For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ನಪುಂಸಕತ್ವ-ವೈದ್ಯರನ್ನು ಭೇಟಿ ಮಾಡಲು ತಡ ಮಾಡದಿರಿ!

By Manu
|

ದಂಪತಿಗಳಲ್ಲಿ ಸಂತಾನದ ಫಲ ಕಾಣದೇ ಇರುವುದಕ್ಕೆ ಹಿಂದಿನಿಂದಲೂ ಮಹಿಳೆಯನ್ನೇ ದೂಷಿಸುತ್ತಾ ಬರಲಾಗಿದೆ. ಆದರೆ ಈ ಕಾರಣಕ್ಕೆ ಇಬ್ಬರೂ ಸಮಾನರಾಗಿ ಕಾರಣರಾಗಿದ್ದರೂ ಇಂದಿನ ದಿನಗಳಲ್ಲಿ ಪುರುಷರೇ ಹೆಚ್ಚು ಕಾರಣರಾಗಿರುವುದು ಅಂಕಿಅಂಶಗಳು ದೃಢೀಕರಿಸುತ್ತಿವೆ. ಪುರುಷರೇ ಕೇಳಿ ಇಲ್ಲಿ, ನಿಮಗೂ ಈ ಸಂಗತಿಗಳು ತಿಳಿದಿರಲಿ!

ಒಂದು ಸಮೀಕ್ಷೆಯಲ್ಲಿ ಪ್ರತಿ ಎಂಟು ಪುರುಷರಲ್ಲಿ ಒಬ್ಬರಿಗೆ ನಪುಂಸಕತ್ವದ ತೊಂದರೆ ಇದೆ. ಆದರೆ ಈ ತೊಂದರೆ ಪರಿಹರಿಸಲು ಆಸಾಧ್ಯವಾದುದೇನೂ ಅಲ್ಲ. ಇಂದಿನ ವೈದ್ಯವಿಜ್ಞಾನ ಸಾಕಷ್ಟು ಮುಂದುವರೆದಿದ್ದು ಈ ಕೊರತೆಯನ್ನು ಸಮರ್ಥವಾಗಿ ತುಂಬಿಕೊಡಬಲ್ಲದ್ದಾಗಿದೆ. ಪುರುಷರಲ್ಲಿ ಸೈಲೆಂಟ್ ಆಗಿ ಕಾಡುತ್ತಿದೆ 'ನಪುಂಸಕ' ತೊಂದರೆ!

ನಪುಂಸಕತ್ವಕ್ಕೆ ಹಲವಾರು ಕಾರಣಗಳಿದ್ದು ಹೆಚ್ಚಿನವು ತಾತ್ಕಾಲಿಕವಾಗಿವೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಈ ತೊಂದರೆ ಶಾಶ್ವತವಾಗಿದ್ದರೂ ಇದಕ್ಕೆ ತಜ್ಞ ವೈದ್ಯರು ಮಾತ್ರ ಸರಿಯಾದ ಪರಿಹಾರ ಒದಗಿಸಬಲ್ಲರು. ಆದ್ದರಿಂದ ಸಂತಾನ ಪಡೆಯಲು ವಿಫಲರಾದ ದಂಪತಿಗಳು ಮೊದಲು ವೈದ್ಯರನ್ನು ಕಂಡು ತಪಾಸಣೆಗೊಳಗಾಗುವುದು ಅಗತ್ಯ. ವಿಶೇಷವಾಗಿ ಪುರುಷರು ತಮ್ಮ ತಪಾಸಣೆಯನ್ನು ಯಾವಾಗ ಮಾಡಿಸಿಕೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರಗಳನ್ನು ಕೆಳಗಿನ ಸ್ಲೈಡ್ ಶೋ ನೀಡುತ್ತದೆ, ಮುಂದೆ ಓದಿ... ವೀರ್ಯಾಣುಗಳ ಸಂಖ್ಯೆ ವೃದ್ಧಿಸುವ ವಿಧಾನಗಳು

ಕಾರಣ #1 ಉದ್ರೋಕತೆಯ ಕೊರತೆ

ಕಾರಣ #1 ಉದ್ರೋಕತೆಯ ಕೊರತೆ

ಉದ್ರೇಕತೆಯ ಕೊರತೆಗೆ ನಪುಂಸಕತ್ವಕ್ಕಿಂತಲೂ ಇತರ ಕಾರಣಗಳಿರಬಹುದು. ಈ ಕಾರಣಗಳು ತಾತ್ಕಾಲಿಕವೂ ಆಗಿರಬಹುದು. ಕೇವಲ ವೈದ್ಯರು ಮಾತ್ರ ಈ ಕಾರಣಗಳನ್ನು ಕಂಡುಹಿಡಿಯಬಲ್ಲರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #1 ಉದ್ರೋಕತೆಯ ಕೊರತೆ

ಕಾರಣ #1 ಉದ್ರೋಕತೆಯ ಕೊರತೆ

ಆದ್ದರಿಂದ ಧೈರ್ಯವಾಗಿ ವೈದ್ಯರ ಸಹಾಯ ಪಡೆದು ಈ ತೊಂದರೆಯಿಂದ ಹೊರಬಂದು ತಂದೆಯಾಗುವ ಭಾಗ್ಯವನ್ನು ಪಡೆಯಬಹುದು.

ಕಾರಣ #2 ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತ

ಕಾರಣ #2 ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತ

ಸಂತಾನಫಲಕ್ಕೆ ಒಂದೇ ವೀರ್ಯಾಣು ಸಾಕಾದರೂ ಇದರ ಸಾಂದ್ರತೆ ಕನಿಷ್ಟ ಅಂದರೆ ಇಪ್ಪತ್ತು ಮಿಲಿಯನ್ ಪ್ರತಿ ಮಿಲೀ ಯಲ್ಲಿರಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #2 ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತ

ಕಾರಣ #2 ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತ

ಒಂದು ವೇಳೆ ಇದಕ್ಕೂ ಕಡಿಮೆ ಇದ್ದರೆ ಫಲವತ್ತತೆಯ ಸಾಧ್ಯತೆ ಕಡಿಮೆ. ಆದರೆ ಈ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಸೂಕ್ತವಾದ ಔಷಧಿಗಳನ್ನು ಶಿಫಾರಸ್ಸು ಮಾಡಬಲ್ಲರು.

ಕಾರಣ #3 ಲೈಂಗಿಕಾಸಕ್ತಿ ಕಡಿಮೆಯಾಗುವುದು

ಕಾರಣ #3 ಲೈಂಗಿಕಾಸಕ್ತಿ ಕಡಿಮೆಯಾಗುವುದು

ತನ್ನಲ್ಲಿ ಶಕ್ತಿ ಉಡುಗಿದೆ ಎಂಬ ಭಾವನೆ ದಟ್ಟೈಸುತ್ತಾ ಹೋದಂತೆ ಪತ್ನಿಯೊಂದಿಗಿನ ಆಪ್ತಕ್ಷಣಗಳನ್ನೂ ಇವರು ದೂರಾಗಿಸುತ್ತಾ ಬರುತ್ತಾರೆ. ಇದು ಮಾನಸಿಕ ತೊಂದರೆಯೇ ಹೊರತು ದೈಹಿಕವಲ್ಲ.

ಕಾರಣ #3 ಲೈಂಗಿಕಾಸಕ್ತಿ ಕಡಿಮೆಯಾಗುವುದು

ಕಾರಣ #3 ಲೈಂಗಿಕಾಸಕ್ತಿ ಕಡಿಮೆಯಾಗುವುದು

ಆದ್ದರಿಂದ ವೈದ್ಯರನ್ನು ಭೇಟಿಯಾಗಿ ತೊಂದರೆಯನ್ನು ಹೇಳಿಕೊಳ್ಳುವ ಮೂಲಕ ಸೂಕ್ತ ಪರಿಹಾರ ಮತ್ತು ಧೈರ್ಯವನ್ನು ಪಡೆಯಬಹುದು.

ಕಾರಣ #4 ಹಲವು ಪ್ರಯತ್ನಗಳ ಬಳಿಕವೂ ಕಾಣದ ಫಲ

ಕಾರಣ #4 ಹಲವು ಪ್ರಯತ್ನಗಳ ಬಳಿಕವೂ ಕಾಣದ ಫಲ

ಯಾವುದೇ ಪ್ರಯತ್ನ ಸರಿಯಾದ ಸಮಯದಲ್ಲಿ ಆದರೆ ಮಾತ್ರ ಇದಕ್ಕೆ ಫಲ ಸಿಗುತ್ತದೆ. ಆದ್ದರಿಂದ ಕೂಡಲು ಸಮಯ ಯಾವುದು ಸೂಕ್ತ ಎಂಬುದನ್ನು ತಜ್ಞರ ಬಳಿ ಕಂಡುಕೊಂಡು ಆ ದಿನಗಳನ್ನು ಸರಿಯಾಗಿ ಬಳಸಿದರೆ ಫಲ ಖಂಡಿತಾ ಸಿಗುತ್ತದೆ. ವೈದ್ಯರು ಕೆಲವು ಪರೀಕ್ಷೆಗಳ ಮೂಲಕ ಸರಿಯಾದ ಮಾರ್ಗದರ್ಶನ ನೀಡಬಲ್ಲರು.

ಕಾರಣ #5 ಕ್ರೀಡೆಯಲ್ಲಿ ಕಾಡುವ ಆತಂಕ

ಕಾರಣ #5 ಕ್ರೀಡೆಯಲ್ಲಿ ಕಾಡುವ ಆತಂಕ

ದಂಪತಿಗಳ ನಡುವಣ ಆಪ್ತಕ್ರಿಯೆಯಲ್ಲಿ ದುಗುಡ, ಆತಂಕ, ಹೆದರಿಕೆ ಇರಬಾರದು. ಒಂದು ವೇಳೆ ಮಾನಸಿಕವಾಗಿ ಯಾವುದೇ ರೀತಿಯ ಒತ್ತಡ ಅಥವಾ ಆತಂಕ ಎದುರಾದರೆ ಆಪ್ತಕ್ರಿಯೆಯಲ್ಲಿಯೂ ಇದು ಅಡ್ಡಿಯುಂಟುಮಾಡುತ್ತದೆ. ಇದಕ್ಕೆ ತಜ್ಞರೊಂದಿಗೆ ಆಪ್ತ ಸಮಾಲೋಚನೆಯೇ ಪರಿಹಾರವಾಗಿದ್ದು ಅನಗತ್ಯ ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ.

ಕಾರಣ #6 ಇತರ ಒತ್ತಡಗಳು

ಕಾರಣ #6 ಇತರ ಒತ್ತಡಗಳು

ಪುರುಷರಿಗೆ ಕೆಲಸದ ನಿಮಿತ್ತ ಹಲವು ಒತ್ತಡಗಳು ಪ್ರತಿದಿನ ಎದುರಾಗುತ್ತಲೇ ಇರುತ್ತವೆ. ಈ ಒತ್ತಡಗಳನ್ನು ಕೆಲಸದ ಸ್ಥಳದಲ್ಲಿ ಬಿಟ್ಟು ಬಂದರೆ ಯಾವುದೇ ತೊಂದರೆ ಇಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #6 ಇತರ ಒತ್ತಡಗಳು

ಕಾರಣ #6 ಇತರ ಒತ್ತಡಗಳು

ಆದರೆ ಹೆಚ್ಚಿನವರು ಈ ಒತ್ತಡಗಳನ್ನು ತಮ್ಮೊಂದಿಗೇ ನಮ್ಮ ಶಯನಸ್ಥಳಕ್ಕೂ ತರುವ ಮೂಲಕ ಮುಂದಿನ ಕಾರ್ಯಕ್ಕೆ ತಮ್ಮ ಕಾಲಿಗೇ ತಾವೇ ಕೊಡಲಿ ಹಾಕುತ್ತಾರೆ. ಈ ಕಾರಣವನ್ನು ವೈದ್ಯರು ಕಂಡುಕೊಳ್ಳಬಲ್ಲರು.

ಕಾರಣ #7 ಅನಗತ್ಯ ಹೆದರಿಕೆಗಳು

ಕಾರಣ #7 ಅನಗತ್ಯ ಹೆದರಿಕೆಗಳು

ಎಷ್ಟೋ ಸಂದರ್ಭಗಳಲ್ಲಿ ಇಲ್ಲದ ವಿಷಯಗಳನ್ನು ಕಲ್ಪಿಸಿಕೊಂಡೇ ಹೆಚ್ಚಿನವರು ಮುಂದುವರೆಯಲು ಹೆದರುತ್ತಾರೆ. ಯಾವುದೇ ಕೆಲಸಕ್ಕೆ ಮುಂದುವರೆಯುವ ಮುನ್ನವೇ ಇದು ಸಾಧ್ಯವಾಗದಿದ್ದರೆ ಎದುರಾಗಬಹುದಾದ ತೊಂದರೆಗಳನ್ನು ಕಲ್ಪಿಸಿಕೊಂಡೇ ಇವರು ಮುಂದುವರೆಯಲು ಹಿಂದೇಟು ಹಾಕುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #7 ಅನಗತ್ಯ ಹೆದರಿಕೆಗಳು

ಕಾರಣ #7 ಅನಗತ್ಯ ಹೆದರಿಕೆಗಳು

ಈ ಮನಃಸ್ಥಿತಿಯ ಕಾರಣ ದೈಹಿಕವಾಗಿಯೂ ಮುಂದುವರೆಯಲು ತಡೆಯೊಡ್ಡುವ ಮೂಲಕ ದೇಹ ನೈಸರ್ಗಿಕವಾಗಿ ಪ್ರತಿಕ್ರಿಯಿಸಲು ಅಸಾಧ್ಯವಾಗುತ್ತದೆ. ಆಪ್ತ ಸಮಾಲೋಚನೆಯ ಮೂಲಕ ವೈದ್ಯರು ಈ ತೊಂದರೆಯನ್ನು ಸರಿಪಡಿಸಬಲ್ಲರು.

English summary

Male Fertility: When To See A Doctor?

Many men who fail to immediately make women pregnant tend to panic instead of seeking medical help. A recent survey claims that one in eight men tend to suffer fertility issues at some or the other point in their lives. But that doesn't mean that they can never become fathers as medical technology has come up with innovative measures to help.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more