For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ಖಾಯಿಲೆಗಳು ಮತ್ತು ಅವುಗಳಿಂದ ರಕ್ಷಿಸುವ ವಿಧಾನಗಳಿವು

|

ಮಳೆಗಾಲದ ವಾತಾವರಣನೇ ಚಂದ. ಮೋಡ ಕವಿದ ವಾತಾವರಣ, ಆ ಮೋಡ ಕರಗಿ ಮಳೆ ಬೀಳುವಾಗ ಆಗುವ ಚಳಿ, ಆ ಚಳಿಯ ನಡುವೆ ಬಿಸಿಬಿಸಿ ಚಹಾ, ಪಕೋಡ. ಹೀಗೆ ಮಳೆಗಾಲ ಒಂದು ಸುಂದರ ಅನುಭವ ನೀಡುವ ಕಾಲ. ಆದರೆ ಇಂತಹ ಮಳೆಗಾಲ ಮಕ್ಕಳಿಗೆ ಮಾರಕವಾಗಬಹುದು. ಮಕ್ಕಳನ್ನು ಅನಾರೋಗ್ಯಕ್ಕೆ ತಳ್ಳಬಹುದು.

ಬೇಸಿಗೆಯ ಬಿಸಿಲಿನಿಂದ ಆಹ್ಲಾದಕರ ತಂಪಾದ ಮಳೆಗಾಲದ ಗಾಳಿಯಿಂದ ಪರಿಸರದಲ್ಲಿನ ಬದಲಾವಣೆಯು ನಮ್ಮ ಮನಸ್ಥಿತಿಯಲ್ಲಿ ಮಾತ್ರವಲ್ಲದೆ ಸೋಂಕಿಗೆ ಒಳಗಾಗುವ ಅಪಾಯವನ್ನೂ ಹೆಚ್ಚಿಸುತ್ತದೆ. ಜೊತೆಗೆ ಈ ಕೊರೊನಾ ಬೇರೆ. ಇಂತಹ ಸಮಯದಲ್ಲಿ ಹಿರಿಯರಿಂತೆ ಮಕ್ಕಳ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ.

ಮಳೆಗಾಲದಲ್ಲಿ ಮಕ್ಕಳಿಗೆ ಬರುವ ರೋಗ ಹಾಗೂ ಅದನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮಳೆಗಾಲದಲ್ಲಿ ಮಕ್ಕಳನ್ನು ಕಾಡಬಹುದಾದ ಖಾಯಿಲೆಗಳು:

ಮಳೆಗಾಲದಲ್ಲಿ ಮಕ್ಕಳನ್ನು ಕಾಡಬಹುದಾದ ಖಾಯಿಲೆಗಳು:

ಡೆಂಗ್ಯೂ:

ಮಲೇರಿಯಾ ಮತ್ತು ಚಿಕೂನ್ ಗುನ್ಯಾ ಸೇರಿದಂತೆ ಸಾಮಾನ್ಯವಾಗಿ ಡೆಂಗ್ಯೂ ಕೂಡ ಮಳೆಗಾಲದಲ್ಲಿ ಸೊಳ್ಳೆಯಿಂದ ಹರಡುವ ರೋಗಗಳಲ್ಲಿ ಒಂದು. ಈ ರೋಗವು ಜ್ವರ, ದದ್ದುಗಳು, ತಲೆನೋವು, ಸ್ನಾಯು ನೋವು ಮತ್ತು ಇತರ ಅಸ್ವಸ್ಥತೆಗಳನ್ನು ಹೊಂದಿರುತ್ತದೆ. ಆದ್ದರಿಂದ, ಈ ಕಾಯಿಲೆಗಳಿಂದ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮಗುವನ್ನು ಸೊಳ್ಳೆ ಕಚ್ಚುವುದರಿಂದ ಕಾಪಾಡಲು ಮಗುವಿಗೆ ಸೊಳ್ಳೆ ನಿವಾರಕವನ್ನು ಹಚ್ಚಬಹುದು, ಜೊತೆಗೆ ಉದ್ದ ತೋಳುಗಳ್ಳುಳ್ಳ ಅಂಗಿ ಧರಿಸುವುದು ಉತ್ತಮ.

ಟೈಫಾಯಿಡ್:

ಟೈಫಾಯಿಡ್:

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ರೋಗ ಇದು. ಕಲುಷಿತ ನೀರು ಮತ್ತು ಆಹಾರದಿಂದಾಗಿ ಉಂಟಾಗುತ್ತದೆ. ಜ್ವರ, ಹೊಟ್ಟೆ ನೋವು, ಬೇಧಿ ಮತ್ತು ಇತರ ರೋಗಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಶುದ್ಧವಾದ ನೀರನ್ನು ಮತ್ತು ಆಹಾರವನ್ನು ಸೇವಿಸಿ. ರಸ್ತೆ ಬದಿಯ ಆಹಾರಗಳನ್ನು ತಿನ್ನಬೇಡಿ. ತಿನ್ನುವ ಮೊದಲು ಮತ್ತು ನಂತರ ಕೈ ತೊಳೆಯಿರಿ.

ಶಿಲೀಂಧ್ರಗಳ ಸೋಂಕು:

ಶಿಲೀಂಧ್ರಗಳ ಸೋಂಕು:

ಪರಿಸರದಲ್ಲಿ ಇರುವ ತೇವಾಂಶದಿಂದಾಗಿ ಈ ಸೋಂಕು ಉಂಟಾಗುತ್ತವೆ. ಈ ಸೋಂಕು ಇದ್ದವರ ಸಂಪರ್ಕಕ್ಕೆ ಬಂದಾಗ ಮತ್ತು ಕಳಪೆ ನೈರ್ಮಲ್ಯದಿಂದ ಈ ಶಿಲೀಂಧ್ರಗಳ ಸೋಂಕನ್ನು ಪಡೆಯಬಹುದು. ಅದಕ್ಕಾಗಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ನಿಮ್ಮ ಕೈ, ಕೈಕಾಲುಗಳನ್ನು ಚೆನ್ನಾಗಿ ಒಣಗಿಸಿ. ಟವೆಲ್ ಮತ್ತು ನೈರ್ಮಲ್ಯ ಉತ್ಪನ್ನಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.

ನೆಗಡಿ:

ನೆಗಡಿ:

ಮಳೆಗಾಲ ಆರಂಭವಾದ ತಕ್ಷಣ ನಾವು ನೋಡುವ ಸಾಮಾನ್ಯ ರೋಗ ಇದು. ಆಯಾಸ, ಜ್ವರ ಮತ್ತು ಮೈ-ಕೈ ನೋವು ಮುಂತಾದ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡಬಹುದು. ಆದ್ದರಿಂದ ಆಗಾಗ್ಗೆ ಕೈಗಳನ್ನು ತೊಳೆಯಿರಿ. ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮುಚ್ಚಿಕೊಳ್ಳಿ. ಜೊತೆಗೆ ಸಾಕಷ್ಟು ನೀರು ಕುಡಿಯಿರಿ.

ಮಕ್ಕಳನ್ನು ರೋಗಗಳಿಗೆ ತುತ್ತಾಗುವುದನ್ನು ತಡೆಗಟ್ಟುವ ಕ್ರಮಗಳು:

ಮಕ್ಕಳನ್ನು ರೋಗಗಳಿಗೆ ತುತ್ತಾಗುವುದನ್ನು ತಡೆಗಟ್ಟುವ ಕ್ರಮಗಳು:

  • ಸೊಳ್ಳೆ ಕಡಿತ ಮತ್ತು ಇತರ ಚರ್ಮದ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಹೊರಗೆ ಹೋಗುವಾಗ ಸಂಪೂರ್ಣ ತೋಳಿನ (ಫುಲ್ ಸ್ಲೀವ್) ಬಟ್ಟೆಗಳನ್ನು ಧರಿಸಿ.
  • ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.
  • ಬೀದಿ ಆಹಾರ ಮತ್ತು ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ.
  • ಹೈಡ್ರೀಕರಿಸಿದಂತೆ ಇರಲು ಶುದ್ಧ ನೀರು ಮತ್ತು ದ್ರವಗಳನ್ನು ಕುಡಿಯಿರಿ.
  • ಯಾವುದೇ ವೈರಸ್‌ಗಳನ್ನು ದೂರಮಾಡಲು ಆಗಾಗ್ಗೆ ಕೈ ತೊಳೆಯಲು ಹೇಳಿ.
  • ನೈರ್ಮಲ್ಯ ಉತ್ಪನ್ನಗಳನ್ನು ಹಂಚಿಕೊಳ್ಳಬೇಡಿ.
  • ನೀವು ಅನಾರೋಗ್ಯವಾಗಿದ್ದರೆ ಮಾಸ್ಕ್ ಧರಿಸಿ ಇದರಿಂದ ನೀವು ಇತರ ಜನರನ್ನು ರಕ್ಷಿಸಬಹುದು.
  • ಸರಿಯಾದ ನೈರ್ಮಲ್ಯ ದಿನಚರಿಯನ್ನು ನಿರ್ವಹಿಸಿ
  • ಆಹಾರವನ್ನು ತಯಾರಿಸಲು ಪ್ರಾರಂಭಿಸುವ ಮೊದಲು ಕೈ ತೊಳೆಯಿರಿ
  • ಆಹಾರವನ್ನು ಮುಚ್ಚಿಡಿ.
English summary

How to Protect Children from Monsoon Related Illness in Kannada

Here we talking about How to protect children from Monsoon related Illness in kannada, read on
Story first published: Saturday, June 26, 2021, 18:05 [IST]
X
Desktop Bottom Promotion