For Quick Alerts
ALLOW NOTIFICATIONS  
For Daily Alerts

ಕೊರೋನಾ ಕಾಲದಲ್ಲಿ ಪೋಷಕರು ಎದುರಿಸುವಂತಹ ಸವಾಲುಗಳು ಮತ್ತು ಅವುಗಳನ್ನು ನಿವಾರಿಸುವ ಮಾರ್ಗಗಳು ಇಲ್ಲಿದೆ

|

ಕೊರೋನಾದ ಎರಡನೇ ಅಲೆಯು ಭೀಕರವಾಗಿದ್ದು, ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಈ ವಿಚಾರ ಪೋಷಕರು ನಿದ್ದೆ ಕೆಡಿಸಿದೆ. ಒಂದು ಕಡೆ ಕೊರೋನಾದಿಂದ ತಮ್ಮ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ, ಮತ್ತೊಂದೆಡೆ ಈ ಕೊರೋನಾ ಕಾರಣದಿಂದ ಮನೆಯೊಳಗೇ ಇರುವ ಮಕ್ಕಳನ್ನು ನಿಭಾಯಿಸುವ ಪರಿಸ್ಥಿತಿ. ಈ ಎರಡೂ ವಿಚಾರಗಳೂ ಸಹ ಪೋಷಕರಿಗೆ ಸವಾಲಾಗಿದೆ. ಹೀಗೆ ಕೊರೋನಾ ಕಾಲದಲ್ಲಿ ಪೋಷಕರು ಎದುರಿಸುವಂತಹ ಸವಾಲುಗಳು ಮತ್ತು ಅವುಗಳನ್ನು ನಿವಾರಿಸುವ ಮಾರ್ಗಗಳನ್ನು ಇಲ್ಲಿ ಹೇಳಲಾಗಿದೆ.

ಕೊರೋನಾ ಕಾಲದಲ್ಲಿ ಪೊಷಕರು ಎದುರಿಸುವ ಸವಾಲುಗಳು ಹಾಗೂ ಅದನ್ನು ನಿವಾರಿಸುವ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ಮಕ್ಕಳ ಒತ್ತಡ ಮತ್ತು ಆತಂಕವನ್ನು ನಿಭಾಯಿಸುವುದು:

ಮಕ್ಕಳ ಒತ್ತಡ ಮತ್ತು ಆತಂಕವನ್ನು ನಿಭಾಯಿಸುವುದು:

ವಯಸ್ಕರಂತೆ, ಮಕ್ಕಳು ಸಹ ಸಾಂಕ್ರಾಮಿಕದ ಅಪಾಯಗಳನ್ನು ಅರಿತುಕೊಳ್ಳು ಪ್ರಾರಂಭಿಸಿದ್ದಾರೆ. ಮನೆಯೊಳಗೆ ಇರುವುದು ಅವರ ಮಾನಸಿಕ ಆರೋಗ್ಯ ಮತ್ತು ಶಾಂತಿಯನ್ನು ಹಾಳು ಮಾಡಿದೆ. ಈ ಕೊರೋನಾ ಸಮಯದಲ್ಲಿ ಪೋಷಕರು ತಮ್ಮ ಮನಸ್ಸಿನ ಸ್ಥಿತಿಯನ್ನು ಮಾತ್ರ ನೋಡಿಕೊಳ್ಳುವುದಲ್ಲ, ಅದರ ಜೊತೆಗೆ ತಮ್ಮ ಮಗುವಿನ ಮಾನಸಿಕ ಸ್ವಾಸ್ಥ್ಯವನ್ನು ಸಹ ಕಾಪಾಡಬೇಕು.

ಇಂತಹ ಸಂದರ್ಭಗಳಲ್ಲಿ, ಮಕ್ಕಳನ್ನು ಶಾಂತವಾಗಿರಿಸುವುದು ಮತ್ತು ವಿನೋದಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಇದು ನಿಮಗೂ ನಿಮ್ಮ ಮಗುವಿಗೂ ನಿರಾಳತೆಯನ್ನು ತರುತ್ತದೆ. ನಿಮ್ಮ ಮಗುವಿನೊಂದಿಗೆ ಯೋಗ ಮಾಡುವುದು, ಆಟ ಆಡುವುದರ ಮೂಲಕ ನಿಮ್ಮ ಮಗುವಿಗೆ ಸಮಯ ನೀಡಬಹುದು.

ಮಕ್ಕಳ ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಳ್ಳುವುದು:

ಮಕ್ಕಳ ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಳ್ಳುವುದು:

ಕೊರೋನಾ ಕಾಟದಿಂದ ಇಡೀ ದಿನ ಮನೆಯಲ್ಲಿರುವುದರಿಂದ ನಮಗೆ ಸಾಕಷ್ಟು ಸಮಯ ಲಭ್ಯವಿರುತ್ತದೆ. ಈ ಕಾರಣದಿಂದ ನಮ್ಮಲ್ಲಿ ಆಲಸ್ಯ ಮೂಡುತ್ತದೆ. ಇದರಿಂದ ನಮ್ಮ ದೈನಂದಿನ ದಿನಚರಿ ಕಾಪಾಡಿಕೊಳ್ಳುವುದು ಕಷ್ಟಕರ. ಆದರೆ ನಿಮ್ಮ ಮಗುವಿಗೆ ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಅದು ಬುದ್ಧಿಶಕ್ತಿಯ ಬೆಳವಣಿಗೆಗೆ ಅಡ್ಡಿಯಾಗಬಹುದು. ನೀವು ಅವರಿಗಾಗಿ ಉತ್ತಮವಾದ ದಿನಚರಿಯನ್ನು ನೀಡಿದರೆ, ಅವರು ಅದೇ ದಾರಿಯಲ್ಲಿ ಸಾಗಿ ದಿನವಿಡೀ ಉತ್ಸಾಹದಲ್ಲಿರುತ್ತಾರೆ.

ಮಕ್ಕಳ ಹಠಗಳನ್ನು ನಿರ್ವಹಿಸುವುದು:

ಮಕ್ಕಳ ಹಠಗಳನ್ನು ನಿರ್ವಹಿಸುವುದು:

ಈ ಲಾಕ್‌ಡೌನ್ ಸಮಯದಲ್ಲಿ, ಸಣ್ಣ ಮಕ್ಕಳು ಹಠವನ್ನು ಮಾಡುತ್ತಾರೆ. ಇದು ಅವರ ತಪ್ಪಲ್ಲ. ಸದಾಕಾಲ ಒಳಗೇ ಇರುವುದರಿಂದ ಅವರಿಗೂ ಕಟ್ಟಿಹಾಕಿದ ಅನುಭವ ಆಗುವುದು ಸಹಜ. ಆಗ ಕೋಪ-ಉದ್ವೇಗದ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನೀವು ತಾಳ್ಮೆ ಕಳೆದುಕೊಳ್ಳಬಾರದು. ನೀವು ಅವರನ್ನು ಬಹಳ ಜಾಣ್ಮೆಯಿಂದ ನಿಭಾಯಿಸಬೇಕು. ಅವರ ಎಲ್ಲಾ ಮನವಿಗೆ ಮಣಿಯಬೇಡಿ. ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುವಷ್ಟು ದೊಡ್ಡವರಾಗಿದ್ದರೆ, ಅವರೊಂದಿಗೆ ತರ್ಕಿಸಿ.

ಅವರ ಆನ್‌ಲೈನ್ ಶಿಕ್ಷಣಕ್ಕೆ ಸಹಾಯ ಮಾಡುವುದು:

ಅವರ ಆನ್‌ಲೈನ್ ಶಿಕ್ಷಣಕ್ಕೆ ಸಹಾಯ ಮಾಡುವುದು:

ಶಾಲೆಗಳು ಮುಚ್ಚಿರುವ ಈ ಸಮಯದಲ್ಲಿ, ಪೋಷಕರು ತಮ್ಮ ಮಗುವಿನ ಕಲಿಕೆಗಾಗಿ ಸಾಕಷ್ಟು ಸಮಯ ಕೊಡಬೇಕಾಗಬಹುದು. ಮಕ್ಕಳು ತಮ್ಮ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರೆ ಅಥವಾ ಹೋಮ್ ವರ್ಕ್ ಮಾಡುತ್ತಿದ್ದರೆ, ಅವರಿಗೆ ಸುಲಭವಾಗಿ ಸಹಾಯ ಮಾಡಿ. ಅವರು ಬಯಸಿದಷ್ಟು ಪ್ರಶ್ನೆಗಳನ್ನು ಕೇಳಲಿ, ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿ. ಇದು ಅವರ ಬುದ್ಧಿವಂತಿಕೆಯ ಸೂಚಕವಾಗಿದೆ. ಈ ನಡುವೆ ಸಣ್ಣ ವಿರಾಮಗಳನ್ನು ನೀಡಿ ಇದರಿಂದ ಅವರು ತಮ್ಮನ್ನು ತಾವು ಮತ್ತೆ ಚೈತನ್ಯಗೊಳಿಸಬಹುದು.

ಅವರನ್ನು ಸದಾ ಕಾರ್ಯನಿರತವಾಗಿರಿಸಿಕೊಳ್ಳುವುದು:

ಅವರನ್ನು ಸದಾ ಕಾರ್ಯನಿರತವಾಗಿರಿಸಿಕೊಳ್ಳುವುದು:

ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಮಕ್ಕಳನ್ನು ಸಕ್ರಿಯವಾಗಿಡುವುದು ಪೋಷಕರಿಗೆ ಸವಾಲಿನ ಕಾರ್ಯವಾಗಿದೆ. ಅವರ ಸ್ನೇಹಿತರನ್ನು ಆಡಲು ಅಥವಾ ಭೇಟಿಯಾಗಲು ಅವರಿಗೆ ಅನುಮತಿ ಇಲ್ಲದಿರುವುದರಿಂದ, ಮಕ್ಕಳು ಮಂಕಾಗಬಹುದು. ಅಂತಹ ಸನ್ನಿವೇಶಗಳಲ್ಲಿ, ನೀವು ಯಾವಾಗಲೂ ಓದು, ನೃತ್ಯ, ಯೋಗ, ಧ್ಯಾನ, ಬೋರ್ಡ್ ಆಟಗಳಂತಹ ಹೊಸ ಚಟುವಟಿಕೆಗಳಿಗೆ ಅವರನ್ನು ಪರಿಚಯಿಸಬಹುದು. ಇದಕ್ಕಾಗಿ ಪ್ರತ್ಯೇಕ ಸಮಯವನ್ನು ನೀವು ನಿಗದಿ ಮಾಡಬೇಕು.

English summary

Challenges Faced By Parents During COVID-19 and Ways to Overcome it in Kannada

Here we talking about Challenges faced by parents during COVID-19 and ways to overcome it in Kannada, read on
X
Desktop Bottom Promotion