For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಹಾಗೂ ಲಸಿಕೆ: ಸ್ತನಪಾನ ನೀಡುವುದರ ಬಗ್ಗೆ ತಾಯಂದಿರಿಗೆ ಕಾಡುತ್ತಿರುವ ಪ್ರಶ್ನೆಗಳಿವು

|

ಮಗುವಿಗೆ ಎದೆ ಹಾಲಿನಷ್ಟು ಪೋಷಕಾಂಶ ಇರುವ ಆಹಾರ ಮತ್ತೊಂದಿಲ್ಲ. ಮಗುವಿಗೆ 6 ತಿಂಗಳವರೆಗೆ ಎದೆ ಹಾಲನ್ನು ಕಡ್ಡಾಯವಾಗಿ ನೀಡುವಂತೆ ಮಕ್ಕಳ ತಜ್ಞರು ಸೂಚಿಸುತ್ತಾರೆ. ಆದರೆ ಅನೇಕರಲ್ಲಿ ಕೋವಿಡ್‌ 19 ಸೋಂಕಿತ ಗರ್ಭಿಣಿ ಮಗುವಿಗೆ ಜನ್ಮ ನೀಡಿದರೆ ಎದೆ ಹಾಲು ಕೊಡಬಹುದೇ? ಕೋವಿಡ್‌ 19ನಿಂದ ಚೇತರಿಸುತ್ತಿರುವ ತಾಯಿ ಮಗುವಿಗೆ ಎದೆ ಹಾಲು ಕೊಡಬಹುದೇ ಎಂಬ ಪ್ರಶ್ನೆ ಅನೇಕರಲ್ಲಿದೆ.

ಕೋವಿಡ್‌ 19 ಸಾಂಕ್ರಾಮಿಕ ಸಮಯದಲ್ಲಿ ತಾಯಂದಿರರು ಹೆಚ್ಚಾಗಿ ಕೇಳುತ್ತಿರುವ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರ ಇಲ್ಲಿವೆ:

ಕೋವಿಡ್‌ 19 ಸೋಂಕಿತ ತಾಯಿ ಮಗುವಿಗೆ ಎದೆ ಹಾಲು ಕೊಡಬಹುದೇ?

ಕೋವಿಡ್‌ 19 ಸೋಂಕಿತ ತಾಯಿ ಮಗುವಿಗೆ ಎದೆ ಹಾಲು ಕೊಡಬಹುದೇ?

ಕೋವಿಡ್‌ 19 ಸೋಂಕಿತ ತಾಯಿ ಮಗುವಿಗೆ ಎದೆ ಹಾಲು ಕೊಡುವುದರಿಂದ ಮಗುವಿಗೆ ಸೋಂಕು ಹರಡುವುದಿಲ್ಲ ಎಂಬುವುದು ಸಾಬೀತಾಗಿದೆ. ಎದೆ ಹಾಲಿನ ಮೂಲಕ ಸೋಂಕು ಹರಡುವುದಿಲ್ಲ, ಆದರೆ ಎದೆ ಹಾಲು ಕೊಡುವಾಗ ತಾಯಿ ಅಗ್ಯತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಖಕ್ಕೆ N95 ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್‌ ಹಾಕಿ, ಗ್ಲೌಸ್‌ ಹಾಕಿ ಒಂದು ಟವಲ್‌ ಕೈ ಮೇಲೆ ಹಾಕಿ ಮಗುವನ್ನು ಎತ್ತಿಕೊಂಡು ಹಾಲು ಕೊಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಮಗುವನ್ನು ಎತ್ತಿಕೊಂಡು ತಾಯಿ ಕೆಮ್ಮುವುದು, ಸೀನುವುದು ಮಾಡಬಾರದು. ಈ ರೀತಿಯ ಎಚ್ಚರಿಕೆ ವಹಿಸಿದರೆ ಮಗುವಿಗೆ ಸೋಂಕು ಹರಡುವುದಿಲ್ಲ.

ಹುಟ್ಟಿದಾಗಲೇ ಮಗುವಿಗೆ ನೀಡಬೇಕು ಕಾಂಗೆರೋ ಕೇರ್

ಹುಟ್ಟಿದಾಗಲೇ ಮಗುವಿಗೆ ನೀಡಬೇಕು ಕಾಂಗೆರೋ ಕೇರ್

ತಾಯಿ ಎದೆಗೆ ಮಗುವನ್ನು ತಾಗುವಂತೆ ಹಿಡಿದು ಹಾಲುಣಿಸುವುದನ್ನು ಕಾಂಗೆರೋ ಕೇರ್‌ ಎಂದು ಹೇಳಲಾಗುವುದು. ಮಗು ಜನಿಸಿದ ಅರ್ಧ ಗಂಟೆಯ ಒಳಗಾಗಿ ಎದೆ ಹಾಲುಣಿಸಬೇಕು. ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಎದೆ ಹಾಲಿನ ಮೂಲಕ ತಾಯಿಂದ ಮಗುವಿಗೆ ದೊರೆಯುವುದು.

ಎದೆ ಹಾಲಿಗೆ ಪರ್ಯಾಯವಾದ ಆಹಾರ ಮತ್ತೊಂದಿಲ್ಲ

ಎದೆ ಹಾಲಿಗೆ ಪರ್ಯಾಯವಾದ ಆಹಾರ ಮತ್ತೊಂದಿಲ್ಲ

ತಾಯಿಯ ಎದೆ ಹಾಲಿಗೆ ಪರ್ಯಾಯವಾದ ಆಹಾರ ಮತ್ತೊಂದಿಲ್ಲ. ಇದು ಮಗುವನ ಆರೋಗ್ಯಕರ ಬೆಳವಣಿಗೆಗೆ ತುಂಬಾ ಮುಖ್ಯ. ಎದೆ ಹಾಲಿನಲ್ಲಿರುವ ಪೋಷಕಾಂಶ ಮಗುವಿನ ಬೆಳವಣಿಗೆಗೆ ಸಹಕಾರಿ. ಒಂದು ವೇಳೆ ಯಾವುದೋ ವೈದ್ಯಕೀಯ ಕಾರಣಕ್ಕೆ ತಾಯಿಗೆ ಮಗುವಿಗೆ ನೇರವಾಗಿ ಹಾಲುಣಿಸಲು ಸಾಧ್ಯವಾಗದಿದ್ದರೆ ಎದೆ ಹಾಲನ್ನು ತೆಗೆದು ಮಗುವಿಗೆ ಕುಡಿಸಬಹುದಾಗಿದೆ. ಹೀಗೆ ಮಾಡುವುದರಿಂದ ತಾಯಿಗೆ ಎದೆ ನೋವೂ ಉಂಟಾಗುವುದಿಲ್ಲ, ಮಗುವಿಗೆ ಅಗ್ಯತವಾಗಿರುವ ಪೋಷಕಾಂಶದ ಆಹಾರ ಸಿಕ್ಕಂತಾಗುವುದು.

ಕೊರೊನಾ ಲಸಿಕೆ ತೆಗೆದುಕೊಂಡ ತಕ್ಷಣ ಮಗುವಿಗೆ ಎದೆ ಹಾಲುಣಿಸಬಹುದಾ?

ಕೊರೊನಾ ಲಸಿಕೆ ತೆಗೆದುಕೊಂಡ ತಕ್ಷಣ ಮಗುವಿಗೆ ಎದೆ ಹಾಲುಣಿಸಬಹುದಾ?

ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಕೂಡ ಮಗುವಿಗೆ ಹಾಲುಣಿಸಬಹುದು. ತಾಯಿ ಕೋವಿಡ್ ಲಸಿಕೆ ತೆಗೆದುಕೊಂಡರೆ ಪ್ರತಿಕಾಯಗಳು ಎದೆ ಹಾಲಿನ ಮೂಲಕ ಮಗುವಿಗೂ ದೊರೆಯುವುದರಿಂದ ಮಗುವಿನಲ್ಲಿ ಕೋವಿಡ್‌ 19 ವಿರುದ್ಧ ಹೋರಾಡುವ ಪ್ರತಿಕಾಯಗಳ ಸಾಮರ್ಥ್ಯ ಹೆಚ್ಚುವುದು. ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಕೋವಿಡ್‌ 19 ವಿರುದ್ಧ ಹೋರಾಡುವ IgA (Immunoglobulin A) ಮತ್ತು IgG (Immunoglobulin G) ಪ್ರತಿಕಾಯಗಳು ಲಸಿಕೆ ತೆಗೆದುಕೊಂಡ 6 ವಾರಗಳ ಬಳಿಕ ಎದೆ ಹಾಲಿನಲ್ಲಿರುತ್ತವೆ ಎಂಬುವುದು ತಿಳಿದು ಬಂದಿದೆ.

ಆದ್ದರಿಂದ ಎದೆ ಹಾಲುಣಿಸುವ ತಾಯಿ ಕೋವಿಡ್‌ ಲಸಿಕೆ ಪಡೆಯುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಗರ್ಭಿಣಿ ಕೋವಿಡ್ 19 ಲಸಿಕೆ ಪಡೆಯುವುದು ಸುರಕ್ಷಿತವೇ?

ಗರ್ಭಿಣಿ ಕೋವಿಡ್ 19 ಲಸಿಕೆ ಪಡೆಯುವುದು ಸುರಕ್ಷಿತವೇ?

NTAGI (National Technical Advisory Group on Immunisation)ಪ್ರಕಾರ ಗರ್ಭಿಣಿಯರು ಕೋವಿಡ್‌ 19 ಲಸಿಕೆ ತೆಗೆಯುವುದು ಸುರಕ್ಷಿತವಾಗಿದೆ. ಗರ್ಭಿಣಿಯರು ಈ ಲಸಿಕೆ ಪಡೆಯುವುದರಿಂದ ಸೋಂಕಿನ ಅಪಾಯ ತಪ್ಪಿಸುವುದು.

ಗರ್ಭಿಣಿಯರಿಗೆ ಸೋಂಕು ತಗುಲಿದರೆ ರೋಗ ಲಕ್ಷಣಗಳು ಗಂಭೀರವಾಗುವ ಸಾಧ್ಯತೆ ಹೆಚ್ಚು. ಗರ್ಭಿಣಿಯರು ಕೋವಿಡ್ 19 ಲಸಿಕೆ ಪಡೆಯುವುದರಿಂದ ಅವರಲ್ಲಿ ಕೋವಿಡ್‌ 19 ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುವುದು.

English summary

World Breastfeeding Week: COVID Hit Pregnant And Breastfeeding Mothers And Vaccination For Them

World Breastfeeding Week: COVID Hit Pregnant And Breastfeeding Mothers And Vaccination For Them, read on...
X
Desktop Bottom Promotion