದ ಖಚಿತವಾದರೆ ಪುರುಷ ಈ ವಾಸ್ತವವನ್ನು ಅರಗಿಸಿಕೊಳ್ಳಲಾರ ಹಾಗೂ ನಿಧಾನವಾಗಿ ತನ್ನ ಪತ್ನಿಯೊಂದಿಗೆ ಕೂಡುವುದನ್ನು ನಿಧಾನವಾಗಿ ತ್ಯಜಿಸುತ್ತಾ ಬರಬಹುದು ಹಾಗೂ ಕ್ರಮೇಣ ಕಾಮಕೂಟದಲ್ಲಿ ಉತ್ಸಾಹವನ್ನೇ ಕಳೆದುಕೊಳ್ಳಬಹುದು. ಕಡಿಮೆ ವೀರ್ಯಾಣುಗಳ ಸಂಖ್ಯೆ ಇರುವ ಪುರುಷರಿಂದ ತಂದೆಯಾಗುವ ಸಾಧ್ಯತೆ ಹೆಚ್ಚೂ ಕಡಿಮೆ ಅಸಾಧ್ಯವಾಗಿರುತ್ತದೆ ಆದರೆ ಇದಕ್ಕೆ ಸೂಕ್ತ ಚಿಕಿತ್ಸೆ ಇದೆ. ಆದರೆ ತನ್ನಲ್ಲಿಯ ಕೊರತೆಯನ್ನೇ ಗಂಭೀರವಾಗಿ ಪರಿಗಣಿಸಿದ ಪುರುಷರು ತಂದೆಯಾಗುವತ್ತ ಹೆಚ್ಚಿನ ಒಲವು ತೋರದೇ ಇರುವುದು ಒಂದು ವಾಸ್ತವವಾಗಿದೆ.

ವೀರ್ಯಾಣುಗಳ ಸಂಖ್ಯೆಯ ಕೊರತೆ

ವೀರ್ಯಾಣುಗಳ ಸಂಖ್ಯೆಯ ಕೊರತೆ

ಇನ್ನು ಪುರುಷರದಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಪ್ರೋಟೀನು ಇವೆ. ಇವು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲೂ ಈ ಫ್ರೀ ರ್‍ಯಾಡಿಕಲ್ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯಲ್ಲಿರುವ ಇತರ ಪೋಷಕಾಂಶಗಳೂ ದೇಹದ ಜೀವಕೋಶಗಳ ಬೆಳವಣಿಗೆಗೆ ನೆರವಾಗುವಂತೆಯೇ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಲೂ ನೆರವಾಗುತ್ತದೆ. ಅಲ್ಲದೆ ಪಾಲಕ್ ಹಾಗೂ ಬಸಲೆ ಸೊಪ್ಪುಗಳಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲವಿದ್ದು ಆರೋಗ್ಯಕರ

ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ನೆರವಾಗುತ್ತದೆ. ಪುರುಷರಲ್ಲಿ ಫೋಲೇಟ್ ಅಂಶ ಕಡಿಮೆಯಾದಾಗ ವೀರ್ಯಾಣುಗಳ ಸಂಖ್ಯೆ ಅಷ್ಟೇ ಇದ್ದರೂ ಇದರಲ್ಲಿ ವಿಕೃತಗೊಂಡ ವೀರ್ಯಾಣುಗಳ ಸಂಖ್ಯೆ ಹೆಚ್ಚೇ ಇರುವ ಕಾರಣ ಇವು ಗರ್ಭಾಂಕುರಕ್ಕೆ ನೆರವಾಗವು, ಅಲ್ಲದೇ ಒಂದು ವೇಳೆ ಈ ವಿಕೃತ ವೀರ್ಯಾಣುವಿನ ಸಂಯೋಜನೆಯಿಂದ ಹುಟ್ಟಿದ ಮಗು ವಿಕಲಾಂಗವಾಗಿ ಹುಟ್ಟುವ ಸಾಧ್ಯತೆಯೂ ಹೆಚ್ಚು.

ರಸದೂತಗಳಲ್ಲಿ ಏರುಪೇರು

ರಸದೂತಗಳಲ್ಲಿ ಏರುಪೇರು

ಇಂದು ನಪುಂಸಕತ್ವದ ತೊಂದರೆ ಇರುವ ಪುರುಷರ ಸಂಖ್ಯೆ ಕೋಟಿಗಳಲ್ಲಿದೆ. ಕೆಲ ವರ್ಷಗಳ ಹಿಂದಿನವರೆಗೂ ದಂಪತಿಗಳಿಗೆ ಮಕ್ಕಳಾಗದೇ ಇದ್ದರೆ ಮಹಿಳೆಯನ್ನೇ ದೂರಲಾಗುತ್ತಿತ್ತು. ವಾಸ್ತವದಲ್ಲಿ ಪುರುಷರ ನಪುಂಸಕತ್ವಕ್ಕೆ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಪ್ರಮುಖ ಕಾರಣವಾಗಿವೆ ಹಾಗೂ ಕಡಿಮೆ ಸಂಖ್ಯೆಗೆ ಪ್ರಮುಖವಾಗಿ ರಸದೂತಗಳಲ್ಲಿ ಏರುಪೇರು ಪ್ರಭಾವ ಬೀರುತ್ತದೆ. ಪುರುಷರ ವೀರ್ಯಾಣುಗಳು ಪುರುಷರ ವೃಷಣಗಳಲ್ಲಿ ಉತ್ಪತ್ತಿಯಾಗುತ್ತವೆ ಹಾಗೂ ಇದಕ್ಕೆ ಹೈಫೋಥಲಮಸ್ ಮತ್ತು ಪಿಟ್ಯುಟರಿ ಗ್ರಂಥಿಗಳಿಂದ ಉತ್ಪತ್ತಿಯಾಗುವ ರಸದೂತಗಳು ನೆರವಾಗುತ್ತವೆ. ಈ ರಸದೂತಗಳಲ್ಲಿ ಏನೇ ಏರುಪೇರು ಉಂಟಾಗಿದ್ದರೂ ಇದರ ಪ್ರಭಾವ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟದ ಮೇಲೆ ಆಗುತ್ತದೆ.

ಪುರುಷರಲ್ಲಿ ನಪುಂಸಕತ್ವ-ವೈದ್ಯರನ್ನು ಭೇಟಿ ಮಾಡಲು ತಡ ಮಾಡದಿರಿ!

ಹಿಮ್ಮುಖ ಸ್ಖಲನದ ತೊಂದರೆ

ಹಿಮ್ಮುಖ ಸ್ಖಲನದ ತೊಂದರೆ

ವೀರ್ಯಾಣುಗಳ ಸಂಖ್ಯೆಯ ಕೊರತೆಗೆ ಸ್ಖಲನದ ತೊಂದರೆಯೂ ಒಂದು ಕಾರಣವಾಗಿರಬಹುದು. ಮಿಲನದ ಪರಾಕಾಷ್ಠೆಯ ಸಮಯದಲ್ಲಿ ವೀರ್ಯಾಣುಗಳು ಸ್ಖಲನಗೊಳ್ಳುವಾಗ ಪುರುಷ ಜನನಾಂಗದಿಂದ ಹೊರಬರುವ ಬದಲು ಮೂತ್ರನಾಳದತ್ತ ಹಿಮ್ಮುಖವಾಗಿ ಧಾವಿಸುತ್ತದೆ (retrograde ejaculation). ಈ ತೊಂದರೆಗೆ ಕೆಲವಾರು ಕಾರಣಗಳಿವೆ. ಅನಾರೋಗ್ಯ, ಮಧುಮೇಹ, ಬೆನ್ನುಹುರಿಗೆ ಆದ ಪೆಟ್ಟು ಅಥವ ಪ್ರಾಸ್ಟೇಟ್ ಗ್ರಂಥಿಗೆ ಸಂಬಂಧಿಸಿದ ತೊಂದರೆಗಳು ಈ ಹಿಮ್ಮುಖ ಸ್ಖಲನಕ್ಕೆ ಕಾರಣವಾಗಬಹುದು.

ವೀರ್ಯಾಣುಗಳನ್ನು ಸಾಗಿಸುವಲ್ಲಿ ವೈಫಲ್ಯ

ವೀರ್ಯಾಣುಗಳನ್ನು ಸಾಗಿಸುವಲ್ಲಿ ವೈಫಲ್ಯ

ವೃಷಣಗಳಲ್ಲಿ ಉತ್ಪತ್ತಿಯಾದ ವೀರ್ಯಾಣುಗಳು ಸ್ಖಲನದ ಸಮಯದಲ್ಲಿ ಜನನಾಂಗದಿಂದ ಹೊರಬರಬೇಕಾದರೆ ಕೆಲವು ನಾಳಗಳ ಮೂಲಕ ಹಾದು ಬರಬೇಕಾಗುತ್ತದೆ. ಕೆಲವೊಮ್ಮೆ ಈ ನಾಳಗಳು ಕೆಲವಾರು ಕಾರಣಗಳಿಂದ ನಡುವಿನಲ್ಲಿ ಕಟ್ಟಿಕೊಂಡಿದ್ದು ವೀರ್ಯಾಣುಗಳ ಚಲನೆಗೆ ಅಡ್ಡಿಯುಂಟುಮಾಡುತ್ತವೆ. ಇದಕ್ಕೆ ಕೆಲವು ಅಸಾಮಾನ್ಯ ಬೆಳವಣಿಗೆ ಅಥವಾ ಸೋಂಕು ಉಂಟಾಗುವ ಮುನ್ನ ಈ ತೊಂದರೆ ಎದುರಾಗಬಹುದು. ಪರಿಣಾಮವಾಗಿ ವೃಷಣದಿಂದ ಹೊರಡುವ ನಾಳ, ಎಪಿಡೈಡಿಮಸ್ ಅಥವಾ ಜನನಾಂಗದ ಒಳಗಿನ ನಾಳ (urethra) ಮೊದಲಾದವುಗಳಲ್ಲಿ ತಡೆಯುಂಟಾಗಿರಬಹುದು. ಈ ತೊಂದರೆಯನ್ನು ಸರಳ ಶಸ್ತ್ರಚಿಕಿತ್ಸೆಯಿಂದ (inadvertent injury) ನಿವಾರಿಸಬಹುದು. ಕೆಲವೊಮ್ಮೆ ವೃಷಣದಿಂದ ಹೊರಟ ವೀರ್ಯಾಣುಗಳು ಆರೋಗ್ಯಕರವಾಗಿದ್ದರೂ ಜನನಾಂಗದಿಂದ ಹೊರಬರುವಷ್ಟರಲ್ಲಿ ತಮ್ಮ ತ್ರಾಣವನ್ನು ಕಳೆದುಕೊಂಡಿರುತ್ತವೆ. ಕೆಲವೊಮ್ಮೆ ಸ್ಖಲನದ ಸಮಯದಲ್ಲಿ ಆರೋಗ್ಯಕರವಾಗಿದ್ದರೂ ಗರ್ಭಕಂಠದವರೆಗೆ ಈಜಿಕೊಂಡು ಬರುವಷ್ಟರಲ್ಲಿ ತ್ರಾಣ ಕಳೆದುಕೊಂಡಿರುತ್ತವೆ. ಈ ತೊಂದರೆ ಇದ್ದರೆ ಹಾಗೂ ಈ ಬಗ್ಗೆ ಸೂಕ್ತ ವಿವರಣೆ ನೀಡದೇ ಇದ್ದರೂ ಆ ಪುರುಷರು ತಮ್ಮ ಮನೋಭಾವವನ್ನು ಬದಲಿಸಿಕೊಳ್ಳಲು ಕಾರಣವಾಗಬಹುದು.

ವರ್ಣತಂತು (chromosomes)ಗಳ ದೋಷ

ವರ್ಣತಂತು (chromosomes)ಗಳ ದೋಷ

ಕೆಲವು ಅನುವಂಶಿಕ ದೋಷಗಳು, ಉದಾಹರಣೆಗೆ Klinefelter's syndrome ಅಥವಾ genetic syndrome ಅನುವಂಶಿಕ ತೊಂದರೆಯಿಂದ ಎದುರಾಗಿರುವ cystic fibrosis ಎಂಬ ಸ್ಥಿತಿಯ ಕಾರಣ ಈ ಪುರುಷರ ಪ್ರತಿ ಜೀವಕೋಶದಲ್ಲಿ ಎರಡು ಎಕ್ಸ್ ವರ್ಣತಂತುಗಳಿರುತ್ತವೆ. (ಸಾಮಾನ್ಯವಾಗಿ ಪುರುಷರಲ್ಲಿ ಒಂದು ಎಕ್ಸ್ ಮತ್ತು ಒಂದು ವೈ ವರ್ಣತಂತುಗಳಿರಬೇಕು, ಎರಡು ಎಕ್ಸ್ ಇದ್ದರೆ ಇದು ಮಹಿಳೆ ಎಂದು ಪರಿಗಣಿಸಲ್ಪಡುತ್ತದೆ) ಹೀಗಿದ್ದರೆ ಇದು ಖಂಡಿತವಾಗಿಯೂ ಪುರುಷರ ಜನನಾಂಗಗಳ ಬೆಳವಣಿಗೆಯಲ್ಲಿ ಅಪಾರವಾದ ಪ್ರಭಾವ ಬೀರುತ್ತದೆ. ಪರಿಣಾಮವಾಗಿ ಕಡಿಮೆ ವೀರ್ಯಾಣುಗಳ ಸಂಖ್ಯೆ ಎದುರಾಗುತ್ತದೆ ಹಾಗೂ ಈ ವಾಸ್ತವವೂ ಪುರುಷರನ್ನು ತಂದೆಯಾಗುವುದರಿಂದ ವಿಮುಖನನ್ನಾಗಿಸುತ್ತದೆ.

English summary

Reasons That Affect Men From Being A Dad

Most importantly, for the fertilization to occur, it is the man's sperm that needs to be healthy and strong enough, so that it can reach and make a way into the woman's egg. For the process to happen, a man must keep an erection and possess enough sperms in the right shape and make it move in the right direction, so that enough semen tries to carry forward the sperm to the egg.
X
Desktop Bottom Promotion