For Quick Alerts
ALLOW NOTIFICATIONS  
For Daily Alerts

ಅಡ್ಡಪರಿಣಾಮಗಳಿಲ್ಲದೇ, ಮಗುವಿನ ದೇಹದ ಮೇಲಿನ ಕೂದಲನ್ನು ತೆಗೆದುಹಾಕುವ ಮನೆಮದ್ದುಗಳಿವು

|

ಅನೇಕ ನವಜಾತ ಶಿಶುಗಳು ಹುಟ್ಟಿನಿಂದಲೇ ಅವರ ದೇಹದ ಮೇಲೆ ಹೆಚ್ಚು ಕೂದಲನ್ನು ಹೊಂದಿರುತ್ತಾರೆ. ಇದು ನಂತರದ ದಿನಗಳಲ್ಲಿ ಅವರ ಹೆತ್ತವರಿಗೆ ತಲೆನೋವಾಗಿ ಪರಿಣಮಿಸುತ್ತದೆ. ಏಕೆಂದರೆ ಹೆಚ್ಚಿನ ಕೂದಲಿನಿಂದಾಗಿ ನಿಮ್ಮ ಮಗು ಕಿರಿಕಿರಿ ಉಂಟು ಮಾಡುತ್ತೆ. ಇದು ಪೋಷಕರ ನೆಮ್ಮದಿಯನ್ನು ಹಾಳು ಮಾಡುತ್ತದೆ.

ದೇಹದ ಮೇಲಿನ ಈ ಕೂದಲುಗಳು ಮಗುವಿನ ವಂಶವಾಹಿಯ ಮೇಲೆ ಅವಲಂಬಿತವಾಗಿತ್ತದೆ. ಅಂದರೆ ಒಂದು ವೇಳೆ ಮಗುವನ ಅಪ್ಪ-ಅಮ್ಮನಿಗೆ ಹುಟ್ಟುವಾಗಲೇ ಹೆಚ್ಚು ಕೂದಲಿದ್ದರೆ, ಅದು ಮಗುವಿಗೂ ಬಂದಿರುವ ಸಾಧ್ಯತೆಯಿದೆ. ಆದ್ದರಿಂದ ಈ ಕೂದಲುಗಳನ್ನು ಮಗುವಿಗೆ ಯಾವುದೇ ಅಪಾಯವಿಲ್ಲದೇ ಹೇಗೆ ತೆಗೆಯುವುದು ಎಂದು ಯೋಚಿಸುತ್ತಿರುವ ಪೋಷಕರಿಗಾಗಿ ಇಲ್ಲಿದೆ ಕೆಲವೊಂದು ಮನೆಮದ್ದುಗಳು.

ನವಜಾತ ಶಿಶುವಿನ ದೇಹದ ಮೇಲಿನ ಕೂದಲನ್ನು ತೆಗೆದುಹಾಕುವ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಹಿಟ್ಟು ಮತ್ತು ಕಡಲೆಹಿಟ್ಟು:

ಹಿಟ್ಟು ಮತ್ತು ಕಡಲೆಹಿಟ್ಟು:

ಮಗುವಿನ ದೇಹದಿಂದ ಕೂದಲನ್ನು ತೆಗೆಯಲು, ಈ ಮಿಶ್ರಣಗಳು ಸಹಕಾರಿಯಾಗಿವೆ. ಇದರಿಂದ ಮಗುವಿನ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಒಟ್ಟಿಗೆ ಬೆರೆಸಿ. ನಂತರ ಮಗುವಿನ ದೇಹದ ಮೇಲೆ ಹಿಟ್ಟನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಇದನ್ನು ಮಾಡುವುದರಿಂದ, ಕೂದಲಿನ ಬುಡವು ಮೃದುವಾಗಿ, ತನ್ನಷ್ಟಕ್ಕೆ ಉದುರಲು ಪ್ರಾರಂಭವಾಗುತ್ತದೆ.

ಬೇಬಿ ಆಯಿಲ್ ನಿಂದ ಮಸಾಜ್ ಮಾಡಿ:

ಬೇಬಿ ಆಯಿಲ್ ನಿಂದ ಮಸಾಜ್ ಮಾಡಿ:

ತಮ್ಮ ಕೈಗಳಿಂದ ಬೆಳಿಗ್ಗೆ ಮತ್ತು ಸಂಜೆ ಬೇಬಿ ಆಯಿಲ್ ನಿಂದ ದಿನಕ್ಕೆ ಎರಡು ಬಾರಿ ಮಸಾಜ್ ಮಾಡಿ. ಇದನ್ನು ಮಾಡುವುದರಿಂದ, ಮಗುವಿನ ದೇಹದ ಕೂದಲು ಕಡಿಮೆಯಾಗುತ್ತದೆ. ಮಸಾಜ್ ಮಾಡುವುದರಿಂದ ಉದುರು ಉದರುತ್ತವೆ ಜೊತೆಗೆ ಮಸಾಜ್ ಮಾಡುವುದರಿಂದ ಮಗುವಿನ ದೇಹ, ಕೈ-ಕಾಲು ಸದೃಢವಾಗುತ್ತದೆ.

ಶ್ರೀಗಂಧಪುಡಿಯ ಮಿಶ್ರಣ:

ಶ್ರೀಗಂಧಪುಡಿಯ ಮಿಶ್ರಣ:

ಶ್ರೀಗಂಧದ ಪುಡಿ, ಹಾಲು ಮತ್ತು ಅರಿಶಿನ ಪುಡಿ ಹಾಕಿ ಪೇಸ್ಟ್ ರಚಿಸಿ. ಈ ಮಿಶ್ರಣವನ್ನು ನಿಮ್ಮ ಮಗುವಿನ ದೇಹದ ಮೇಲೆ ಕೂದಲು ಹುಟ್ಟುವ ಸ್ಥಳದಲ್ಲಿ ನಿಧಾನವಾಗಿ ಹಚ್ಚಿ. ಮಗುವಿಗೆ ಸ್ನಾನ ಮಾಡಿಸುವ ಕೆಲವು ಗಂಟೆಗಳ ಮೊದಲು ಇದನ್ನು ಹಚ್ಚಿ ಮತ್ತು ಕೆಲವು ವಾರಗಳವರೆಗೆ ಇದನ್ನು ಮುಂದುವರಿಸಿ. ಹೀಗೆ ಮಾಡುವುದರಿಂದ ಕೂದಲು ಉದುರುವ ಜೊತೆಗೆ ಮಗುವಿನ ತ್ವಚೆಗೂ ಉತ್ತಮವಾಗಿರುತ್ತದೆ.

ಆಲಿವ್ ಎಣ್ಣೆ:

ಆಲಿವ್ ಎಣ್ಣೆ:

ಮೊದಲಿಗೆ ಮಗುವಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ. ನಂತರ, ಮಗುವಿನ ದೇಹದ ಮೇಲೆ ಕೆಂಪು ಬೇಳೆ ಮತ್ತು ಹಾಲಿನಿಂದ ಮಾಡಿದ ಪೇಸ್ಟ್ ಅನ್ನು ಹಚ್ಚಿ. ಕೂದಲು ಕಾಣುವ ಪ್ರದೇಶಗಳಿಗೆ ಈ ಪೇಸ್ಟ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ನೀವು ಗಮನಾರ್ಹ ವ್ಯತ್ಯಾಸವನ್ನು ನೋಡುತ್ತೀರಿ.

English summary

Home Remedies to Remove Baby Hair Naturally in Kannada

Here we talking about Home Remedies to Remove Baby Hair Naturally in Kannada, read on
X
Desktop Bottom Promotion