For Quick Alerts
ALLOW NOTIFICATIONS  
For Daily Alerts

ಮಗುವನ್ನು ಮಲಗಿಸುವಾಗ ಈ ತಪ್ಪು ಮಾಡಲೇಬಾರದು

|

ಹುಟ್ಟಿದ ಮಗು ದಿನದ ಹೆಚ್ಚು ಹೊತ್ತು ಮಲಗಿರಬೇಕು. ಬೆಳವಣಿಗೆಯ ಹಂತಗಳು ದಾಟಿ ಪ್ರೌಢಾವಸ್ಥೆ ಬರುವವರೆಗೆ ನಿದ್ದೆಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಮಕ್ಕಳ ಬೆಳವಣಿಗೆಗೆ ಸೂಕ್ತ ಪ್ರಮಾಣದ ಗಾಢ ನಿದ್ದೆ ಅವಶ್ಯಕವಾಗಿದ್ದು ಇದನ್ನು ಪಡೆಯಲು ಬೆನ್ನ ಮೇಲೆ ಮಲಗುವ ಭಂಗಿಯೇ ಅತ್ಯುತ್ತಮವಾಗಿದೆ. ಒಂದು ವೇಳೆ ನಿದ್ದೆ ಸಮರ್ಪಕವಾಗಿಲ್ಲದಿದ್ದರೆ ಇದು "ಸಿಡ್ಸ್'' ಎಂಬ ಅಪರೂಪದ ಕಾಯಿಲೆಗೆ ಕಾರಣವಾಗಬಹುದು. SIDS or sudden infant death syndrome, ಇದನ್ನು 'ಹಠಾತ್ತನೆ ಶಿಶು ಮರಣ ಹೊಂದುವ ರೋಗ ಲಕ್ಷಣ' ಎಂದು ಕನ್ನಡದಲ್ಲಿ ಕರೆಯಬಹುದು. ನಿದ್ದೆಯಲ್ಲಿಯೇ ಯಾವುದೇ ಸೂಚನೆಯಿಲ್ಲದೇ ಮಗು ಸಾವಿಗೀಡಾಗುವುದನ್ನು ಹೀಗೆ ಕರೆಯಬಹುದು.

ಅಪಘಾತ ಸಂಭವಿಸಿದ ಬಳಿಕ ಕಾರಣ ಹುಡುಕಿದರೆ ನಿರ್ಲಕ್ಷ್ಯಕ್ಕೊಳಗಾದ ಯಾವುದೋ ಚಿಕ್ಕ ವಸ್ತುವೇ ಕಾರಣವಾಗಿರುವಂತೆ, ಈ ಪರಿಯ ಸಾವಿಗೆ ಮಗು ರಾತ್ರಿ ಮಲಗುವ ಮುನ್ನ ಯಾವ ಭಂಗಿಯಲ್ಲಿ ಮಲಗಿತ್ತು ಎಂಬ ಮಾಹಿತಿ ಕಾರಣವಾಗಿರುತ್ತದೆ. ಅರಿವಿಲ್ಲದೇ ಮಕ್ಕಳನ್ನು ತಪ್ಪಾದ ಭಂಗಿಯಲ್ಲಿ ಮಲಗಿಸಿ ಅಪಾಯವನ್ನು ಆಹ್ವಾನಿಸುವ ಬದಲು ಯಾವ ಭಂಗಿಯಲ್ಲಿ ಮಲಗಿಸಿದರೆ ಸೂಕ್ತ ಎಂಬುದನ್ನು ಪ್ರತಿ ತಾಯಂದಿರೂ ಅರಿತುಕೊಂಡಿರಬೇಕಾದ ವಿಷಯವಾಗಿದೆ.

ಇಂದಿನ ಲೇಖನದಲ್ಲಿ ಈ ಕುರಿತು ಕೆಲವು ಮಹತ್ವದ ಸಂಗತಿಗಳನ್ನು ವಿವರಿಸಲಾಗಿದೆ. ಇನ್ನೂ ಒಂದು ವರ್ಷವೂ ತುಂಬಿರದ ಮಕ್ಕಳನ್ನು ಸದಾ ಬೆನ್ನ ಮೇಲೆ ಮಲಗಿಸುವುದೇ ಅತ್ಯಂತ ಸೂಕ್ತವಾದ ವಿಧಾನವಾಗಿದ್ದು ಸಿಡ್ಸ್ ಎದುರಾಗುವ ಸಂಭವವನ್ನು ಇಲ್ಲವಾಗಿಸಬಹುದು. ಅಷ್ಟೇ ಅಲ್ಲ, ಯಾವ ಭಂಗಿಯಲ್ಲಿ ಮಲಗಿಸಿದರೆ ಅಪಾಯ ಹೆಚ್ಚಾಗುತ್ತದೆ ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ, ಬನ್ನಿ ನೋಡೋಣ:

1. ಬೆನ್ನ ಮೇಲೆ ಮಲಗುವ ಭಂಗಿ

1. ಬೆನ್ನ ಮೇಲೆ ಮಲಗುವ ಭಂಗಿ

ಒಂದು ವರ್ಷ ತುಂಬುವ ಮುನ್ನ ಮಗುವನ್ನು ಸದಾ ಬೆನ್ನ ಮೇಲೆ ಮಲಗಿಸಬೇಕು. ಹಾಸಿಗೆಯ ಮೇಲೆ ಮಲಗಿಸುವಾಗ, ಮಡಿಲಲ್ಲಿ ಮಲಗಿಸಿಕೊಳ್ಳುವಾಗ ಅಥವಾ ಇತರ ಸ್ಥಳಕ್ಕೆ ಹೋದಾಗ ಮಗುವನ್ನು ಅಲ್ಪಕಾಲದವರೆಗೆ ಮಲಗಿಸಿದಾಗ ಅಥವಾ ತೊಟ್ಟಿಲಲ್ಲಿ ತೂಗುವಾಗ ಮತ್ತು ರಾತ್ರಿ ಮಲಗಿಸುವಾಗ ಬೆನ್ನ ಮೇಲೆಯೇ ಮಲಗಿಸಬೇಕು. ಈ ಹಂತದಲ್ಲಿ ಮಲಗಿದ್ದಾಗ ಮಗು 'ಸಿಡ್ಸ್' ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆಯಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಲಗಿದ್ದಾಗ ಮೂಗು ಮೇಲಿದ್ದು ಉಸಿರಾಟ ಸರಾಗವಾಗಿರುವುದು. ಮಗು ಹೀಗೆ ಮಲಗಿದ್ದಾಗಲೇ ಅತಿ ಸುರಕ್ಷಿತವಾಗಿರುತ್ತದೆ ಎಂದು ಅಮೇರಿಕಾದ ರಾಷ್ಟ್ರೀಯ ಮಕ್ಕಳ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ಸಂಸ್ಥೆ NICHD- (The US National Institute of Child Health and Human Development) ತಿಳಿಸಿದೆ. ಆದರೆ ಹೀಗೆ ದೀರ್ಘಕಾಲದವರೆಗೆ ಮಲಗಿಸಿಯೇ ಇರಬಾರದು. ಹೀಗಾದರೆ positional plagiocephaly ಅಥವಾ ತಲೆಬುರುಡೆ ತಿರುಚಲ್ಪಟ್ಟು ಹಿಂಭಾಗ ಚಪ್ಪಟೆಯಾಗಿರುವ ಪೊಪ್ಪಾಯಿಯಂತಹ ಬೆಳವಣಿಗೆ ಪಡೆಯುತ್ತದೆ. ತಲೆಯ ಆಕಾರ ಗುಂಡಗಿರುವುದನ್ನು ತಾಯಿ ಆಗಾಗ ಪರಿಶೀಲಿಸುತ್ತಲೇ ಇರಬೇಕು. ಅಲ್ಪ ಪ್ರಮಾಣದ ತಿರುಚುವಿಕೆ ಒಂದು ವರ್ಷದಲ್ಲಿ ತಾನೇ ತಾನಾಗಿ ಸರಿಹೋಗುತ್ತದೆ. ಒಂದು ವೇಳೆ ಈ ಪರಿಯ ಬೆಳವಣಿಗೆ ಹೆಚ್ಚಾಗಿದ್ದುದು ಕಂಡುಬಂದರೆ ಇದಕ್ಕೆ ತಜ್ಞರ ಚಿಕಿತ್ಸೆಯೇನೂ ಬೇಕಾಗಿಲ್ಲ, ಬದಲಿಗೆ ಅನುಭವಿ ಹಿರಿಯ ದಾದಿಯರು ಅಥವಾ ಸೂಲಗಿತ್ತಿಯರು ಆಗಾಗ ಮಗುವಿನ ತಲೆಯನ್ನು ಎಣ್ಣೆಯ ಜೊತೆ ಕೊಂಚ ಒತ್ತಡ ಹೇರುವ ಮೂಲಕ ಸರಿಪಡಿಸಬಲ್ಲರು.

ಇದರ ಹೊರತಾಗಿ ತಾಯಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:

ಇದರ ಹೊರತಾಗಿ ತಾಯಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:

* ಮಗು ಎಚ್ಚರಿದ್ದಾಗಿನ ಸಮಯದಲ್ಲಿ ಹೊಟ್ಟೆಯ ಮೇಲೆ ಮಲಗಿರುವ ಭಂಗಿಯ ಸಮಯವನ್ನು ಸಾಕಷ್ಟು ಹೆಚ್ಚಿಸಬೇಕು

* ಯಾವ ಬದಿಯಲ್ಲಿ ತಲೆಯ ಗಾತ್ರ ಹೊರಗಿದೆಯೋ ಆ ಭಾಗದ ಮೇಲೆ ಭಾರ ಬರುವಂತೆ, ಅಂದರೆ ಚಪ್ಪಟೆ ಇರುವ ಭಾಗದ ವಿರುದ್ದ ಭಾಗ ದಿಂಬಿನ ಮೇಲೆ ಬರುವಂತೆ ಮಲಗಿಸಬೇಕು

* ಮಗುವಿನ ತಳ್ಳುಗಾಡಿ ಅಥವಾ ಕಾರಿನ ಚೈಲ್ಡ್ ಸೀಟ್ ನಲ್ಲಿ ಹೆಚ್ಚು ಹೊತ್ತು ಮಗು ಕಳೆಯದಂತೆ ನೋಡಿಕೊಳ್ಳಬೇಕು

* ಮಗುವನ್ನು ಎದೆಗವಚಿಕೊಳ್ಳುವ ಸಮಯವನ್ನು ಹೆಚ್ಚಿಸಬೇಕು

* ತೊಟ್ಟಿಲಲ್ಲಿ ಮಲಗಿಸಿದಾಗ ಮಗುವನ್ನು ಒಂದೇ ಸ್ಥಿತಿಯಲ್ಲಿ ಮಲಗಿಸದೇ ಆಗಾಗ ಸ್ಥಾನವನ್ನು ಬದಲಿಸುತ್ತಿರಬೇಕು. ಸದಾ ಒಂದೇ ಕಡೆ ಇದ್ದರೆ ಮಗುವಿಗೆ ಸದಾ ಒಂದೇ ಬಗೆಯ ನೋಟದಿಂದ ಬೇಸರ ಎದುರಾಗಬಹುದು.

2. ಹೊಟ್ಟೆಯ ಮೇಲೆ ಮಲಗುವ ಭಂಗಿ

2. ಹೊಟ್ಟೆಯ ಮೇಲೆ ಮಲಗುವ ಭಂಗಿ

ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಿ ನಿದ್ದೆ ಮಾಡುವ ಭಂಗಿಯನ್ನು ತಪ್ಪು ಎಂದು ಹಲವಾರು ಅಧ್ಯಯನಗಳು ತಿಳಿಸುತ್ತವೆ. ಏಕೆಂದರೆ:

* ಮಗುವಿನ ದವಡೆಯ ಮೇಲೆ ಒತ್ತಡ ಬೀರುತ್ತದೆ.

* ಮೂಗಿನಿಂದ ಉಸಿರೆಳೆದುಕೊಳ್ಳಲು ಕಷ್ಟಕರವಾಗಿ ಉಸಿರಾಟ ಕಷ್ಟಕರವಾಗಬಹುದು

* ಮೂಗಿನಿಂದ ಹೊರಗೆ ಬಿಟ್ಟ ಗಾಳಿಯನ್ನೇ ಮತ್ತೆ ಒಳಗೆಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.

* ಒಂದು ವೇಳೆ ಹಾಸಿಗೆ ಮೆತ್ತಗಿದ್ದರೆ, ಹೊಟ್ಟೆಯ ಮೇಲೆ ಮಲಗಿದಾಗ ಮುಖದಡಿಯ ಭಾಗದ ಹಾಸಿಗೆ ತಳಕ್ಕಿಳಿದು ಮಗುವಿಗೆ ಉಸಿರಾಟ ಅಸಾಧ್ಯವಾಗಿಸಬಹುದು.

* ಹಾಸಿಗೆ ಮತ್ತು ಹೊದಿಕೆಗಳಲ್ಲಿ ಆಶ್ರಯ ಪಡೆದಿದ್ದ ಸೂಕ್ಷ್ಮಜೀವಿಗಳು ಸುಲಭವಾಗಿ ಮೂಗಿನ ಮೂಲಕ ಮಗುವಿನ ದೇಹಕ್ಕೆ ಪ್ರವೇಶ ಪಡೆದುಕೊಳ್ಳಬಹುದು.

ಹಾಗಾದರೆ ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಲೇ ಬಾರದೇ?

ಹಾಗಾದರೆ ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಲೇ ಬಾರದೇ?

ಮಗುವನ್ನು ಹೊಟ್ಟೆಯ ಮೇಲೆ ನಿದ್ರಿಸುವ ಸಲುವಾಗಿ ಮಲಗಿಸಬಾರದೆಯೋ ಹೊರತು ಮಗು ಎಚ್ಚರವಿದ್ದಾಗ ಮಲಗಿಸಬೇಕು. ಅಷ್ಟಲ್ಲದೇ ಎಚ್ಚರಾಗಿದ್ದಾಗ ಹೊಟ್ಟೆಯ ಮೇಲೆ ಕೊಂಚ ಹೊತ್ತು ಮಲಗಿಸಿದ್ದರೆ ತಲೆ ಎತ್ತಲು ಮತ್ತು ಕೈಗಳನ್ನು ಬಳಸಿ ಎದ್ದು ನಿಲ್ಲಲು ನಡೆಸುವ ಪ್ರಯತ್ನ ಮಗುವಿನ ಶರೀರಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಆರೋಗ್ಯ ಕಾರಣಗಳಿಂದ ಒಂದು ವೇಳೆ ಯಾವುದೋ ಕಾರಣಕ್ಕೆ ಹೊಟ್ಟೆಯ ಮೇಲೆ ಮಲಗಿಸುವುದು ಅನಿವಾರ್ಯವಾದರೆ ವೈದ್ಯರೇ ಇದನ್ನು ಸೂಚಿಸುತ್ತಾರೆ ಹಾಗೂ ಕಾಳಜಿ ವಹಿಸುವ ಕ್ರಮಗಳನ್ನೂ ಕೈಗೊಳ್ಳುತ್ತಾರೆ. ಮಕ್ಕಳಿಗೆ ಎದುರಾಗುವ ಹುಳಿತೇಗು ಅಥವಾ ಮೂಗಿನ ಮೇಲ್ಭಾಗದ ಶ್ವಾಶದ್ವಾರದ ತೊಂದರೆಯಾದ Pierre Robin Syndrome ಎಂಬ ಸ್ಥಿತಿ ಎದುರಾಗದೇ ಇರಲು ಮಕ್ಕಳು ಹೊಟ್ಟೆಯ ಮೇಲೆ ಮಲಗುವುದೇ ಉತ್ತಮ ಎಂದು ಕೆಲವು ವೈದ್ಯರು ಅಭಿಪ್ರಾಯ ಪಡುತ್ತಾರೆ. ಆದರೆ ಈ ಅಭಿಪ್ರಾಯವನ್ನು ಇದುವರೆಗೆ ಯಾವುದೇ ಸಂಶೋಧನೆ ದೃಢೀಕರಿಸಿಲ್ಲ. ಹಾಗಾಗಿ, ಒಂದು ವೇಳೆ ಯಾವುದೇ ವೈದ್ಯರು ಅಥವಾ ಚಿಕಿತ್ಸಕರು ಈ ಭಂಗಿಯಲ್ಲಿ ಮಲಗಿಸಬೇಕೆಂದು ಸಲಹೆ ಮಾಡಿದರೆ ಇದರಿಂದ ಆಗುವ ಪ್ರಯೋಜನಗಳೇನು ಮತ್ತು ಏಕಾಗಿ ಸಲಹೆ ಮಾಡುತ್ತಿದ್ದೇವೆ ಎಂಬುದನ್ನು ಖಚಿತಪಡಿಸಬೇಕು.

ಹೊಟ್ಟೆಯ ಮೇಲೆ ಮಲಗಿಸಿದಾಗ ಎದುರಾಗುವ ಅಪಾಯಗಳು

ಹೊಟ್ಟೆಯ ಮೇಲೆ ಮಲಗಿಸಿದಾಗ ಎದುರಾಗುವ ಅಪಾಯಗಳು

ಅತಿ ಸಾಮಾನ್ಯ ತೊಂದರೆ ಎಂದರೆ ಮಗು ನಿದ್ದೆಯಲ್ಲಿಯೇ ವಾಂತಿ ಮಾಡಿಕೊಳ್ಳುವುದು. ವೈದ್ಯರ ಪ್ರಕಾರ ಒಂದು ವೇಳೆ ಮಗು ರಾತ್ರಿ ಮಲಗಿದಾಗ ವಾಂತಿ ಮಾಡಿಕೊಳ್ಳುವುದಾದರೆ ಹೊಟ್ಟೆಯ ಮೇಲೆ ಮಲಗುವುದು ಸುರಕ್ಷಿತವಾಗಿದೆ. ಹೀಗಾದಾಗ ವಾಂತಿ ಬಾಯಿಯಿಂದ ಹೊರಹೋಗುತ್ತದೆ ಹಾಗೂ ಶ್ವಾಸದ್ವಾರವನ್ನು ಅಡ್ಡಲಾಗಿಸುವುದಿಲ್ಲ. ಅದೇ ಬೆನ್ನ ಮೇಲೆ ಮಲಗಿದ್ದ ಮಗು ರಾತ್ರಿ ನಿದ್ದೆಯಲ್ಲಿಯೇ ವಾಂತಿ ಮಾಡಿಕೊಂಡರೆ ಇದು ಬಾಯಿಯಲ್ಲಿಯೇ ಉಳಿದು ಶ್ವಾಸಮಾರ್ಗದ ಮೂಲಕ ಶ್ವಾಸಕೋಶಕ್ಕೆ ನುಗ್ಗುವ ಅಪಾಯವಿರುತ್ತದೆ. ಮಗುವಿನ ಶರೀರ ಈ ಪ್ರಕ್ರಿಯೆಗೆ ವಿರುದ್ಧ ಪ್ರತಿಕ್ರಿಯೆ ತೋರುವಷ್ಟು ಬಲಗೊಂಡಿರದ ಕಾರಣ ತಾನಾಗಿಯೇ ತಲೆಯನ್ನು ಎತ್ತಲು ಸಾಧ್ಯವಾಗುವುದಿಲ್ಲ. ಆದರೆ ಹೀಗಾಗುವುದು ಅಪರೂಪ, ಏಕೆಂದರೆ ಮಗು ರಾತ್ರಿ ಮಲಗಿದ್ದಾಗ ವಾಂತಿ ಬಂದರೂ ತನ್ನ ತಲೆಯನ್ನು ಅಡ್ಡಲಾಗಿ ವಾಲಿಸುವಷ್ಟು ಬಲ ಪಡೆದಿರುತ್ತದೆ ಹಾಗೂ ವಾಂತಿ ಕುತ್ತಿಗೆಯ ಮೇಲೆ ಬೀಳುತ್ತದೆ. ಹೀಗಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಕಡಿಮೆ.

ಕೆಲವೊಮ್ಮೆ, ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡಿದ್ದಾಗ ಮಗು ರಚ್ಚೆ ಹಿಡಿದು ಅಳುತ್ತದೆ ಮತ್ತು ಸುಲಭವಾಗಿ ಇದರ ಅಳು ನಿಲ್ಲುವುದಿಲ್ಲ. ಅನುಭವಿ ತಾಯಂದಿರು ಈ ಅಳುವನ್ನು ಕ್ಷಣಮಾತ್ರದಲ್ಲಿ ಗುರುತಿಸುತ್ತಾರೆ. ವಾಸ್ತವದಲ್ಲಿ ಹೊಟ್ಟೆಯೊಳಗಿನ ವಾಯು ಹೊರಬರದೇ ಮಗು ಅಳುತ್ತಿರುತ್ತದೆ. ಏಕೆಂದರೆ ಬೆನ್ನ ಮೇಲೆ ಮಲಗಿರುವ ಭಂಗಿಯಲ್ಲಿ ವಾಯು ಹೊರಹೋಗಲು ಸುಲಭವಾಗುವುದಿಲ್ಲ. ಹೀಗಾದಾಗ ತಾಯಿ ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಿ ನಯವಾಗಿ ಬೆನ್ನ ಭಾಗವನ್ನು ಒತ್ತಬೇಕು. ಶೀಘ್ರವೇ ವಾಯು ಹೊರಬಂದು ಮಗು ಅಳುವನ್ನು ನಿಲ್ಲಿಸುತ್ತದೆ. ಆದರೆ ಈ ಕ್ರಮವನ್ನು ಮಗುವಿಗೆ ಹಾಲುಣಿಸಿದ ಬಳಿಕ ತಕ್ಷಣವೇ ಎಂದೂ ಮಾಡಬಾರದು. ಅಲ್ಲದೇ, ಮಗುವನ್ನು ಹಾಲೂಡಿಸಿದ ತಕ್ಷಣವೇ ಮಲಗಿಸಬಾರದು. ಆಹಾರ ಸೇವನೆಯ ಕೊಂಚ ಹೊತ್ತಿನ ಬಳಿಕವೇ ಮಲಗಿಸಬೇಕು.

3. ಒಂದು ಪಕ್ಕದಲ್ಲಿ ಮಲಗುವುದು

3. ಒಂದು ಪಕ್ಕದಲ್ಲಿ ಮಲಗುವುದು

ಮಗು ಯಾವುದೇ ಮಗ್ಗುಲಲ್ಲಿ ಮಲಗಿದರೂ ಇದು ಆರೋಗ್ಯಕ್ಕೆ ಮಾರಕವಾಗಿದೆ. ಏಕೆಂದರೆ ಈ ಭಂಗಿಯಲ್ಲಿ ದೇಹದ ಮುಖ್ಯ ಅಂಗಗಳ ಮೇಲೆ ಒತ್ತಡ ಬಿದ್ದು ಸಿಡ್ಸ್ ಎದುರಾಗುವ ಸಾಧ್ಯತೆ ಹೆಚ್ಚುತ್ತದೆ.

ಮಗುವನ್ನು ಸುರಕ್ಷಿತವಾಗಿ ಮಲಗಿಸುವ ಭಂಗಿಗಳ ಬಗ್ಗೆ ಅರಿತುಕೊಳ್ಳುವ ಜೊತೆಗೇ ಯಾವ ಭಂಗಿಗಳಿಂದ ಸಿಡ್ಸ್ ಎದುರಾಗುವ ಸಾಧ್ಯತೆಗಳಿರುತ್ತವೆ ಎಂಬುದನ್ನೂ ತಿಳಿದುಕೊಂಡಿರುವುದು ಅಗತ್ಯ.

ವಾಸ್ತವದಲ್ಲಿ ಸಿಡ್ಸ್ ಎಂಬುದು ಸುಡಿ (Sudden Unexpected Death In Infancy (SUDI) ಅಥವಾ ಅನಿರೀಕ್ಷಿತ ಶಿಶುಗಳು ಮರಣಕ್ಕೊಳಗಾಗುವುದು ಎಂಬ ಕಾಯಿಲೆಯ ಒಂದು ಭಾಗವಾಗಿದೆ.

’ಸುಡಿ’ ಎದುರಾಗದೇ ಇರಲು ಮಕ್ಕಳನ್ನು ಮಲಗಿಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ:

’ಸುಡಿ’ ಎದುರಾಗದೇ ಇರಲು ಮಕ್ಕಳನ್ನು ಮಲಗಿಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ:

* ಎಂದಿಗೂ ಮಕ್ಕಳನ್ನು ಎಡ ಅಥವಾ ಬಲ ಮಗ್ಗುಲಲ್ಲಿ ಮಲಗಿಸಬಾರದು

* ಮಕ್ಕಳನ್ನು ಅತಿಯಾದ ಮೃದುವಾಗಿರುವ ಹಾಸಿಗೆಗಳ ಮೇಲೆ ಮಲಗಿಸಬಾರದು.

* ಮಲಗಬಾರದ ಸ್ಥಳಗಳಲ್ಲಿಯೂ ಮಲಗಿಸಬಾರದು. ಉದಾಹರಣೆಗೆ ಸೋಫಾ, ನೀರಿನ ಹಾಸಿಗೆ, ದಿಂಬಿನ ಮೇಲೆ ಅಥವಾ ನೆಲದ ಕಂಬಳಿಯ ಮೇಲೆ. ಅದರಲ್ಲೂ ಉದ್ದನೆಯ ಕೂದಲುಗಳಿರುವ ಕಂಬಳಿಗಳು (ಪ್ರಾಣಿಗಳ ಚರ್ಮದ ಉತ್ಪನ್ನಗಳು) ಅತೀವ ಮಾರಕವಾಗಿವೆ. ಈ ಸ್ಥಳಗಳಲ್ಲಿ, ತಾಯಿ ಹತ್ತಿರ ಇದ್ದರೂ ಸರಿ, ಇರದಿದ್ದರೂ ಸರಿ, ಮಗುವನ್ನು ಮಲಗಿಸಬಾರದು.

* ಮಗುವಿಗೆ ಹೊದಿಸುವ ಹೊದಿಗೆ ಕುತ್ತಿಗೆಯ ಮಟ್ಟಕ್ಕಿಂತ ಮೇಲಿರಬಾರದು. ಏಕೆಂದರೆ ಅಕಸ್ಮಿಕವಾಗಿ ಹೊದಿಕೆ ಮೂಗಿಗೆ ಅಡ್ಡವಾಗಿ ಉಸಿರಾಟಕ್ಕೆ ತೊಂದರೆಯುಂಟುಮಾಡಬಹುದು.

* ಗರ್ಭಾವಸ್ಥೆಯಲ್ಲಿದ್ದಾಗಲಾಗಲೀ, ಮಗು ಹತ್ತಿರವಿದ್ದಾಗಲಾಗಲೀ ತಾಯಿ ಎಂದಿಗೂ ಧೂಮಪಾನ ಮಾಡಬಾರದು, ಅಷ್ಟೇ ಅಲ್ಲ ಮಗು ಇರುವ ಸ್ಥಳದಲ್ಲಿ ಇತರರೂ ಧೂಮಪಾನ ಮಾಡದಂತೆ ಕ್ರಮ ಕೈಗೊಳ್ಳಬೇಕು. ಕೇವಲ ಸಿಗರೇಟಿನ ಧೂಮ ಮಾತ್ರವಲ್ಲ, ಅಗರಬತ್ತಿ, ಸೊಳ್ಳೆಬತ್ತಿ ಮೊದಲಾದ ಹೊಗೆಗಳೂ ಮಗುವಿನ ಸೂಕ್ಷ್ಮ ಶ್ವಾಸಕೋಶಗಳಿಗೆ ಮಾರಕವಾಗಿವೆ.

ಮಗುವಿನ ಸುರಕ್ಷಿತ ನಿದ್ದೆಗಾಗಿ ಕೈಗೊಳ್ಳಬೇಕಾದ ಕೆಲವು ಸಲಹೆಗಳು

ಮಗುವಿನ ಸುರಕ್ಷಿತ ನಿದ್ದೆಗಾಗಿ ಕೈಗೊಳ್ಳಬೇಕಾದ ಕೆಲವು ಸಲಹೆಗಳು

ಮಗುವಿಗೆ ಒಂದು ವರ್ಷವಾಗುವವರೆಗೆ ಬೆನ್ನ ಮೇಲೆ ಮಲಗಿಸುವುದೇ ಅತಿ ಸೂಕ್ತವಾದ ಭಂಗಿಯಾಗಿದೆ. ಇದರ ಹೊರತಾಗಿ ನೀವು ಕೈಗೊಳ್ಳಬೇಕಾದ ಕ್ರಮಗಳೆಂದರೆ:

* ಸಡಿಲವಾಗಿರುವ ಅಥವಾ ಬಿಡಿಬಿಡಿಯಾಗಿರುವ ಹಾಸಿಗೆಯನ್ನು ಬಳಸದಿರಿ. ಅತಿ ಮೃದುವೂ ಅಲ್ಲದ, ಅತಿ ಗಟ್ಟಿಯೂ ಅಲ್ಲದ ಹತ್ತಿಯ ಹಾಸಿಗೆ ಉತ್ತಮ. ನೀರಿನ ಹಾಸಿಗೆ ಅಥವಾ ಸೋಫಾ ಮೊದಲಾದವು ಮಗುವಿಗೆ ಸೂಕ್ತವಲ್ಲ. ಅಲ್ಲದೇ ಮಗುವಿಗೆ ಅತ್ಯಂತ ಮೃದುವಾಗಿರುವ ಹಾಸಿಗೆ, ದಿಂಬು ಅಥವಾ ಹತ್ತಿ ತುಂಬಿದ ಪ್ರಾಣಿಗಳ ಗೊಂಬೆಗಳು ಮೊದಲಾದವುಗಳನ್ನು ನಿದ್ದೆಯ ಸಮಯದಲ್ಲಿ ಬಳಸದಂತೆ ತಜ್ಞರು ಸಲಹೆ ಮಾಡುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮಗುವಿಗೆ ನಿದ್ದೆ ಬಂದ ಬಳಿಕ ಮಗುವಿನ ಮುಖ ಅಥವಾ ತಲೆಯನ್ನು ಆವರಿಸುವ ಯಾವುದೇ ಬಗೆಯ ಬಟ್ಟೆ ಬೇಡ.

* ತೊಟ್ಟಿಲು ಸರಳವಾಗಿರಲಿ. ತೊಟ್ಟಿಲಲ್ಲಿದ್ದಾಗ ಮಗುವಿನ ಅಕ್ಕ ಪಕ್ಕದಲ್ಲಿ ದಿಂಬು, ದಪ್ಪನೆಯ ಹೊದಿಕೆ, ತೆಳು ಹಾಸಿಗೆ ಮೊದಲಾದ ಯಾವುದನ್ನೂ ಇರಿಸದಿರಿ. ತೊಟ್ಟಿಲ ಒಳಭಾಗದಲ್ಲಿ ತಳವನ್ನು ಪೂರ್ಣವಾಗಿ ಆವರಿಸುವಂತೆ ಹಾಸಿಗೆಯನ್ನು ಹಾಸಿ. ಇದರ ಹೊರತಾಗಿ ಇತರ ದಿಂಬು ಹೊದಿಕೆಗಳನ್ನಿರಿಸಿದರೆ ಮಗುವಿಗೆ ಹೊರಳಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಹಾಸಿಗೆಯ ಮೆಲೆ ಹೊದಿಸುವ ಹೊದಿಕೆ ಸಡಿಲವಾಗಿರದೇ ಹಾಸಿಗೆಯ ಅಗಲಕ್ಕೂ ಮೀರಿದ ಭಾಗ ಹಾಸಿಗೆಯ ಅಡಿಭಾಗದಲ್ಲಿ ಸಿಲುಕಿಸಿ ಸುಲಭವಾಗಿ ಹೊದಿಗೆ ಹೊರಬರದಂತೆ ನೋಡಿಕೊಳ್ಳಬೇಕು. ಹಾಸಿಗೆಯ ಅಗಲಕ್ಕೂ ಹೆಚ್ಚೇ ಅಗಲವಿರುವ ಹೊದಿಕೆಯನ್ನೇ ಆಯ್ದುಕೊಂಡು ಹೆಚ್ಚಿನ ಭಾಗ ಹಾಸಿಗೆಯ ಅಡಿಯಲ್ಲಿ ಸಿಲುಕಿಸುವ ಮೂಲಕ ಮಗುವಿನ ಹೊರಳಾಟಕ್ಕೆ ಸುಲಭವಾಗಿ ಹೊರಬರದಂತೆ ಮಾಡಿ. ಅಲ್ಲದೇ ತೊಟ್ಟಿಲ ಅಂಚುಗಳ ಎತ್ತರ ಮಗು ಸುಲಭವಾಗಿ ಹತ್ತಿ ಹೋಗದಷ್ಟು ಇರಬೇಕು.

ಮಗುವಿನ ಸುರಕ್ಷಿತ ನಿದ್ದೆಗಾಗಿ ಕೈಗೊಳ್ಳಬೇಕಾದ ಕೆಲವು ಸಲಹೆಗಳು

ಮಗುವಿನ ಸುರಕ್ಷಿತ ನಿದ್ದೆಗಾಗಿ ಕೈಗೊಳ್ಳಬೇಕಾದ ಕೆಲವು ಸಲಹೆಗಳು

* ಮಗುವಿನ ತಲೆಯನ್ನು ಎಂದಿಗೂ ಹೊದಿಕೆಯಿಂದ ಆವರಿಸದಿರಿ: ಹೊದಿಕೆ ಏನಿದ್ದರೂ ಮಗುವಿನ ಎದೆಯ ಮಟ್ಟಕ್ಕೆ ಮಾತ್ರವೇ ಬರಬೇಕೇ ವಿನಃ ಎಂದಿಗೂ ಕುತ್ತಿಗೆಯ ಮಟ್ಟಕ್ಕೂ ಬರಬಾರದು. ಮಗುವಿಗೆ ಹೊದಿಸಲು ಉತ್ತಮ ಭಂಗಿ ಎಂದರೆ ಮಗು ಎರಡೂ ಕೈಗಳನ್ನು ಅಕ್ಕ ಪಕ್ಕ ಚಾಚಿ ಮಲಗಿದ್ದಾಗ ಹೊದಿಕೆಯ ಅಂಚು ಎದೆಯ ನಡುಮಟ್ಟಕ್ಕೆ ಇರುವಷ್ಟು ಎಳೆದರೆ ಸಾಕು. ಇದರಿಂದ ಮಲಗಿರುವ ಹೊತ್ತಿನಲ್ಲಿ ತಲೆಯ ಮೇಲೆ ಹೊದಿಕೆ ಹೊದ್ದು ಉಸಿರಾಟಕ್ಕೆ ಸಂಚಕಾರವಾಗುವುದನ್ನು ತಪ್ಪಿಸಬಹುದು. ಅಮೇರಿಕಾದ ಶಿಶುತಜ್ಞರ ಅಕಾಡೆಮಿಯ ಪ್ರಕಾರ ಈ ಕಾರ್ಯಕ್ಕೆಂದೇ ನಿರ್ಮಿಸಲಾಗಿರುವ 'ಸ್ಲೀಪಿಂಗ್ ಸ್ಯಾಕ್' ಅಥವಾ 'ಬೇಬಿ ಸ್ಲೀಪ್ ಬ್ಯಾಗ್' ಎಂಬ ಉತ್ಪನ್ನಗಳನ್ನು ಬಳಸಬಹುದು. ಇವು ಮಗುವನ್ನು ಬೆಚ್ಚಗಿರಿಸುವ ಜೊತೆಗೇ ತಲೆಯನ್ನು ಆವರಿಸದೇ ಸುರಕ್ಶಿತವಾಗಿವೆ. ಮಲಗುವ ಮುನ್ನ ಮಗುವನ್ನು ಹತ್ತಿಯ ಅಥವಾ ಮಸ್ಲಿನ್ ಬಟ್ಟೆಯಿಂದ ಸುತ್ತಿ ಮಲಗಿಸುವ ಮೂಲಕವೂ ನಿದ್ದೆಯ ಸಮಯದಲ್ಲಿ ಹೊಟ್ಟೆಯ ಮೇಲೆ ಹೊರಳುವುದನ್ನು ತಪ್ಪಿಸಬಹುದು.

* ಅತಿಯಾಗಿ ಕೋಣೆಯನ್ನು ಬೆಚ್ಚಗಾಗಿಸದಿರಿ: ರಾತ್ರಿ ಮಲಗುವಾಗ ಮಗುವಿನ ಬಟ್ಟೆಗಳು ಸಾಧ್ಯವಿದ್ದಷ್ಟು ಸಡಿಲವಿರಬೇಕು. ಬೆಚ್ಚಗಿರಲಿ ಎಂದು ಅತಿ ಹೆಚ್ಚು ಬಟ್ಟೆಗಳನ್ನು ಹೇರದಿರಿ. ಆಗಾಗ ಮಗುವಿನ ಮೈ ಮುಟ್ಟುತ್ತಾ ತಾಪಮಾನ ಸೂಕ್ತ ಮಟ್ಟದಲ್ಲಿದೆ ಎಂದು ಖಾತ್ರಿಗೊಳಿಸಿ.

* ರಾತ್ರಿ ಮಲಗುವ ವಾತಾವರಣ ಶಾಂತವಾಗಿರಲಿ: ಕೋಣೆಯ ತಾಪಮಾನ ಅತಿ ಕಡಿಮೆಯೂ ಅಲ್ಲ, ಅತಿ ಹೆಚ್ಚೂ ಅಲ್ಲ ಎನ್ನುವಂತಿರಲಿ. ಇಪ್ಪತ್ತು ಡಿಗ್ರಿ ಇದ್ದರೆ ಇದು ಉತ್ತಮವಾಗಿದೆ. ಅಲ್ಲದೇ ಅನಗತ್ಯ ಸದ್ದು ಗದ್ದಲವಿರದೇ ಶಾಂತ ವಾತಾವರಣವಿರುವಂತೆ ನೋಡಿಕೊಳ್ಳಿ.

ಮಗುವಿನ ಸುರಕ್ಷಿತ ನಿದ್ದೆಗಾಗಿ ಕೈಗೊಳ್ಳಬೇಕಾದ ಕೆಲವು ಸಲಹೆಗಳು

ಮಗುವಿನ ಸುರಕ್ಷಿತ ನಿದ್ದೆಗಾಗಿ ಕೈಗೊಳ್ಳಬೇಕಾದ ಕೆಲವು ಸಲಹೆಗಳು

* ಅಮೇರಿಕಾದ ಶಿಶುತಜ್ಞರ ಅಕಾಡೆಮಿಯ ಪ್ರಕಾರ ಸಿಡ್ಸ್ ಎದುರಾಗದಂತೆ ನೋಡಿಕೊಳ್ಳಲು ಪೇಸಿಫೈಯರ್ ಅಥವಾ ನಿಪ್ಪಲು ನೀಡಬಹುದು. ಆದರೆ ಮಗುವಿಗೆ ಇಷ್ಟವಿಲ್ಲದೇ ಅಥವಾ ಮಗು ಮಲಗಿದ್ದಾಗ ಬಾಯಿಯಿಂದ ಹೊರಬಿದ್ದರೆ ಮತ್ತೆ ಬಾಯಿಗೆ ತುರುಕಿಸದಿರಿ. ಒಂದು ವೇಳೆ ಮಗುವಿನ್ನೂ ತಾಯಿಹಾಲನ್ನೇ ಕುಡಿಯುತ್ತಿದ್ದರೆ ಅನಗತ್ಯವಾಗಿ ನಿಪ್ಪಲು ನೀಡದಿರಿ. ತಾಯಿಹಾಲು ಕುಡಿಯುವ ಪ್ರಮಾಣ ಕೊಂಚ ಕಡಿಮೆಯಾದ ಬಳಿಕವೇ ನಿಪ್ಪಲು ಕೊಡಲು ಪ್ರಾರಂಭಿಸಿ. ಸಾಮಾನ್ಯವಾಗಿ ಮಗು ತಾಯಿಹಾಲನ್ನು ಸರಾಗವಾಗಿ ಕುಡಿಯಲು ಪ್ರಾರಂಭಿಸಲು ಜನನದಿಂದ ಸುಮಾರು ಮೂರರಿಂದ ನಾಲ್ಕು ವಾರಗಳೇ ಬೇಕಾಗಬಹುದು.

* ತಾಯಿ ಇರುವ ಕೋಣೆಯಲ್ಲಿಯೇ ಮಗುವನ್ನು ಮಲಗಿಸಿ, ತೊಟ್ಟಿಲೂ ಇಲ್ಲೇ ಇರಲಿ: ಮಗುವಿಗೆ ಅಗತ್ಯವಿರುವಾಗಲೆಲ್ಲಾ ತಾಯಿಹಾಲು ಕುಡಿಸಲು ಸಾಧ್ಯವಾಗುವಂತೆ ಒಂದೇ ಕೋಣೆಯಲ್ಲಿ ಮಗುವನ್ನು ಮಲಗಿಸಿಕೊಳ್ಳಿ. ಮಗು ಮಲಗುವ ತೊಟ್ಟಿಲು ಸಹಾ ತಂದೆತಾಯಿಯರ ಕೋಣೆಯಲ್ಲಿಯೇ ಹತ್ತಿರದಲ್ಲಿಯೇ ಇರಲಿ.

* ಮಗುವನ್ನು ಇತರರು ಮಲಗುವ ಹಾಸಿಗೆಯಲ್ಲಿ ಮಲಗಿಸದಿರಿ: ಸಾಮಾನ್ಯವಾಗಿ ತಾಯಂದಿರು ತಮ್ಮ ಹಾಸಿಗೆಯಲ್ಲಿಯೇ ಮಗುವನ್ನೂ ಮಲಗಿಸುತ್ತಾರೆ ಅಥವಾ ಇತರ ಮಕ್ಕಳೊಂದಿಗೆ ಮಲಗಿಸುತ್ತಾರೆ. ಆದರೆ ತಜ್ಞರ ಪ್ರಕಾರ ಮಗುವಿನ ಹಾಸಿಗೆ ಪ್ರತ್ಯೇಕವಾಗಿರಬೇಕು. ಒಂದು ವೇಳೆ ಅವಳಿ ಜವಳಿ ಮಕ್ಕಳಿದ್ದರೂ ಇಬ್ಬರ ಹಾಸಿಗೆಗಳೂ ಪ್ರತ್ಯೇಕವಾಗಿರಬೇಕು. ತಾಯಿ ಮಲಗುವ ಹಾಸಿಗೆಯಲ್ಲಿ ಮಗುವನ್ನು ಮಲಗಿಸಬಾರದು. ವಿಶೇಷವಾಗಿ ಪತಿಗೆ ಮದ್ಯಪಾನ, ಧೂಮಪಾನ ಅಥವಾ ಗಾಢ ನಿದ್ದೆಗೆ ದೂಡುವ ಔಷಧಿಇಗಳ ಸೇವನೆಯ ಅಭ್ಯಾಸವಿದ್ದರಂತೂ ಇವರೊಂದಿಗೆ ಮಗುವನ್ನೆಂದೂ ಮಲಗಿಸಬಾರದು. ಮಗು ಇರುವ ಕೋಣೆಯಲ್ಲಿ ಧೂಮಪಾನ ಅಥವಾ ಇತರ ಯಾವುದೇ ಮಾದಕ ಪದಾರ್ಥದ ವಾಸನೆ ಗಾಳಿಯಲ್ಲಿದ್ದರೂ ಇದು ಈ ಹಾಸಿಗೆಯಲ್ಲಿ ಮಲಗಿರುವ ಮಗು ಸಿಡ್ಸ್ ಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

English summary

Why Is Sleeping On Back Considered Best For Babies?

The Good And Bad Positions For A Baby To Sleep It is essential to learn about the safe and unsafe sleeping positions for a baby to deal with the above risks.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X