For Quick Alerts
ALLOW NOTIFICATIONS  
For Daily Alerts

ಮಗುವಿಗೆ ಡೈಪರ್ ನಿಂದಾಗುವ ದದ್ದುಗಳ ನಿವಾರಣೆಗೆ ಮನೆಮದ್ದುಗಳು

|

ಮಕ್ಕಳ ಲಾಲನೆ ಪಾಲನೆ ಮಾಡುವುದು ತುಂಬಾ ಕಠಿಣ ಕೆಲಸ. ಮಗು ಪ್ರತಿಯೊಂದು ವಿಚಾರಕ್ಕೂ ಅಳುತ್ತಲೇ ಇರುತ್ತದೆ. ಅದಕ್ಕೆ ತನ್ನ ದೇಹದಲ್ಲಿ ಆಗುವಂತಹ ಯಾವುದೇ ರೀತಿಯ ನೋವು, ಸಂಕಷ್ಟ ಇತ್ಯಾದಿಗಳನ್ನು ಹೇಳಿಕೊಳ್ಳಲು ಆಗಲ್ಲ, ಹೀಗಾಗಿ ಅದು ಅಳುತ್ತಾ ಇರುತ್ತದೆ. ಹೀಗಾಗಿ ಮೊದಲ ಸಲ ಹೆರಿಗೆಯಾಗುವ ಮಹಿಳೆಯರಿಗೆ ಮಗು ಯಾವುದಕ್ಕಾಗಿ ಅಳುತ್ತಿದೆ ಎಂದು ಸರಿಯಾಗಿ ತಿಳಿಯಲು ಸ್ವಲ್ಪ ಸಮಯ ಬೇಕಾಗುತ್ತದೆ.

Natural Home Remedies for Diaper Rash in Babies in Kannada

ಹೆಚ್ಚಾಗಿ ಮಕ್ಕಳು ಮೂತ್ರ, ಮಲ ವಿಸರ್ಜನೆ ಮಾಡಿದ ವೇಳೆ ಅಳುತ್ತವೆ ಮತ್ತು ಕರುಳಿನ ಕ್ರಿಯೆಯು ಸರಿಯಾಗಿ ಆಗದೆ ಇದ್ದಾಗ ಕೂಡ ಅಳುವುದು. ಅದೇ ಹೊಟ್ಟೆ ಹಸಿವಾದರೂ ಅಳುತ್ತವೆ. ಹೆಚ್ಚಾಗಿ ಮಗುವಿಗೆ ಹಾಕುವಂತಹ ಡೈಪರ್ ಕೂಡ ಕೆಲವೊಂದು ಸಲ ಸಮಸ್ಯೆಯನ್ನು ಉಂಟು ಮಾಡುವುದು. ಡೈಪರ್ ನಿಂದಾಗಿ ಮಗುವಿನ ತೊಡೆ ಭಾಗವು ಕೆಂಪಾಗಬಹುದು. ಇದು ನೋವಿನಿಂದಲೂ ಕೂಡಿರುವ ಕಾರಣ ಮಗು ಅಳುತ್ತಿರಬಹುದು.

ಮಗುವಿಗೆ ಅತಿಯಾಗಿ ಡೈಪರ್ ಬಳಕೆ ಮಾಡಿದರೆ ಅದರಿಂದ ಸಮಸ್ಯೆಗಳು ಕಂಡುಬರುವುದು. ಡೈಪರ್ ನಿಂದಾಗಿ ಚರ್ಮದ ಉರಿಯೂತ ಮತ್ತು ಸೋಂಕು ಕಾಣಿಸಬಹುದು. ಇದಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಹಾಗೂ ಯಾವುದೇ ಅಡ್ಡ ಪರಿಣಾಮಗಳನ್ನು ಬೀರದು. ಅಂತಹ ಕೆಲವೊಂದು ಮನೆಮದ್ದುಗಳ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಹಲವಾರು ವಿಧದ ಔಷಧೀಯ ಗುಣಗಳು ಇವೆ ಎನ್ನುವುದು ತಿಳಿದೇ ಇದು. ನೈಸರ್ಗಿಕದತ್ತವಾದ ತೆಂಗಿನಕಾಯಿಯಿಂದ ತಯಾರಿಸುವ ತೆಂಗಿನೆಣ್ಣೆಯು ಚರ್ಮಕ್ಕೆ ತುಂಬಾ ಲಾಭಕಾರಿ ಹಾಗೂ ಇದು ಉರಿಯೂತ ನಿವಾರಣೆ ಮಾಡುವುದು. ಡೈಪರ್ ನಿಂದಾಗಿ ಚರ್ಮ ಕೆಂಪಾಗಿರುವ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಕೊಬ್ಬಿನಾಮ್ಲವು ಹೆಚ್ಚಿನ ಸೋಂಕು ಬರದಂತೆ ತಡೆಯುವುದು. ಪರಿಶುದ್ಧವಾದ ತೆಂಗಿನ ಎಣ್ಣೆಯನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಮಗುವಿನ ದದ್ದುವಿನ ಸಮಸ್ಯೆಯನ್ನು ದೂರ ಮಾಡಬಹುದು. ತೆಂಗಿನ ಎಣ್ಣೆಯಲ್ಲಿ ಹಲವಾರು ವಿಧದ ಪೋಷಕಾಂಶಗಳು ಇವೆ ಮತ್ತು ಇದು ಯಾವುದೇ ಅಡ್ಡ ಪರಿಣಾಮ ಉಂಟು ಮಾಡದು.

ಬಳಸುವ ವಿಧಾನ

ಚಳಿಗಾಲದಲ್ಲಿ ನೀವು ಒಂದು ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ಎರಡು ಅಂಗೈಯ ಮಧ್ಯೆ ಹಾಕಿಕೊಂಡು ಹಾಗೆ ಉಜ್ಜಿ ಬಿಸಿ ಮಾಡಿ ಮತ್ತು ಮಗುವಿನ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ನೀವು ಡೈಪರ್ ಹಾಕಿ.

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲ ತುಂಬಾ ಆರೋಗ್ಯಕಾರಿ ಹಾಗೂ ಹಲವಾರು ವಿಧದ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಹೀಗಾಗಿ ನೀವು ಡೈಪರ್ ನಿಂದಾಗಿ ಆಗಿರುವ ದದ್ದುವಿನ ಸಮಸ್ಯೆ ನಿವಾರಣಗೆ ಇದನ್ನು ಬಳಕೆ ಮಾಡಬಹುದು. ಇದು ನೈಸರ್ಗಿಕವಾಘಿರುವ ಕಾರಣದಿಂದಾಗಿ ಮಗುವಿನ ಸೂಕ್ಷ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಆಲಿವ್ ತೈಲದಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಡೈಪರ್ ನಿಂದಾಗಿ ಆಗುವ ದದ್ದುವಿನ ನಿವಾರಣೆ ಮಾಡುವುದು.

ಬಳಕೆ

ಮಗುವಿನ ತೊಡೆಗಳ ಭಾಗಕ್ಕೆ ಮತ್ತು ಬಾಧಿತ ಜಾಗಕ್ಕೆ ಒಂದು ಚಮಚ ಆಲಿವ್ ತೈಲ ಹಚ್ಚಿ. ದದ್ದು ಹಾಗೂ ಚರ್ಮ ಕೆಂಪಾಗಿರುವುದು ಹಾಗೆ ಗುಣವಾಗುವುದು.

ಹರಳೆಣ್ಣೆ

ಹರಳೆಣ್ಣೆ

ಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿರುವ ಹರಳೆಣ್ಣೆಯು ಔಷಧೀಯ ಮತ್ತು ಚಿಕಿತ್ಸಕ ಗುಣ ಹೊಂದಿದ್ದು, ಇದರಲ್ಲಿ ಇರುವಂತಹ ರಿಲಿನೋಲಿಕ್ ಆಮ್ಲವು ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂಧಿದೆ. ಹರಳೆಣ್ಣೆಯನ್ನು ನೀವು ನೇರವಾಗಿ ಮಗುವಿನ ಚರ್ಮಕ್ಕೆ ಹಚ್ಚಬಹುದು. ಚಳಿಗಾಲದಲ್ಲಿ ಕಾಡುವಂತಹ ಚರ್ಮ ಒಣಗುವ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಡೈಪರ್ ಹಾಕಿದ ವೇಳೆ ಉಂಟಾಗಿರುಂತಹ ಗಾಯ ಅಥವಾ ದದ್ದುಗಳನ್ನು ಇದು ನಿವಾರಣೆ ಮಾಡುವುದು ಮತ್ತು ಚರ್ಮ ಕೆಂಪಾಗಿರುವುದುನ್ನು ಕಡಿಮೆ ಮಾಡುವುದು.

ಬಳಕೆ

ಒಂದು ಚಮಚ ಹರಳೆಣ್ಣೆ ತೆಗೆದುಕೊಂಡು ಅದನ್ನು ನೀವು ಮಗುವಿನ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ಮಗುವಿಗೆ ಡೈಪರ್ ಹಾಕಿ.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾವು ಅದ್ಭುತವಾದ ಔಷಧೀಯ ಗುಣ ಹೊಂದಿದ್ದು, ಇದು ಚರ್ಮ ಹಾಗೂ ಇತರ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ. ಡೈಪರ್ ನಿಂದ ಮಗುವಿಗೆ ಚರ್ಮದಲ್ಲಿ ಆಗುವ ಕಿರಿಕಿರಿಯನ್ನು ಇದು ತಪ್ಪಿಸುವುದು. ಉರಿಯೂತ ಶಮನಕಾರಿ ಗುಣ ಹೊಂದಿರುವ ಇದು ಸೋಂಕು ನಿವಾರಣೆ ಮಾಡುವುದು ಮತ್ತು ವಿಟಮಿನ್ ಇ ಚರ್ಮವನ್ನು ಸರಿಪಡಿಸುವುದು. ದದ್ದುವಿನಿಂದ ಆಗಿರುವ ನೋವು ಕಡಿಮೆ ಮಾಡುವುದು ಮತ್ತು ಚರ್ಮವನ್ನು ಮೊಶ್ಚಿರೈಸ್ ಮಾಡುವುದು.

ಬಳಕೆ

ಸ್ವಲ್ಪ ತಾಜಾ ಅಲೋವೆರಾದ ಲೋಳೆ ತೆಗೆದುಕೊಳ್ಳಿ ಮತ್ತು ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

ಬೇವು

ಬೇವು

ಆಯುರ್ವೇದದಲ್ಲಿ ಹಿಂದಿನಿಂದಲೂ ಬೇವನ್ನು ವಿವಿಧ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗಿದೆ. ಇದು ನೋವು ನಿವಾರಣೆ ಮಾಡುವುದು, ಶಮನಕಾರಿ, ಪೋಷಣೆ ನೀಡುವುದು. ಡೈಪರ್ ನಿಂದ ಆಗಿರುಂತಹ ದದ್ದು ನಿವಾರಣೆಗೆ ಇದು ತುಂಬಾ ಪರಿಣಾಮಕಾರಿ. ಬೇವಿನ ಎಣ್ಣೆಯನ್ನು ಬಳಸಿದರೆ, ಅದು ಚರ್ಮದ ಕಿರಿಕಿರಿ ದೂರ ಮಾಡುವುದು ಮತ್ತು ಶಿಲೀಂಧ್ರಿಯಕ್ಕೂ ಇದು ಪರಿಣಾಮಕಾರಿ. ಪದೇ ಪದೇ ಕಾಡುವಂತಹ ಡೈಪರ್ ನ ದದ್ದುವನ್ನು ಇದು ನಿವಾರಣೆ ಮಾಡುವುದು. ಬೇವಿನಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನೋವು ನಿವಾರಕ ಗುಣಗಳು ಇವೆ.

ಬಳಕೆ

ಸಾವಯಕ ಬೇವಿನ ಎಣ್ಣೆಗೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿಕೊಂಡು ಹಚ್ಚಿ. ಇದನ್ನು ಒಂದು ಹತ್ತಿ ಉಂಡೆ ಬಳಸಿಕೊಂಡು ಮಗುವಿನ ಬಾಧಿತ ಜಾಗಕ್ಕೆ ಹಚ್ಚಬಹುದು. ನೀವು ಇದನ್ನು ನಿಯಮಿತವಾಗಿ ಬಳಕೆ ಮಾಡಿದರೆ, ದದ್ದು ನಿವಾರಣೆ ಆಗುವುದು. ನೀವು ಇದನ್ನು ಹಚ್ಚುವ ಮೊದಲು ಪರೀಕ್ಷೆ ಮಾಡಿ.

English summary

Natural Home Remedies for Diaper Rash in Babies in Kannada

Here we are discussing about Natural Home Remedies for Diaper Rash in Babies in Kannada. there are a host of effective remedies that can be used to treat diaper rashes effectively. Read more.
X
Desktop Bottom Promotion