For Quick Alerts
ALLOW NOTIFICATIONS  
For Daily Alerts

ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

ಮದುವೆಯಾಗಿ ಮಕ್ಕಳನ್ನು ಪಡೆಯಬೇಕೆಂಬ ಆಸೆಯಲ್ಲಿ ಇರುವಂತಹ ದಂಪತಿಗೆ ಹೆಚ್ಚಿನ ಸಂದರ್ಭಗಳಲ್ಲಿ ನಿರಾಶೆಯಾಗುವುದು ಸಹಜ... ಆದರೆ ಕೆಲವೊಮ್ಮೆ ಈ ಸಮಸ್ಯೆಗೆ ಪುರುಷರು ಕೂಡ ಕಾರಣವಾಗಿ ಬಿಡುತ್ತಾರೆ

By Deepu
|

ಮಹಿಳೆಯಾಗಲಿ ಅಥವಾ ಪುರುಷನಾಗಲಿ ಇಂದಿನ ದಿನಗಳಲ್ಲಿ ಬಂಜೆತನವೆನ್ನುವುದು ಇಬ್ಬರಲ್ಲೂ ಕಂಡುಬರುತ್ತದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ನಮ್ಮ ಜೀವನ ಶೈಲಿ, ವಾಸಿಸುತ್ತಿರುವ ವಾತಾವರಣ ಮತ್ತು ಆಹಾರ ಕ್ರಮ ಇತ್ಯಾದಿಗಳು. ಮದುವೆಯಾಗಿ ಮಕ್ಕಳನ್ನು ಪಡೆಯಬೇಕೆಂಬ ಆಸೆಯಲ್ಲಿ ಇರುವಂತಹ ದಂಪತಿಗೆ ಹೆಚ್ಚಿನ ಸಂದರ್ಭಗಳಲ್ಲಿ ನಿರಾಶೆಯಾಗುವುದು ಸಹಜ. ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಯಾಕೆಂದರೆ ಯಾರಾದರೊಬ್ಬರಲ್ಲಿ ಬಂಜೆತನ ಕಾಣಿಸಿಕೊಳ್ಳುವುದು ಸಾಮಾನ್ಯವೆನ್ನುವಂತಾಗಿದೆ. ಮಕ್ಕಳಾಗದಿರಲು ವೀರ್ಯದ ಗಣನೆ ಕಡಿಮೆಯಾಗಿರುವುದು, ವೀರ್ಯದ ದುರ್ಬಲತೆ ಇತ್ಯಾದಿಗಳು ಕಾರಣವಾಗಿದೆ. ಹೀಗಿದ್ದಾಗ ಮಕ್ಕಳನ್ನು ಪಡೆಯುವುದು ತುಂಬಾ ಕಷ್ಟವಾಗುತ್ತದೆ. ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದ್ದರೂ ಇದು ತುಂಬಾ ದುಬಾರಿಯೆನಿಸುತ್ತದೆ. ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು

ದುಡಿದಿರುವುದನ್ನಲ್ಲಾ ಇದಕ್ಕಾಗಿಯೇ ಸುರಿಯಬೇಕಾಗುತ್ತದೆ. ಹಾಗಾಗಿ ಪುರುಷರಲ್ಲಿ ಕಂಡುಬರುವ ಫಲವತ್ತತೆಯ ಸಮಸ್ಯೆಯನ್ನು ನಿವಾರಣೆ ಮಾಡಲು ಮತ್ತು ಮಗುವನ್ನು ಪಡೆಯಲು ಕೆಲವೊಂದು ವಿಧಾನಗಳನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಪಾಲಿಸಿಕೊಂಡು ಹೋಗಿ ಮಗುವನ್ನು ಪಡೆದು ಸಂತೋಷದ ಜೀವನ ನಿಮ್ಮದಾಗಿಸಿಕೊಳ್ಳಿ. ಬಂಜೆತನಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಕಾರಣ..

ನಿಯಮಿತವಾಗಿ ವ್ಯಾಯಾಮ

ನಿಯಮಿತವಾಗಿ ವ್ಯಾಯಾಮ

ಭಾರ ಎತ್ತುವಂತಹ ಕೆಲವೊಂದು ವ್ಯಾಯಾಮಗಳು ಟೆಸ್ಟೋಸ್ಟಿರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಟೆಸ್ಟೋಸ್ಟಿರಾನ್ ಎನ್ನುವ ಹಾರ್ಮೋನು ಪುರುಷರ ಫಲವತ್ತತೆಗೆ ಅತೀ ಅಗತ್ಯವಾಗಿದೆ.

ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿ

ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿ

ಕಿತ್ತಳೆ, ಮೂಸಂಬಿ ಇತ್ಯಾದಿ ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿ. ಇದರಲ್ಲಿ ವಿಟಮಿನ್ ಸಿ ಇದೆ. ವಿಟಮಿನ್ ಸಿ ವೀರ್ಯದ ಸಂಖ್ಯೆ ಮತ್ತು ವೀರ್ಯಾಣು ಚತುರತೆಯನ್ನು ಸುಧಾರಿಸುವುದು.

ವಿಟಮಿನ್ ಡಿ

ವಿಟಮಿನ್ ಡಿ

ಬಂಜೆತನದ ಸಮಸ್ಯೆಯಾಗುತ್ತಾ ಇದ್ದರೆ ನೀವು ವೈದ್ಯರ ಸಲಹೆ ಮೇರೆಗೆ ವಿಟಮಿನ್ ಡಿ ಮಾತ್ರೆಗಳನ್ನು ಸೇವಿಸಿ. ವಿಟಮಿನ್ ಡಿ ವೀರ್ಯದ ಚತುರತೆಯನ್ನು ಹೆಚ್ಚಿಸುವುದು.

ಮೆಂತೆ

ಮೆಂತೆ

ಮೆಂತೆಯನ್ನು ಹೆಚ್ಚಾಗಿ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಫಲವತ್ತತೆಯನ್ನು ಹೆಚ್ಚಿಸಬಹುದು. ಮೆಂತೆಯು ಟೆಸ್ಟೊಸ್ಟಿರಾನ್ ಮಟ್ಟವನ್ನು ಹೆಚ್ಚಿಸುವುದು.

ಸತು ಮಾತ್ರೆಗಳು

ಸತು ಮಾತ್ರೆಗಳು

ಬಂಜೆತನದ ಸಮಸ್ಯೆಯಿದ್ದರೆ ವೈದ್ಯರೊಂದಿಗೆ ಮಾತನಾಡಿಕೊಂಡು ಸತುವಿನ ಮಾತ್ರೆಗಳನ್ನು ಸೇವಿಸಿ. ಸತು ಟೆಸ್ಟೊಸ್ಟಿರಾನ್ ಮಟ್ಟವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು.

ಹೆಚ್ಚುವರಿ ತೂಕ ಇಳಿಸಿ

ಹೆಚ್ಚುವರಿ ತೂಕ ಇಳಿಸಿ

ಅಧಿಕ ತೂಕವನ್ನು ಹೊಂದಿರುವಂತಹ ಪುರುಷರಲ್ಲಿ ವೀರ್ಯದ ಸಂಖ್ಯೆಯು ಕಡಿಮೆಯಿರುತ್ತದೆ ಎಂದು ಕಂಡುಕೊಳ್ಳಲಾಗಿದೆ. ಇದರಿಂದ ಫಲವತ್ತತೆಗಾಗಿ ತೂಕ ಇಳಿಸಿಕೊಂಡು ಆರೋಗ್ಯವಾಗಿರಿ.

English summary

Ways To Improve Male Fertility That Actually Work!

Both men and women are equally prone to infertility and it is a common problem that many people are facing these days, due to unhealthy lifestyle habits. When it comes to men, they could be infertile, due to low sperm count, weak sperms, low testosterone levels or erectile dysfunction. So, here are a few ways in which men can treat fertility and look forward to being fathers; have a look.
X
Desktop Bottom Promotion