For Quick Alerts
ALLOW NOTIFICATIONS  
For Daily Alerts

ಮಗುವಿನ ಮಲದ ಬಣ್ಣದಲ್ಲಿ ವ್ಯತ್ಯಾಸವಾಗಿದೆಯೇ? ಯಾವಾಗ ನಿರ್ಲಕ್ಷ್ಯ ಮಾಡಬಾರದು?

|

ಮಗುವಾದ ಮೇಲೆ ಎಲ್ಲಾ ಜವಾಬ್ದಾರಿಗಳು ತಾಯಿಯ ಹೆಗಲ ಮೇಲೇರುತ್ತದೆ. ಮಗುವಿನ ಚಲನವಲನದಿಂದ ಹಿಡಿದು ಮಲವಿಸರ್ಜನೆಯವರೆಗೂ ಎಲ್ಲರದರ ಮೇಲೂ ತಾಯಿಯ ಸೂಕ್ಷ್ಮಕಣ್ಣು ಇಡಲೇಬೇಕಾಗುತ್ತದೆ. ಅರೆರೆ.. ಯಾಕೆ ಮಗುವಿನ ಮಲದ ಮೇಲೆಯೂ ಕಣ್ಣಿಡಬೇಕು ಎನ್ನುತ್ತಿದ್ದೀರಾ..? ಹೌದು, ಮಲವೂ ಮಗುವಿನ ಆರೋಗ್ಯವನ್ನು ಸೂಚಿಸುತ್ತದೆ. ಮಗುವಿನ ಆರೋಗ್ಯ ನಿರ್ಣಯದಲ್ಲಿ ಇದು ಹೆಚ್ಚಿನ ಪಾತ್ರ ವಹಿಸುತ್ತದೆ. ಮಗುವಿನ ಮಲ ಆರೋಗ್ಯವಾಗಿದ್ದಾಗ ಯಾವ ರೀತಿ ಇರುತ್ತದೆ, ಹುಷಾರು ತಪ್ಪಿದಾಗ ಯಾವ ರೀತಿ ಇರುತ್ತದೆ ಎನ್ನುವುದನ್ನು ಗಮನಕ್ಕೆ ತಂದುಕೊಳ್ಳಲೇಬೇಕು.ಇನ್ನೂ ಅರ್ಥವಾಗುತ್ತಿಲ್ಲವೆಂದಾದರೆ ಈ ಕೆಳಗಿನ ಲೇಖನವನ್ನು ತಪ್ಪದೇ ಓದಿ.

ನವಜಾತ ಮಗುವಿನ ಮಲ ಅಥವಾ ಮೆಕೋನಿಯಮ್‌

ನವಜಾತ ಮಗುವಿನ ಮಲ ಅಥವಾ ಮೆಕೋನಿಯಮ್‌

ಮೊದಲಬಾರಿ ತಾಯಿಯಾದವರು ನವಜಾತ ಶಿಶುವು ಮಾಡುವ ಮಲದ ಬಣ್ಣ ನೋಡಿ ಸ್ವಲ್ಪ ಗೊಂದಲಕ್ಕೊಳಗಾಗಬಹುದು. ಇದೇನಪ್ಪಾ ಈ ಬಣ್ಣವಿದೆ ಎಂದು ವೈದ್ಯರನ್ನೂ ಕೇಳಬಹುದು. ಹೌದು.. ಆಗತಾನೆ ಜನಿಸಿದ ಮಗುವಿನ ಮಲದ ಬಣ್ಣ ಗಾಢವಾಗಿರುತ್ತದೆ. ಮಾತ್ರವಲ್ಲ ಸ್ವಲ್ಪ ಸಡಿಲವಾದ ಮಲವಾಗಿರುತ್ತದೆ, ಇದು ಸಾಮಾನ್ಯವಾಗಿ ಹಸಿರು-ಕಪ್ಪು ಬಣ್ಣದಲ್ಲಿರುತ್ತದೆ. ಈ ರೀತಿಯ ಮಲವಿಸರ್ಜನೆ ನವಜಾತ ಶಿಶುಗಳಲ್ಲಿ ಸಾಮಾನ್ಯ. ,ಕೆಂಪು ರಕ್ತಕಣಗಳ ಹಳದಿ ಹಸಿರು ವಿಭಜನೆಯಾದ ಬಿರುಲಿನ್‌ ಇರುವಿಕೆಯಿಂದಾಗಿ ಈ ರೀತಿಯ ಬಣ್ಣ ಕಂಡುಬರುತ್ತದೆ,

ನವಜಾತ ಶಿಶು ಮಾಡುವ ಮೊದಲ ಮಲವನ್ನು ಮೆಕೋನಿಯಮ್‌ ಎಂದೂ ಕರೆಯುತ್ತಾರೆ. ಇದು ಮಗುವಿನ ಜನನದ ನಂತರ ಮೂರು ದಿನಗಳವರೆಗೆ ಇರುತ್ತದೆ. ನಂತರ ಮಲವು ಹಳದಿ ಬಣ್ಣಕ್ಕೆ ತಿರುಗುತ್ತದೆ.

ತಿಳಿ ಹಳದಿ ಮತ್ತು ಬೀಜದ ರೀತಿಯ ಮಲ

ತಿಳಿ ಹಳದಿ ಮತ್ತು ಬೀಜದ ರೀತಿಯ ಮಲ

ಮಗುವಿಗೆ ತಾಯಿ ಹಾಲುಡಿಸಲು ಆರಂಭಿಸಿದ ಮೇಲೆ ಮಗುವಿನ ಮಲ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಮಲವು ಸಡಿಲವಾಗಿದ್ದು ಕೆಲವೊಮ್ಮೆ ಹಳದಿ ಬೀಜದ ರೀತಿ ಸೌಮ್ಯವಾದ ವಾಸನೆ ಇರುತ್ತದೆ. ಎದೆಹಾಲು ಕುಡಿಯುವ ಶಿಶುಗಳಲ್ಲಿ ಈ ರೀತಿಯ ಮಲವಿಸರ್ಜನೆ ಸಾಮಾನ್ಯ. ಚಿಂತಿಸಬೇಡಿ.

ಗಾಢ ಮತ್ತು ದಪ್ಪ

ಗಾಢ ಮತ್ತು ದಪ್ಪ

ಎದೆ ಹಾಲು ಕುಡಿಯುವ ಶಿಶುಗಳಲ್ಲಿ, ಫಾರ್ಮುಲಾ ಹಾಲು ಕುಡಿಯುವ ಶಿಶುಗಳಲ್ಲಿ ಮಲದ ಬಣ್ಣ ಮತ್ತು ಸ್ಥಿರತೆಯಲ್ಲಿ ಬದಲಾವಣೆಯಿರುತ್ತದೆ. ಫಾರ್ಮುಲಾ ಹಾಲು ಕುಡಿಯುವ ಮಗುವಿನ ಮಲ ಗಾಢ ಬಣ್ಣದಲ್ಲಿದ್ದು, ಎದೆಹಾಲು ಕುಡಿಯುವ ಮಗುವಿನ ಮಲಕ್ಕಿಂತ ಹೆಚ್ಚು ದಪ್ಪವಿರುತ್ತದೆ ಮತ್ತು ಕಂದು ಬಣ್ಣದಲ್ಲಿರುತ್ತದೆ.

ಓಹ್‌ ಮಗು ದಪ್ಪ ಮಲವಿಸರ್ಜನೆ ಮಾಡುತ್ತಿದೆ ಹೀಟ್‌ ಆಗಿರಬೇಕು ಎಂದು ಚಿಂತೆಗೊಳಗಾಗಿ ಕೊಡುವ ಹಾಲಿನಲ್ಲಿ ಬದಲಾವಣೆ ಮಾಡಲು ಹೋಗಬೇಡಿ. ಎದೆಹಾಲು ಮತ್ತು ಫಾರ್ಮಲಾ ಹಾಲು ಹೊರತುಪಡಿಸಿ, ಬೇರೆ ಯಾವ ಆಹಾರವನ್ನೂ ನವಜಾತ ಶಿಶುವಿಗೆ ಕೊಡಬೇಡಿ. ಈ ರೀತಿಯ ಮಲವಿಸರ್ಜನೆ ಫಾರ್ಮುಲ ಹಾಲು ಕುಡಿವ ಮಗುವಿನಲ್ಲಿ ಸಾಮಾನ್ಯ.

ಹಸಿರು ಕಂದು ಬಣ್ಣ: ಮಗುವಿಗೆ ಆರು ತಿಂಗಳು ತುಂಬಿದ ನಂತರ ಘನ ಆಹಾರಗಳನ್ನು ಕೊಡಲು ಶುರು ಮಾಡಿದ ಮೇಲೆ ಮಗುವಿನ ಮಲದಲ್ಲಿ ಬದಲಾವಣೆ ಕಾಣಬಹುದು. ಇದು ಕೆಲವೊಮ್ಮೆ ಹಸಿರು ಮಿಶ್ರಿತ ಕಂದುಬಣ್ಣದ್ದಾಗಿರಬಹುದು.ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವನೆಯು ಈ ರೀತಿಯ ಮಲ ವಿಸರ್ಜನೆಗೆ ಕಾರಣವಾಗಬಹುದು. ಇದರಲ್ಲಿ ಭಯಬೀಳುವಂಥದ್ದು ಏನಿಲ್ಲ.

ಘನ ಆಹಾರ ಸೇವಿಸಲು ಪ್ರಾರಂಭಿಸಿದ ಮಗು ಆ ಆಹಾರಕ್ಕೆ ಹೊಂದಿಕೊಳ್ಳುವವರೆಗೂ ಕೆಲವೊಮ್ಮೆ ದಿನಕ್ಕೆ ಎರಡರಿಂದ ಮೂರು ಬಾರಿ ಮಲ ವಿಸರ್ಜನೆ ಮಾಡಬಹುದು. ಇದು ಸಾಮಾನ್ಯ. ಆದರೆ ಯಾವಾಗ ಶೀತ, ಜ್ವರ ಅಥವಾ ಕಿರಿಕಿರಿ, ತುಂಬಾ ಅಳು, ಮಲವಿಸರ್ಜನೆ ಮಾಡುವಾಗ ಅಳುತ್ತಿದ್ದಲ್ಲಿ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.

ಮಗುವಿನ ಮಲ ಈ ರೀತಿ ಇದ್ದಾಗ ವೈದ್ಯರನ್ನು ಭೇಟಿ ಮಾಡಿ

ಮಗುವಿನ ಮಲ ಈ ರೀತಿ ಇದ್ದಾಗ ವೈದ್ಯರನ್ನು ಭೇಟಿ ಮಾಡಿ

ಪ್ಎತಿಬಾರಿಯೂ ಮಗು ಮಲವಿಸರ್ಜನೆ ಮಾಡಿದಾಗಲೂ ತಾಯಿಯಾದವಳು ಮಲ ನೋಡಿ ನಿಟ್ಟುಸಿರು ಬಿಡುತ್ತಾಳೆ. ಅಬ್ಬಾ ಇವತ್ತು ಮಗು ಮಲ ವಿಸರ್ಜನೆ ಮಾಡಿದೆ, ತೊಂದರೆಯಿಲ್ಲ ಎನ್ನುವ ನಿರಾಳತೆ ಇರುತ್ತದೆ. ಕೆಲವು ಮಕ್ಕಳು ಎರಡು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಮಾಡುವುದೂ ಇದೆ. ಮಗು ಬೆಳೆಯುತ್ತಾ ಹೋದಂತೆ ಪ್ರತಿದಿನ ಮಲವಿಸರ್ಜನೆ ಮಾಡುವ ಸಮಯಕ್ಕೆ ಮಾಡದಿದ್ದರೆ ತಾಯಿಯಲ್ಲಿ ಒಂದು ರೀತಿಯ ಆತಂಕ ಇದ್ದೇ ಇರುತ್ತದೆ. ಮಲ ವಿಸರ್ಜನೆ ಮಾಡಿದ ಮೇಲೆ ಯಾವತ್ತೂ ಇರದಿದ್ದ ಬದಲಾವಣೆ ಕಂಡರೆ ಒಮ್ಮೆಗೆ ತಾಯಿಯ ಹೃದಯ ಬಡಿತ ಹೆಚ್ಚು ಆಗೇ ಆಗುತ್ತದೆ. ಕೆಲವೊಮ್ಮೆ ಮಲದ ವಿನ್ಯಾಸ, ಬಣ್ಣ ಮತ್ತು ವಾಸನೆಯು ಬದಲಾಗಿದ್ದರೆ ತಾಯಿಗದು ತಿಳಿದುಬಿಡುತ್ತದೆ. ಆದರೂ ಈ ಕೆಳಗಿನ ಚಿಹ್ನೆಗಳು ನಿಮ್ಮ ಮಗುವಿನ ಮಲದಲ್ಲಿ ಕಂಡುಬಂದರೆ ವೈದ್ಯರ ಅಪಾಯಿಂಟ್‌ಮೆಂಟ್‌ಗೆ ಕರೆ ಮಾಡಲು ಮರೆಯದಿರಿ.

ಕಂದು, ನೀರು ಅಥವಾ ಸಡಿಲವಾಗಿದ್ದರೆ

ಕಂದು, ನೀರು ಅಥವಾ ಸಡಿಲವಾಗಿದ್ದರೆ

ನಿಮ್ಮ ಮಗು ಕಂದು ಬಣ್ಣದ ಮಲ ವಿಸರ್ಜನೆ ಮಾಡುವುದು ಸಾಮಾನ್ಯ ಆದರೆ. ಮಲವು ನೀರು ನೀರಾಗಿದ್ದರೆ ಅಥವಾ ಸಡಿಲವಾಗಿದ್ದರೆ ಮಗುವಿನ ಮಲವಿಸರ್ಜನೆಯ ಮೇಲೆ ಕಣ್ಣಿಡಲೇಬೇಕಾಗುತ್ತದೆ. ಇದೇ ರೀತಿ ಎರಡು ದಿನಕ್ಕಿಂತ ಹೆಚ್ಚು ಮುಂದುವರಿದರೆ ಅಥವಾ ದಿನದಲ್ಲಿ ನಾಲ್ಕು ಬಾರಿಗಿಂತ ಹೆಚ್ಚಾದಲ್ಲಿ ವೈದ್ಯರನ್ನು ಕಾಣಿ.

ಇದಲ್ಲದೇ ಸಡಿಲವಾದ ಮಲವಿಸರ್ಜನೆಯೊಂದಿಗೆ ಮಗುವಿನಲ್ಲಿ ಅಸ್ವಸ್ಥತೆ, ಆಹಾರ ಸೇವಿಸದೇ ಇರುವುದು, ಜ್ವರ, ಆಲಸ್ಯ ಇತ್ಯಾದಿ ಕಂಡುಬಂದಲ್ಲಿ ಅತಿಸಾರ ಭೇದಿಯೂ ಆಗಿರಬಹುದು. . ಅತಿಸಾರವು ಸೋಂಕಿನ ಸಂಕೇತವಾಗಿರಬಹುದು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ಒಣ, ಗಟ್ಟಿಯಾದ ಮಲ

ಒಣ, ಗಟ್ಟಿಯಾದ ಮಲ

ಘನ ಆಹಾರವನ್ನು ನೀಡುವುದರಿಂದ ಮಕ್ಕಳಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ ಇದ್ದಾಗ ಮಕ್ಕಳಲ್ಲಿ ಮಲ ಒಣಗಿದಂತರುತ್ತದೆ ಅಥವಾ ಗಟ್ಟಿಯಾಗಿರುತ್ತದೆ. ಮಗು ಮಲವಿಸರ್ಜನೆ ಮಾಡುವಾಗ ಹೆಚ್ಚು ಒತ್ತಡ ಹಾಕಬಹುದು. ಹೀಗಿದ್ದಾಗ ಮಗುವಿಗೆ ಮಲಬದ್ಧತೆಯಾಗಿ ಎಂದುಕೊಳ್ಳಬಹುದು. ಮಲಬದ್ಧತೆಯಾದಾಗ ಮಲವು ಗಟ್ಟಿಯಾಘಿರುತ್ತದೆ.

ಮಕ್ಕಳಲ್ಲಿ ಮಲಬದ್ಧತೆ ಕಡಿಮೆ ಮಾಡಲು ಘಟನ ಆಹಾರದೊಂದಿಗೆ ಹೆಚ್ಚುವರಿಯಾಗಿ ಎದೆಹಾಲು ಅಥವಾ ಫಾರ್ಮುಲಾವನ್ನು ನೀಡಿ. ಆರು ತಿಂಗಳು ತುಂಬಿದ ನಂತರ ಮಕ್ಕಳಿಗೆ ಸ್ವಲ್ಪ ಸ್ವಲ್ಪ ನೀರು ಕುಡಿಸಬಹುದು. ಮಗುವಿನಲ್ಲಿ ಮಲಬದ್ಧತೆಯನ್ನು ಕಡಿಮೆ ಮಾಡಲು ನಾರಿನಂಶ ಹೆಚ್ಚಿರುವ ತರಕಾರಿ, ಹಣ್ಣುಗಳನ್ನು ನೀಡಿ.

ಹಸಿರು ಲೋಳೆಯಂತಹ ಮಲ

ಹಸಿರು ಲೋಳೆಯಂತಹ ಮಲ

ಮಗು ಯಾವಾಗಲೂ ಮಾಡುವ ಮಲವು ಎಳೆಗಳನ್ನು ಹೊಂದಿದ್ದು, ಹಸಿರು ಬಣ್ಣದಲ್ಲಿದ್ದರೆ ಅಥವಾ ಮಲವು ಲೋಳೆಯಾಗುದ್ದರೆ, ಇದು ಸೋಂಕಿನ ಸಂಕೇತವಾಗಿರಬಹುದು. ಹೀಗಿದ್ದಾಗ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.

ಬಿಳಿ, ಸೀಮೆಸುಣ್ಣದಂತಹ ಬಣ್ಣ

ಬಿಳಿ, ಸೀಮೆಸುಣ್ಣದಂತಹ ಬಣ್ಣ

ಸುಣ್ಣದ ಬಿಳಿ ಅಥವಾ ಬೂದುಬಣ್ಣದ ಮಲವು ನಿಮ್ಮ ಮಗು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುತ್ತಿಲ್ಲ ಎಂಬುದರ ಸಂಕೇತವಾಗಿದೆ. ಪಿತ್ತರಸವು ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಜೀರ್ಣಕಾರಿ ದ್ರವವಾಗಿದೆ. ನಿಮ್ಮ ಮಗುವಿನ ಯಕೃತ್ತು ಪಿತ್ತರಸವನ್ನು ಉತ್ಪತ್ತಿ ಮಾಡದಿದ್ದರೆ ಅಥವಾ ಪಿತ್ತರಸವು ಅಡಚಣೆಯಾಗಿದ್ದರೆ, ಮಲದ ಬಣ್ಣವು ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಹೀಗಿದ್ದಾಗ ವೈದ್ಯರನ್ನು ತಕ್ಷಣವೇ ಕಾಣಬೇಕು.

ಮಲ ಹೆಚ್ಚು ವಾಸೆನಯಿಂದ ಕೂಡಿದ್ದರೆ: ಮಗುವಿನ ಮಲವು ಸ್ವಲ್ಪ ವಾಸನೆಯನ್ನು ಹೊಂದಿರುತ್ತದೆಯಾದರೂ, ಕೆಲವೊಮ್ಮೆ ಈ ವಾಸನೆಯು ತುಂಬಾ ಹೆಚ್ಚಾಗಿದ್ದರೆ, ದುರ್ವಾಸನೆ ಮತ್ತು ಮಗುವಿನ ಸಾಮಾನ್ಯ ಮಲಕ್ಕಿಂತ ಭಿನ್ನವಾಗಿದ್ದರೆ, ವೈದ್ಯರಿಂದ ಪರೀಕ್ಷೆಗೊಳಪಡಿಸುವುದು ಉತ್ತಮ.

ಕೆಲವೊಂದು ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಕಾಣಿ

ಕೆಲವೊಂದು ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಕಾಣಿ

ಸಾಮಾನ್ಯವಾಗಿ ಮಗು ದಿನದಲ್ಲಿ ನಾಲ್ಕರಿಂದ ಐದು ಬಾರಿ ಮಲವಿಸರ್ಜನೆ ಮಾಡುವುದು ಸಹಜ. ಎದೆಹಾಲು ಕುಡಿಯುತಚ್ತಿರುವಂತೆಯೇ ಮಲವಿಸರ್ಜನೆಯನ್ನೂ ಮಾಡಿಬಿಡುತ್ತಾರೆ. ಇದಕ್ಕೆ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಆದರೆ ಮಗುವಿನ ಮಲದಲ್ಲಿ ರಕ್ತ ಕಂಡುಬಂದಲ್ಲಿ, ವಾಂತಿಯಾದಲ್ಲಿ, ಜ್ವರ, ಹಸಿವೇ ಇರದಿರುವುದು, ಗಾಢ ಬಣ್ಣದ ಮೂತ್ರ, ಮಗು ಮಂಕಾಗಿದ್ದಲ್ಲಿ, ಆಟವಾಡದೇ ಇದ್ದಾಗ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.

ಹೆಚ್ಚಿನ ಕ್ಕಳು ಮಲವಿಸರ್ಜನೆ ಮಾಡುವಾಗ ವಿಚಿತ್ರವಾದ ಮುಖ ಮಾಡುತ್ತಾರೆ. ಮಲವಿಸರ್ಜನೆ ಮಾಡುವಾಗ ಒತ್ತಡ ಹಾಕಬೇಕಾದರೆ ಈ ರೀತಿಯ ಭಾವಗಳು ಮಕ್ಕಳಲ್ಲಿ ಸಾಮಾನ್ಯ. ಆದರೆ ಮಲ ಮಾಡುವಾಗ ಮಗು ಅಳುತ್ತಿದ್ದಲ್ಲಿ,ಮಗುವು ದಿನದಲ್ಲಿ ನಾಲ್ಕೈದು ಬಾರಿಗಿಂತ ಹೆಚ್ಚು ಮಲವಿಸರ್ಜನೆ ಮಾಡಿದಲ್ಲಿ, ಮಲದಲ್ಲಿ ವ್ಯತ್ಯಾಸ, ಸಡಿಲವಾದ ಮಲ ಕಂಡುಬಂದಲ್ಲಿಯೂ ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ಮಗು ಹೆಚ್ಚು ಬಾರಿ ಮಲ ಮಾಡಿದಾಗ ಅವರ ಕೆಳಭಾಗವನ್ನು ಸ್ವಚ್ಛವಾಗಿ ಒರೆಸುವಾಗ ಹೆಚ್ಚು ಮೃದುವಾಗಿರಿ. ಆಗಾಗ್ಗೆ ಮಲವಿಸರ್ಜನೆ ಮತ್ತು ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರಣದಿಂದಾಗಿ, ಸೂಕ್ಷ್ಮವಾದ ಚರ್ಮವು ಕೆಂಪಾಗಬಹುದು. ಉರಿತ ಕಂಡುಬರಬಹುದು. ಹೀಗಿದ್ದಾಗ ವೈದ್ಯರಲ್ಲಿ ಡೈಪರ್ ರಾಶ್ ಕ್ರೀಮ್ ಕೇಳುವುದನ್ನು ಮರೆಯದಿರಿ.

ಮೊದಲೇ ಹೇಳಿದಂತೆ ಮಗುವಿನ ಮಲವು ಮಗುವಿನ ಆರೋಗ್ಯವನ್ನು ಸೂಚಿಸುತ್ತದೆ. ಮಗುವಿಗೆ ಅನಾರೋಗ್ಯವಾದರೂ ಹೇಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಮಗುವಿನ ಮಲ,ಮೂತ್ರವನ್ನು ಗಮನಿಸುವುದು, ಮಗುವಿನ ಆಟದ ಕಡೆಗೆ ಗಮನವಿಡಬೇಕು. ಎಂದಿನಂತೆ ಮಗು ಆಡುತ್ತಿದೆಯಾ, ಪ್ರತಿದಿನ ಇರುವುದಕ್ಕಿಂತ ಬದಲಾಗಿ, ಮಗು ಆಲಸ್ಯವಾಗಿ, ಆಟದತ್ತ ಗಮನ ವಹಿಸದೇ ಇದ್ದರೆ ಅದರ ಬಗ್ಗೆ ಕಾಳಜಿ ವಹಿಸಬೇಕು. ಮಗುವಿನ ಆರೋಗ್ಯವನ್ನು ಅರ್ಥಮಾಡಿಕೊಂಡು, ಬೇರೆಯವರ ಮಾತಿಗೆ ಕಿವಿಗೊಡದೇ ನಿಮ್ಮ ಮಗುವಿನ ಬಗ್ಗೆ ತಿಳುವಳಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ತಾಯಿಯ ಕರ್ತವ್ಯ.

English summary

Tips to Decode Baby Poop - What Infant Stools Can Tell You in Kannada

here are the details about color of the baby poop that you must know,
X
Desktop Bottom Promotion