For Quick Alerts
ALLOW NOTIFICATIONS  
For Daily Alerts

ಯಾರು ಬಾಡಿಗೆ ತಾಯಿಯಾಗಬಹುದು? ಬಾಡಿಗೆ ತಾಯಿಗೆ ಎಷ್ಟು ಹಣ ನೀಡಬೇಕು?

|

ಸೆಲೆಬ್ರಿಟಿಗಳು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದರು ಎಂಬ ಸುದ್ದಿಯನ್ನು ಆಗಾಗ ಕೇಳುತ್ತಿರುತ್ತೇವೆ. ಸನ್ನಿಲಿಯೋನ್‌, ಶಿಲ್ಪಾಶೆಟ್ಟಿ, ಗೌರಿ ಖಾನ್‌, ಪ್ರೀತಿ ಜಿಂಟಾ ಹೀಗೆ ಅನೇಕ ಸೆಲೆಬ್ರಿಟಿಗಳು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದಿದ್ದಾರೆ.

ಯಾರು ಬೇಕಾದರೂ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಬಹುದೇ? ಎಂದು ನೋಡುವುದಾದರೆ ಎಲ್ಲರಿಗೆ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಸಾಧ್ಯವಿಲ್ಲ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಭಾರತದಲ್ಲಿ ಕೆಲವೊಂದು ಕಾನೂನುಗಳಿವೆ.

What is Surrogacy

ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಇರುವ ನಿಯಮಗಳೇನು, ಎಷ್ಟು ವೆಚ್ಚ ತಗುಲಬಹುದು ಎಂಬುವುದರ ಬಗ್ಗೆ ತಿಳಿಯೋಣ:

ಬಾಡಿಗೆ ತಾಯಿ ಪಡೆಯಲು ಕಾನೂನು

ಬಾಡಿಗೆ ತಾಯಿ ಪಡೆಯಲು ಕಾನೂನು

2002ರಿಂದ ಭಾರತದ ನಿವಾಸಿಗಳಿಗೆ ಹಾಗೂ ಹೊರಗಿನವರಿಗೆ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನನ್ನು2015ರಲ್ಲಿ ತಿದ್ದುಪಡಿ ಮಾಡಲಾಯಿತು. ಒಂದು ವೇಳೆ ವಿದೇಶಿಯರು ಆಗಿದ್ದರೆ ಅವರು ಭಿನ್ನಲಿಂಗೀಯ ದಂಪತಿಯಾಗಿರಬೇಕು ಹಾಗೂ ಆ ದೇಶದಲ್ಲಿ ಬಾಡಿಗೆ ತಾಯಿ ಪಡೆಯಲು ಅವಕಾಶವಿರಬೇಕು. ಅಂಥವರು ಮಾತ್ರ ಭಾರತದಲ್ಲಿ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದಾಗಿದೆ.

2016 ನವೆಂಬರ್‌ 21ರಿಂದ ಬಂಜೆತನ ಸಮಸ್ಯೆ ಇರುವ ಭಾರತೀಯ ದಂಪತಿಗೆ altruistic ಅಂದ್ರೆ ದುಡ್ಡು ಕೊಡದೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಅನುಮತಿ ನೀಡಿದೆ.

 ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಹೆಚ್ಚಿನವರು ಭಾರತಕ್ಕೆ ಬರುತ್ತಾರೆ

ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಹೆಚ್ಚಿನವರು ಭಾರತಕ್ಕೆ ಬರುತ್ತಾರೆ

ಕಳೆದ ದಶಕಗಳಿಮದ ವಿದೇಶಗಳಿಂದ ದಂಪತಿ ಭಾರತಕ್ಕೆ ಬಂದು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಈ ಕಾರಣಗಳಿಂದಾಗಿ ಭಾರತಕ್ಕೆ ಹೆಚ್ಚಿನವರು ಆಗಮಿಸುತ್ತಿದ್ದಾರೆ.

* ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಗುವನ್ನು ಪಡೆಯಲು ತಗುಲುವ ವೆಚ್ಚ ಐದುಪಟ್ಟು ಕಡಿಮೆ.

* ಮಗು ಜನಸಿದ ಕೂಡಲೇ ಮಗುವನ್ನು ಪಡೆಯಬಹುದಾಗಿದೆ.

ಈಗ ಭಾರತದ ಕಾನೂನು ವಿದೇಶಿಯರಿಗೆ ಭಾರತದಲ್ಲಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಅವಕಾಶ ನೀಡಿಲ್ಲ. ಬಂಜೆತನ ಸಮಸ್ಯೆ ಇರುವ ದಂಪತಿ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಬಹುದಾಗಿದೆ.

 ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿ ಈ ನಿಂಬಂಧನೆಗೆ ಒಳಪಟ್ಟಿರುತ್ತಾರೆ

ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿ ಈ ನಿಂಬಂಧನೆಗೆ ಒಳಪಟ್ಟಿರುತ್ತಾರೆ

* ಬಾಡಿಗೆ ತಾಯಿಯ ಮೂಲಕ ಜನಿಸಿದ ಮಗುವಿನ ಸಂಪೂರ್ಣ ಜವಾಬ್ದಾರಿ ಮಗುವನ್ನು ಪಡೆಯಲು ಬಯಸಿದ ದಂಪತಿಯದ್ದಾಗಿರುತ್ತದೆ.

* ಬಾಡಿಗೆ ತಾಯಿ ಹಾಗೂ ದಂಪತಿ ನಡುವೆ ಕಾನೂನಾತ್ಮಕವಾಗಿ ಒಪ್ಪಿಗೆಯಾಗಿರುತ್ತದೆ.

* ಲೈಸೆನ್ಸ್ ಇರುವ ಕ್ಲಿನಿಕ್‌ನಲ್ಲಿ ಒಪ್ಪಂದಗಳನ್ನು ಮಾಡಲಾಗುವುದು.

* ಬಾಡಿಗೆ ತಾಯಿಗೆ ನೀಡಬೇಕಾದ ಹಣವನ್ನು ಸಂಪೂರ್ಣವಾಗಿ ನೀಡಬೇಕು.

 ಯಾರು ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು?

ಯಾರು ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು?

* ಭಾರತೀಯ ದಂಪತಿ ಅಥವಾ ವಿದೇಶಿ ಭಾರತೀಯ ವ್ಯಕ್ತಿಯನ್ನು ಮದುವೆಯಾಗಿದ್ದರೆ

* ಬಂಜೆತನದ ಸಮಸ್ಯೆ ಇರುವ ಭಿನ್ನಲಿಂಗೀಯ ದಂಪತಿ

* ಮದುವೆಯಾಗಿ 5 ವರ್ಷಗಳಾಗಿರಬೇಕು

ಯಾರು ಬಾಡಿಗೆ ತಾಯಿ ಆಗಬಹುದು?

ಯಾರು ಬಾಡಿಗೆ ತಾಯಿ ಆಗಬಹುದು?

* ಬಾಡಿಗೆ ತಾಯಿಯಾಗುವವಳು ಗಂಡನ ಅನುಮತಿ ಪಡೆದಿರಬೇಕು

* 35 ವರ್ಷ ಅಥವಾ ಅದಕ್ಕಿಂತ ಚಿಕ್ಕ ಪ್ರಾಯದವರಾಗಿರಬೇಕು

* ಕನಿಷ್ಠ ಒಂದು ಮಗುವಿರಬೇಕು.

* ಒಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅವಳಿಗೆ ಗರ್ಭಧಾರಣೆ ತಡೆಗಟ್ಟಲು ಯಾವುದೇ ಅವಕಾಶವಿಲ್ಲ.

FAQ's
  • ಭಾರತದಲ್ಲಿ ಬಾಡಿಗೆ ತಾಯಿಗೆ ಎಷ್ಟು ಹಣ ನೀಡಬೇಕು?

    ಸಾಮಾನ್ಯವಾಗಿ ಬಾಡಿಗೆ ತಾಯಿಗೆ 2 ಲಕ್ಷಣ ಹಣ ನೀಡಬೇಕಾಗುವುದು. ಗರ್ಭಧಾರಣೆಯ ಸಮಯದಲ್ಲಿ ಹಾಗೂ ಹೆರಿಗೆಯ ಸಂಪೂರ್ಣ ವೆಚ್ಚವನ್ನು ಮಗುವಿನ ಅಪೇಕ್ಷಿತ ದಂಪತಿ ಭರಿಸಬೇಕಾಗುತ್ತದೆ.

     

  • ಸಿಂಗಲ್ ಪೇರೆಂಟ್‌ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದಾ?

    ಇಲ್ಲ, ಅದೇ ರೀತಿ ಸಲಿಂಗಿಗಳಿಗೂ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಅವಕಾಶವಿಲ್ಲ. ಮದುವೆಯಾದ ದಂಪತಿಗೆ ಮಕ್ಕಳಾಗಲು ಸಮಸ್ಯೆಯಿದ್ದರೆ ಮಾತ್ರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು.

     

English summary

What is Surrogacy, Cost in India and How Does It Work in Kannada

What is Surrogacy, Cost in India and How Does It Work in Kannada, Read on...
Story first published: Thursday, November 18, 2021, 22:45 [IST]
X
Desktop Bottom Promotion