For Quick Alerts
ALLOW NOTIFICATIONS  
For Daily Alerts

ಮಗುವಿನ ಕೋಮಲ ತ್ವಚೆಗೆ ಹೀಗಿರಲಿ ಸ್ನಾನ

|

ಮಕ್ಕಳಿಗೆ ಸ್ನಾನ ಮಾಡಿಸುವುದು ಕರಗತ ಮಾಡಿಕೊಳ್ಳಬೇಕಾದ ಕಲೆ. ಇಂದಿನ ಆಧುನಿಕ ತಾಯಂದಿರಿಗೆ ಮಕ್ಕಳ ಸ್ನಾನ ನಿಜಕ್ಕೂ ಸವಾಲಿನ ಸಂಗತಿಯೇ ಹೌದು. ಹಿಂದಿನ ಕಾಲದಲ್ಲಿ ಅಜ್ಜಿಯರು ಬಹಳ ಸುಲಲಿತವಾಗಿ, ಹಾಡುಗಳನ್ನು ಹಾಡುತ್ತಾ, ಮೋಜಿನಿಂದ ಮಕ್ಕಳಿಗೆ ಭಯವಾಗದಂತೆ ಸ್ನಾನ ಮಾಡಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಅಜ್ಜಿಯರಿಗೆ ಇದೆಲ್ಲಾ ಒಗ್ಗದ ಕಷ್ಟಸಾಧ್ಯದ ವಿದ್ಯೆಯಾಗಿದೆ.

ಅದರಲ್ಲೂ ಅಳುವ ಮಕ್ಕಳಿದ್ದರಂತೂ ಮುಗಿದೇ ಹೋಯಿತು. ಮಕ್ಕಳನ್ನು ಅಳಿಸದಂತೆ, ಬಹಳ ಜಾಗ್ರತೆಯಿಂದ ಸ್ನಾನ ಮಾಡಿಸುವುದು ಅಷ್ಟೇನೂ ಕಷ್ಟವಲ್ಲದಿದ್ದರೂ, ಮಕ್ಕಳ ಮನಸ್ಸು, ವಾತಾವರಣ, ಸೇರಿದಂತೆ ಕೆಲವು ಸೂಕ್ಷ್ಮ ಸಂಗತಿಗಳನ್ನು ಅರಿತರೆ ಸುಲಭವಾಗಿ ಮಾಡಿಸಬಹುದು.

ಸೋಪಿನ ನೊರೆ, ಅದರಿಂದ ಏಳುವ ಗುಳ್ಳೆಗಳು, ಮಕ್ಕಳ ನಡುವೆ ನೊರೆಯ ಗುದ್ದಾಟ: ತಾಯಿ ತನ್ನ ಮಗುವಿಗೆ ಯನ್ನ ಬಾಂಧ್ಯವ್ಯದ ಬಗ್ಗೆ ಮಗುವಿಗೆ ತಿಳಿಸಲು ಸ್ನಾನದ ಸಮಯ ಬಹಳ ಸೂಕ್ತವಾದದ್ದು. ಅಲ್ಲದೆ ಸ್ನಾನ ಮಗುವಿನ ಶುದ್ಧತೆಯ ಜತೆಗೆ ಮಗು ತಾಜಾ ಅಗಿರಲು, ಮಗು ತಾಯಿ, ಅಜ್ಜಿ ಸಂಬಂಧಗಳ ಸ್ಪರ್ಶ ತಿಳಿಯಲು ಸಹ ಸಹಕಾರಿ.

ಮಕ್ಕಳು ಅಳದಂತೆ ಸ್ನಾನ ಮಾಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

ಎಷ್ಟು ಬಾರಿ ಸ್ನಾನ

ಎಷ್ಟು ಬಾರಿ ಸ್ನಾನ

ನವಜಾತ ಶಿಶುಗಳ ಶೌಚವನ್ನು ಆಗ್ಗಿಂದಾಗೇ ಸ್ವಚ್ಛಗೊಳಿಸಿದರೆ ಸಾಕು, ಅವರು ಹೆಚ್ಚಾಗಿ ಮಲಿನಗೊಳ್ಳುವುದಿಲ್ಲ. ಮಕ್ಕಳಿಗೆ ವಾರಕ್ಕೆ 2ರಿಂದ 3ಬಾರಿ ಸ್ನಾನ ಮಾಡಿಸಿದರೆ ಸಾಕು. ಮಕ್ಕಳ ತಲೆಯ ಸ್ನಾನವೂ ಅಷ್ಟೇ ಆಗಾಗ್ಗೆ ಮಾಡಿಸುವ ಅವಶ್ಯವಿಲ್ಲ. ಅಗತ್ಯವೆನಿಸಿದಾಗ ಮಾಡಿಸಿದರೆ ಸಾಕು.

ಸ್ನಾನದ ಕೊಠಡಿ ಹೀಗಿರಲಿ

ಸ್ನಾನದ ಕೊಠಡಿ ಹೀಗಿರಲಿ

ಮಗುವಿಗೆ ಸ್ನಾನ ಮಾಡಿಸುವ ಕೊಠಡಿ ಅತಿಯಾಗಿ ಗಾಳಿಯಾಡಂತೆ, ಬೆಚ್ಚಗಿನ ವಾತಾವರಣವಿರಲಿ. ಅತಿಯಾದ ಗಾಳಿಯಾಡಿದರೆ ಮಗುವಿಗೆ ಚಳಿಯಾಗುವ ಸಾಧ್ಯತೆ ಹೆಚ್ಚು, ಈ ವೇಳೆ ಮಗು ಅಳಲು ಆರಂಭಿಸುತ್ತದೆ. ಅಲ್ಲದೆ ಇದು ಶೀತಕ್ಕೂ ಕಾರಣವಾಗಬಹುದು.

ಸ್ಪಾಂಜ್ ಮೂಲಕ ಸ್ನಾನ ಆರಂಭಿಸಿ

ಸ್ಪಾಂಜ್ ಮೂಲಕ ಸ್ನಾನ ಆರಂಭಿಸಿ

ನಿಮ್ಮ ಮಗುವಿಗೆ ಇನ್ನೂ ಹೊಕ್ಕುಳ ಬಳ್ಳಿ ಇದೇ ಎಂದಾದರೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್ ಬಳಸಿ ಮೈ ಸ್ವಚ್ಚಗೊಳಸಿದರೆ ಸಾಕು. ಮಗುವಿನ ಕರುಳುಬಳ್ಳಿಯನ್ನು ಯಾವುದೇ ಕಾರಣಕ್ಕೂ ನೀರಿನಲ್ಲಿ ನೆನೆಯಲು ಬಿಡಬೇಡಿ, ಅದನ್ನು ಒಣಗಲು ಬಿಡಿ. ಮಗುವಿನ ಕರುಳು ಬಳ್ಳಿ ಸಂಪೂರ್ಣ ಒಣಗಿ ತಾನಾಗೇ ಕಳಚಿದ ನಂತರ ಮಗು ಸಂಪೂರ್ಣ ಅಭ್ಯಂಜನಕ್ಕೆ ಸಿದ್ಧ ಎಂದರ್ಥ.

ಎಣ್ಣೆ ಮಸಾಜ್

ಎಣ್ಣೆ ಮಸಾಜ್

ಮಗು 6ರಿಂದ 8ತಿಂಗಳು ಕಳೆದ ನಂತರ ಮಗುವಿನ ದೈಹಿಕ ಸ್ಥಿತಿ ಮತ್ತು ವೈದ್ಯರ ಸಲಹೆ ಪಡೆದು ಮಗುವಿಗೆ ಎಣ್ಣೆಯ ಮಸಾಜ್ ಮಾಡಬಹುದು. ಮಗುವಿಗೆ ಸ್ನಾನ ಮಾಡಿಸುವ ಒಂದು ಗಂಟೆ ಮುನ್ನ ಎಣ್ಣೆಯಿಂದ ಮಗುವಿನ ದೇಹವನ್ನು ಮಸಾಜ್ ಮಾಡಬೇಕು. ಈ ವೇಳೆ ಮಗು ಅಳದಂತೆ ಅದಕ್ಕೆ ಬೇಕಾದ ಆಟಿಕೆಗಳನ್ನು ನೀಡಿ, ಮಾತನಾಡಿಸುತ್ತಾ ಎಣ್ಣೆ ಹಾಕಿ ಕೈ ಕಾಲುಗಳನ್ನು ನಯವಾಗಿ ಎಳೆಯಬೇಕು, ಬೆನ್ನಿನ ಭಾಗ, ಎದೆಯ ಭಾಗ, ಮುಖ, ಕಿವಿ, ಕತ್ತು ಎಲ್ಲ ಭಾಗಕ್ಕೂ ಎಣ್ಣೆ ಲೇಪಿಸಿ ಮಸಾಜ್ ಮಾಡುವುದು ಮಗುವಿನ ದೈಹಿಕ ಬೆಳವಣಿಗೆಗೆ ಸಹಕಾರಿ. ಸಾಧ್ಯವಾದರೆ ಎಳೆಯ ಬಿಸಿಲಿನಲ್ಲಿ 10ನಿಮಿಷ 15 ಶಾಖ ನೀಡುವುದು ಒಳಿತು.

ನೀರಿನ ಹದ

ನೀರಿನ ಹದ

ಮಗುವಿಗೆ ಸ್ನಾನ ಮಾಡಿಸುವ ನೀರಿನ ಹದ ಇಂತಿಷ್ಟೇ ಬಿಸಿ ಇರಬೇಕು. ಬಹಳ ತಂಪಾದ ಅಥವಾ ಬಿಸಿಯಾದ ನೀರು ಮಗುವಿಗೆ ಹಾನಿಕರ. ಸ್ನಾನದ ನೀರು 32ರಿಂದ 37ಡಿಗ್ರಿ ಸೆಲ್ಸಿಯಸ್ ಇದ್ದರೆ ಉತ್ತಮ . ನೀರನ್ನು ಬೇಸನ್ ಗೆ ಹಾಕಿದ ನಂತರ ನೀರಿನ ಬಿಸಿಯನ್ನು ಮತ್ತೆ ಪರೀಕ್ಷಿಸಿ. ನಲ್ಲಿಯಲ್ಲಿ ನೀರು ಬಿಟ್ಟು ಆ ನೀರಿನಲ್ಲಿ ಮಗುವಿನ ಸ್ನಾನ ಮಾಡಿಸುವ ವೇಳೆ ಎಚ್ಚರದಿಂದಿರಬೇಕು. ಈ ವೇಳೆ ನೀರಿನ ತಾಪಮಾನದಲ್ಲಿ ವ್ಯತ್ಯಾಸವಾಗಬಹುದು.

ಮಗುವಿಗೆ ಭಯ ಹೋಗಲಾಡಿಸಿ

ಮಗುವಿಗೆ ಭಯ ಹೋಗಲಾಡಿಸಿ

ಬಾತ್ ಟಬ್ ನಲ್ಲಿ ಮಗುವನ್ನು ಇಟ್ಟು ಮಗುವಿನ ಮೇಲೆ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಹಾಕುವ ಮೂಲಕ ಮಗುವಿಗೆ ಭಯ ಹೋಗಲಾಡಿಸಿ. ನಂತರ ನಯವಾಗಿ ಸೋಪು ಹಾಕಿ ತಲೆಯ, ಕತ್ತು, ಮುಖ, ಕೈ, ಎದೆ, ಬೆನ್ನಿನ ಭಾಗ, ಜನನಾಂಗ, ಕಾಲನ್ನು ಸ್ವಚ್ಚಗೊಳಿಸಿ. ನಿಮ್ಮೊಂದು ಕೈ ಮಗುವಿನ ಮೇಲೆ ಯಾವಾಗಲು ಇರಲಿ. ಇದು ಮಗುವನ್ನು ಬೆಚ್ಚಗೆ ಮಾಡುತ್ತದೆ ಅಲ್ಲದೇ, ಭದ್ರತೆಯ ಭಾವ ಮೂಡಿಸುತ್ತದೆ ಮತ್ತು ಮಗು ಬೀಳದಂತೆ ತಡೆಯುತ್ತದೆ. ಸ್ನಾನ ಎಂದರೆ ಮಗುವಿನ ದೇಹದಲ್ಲಿ ಹೊರಬರುವ ಚರ್ಮವನ್ನು, ಸಂದಿಗಳಲ್ಲಿರುವ ಕೊಳೆಯನ್ನು ತೆಗೆಯುವುದೇ ಆಗಿದೆ.

ಸ್ನಾನದ ತಕ್ಷಣ ಟವೆಲ್ ಸುತ್ತಿ

ಸ್ನಾನದ ತಕ್ಷಣ ಟವೆಲ್ ಸುತ್ತಿ

ಮಗುವಿನ ಸ್ನಾನ ಮುಗಿದ ಕೂಡಲೇ ಮೆತ್ತಗಿನ ಒಣ ಟವೆಲ್ ನಲ್ಲಿ ಮಗುವನ್ನು ಸುತ್ತಿ. ಹೆಚ್ಚು ಸಮಯ ಹಾಗೇ ಬಿಟ್ಟರೆ ಚಳಿಗೆ ಮಗು ಅಳಲಾರಂಭಿಸುತ್ತದೆ. ನಂತರ ಬಿಸಿಲಿರುವ ಪ್ರದೇಶ ಅಥವಾ ಬೆಚ್ಚಗಿನ ಸ್ಥಳದಲ್ಲಿ ಮಗುವಿನ ದೇಹದಲ್ಲಿರುವ ನೀರು ಮತ್ತು ತೇವಾಂಶವನ್ನು ತೆಗೆದು ಒಣಗಿಸಿ.

ಅಂತಿಮವಾಗಿ ಸಾಂಬ್ರಾಣಿ

ಅಂತಿಮವಾಗಿ ಸಾಂಬ್ರಾಣಿ

ಮಕ್ಕಳಿಗೆ ಸಾಂಬ್ರಾಣಿ ಹೊಗೆ ಕೊಡುವುದು ಹಳೆಯ ಪದ್ಧತಿಯಾಗಿದ್ದರೂ, ಇದು ವೈಜ್ಞಾನಿಕವಾಗಿ ಮಗುವಿನ ದೇಹವನ್ನು ಬೆಚ್ಚಗೆ ಮಾಡಲು ಹಾಗೂ ಕೂದಲು ಬೇಗ ಒಣಗಲು ಈ ಪ್ರಕ್ರಿಯೆಯನ್ನು ಮಾಡುತ್ತಿದ್ದರು. ಮನೆಯಲ್ಲಿ ಸಾಧ್ಯವಾದರೆ, ಸಾಂಬ್ರಾಣಿ ಮಾಡುವ ಬಗ್ಗೆ ಅರಿವಿದ್ದರೆ ಮಗುವಿಗೆ ಸಾಂಬ್ರಾಣಿ ಹೊಗೆ ಕೊಡಬಹುದು. ಇದು ಮಗುವಿಗೆ ಹಿತವೆನಿಸುತ್ತದೆ.

English summary

Tips For Baby Bath

Your baby's bath isn't just for getting clean. It's supposed to be a warm, soothing ritual. It gives parents and babies one-on-one time that's enjoyable for everyone. If your baby screams at the sight, sound, or touch of a bath, you're not alone. It can be distressing for both of you, but eventually this phase will pass.
Story first published: Saturday, September 7, 2019, 15:08 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X