For Quick Alerts
ALLOW NOTIFICATIONS  
For Daily Alerts

ಮಕ್ಕಳ ಸಿದ್ಧ ಆಹಾರದಲ್ಲಿ ನಿಧಾನವಾಗಿ ಸೇರುತ್ತಿದೆ ಲೋಹ: ಪೋಷಕರೇ ಎಚ್ಚರ!

|

ಹುಟ್ಟಿನ ದಿನದಿಂದ ಮಗು ಬೆಳೆಯುವ ಪ್ರತಿ ಹಂತದಲ್ಲೂ ಅವರ ಆಹಾದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ ಹಾಗೂ ವಹಿಸಲೇಬೇಕು. ಮಗುವಿನ ಆಹಾರದಲ್ಲಿನ ಸಣ್ಣ ಪ್ರಮಾಣದ ಬದಲವಾಣೆಯೂ ಮಗುವಿನ್ನ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಬಹುದು, ಕೆಲವು ತತ್‌ಕ್ಷಣದ ಬದಲಾವಣೆಯಾದರೆ ಇನ್ನೂ ಹಲವು ದೀರ್ಘಕಾಲದ ಸಮಸ್ಯೆಯಾಗಬಹುದು.

ಇಂಥಾ ಹಲವು ಸಮಸ್ಯೆಗಳಲ್ಲಿ ಮಕ್ಕಳ ಆಹಾರದಲ್ಲಿ ನಿತ್ಯ ನಮಗೇ ಅರಿವಿಲ್ಲದೆ ಮಿಶ್ರಣವಾಗುತ್ತಿರುವ ಲೋಹಗಳು ಸಹ ಒಂದಾಗಿದೆ. ಮಕ್ಕಳಲ್ಲಿ ಆಹಾರದ ಮೂಲಕ ಆರ್ಸೆನಿಕ್, ಸೀಸ, ಕ್ಯಾಡ್ಮಿಯಮ್ ಮತ್ತು ಪಾದರಸದಂತಹ ಭಾರವಾದ ಲೋಹಗಳು ನಿತ್ಯ ಸೇರುತ್ತಲೇ ಇದೆ. ಇದು ಹೇಗೆ ಸೇರುತ್ತಿದೆ, ಇದನ್ನು ನಿವಾರಿಸುವುದು ಹೇಗೆ, ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ:

1. ಪರಿಸರದಲ್ಲೇ ಇದೆ ವಿಷಕಾರಿ ಲೋಹಗಳು

1. ಪರಿಸರದಲ್ಲೇ ಇದೆ ವಿಷಕಾರಿ ಲೋಹಗಳು

ನಮ್ಮ ಪರಿಸರದಲ್ಲಿ ಎಲ್ಲೆಡೆ ಆರ್ಸೆನಿಕ್, ಸೀಸ, ಕ್ಯಾಡ್ಮಿಯಮ್ ಮತ್ತು ಪಾದರಸದಂತಹ ಲೋಹಗಳು ಇವೆ, ಇದನ್ನು ನಿಮ್ಮ ಮಗುವಿನ ಆಹಾರದಲ್ಲಿ ತಪ್ಪಿಸುವುದು ಅಸಾಧ್ಯ. ಪರಿಸರದಲ್ಲಿ ಮಾತ್ರವಲ್ಲದೆ ಸಾವಯವ ಬ್ರಾಂಡ್‌ಗಳನ್ನು ಒಳಗೊಂಡಂತೆ ಅಸುರಕ್ಷಿತ ಮಟ್ಟದಲ್ಲಿ ಈ ಲೋಹಗಳು ಅಂಗಡಿಯಲ್ಲಿ ಖರೀದಿಸುವ ಮಗುವಿನ ಸಿದ್ಧ ಆಹಾರಗಳಲ್ಲಿ ಸಹ ಕಂಡುಬಂದಿದೆ ಎಂದರೆ ಅಚ್ಚರಿಪಡಬೇಕಿಲ್ಲ.

ನಿಮ್ಮ ಮಗು ಇವುಗಳನ್ನು ಸೇವಿಸದಂತೆ ತಡೆಯುವುದು ಹೇಗೆ? ನೀವು ಏನು ಮಾಡಬಹುದು ಎಂಬುದು ಇಲ್ಲಿದೆ ಸಲಹೆಗಳು:

2. ಮಗುವಿನ ಆಹಾರದಲ್ಲಿ ಲೋಹಗಳು ಹೇಗೆ ಸಾಧ್ಯ?

2. ಮಗುವಿನ ಆಹಾರದಲ್ಲಿ ಲೋಹಗಳು ಹೇಗೆ ಸಾಧ್ಯ?

ಮಗುವಿನ ಆಹಾರ ಸೇರಿದಂತೆ ಎಲ್ಲಾ ಆಹಾರವು ಕೆಲವು ಭಾರವಾದ ಲೋಹಗಳನ್ನು ಹೊಂದಿರುತ್ತದೆ. ಲೋಹಗಳು ನೈಸರ್ಗಿಕವಾಗಿ ನೀರು, ಮಣ್ಣು ಮತ್ತು ಗಾಳಿಯಲ್ಲಿ ಇರುತ್ತವೆ. ಆದರೆ ಲೋಹಗಳು ಕೀಟನಾಶಕಗಳು ಮತ್ತು ಮಾಲಿನ್ಯದ ಮೂಲಕ ಆಹಾರಕ್ಕೆ ಸೇರ್ಪಡೆಯಾಗಿ ದೇಹವನ್ನು ಪ್ರವೇಶಿಸುತ್ತವೆ. ಅಮೆರಿಕದ ಕೆಲವು ಅತಿದೊಡ್ಡ ಮಕ್ಕಳ ಆಹಾರ ತಯಾರಕರು ಈ ಲೋಹಗಳಿರುವ ಉನ್ನತ ಮಟ್ಟದ ಆಹಾರವನ್ನು ಮಾರಾಟ ಮಾಡುತ್ತಿದೆ. ಇದನ್ನು ದಿನಕ್ಕೊಮ್ಮೆ ತಿಂದರೂ ಆರೋಗ್ಯಕ್ಕೆ ಅಪಾಯವಿದೆ.

3. ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ

3. ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ಈ ಭಾರ ಲೋಹಗಳ ಅತಿಯಾದ ಸೇವನೆಯು ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಮಗುವಿನಲ್ಲಿ ಬೆಳವಣಿಗೆಯಾಗುತ್ತಿರುವ ಮೆದುಳನ್ನು ಹಾನಿಗೊಳಿಸಬಹುದು. ಆರೋಗ್ಯ ಹಾಗೂ ಆಹಾರ ತಜ್ಞರು ಮಗುವಿನ ಆಹಾರಕ್ಕಾಗಿ ಸುರಕ್ಷತಾ ಮಾನದಂಡಗಳನ್ನು ನಿಗದಿಪಡಿಸಿದೆ ಮತ್ತು ಹೆಚ್ಚು ಪಾರದರ್ಶಕ ಲೇಬಲ್‌ಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ.

4. ಮಗುವಿನ ಆಹಾರದಲ್ಲಿ ಲೋಹ ತಪ್ಪಿಸುವುದು ಹೇಗೆ?

4. ಮಗುವಿನ ಆಹಾರದಲ್ಲಿ ಲೋಹ ತಪ್ಪಿಸುವುದು ಹೇಗೆ?

ನಿಮ್ಮ ಮಗುವಿನ ಆಹಾರ ಮತ್ತು ತಿಂಡಿಗಳಲ್ಲಿ ಅಡಗಿರುವ ಭಾರ ಲೋಹಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವೇ ಇಲ್ಲ, ಇದು ಪರಿಸರದಲ್ಲೇ ಇರುವುದು ಮತ್ತೊಂದು ಕಾರಣವಾಗಿದೆ. ಆದರೆ ನಿಮ್ಮ ಮಗುವಿನ ಆಹಾರದಲ್ಲಿ ಹೆಚ್ಚಿನ ಲೋಹದ ಅಂಶಗಳನ್ನು ಸೇವಿಸುವ ಅಪಾಯ ಕಡಿಮೆ ಮಾಡಲು ನೀವು ತೆಗೆದುಕೊಳ್ಳಬಹುದಾದ ಕೆಲವು ಸಲಹೆಗಳು ಹೀಗಿವೆ:

* ಪೋಷಕಾಂಶಗಳಿಂದ ಸಮೃದ್ಧವಾಗಿರುವ ವೈವಿಧ್ಯಮಯ ಆಹಾರವನ್ನು ಅವರಿಗೆ ನೀಡಿ. ವಿವಿಧ ರೀತಿಯ ಪೋಷಕಾಂಶಗಳೊಂದಿಗೆ ಅವರಿಗೆ ಆಹಾರ ನೀಡುವುದರಿಂದ ಭಾರವಾದ ಲೋಹಗಳಿಂದ ದೀರ್ಘಕಾಲೀನ ಎದುರಾಗಬಹುದಾದ ಸಮಸ್ಯೆಗಳಿಗೆ ಒಡ್ಡುವಿಕೆಯ ಅಪಾಯವನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ. ನೀವು ಶುದ್ಧ ತರಕಾರಿಗಳು ಮತ್ತು ಹಣ್ಣುಗಳನ್ನು ನೀಡಿ.

* ಅಕ್ಕಿಯ ಸಿರಿಧಾನ್ಯಗಳು ಮತ್ತು ಅಕ್ಕಿ ಹಿಟ್ಟಿನಿಂದ ಮಾಡಿದ ತಿಂಡಿಗಳನ್ನು ಮಿತಿಗೊಳಿಸಿ. ಅಕ್ಕಿ ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚು ಆರ್ಸೆನಿಕ್ ಅನ್ನು ಹೀರಿಕೊಳ್ಳುತ್ತದೆ. ಬದಲಿಗೆ ಬಾರ್ಲಿ ಮತ್ತು ಓಟ್ಸ್‌ನಂತಹ ಧಾನ್ಯಗಳನ್ನು ತಿನ್ನಿಸಿ.

* ಸಂಸ್ಕರಿಸಿದ ತಿಂಡಿಗಳ ಬದಲಿಗೆ, ನಿಮ್ಮ ಮಗುವಿಗೆ ಸಾಧ್ಯವಾದಷ್ಟು ಸಂಪೂರ್ಣ ಆಹಾರವನ್ನು ನೀಡಿ. ಲೋಹಗಳು ಕಡಿಮೆ ಇರುವ ತಿಂಡಿಗಳಲ್ಲಿ ಸೇಬುಗಳು, ಬೆಣ್ಣೆಹಣ್ಣು/ಆವಕಾಡೊ, ಬಾಳೆಹಣ್ಣು, ತರಕಾರಿಗಳೊಂದಿಗೆ ಬಾರ್ಲಿ, ಚೀಸ್, ದ್ರಾಕ್ಷಿಗಳು, ಬೀನ್ಸ್, ಬೇಯಿಸಿದ ಮೊಟ್ಟೆಗಳು, ಪೀಚ್‌, ಸ್ಟ್ರಾಬೆರಿಗಳು ಮತ್ತು ಮೊಸರು ಸೇರಿವೆ.

* ಫಾರ್ಮುಲಾ ಹಾಲಿನ ಬದಲಿಗೆ ಎದೆಹಾಲು ಹೆಚ್ಚು ಶ್ರೇಷ್ಠ.

* ನೀರು ಸಹ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ಆಹಾರ ತಯಾರಿಸಲು ಬಳಸುವ ನೀರು ಯಾವ ಮಝಲದ್ದು ಅದರಲ್ಲಿರುವ ಲೋಹದ ಅಂಶಗಳೆಷ್ಟು ಅಲ್ಲದೆ ಇನ್ನೂ ಪ್ರಮುಖವಾಗಿ ನೀರು ಬರುತ್ತಿರುವ ಕೊಳವೆ ಸ್ವಚ್ಛವಾಗಿದೆಯೇ ಇದೆಲ್ಲವೂ ಬಹಳ ಮುಖ್ಯವಾಗುತ್ತದೆ. ಇದಕ್ಕೆ ಸುಲಭ ಪರಿಹಾರ ನಿಮ್ಮ ಮಗುವಿನ ಆಹಾರವನ್ನು ತಯಾರಿಸಲು ನೀವು ಬಾಟಲ್ ನೀರನ್ನು ಬಳಸಬಹುದು.

* ಅವರಿಗೆ ಹಣ್ಣಿನ ರಸವನ್ನು ನೀಡುವುದನ್ನು ತಪ್ಪಿಸಿ. ಬದಲಾಗಿ ಸಂಪೂರ್ಣ ಹಣ್ಣುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ತಿನ್ನಲು ನೀಡಿ.

* ಕ್ಯಾರೆಟ್ ಮತ್ತು ಸಿಹಿ ಆಲೂಗಡ್ಡೆ ಸೇವನೆ ಮಿತಿಗೊಳಿಸಿ. ಈ ಎರಡು ನೆಲದಲ್ಲಿ ಬಿಡುವ ತರಕಾರಿಗಳು ಹಾಗೂ ನೆಲದಲ್ಲಿ ಬಿಡುವ ಇತರ ತರಕಾರಿಗಳಿಗಿಂತ ಹೆಚ್ಚು ಭಾರವಾದ ಲೋಹಗಳನ್ನು ಇದು ಹೊಂದಿರುತ್ತವೆ.

5. ನೀವು ಮಗುವಿನ ಆಹಾರವನ್ನು ಮನೆಯಲ್ಲೇ ತಯಾರಿಸುವುದೇ ಹೆಚ್ಚು ಸೂಕ್ತ

5. ನೀವು ಮಗುವಿನ ಆಹಾರವನ್ನು ಮನೆಯಲ್ಲೇ ತಯಾರಿಸುವುದೇ ಹೆಚ್ಚು ಸೂಕ್ತ

ನಾವು ಮಗುವಿಗಾಗಿ ಖರೀದಿಸುವ ಸಿದ್ಧ ಆಹಾರ ಉತ್ಪನ್ನಗಳಲ್ಲಿ ಭಾರೀ ಲೋಹಗಳು ಇರುತ್ತವೆ, ಆದ್ದರಿಂದ ಮನೆಯಲ್ಲಿಯೇ ಮಗುವಿನ ಆಹಾರ ತಯಾರಿಸುವುದು ಹೆಚ್ಚು ಸೂಕ್ತ. ಸಿದ್ಧ ಅಥವಾ ಸಂಸ್ಕರಿಸಿದ ಆಹಾರಗಳಲ್ಲಿ ರಾಸಾಯನಿಕ ತಯಾರಿಕೆ ಮತ್ತು ಪ್ಯಾಕೇಜಿಂಗ್ ಅನ್ನು ಒಳಗೊಂಡಿದೆ. ಮನಯಲ್ಲಿ ತಯಾರಿಸಿದ ಆಹಾರಗಳು ಇವುಗಳನ್ನು ತಪ್ಪಿಸುತ್ತದೆ.

English summary

Ways to prevent heavy metals in your baby's food in Kannada

Here we are discussing about ​Ways to prevent heavy metals in your baby's food in Kannada. Read more.
Story first published: Monday, October 25, 2021, 12:49 [IST]
X
Desktop Bottom Promotion