For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಈ ಆಹಾರ ನೀಡುವುದು ಉತ್ತಮ

|

ಬೇಸಿಗೆಯ ಬಿಸಿಲು ದೊಡ್ಡವರಿಗಿಂತ ಮಕ್ಕಳ ಮೇಲೆ ಹೆಚ್ಚು ಹಾನಿ ಮಾಡುತ್ತದೆ. ಬೆಳಗ್ಗೆ ಶಾಲೆಗೆ ಹೋಗುವಾಗ, ಶಾಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಮೈದಾನದಲ್ಲಿ ಆಟವಾಡಿ ಮನೆಗೆ ಬರುವಾಗ ಕಠಿಣ ಬಿಸಿಲು ಮಕ್ಕಳಿಗೆ ತಗುಲುತ್ತಿದ್ದು, ಇದರಿಂದ ಮಕ್ಕಳು ಸುಸ್ತಾಗುತ್ತಾರೆ. ಆದ್ದರಿಂದ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೇಸಿಗೆಯಲ್ಲಿ ಶಾಲೆಗೆ ಕಳುಹಿಸುವಾಗ ಅವರ ಚುರುಕುತನವನ್ನು ಕಾಪಾಡುವ, ಪೋಷಿಸುವ, ತಿಂದಾಗ ದೇಹದಲ್ಲಿ ನೀರಿನ ಕೊರತೆಯಾಗದಂತಹ ಆಹಾರವನ್ನು ನೀಡಬೇಕು. ಹಾಗಾದರೆ, ಅಂತಹ ಆಹಾರಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಮಕ್ಕಳನ್ನು ಬಿಸಿಲ ಶಾಖದಿಂದ ಕಾಪಾಡಲು ಯಾವ ಆಹಾರವನ್ನು ನೀಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಲ್ಲಂಗಡಿ:

ಕಲ್ಲಂಗಡಿ:

ರಸಭರಿತವಾದ ತಾಜಾ-ಕೆಂಪು ಕಲ್ಲಂಗಡಿಯನ್ನು ಮಕ್ಕಳು ತುಂಬಾ ಆನಂದಿಸುತ್ತಾರೆ. ಇದು 92 ಪ್ರತಿಶತದಷ್ಟು ನೀರಿನಿಂದ ತುಂಬಿರುತ್ತದೆ, ಇದರಿಂದಾಗಿ ಇದು ದೇಹದಲ್ಲಿ ನೀರಿನ ಕೊರತೆ ಆಗುವುದಿಲ್ಲ, ಜೊತೆಗೆ ದೇಹವನ್ನು ತಂಪಾಗಿಸುತ್ತದೆ. ಆದ್ದರಿಂದ ಮಕ್ಕಳ ಬಾಕ್ಸ್‌ನಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತುಂಬಿ ಕೊಡಿ.

ಹುರಿಗಡಲೆ ಹಿಟ್ಟು:

ಹುರಿಗಡಲೆ ಹಿಟ್ಟು:

ಬಾರ್ಲಿಯಿಂದ ತಯಾರಿಸಿದ ಹುರಿಗಡಲೆ ಹಿಟ್ಟು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಇದನ್ನು ಕುಡಿಯುವುದರಿಂದ ಮಕ್ಕಳಲ್ಲಿ ಶಾಖದ ಹೊಡೆತದ ಅಪಾಯ ಕಡಿಮೆಯಾಗುತ್ತದೆ. ಬಾರ್ಲಿ ಹಿಟ್ಟನ್ನು ನೀರಿನಲ್ಲಿ ಸಕ್ಕರೆ ಬೆರೆಸಿ ಕುಡಿಯಲು ಕೊಡಿ. ಇದರಿಂದ ಮಕ್ಕಳು ದೇಹ ಹಾಗೂ ಮನಸ್ಸು ಉಲ್ಲಾಸದಾಯಕವಾಗಿರುವುದು.

ಮೊಸರು:

ಮೊಸರು:

ಮೊಸರು ಅಥವಾ ಲಸ್ಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ತಂಪಾಗಿಸುತ್ತದೆ. ಇದನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಮಕ್ಕಳಿಗೆ ತಿನ್ನಿಸಬಹುದು ಅಥವಾ ಅವರ ಊಟದಲ್ಲಿ ಪ್ಯಾಕ್ ಮಾಡಿ ಕಳುಹಿಸಬಹುದು. ಮೊಸರು ಬಿಸಿಲಿನಿಂದ ಉಂಟಾದ ದಣಿವನ್ನು ಹೋಗಲಾಡಿಸಿ, ಮನಸ್ಸಿಗೆ ವಿಶ್ರಾಂತಿ ನೀಡುವುದು.

ನಿಂಬೆ ಪಾನೀಯ:

ನಿಂಬೆ ಪಾನೀಯ:

ನಿಂಬೆ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೂರ್ಯನ ಬೆಳಕಿನಿಂದ ಹೋಗುವ ಮಕ್ಕಳ ಶಕ್ತಿಯು ನಿಂಬೆ ಪಾನಕದಿಂದ ಅವರಿಗೆ ಮರಳುತ್ತದೆ. ಆದ್ದರಿಂದ ಮಧ್ಯಾಹ್ನದ ಬಿಸಿಲಿನ ವೇಳೆ ಮಕ್ಕಳಿಗೆ ನಿಂಬೆ ಪಾನೀಯ ಅಥವಾ ಪಾನಕವನ್ನು ಮಾಡಿ ಕೊಡಿ.

ಪುದೀನಾ:

ಪುದೀನಾ:

ತಂಪಾಗಿಸುವ ಪುದೀನಾವನ್ನು ಸಿರಪ್ಗೆ ಸೇರಿಸಿ ಕುಡಿಯಬಹುದು ಅಥವಾ ಚಟ್ನಿಯಾಗಿಯೂ ತಿನ್ನಬಹುದು. ಅದರ ತಾಜಾತನದಿಂದಾಗಿ, ಪುದೀನಾ ಚಟ್ನಿಯನ್ನು ಬೇಸಿಗೆ ಕಾಲದಲ್ಲಿ ಭಾರತೀಯ ಕುಟುಂಬಗಳಲ್ಲಿ ಪ್ರತಿದಿನ ತಯಾರಿಸಲಾಗುತ್ತದೆ. ಇದು ತಂಪಾಗಿಸುವ ಗುಣವನ್ನು ಹೊಂದಿರುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಇದನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು.

English summary

Foods to Prevent Dehydration and Heatstroke in Children during Summer in Kannada

Here we talking about Foods to prevent dehydration and heatstroke in children during summer in Kannada, read on
Story first published: Thursday, April 14, 2022, 18:19 [IST]
X
Desktop Bottom Promotion