For Quick Alerts
ALLOW NOTIFICATIONS  
For Daily Alerts

ಪೋಷಕರೇ ಗಮನಿಸಿ, ಇವೇ ಮಕ್ಕಳಲ್ಲಿ ಕಂಡುಬರುವ ಕೊರೊನಾದ ಆರಂಭಿಕ ಗುಣಲಕ್ಷಣಗಳು

|

ಕೊರೊನಾದ ಎರಡನೇ ನಿಯಂತ್ರಣಕ್ಕೆ ಬಂದಿದ್ದರೂ, ಅಲ್ಲಲ್ಲಿ ಮಕ್ಕಳಿಗೆ ಕೊರೊನಾ ತಗುಲುತ್ತಿರುವುದು ಗಮನ ಹರಿಸಬೇಕಾದ ಸಂಗತಿಯಾಗಿದೆ. ಇದು ಮೂರನೇ ಅಲೆಯ ಮುನ್ಸೂಚನೆಯೂ ಇರಬಹುದು. ಏಕೆಂದರೆ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬರಬಹುದೆಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಈ ಸಮಯದಲ್ಲಿ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು. ಮಕ್ಕಳಲ್ಲಿ ಕಂಡುಬರುವ ಸಣ್ಣ ಬದಲಾವಣೆಗಳನ್ನು ಗಮನಿಸಿ, ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.

ಪೋಷಕರು ಮಕ್ಕಳಲ್ಲಿ ಗಮನಿಸಬಹುದಾದ ಕೊರೊನಾದ ಆರಂಭಿಕ ಗುಣಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ:

1. ಎಂಐಎಸ್ -ಸಿ ಯ ಲಕ್ಷಣಗಳು :

1. ಎಂಐಎಸ್ -ಸಿ ಯ ಲಕ್ಷಣಗಳು :

ಪೋಷಕರು ಮಕ್ಕಳಲ್ಲಿ ಯಾವುದೇ ಹೊಸ ದದ್ದುಗಳು, ಉಬ್ಬಿರುವ ಕಣ್ಣುಗಳು ಅಥವಾ ತುಟಿಗಳು, ಕಣ್ಣು ಅಥವಾ ತುಟಿಗಳಲ್ಲಿ ಕೆಂಪು, ಯಾವುದೇ ಊತ, ತಲೆನೋವು, ವೇಗದ ಹೃದಯ ಬಡಿತ, 48 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವ ಜ್ವರ, ಹೊಟ್ಟೆ ನೋವು, ವಾಂತಿ, ಅಜೀರ್ಣ ಮತ್ತು ತ್ವರಿತ ಉಸಿರಾಟ ಕಂಡು ಬಂದರೆ ಗಮನಿಸಿ. ಇವು MIS-C ಯ ಸಂಕೇತವಾಗಿರಬಹುದು. ಎಂಐಎಸ್-ಸಿ ಎಂದರೆ ಮಲ್ಟಿ-ಇನ್ಫ್ಲಾಮೇಟರಿ ಸಿಸ್ಟಮ್ ಕಂಡಿಷನ್. ಕೊರೊನಾ ಬಳಿಕ ಮಕ್ಕಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಇದು ಒಂದು. ಈ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು, ತಮ್ಮ ಮಕ್ಕಳನ್ನು ವೈದ್ಯರ ಬಳಿ ಬೇಗನೆ ಕರೆದುಕೊಂಡು ಹೋಗಬೇಕು. ಮೇಲೆ ತಿಳಿಸಿದ ಯಾವುದೇ ರೋಗಲಕ್ಷಣವನ್ನು ನೀವು ನೋಡಿದರೆ ಹತ್ತಿರದ ಆಸ್ಪತ್ರೆಯ ನಿಮ್ಮ ಮಕ್ಕಳ ವೈದ್ಯರನ್ನು ಭೇಟಿ ಮಾಡಿ.

2. ದೈಹಿಕ ಅಥವಾ ಮಾನಸಿಕ ಸಮಸ್ಯೆ :

2. ದೈಹಿಕ ಅಥವಾ ಮಾನಸಿಕ ಸಮಸ್ಯೆ :

ಪೋಷಕರು ತಮ್ಮ ಮಗುವಿಗೆ ಯಾವುದೇ ದೌರ್ಬಲ್ಯಗಳಿದ್ದರೆ, ಆ ಮಕ್ಕಳನ್ನು ನಿರ್ಲಕ್ಷ ಮಾಡಬೇಡಿ. ಆ ದೌರ್ಬಲ್ಯಗಳು ಮಾರಕವಾಲ್ಲದಿದ್ದರೂ, ಕೆಲವೊಮ್ಮೆ ಮಗುವಿನ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವುದು. ಏಕೆಂದರೆ ಯಾವುದಾದರೂ ಆರೋಗ್ಯ ಸಮಸ್ಯೆಗಳಿಂದ ಬಳತ್ತಿರುವ ಮಕ್ಕಳಿಗೆ ಕೊರೊನಾ ತಗುಲುವುದು ಬೇಗ. ಆದ್ದರಿಂದ ಇವುಗಳನ್ನು ಲಘುವಾಗಿ ಪರಿಗಣಿಸದೆ ಪ್ರತ್ಯೇಕ ಚಿಕಿತ್ಸೆ ಕೊಡಿಸಬೇಕು. ಮಗುವಿಗೆ ಆ ಸಮಸ್ಯೆ ಈಗಾಗಲೇ ಇದೆ ಎಂದು ಸುಮ್ಮನೆ ಕುಳಿತರೆ ಮಗುವಿಗೆ ಮಾರಕವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

3.ಉಸಿರಾಟದಲ್ಲಿ ಏರುಪೇರು:

3.ಉಸಿರಾಟದಲ್ಲಿ ಏರುಪೇರು:

ಈ ಸಾಂಕ್ರಾಮಿಕ ಸಮಯದಲ್ಲಿ, ಪ್ರತಿ ಕುಟುಂಬವು ಉಸಿರಾಡುವ ಲಕ್ಷಣಗಳನ್ನು ತಿಳಿದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ದಿನನಿತ್ಯದ ಚಟುವಟಿಕೆಯಲ್ಲಿ ತೊಂದರೆ, ಎದೆಯ ಕ್ಷಿಪ್ರ ಚಲನೆ, ಮಲಗಿರುವ ಸ್ಥಾನದಲ್ಲಿ ಕೆಮ್ಮು, ನಿದ್ರೆಯ ಗುಣಮಟ್ಟ, ಆಹಾರವನ್ನು ನುಂಗುವಲ್ಲಿ ತೊಂದರೆ, ಉಸಿರಾಟದ ತೊಂದರೆ ಮೊದಲಾದವುಗಳನ್ನು ಗಮನಿಸಬೇಕು. ನಿಮ್ಮ ಮಗು ಈ ಯಾವುದೇ ರೋಗಲಕ್ಷಣಗಳನ್ನು ತೋರಿಸಿದರೆ ಹತ್ತಿರದ ಆಸ್ಪತ್ರೆಗೆ ಧಾವಿಸಿ ಮತ್ತು ವೈದ್ಯರ ಸಹಾಯವನ್ನು ಕೇಳಿ ಮತ್ತು ಆಮ್ಲಜನಕ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.

4.ಚರ್ಮದಲ್ಲಿ ಬದಲಾವಣೆ :

4.ಚರ್ಮದಲ್ಲಿ ಬದಲಾವಣೆ :

ನಿಮ್ಮ ಮಗುವನ್ನು ಯಾವಾಗ ವೈದ್ಯರ ಬಳಿಗೆ ಕರೆದೊಯ್ಯಬೇಕೆಂಬುದನ್ನು ತಿಳಿದುಕೊಳ್ಳುವ ಒಂದು ಮಾರ್ಗವೆಂದರೆ ಚರ್ಮವು ಮಸುಕು ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತಿರುವುದನ್ನ ನೋಡಿದರೆ, ತೀವ್ರವಾದ ಬೇಧಿ, ಹೊಟ್ಟೆ ನೋವು ಅಥವಾ ವಾಂತಿ, ಕಿರಿಕಿರಿ ಉಂಟಾದಾಗ ಕರೆದುಕೊಂಡು ಹೋಗಿ. ಆಸ್ಪತ್ರೆಗೆ ಪ್ರಯಾಣಿಸುವಾಗ ನಿಮ್ಮ ಮಗುವನ್ನು ಬೆಚ್ಚಗೆ ಮತ್ತು ಸಮಾಧಾನದಿಂದ ಇರುವಂತೆ ನೋಡಿಕೊಳ್ಳಿ. ಅವರಲ್ಲಿ ಯಾವುದೇ ರೀತಿಯ ಭಯ ಹುಟ್ಟಿಸಬೇಡಿ. ಖಚಿತಪಡಿಸಿಕೊಳ್ಳಿ.

5. ಕೊರೊನಾದ ಸಾಮಾನ್ಯ ಲಕ್ಷಣಗಳು :

5. ಕೊರೊನಾದ ಸಾಮಾನ್ಯ ಲಕ್ಷಣಗಳು :

ಮಗುವಿಗೆ ಅತಿಸಾರ, ಕೆಮ್ಮು, ಅತಿಯಾದ ಜ್ವರ, ದೌರ್ಬಲ್ಯ, ರುಚಿ ಕಳೆದುಕೊಳ್ಳುವುದು ಅಥವಾ ವಾಸನೆ ಕಳೆದುಕೊಳ್ಳುವುದು, ಬೆವರುವುದು ಇತ್ಯಾದಿಗಳು ತೀವ್ರವಾಗಿದೆಯೇ ಎಂದು ಪೋಷಕರು ಪರೀಕ್ಷಿಸಬೇಕಾಗಿದೆ. 2 ದಿನಗಳ ನಂತರವೂ ಜ್ವರ ಕಡಿಮೆಯಾಗದಿದ್ದರೆ, ತಕ್ಷಣ ವೈದ್ಯರ ಬಳಿ ಕರೆದೋಯ್ಯಿರಿ.

English summary

Early COVID-19 Signs in Kids that Need Paediatric Intervention

Early COVID-19 signs in kids that need paediatric intervention, read on
Story first published: Friday, July 16, 2021, 16:37 [IST]
X
Desktop Bottom Promotion