For Quick Alerts
ALLOW NOTIFICATIONS  
For Daily Alerts

ಪೋಷಕರೇ, ನ್ಯಾಪೀಸ್ (ಡಯಾಪರ್) ಬಳಸಿದರೆ ಶೇ. 90ರಷ್ಟು ಮಕ್ಕಳಿಗೆ ಬರುವುದು ಆರೋಗ್ಯ ಸಮಸ್ಯೆ

|

ಒಂದು 20 ವರ್ಷಗಳ ಹಿಂದೆ ಮಕ್ಕಳಿಗೆ ನ್ಯಾಪೀಸ್ ಬದಲಿಗೆ ಬಳಸುತ್ತಿದ್ದರು, ಆದರೆ ಈಗ ದಿನದ 24 ಗಂಟೆಯೂ ಮಕ್ಕಳಿಗೆ ನ್ಯಾಪೀಸ್ ಬಳಸುತ್ತಾರೆ. ನ್ಯಾಪೀಸ್ ಬಳಿಸಿದರೆ ಒದ್ದೆಯ ಕಿರಿಕಿರಿಯಿಲ್ಲದೆ ಮಗು ಚೆನ್ನಾಗಿ ನಿದ್ದೆ ಮಾಡುತ್ತೆ ಅಲ್ಲದೆ ಆಗಾಗ ಪ್ಯಾಂಡ್‌ ಬದಲಾಯಿಸಬೇಕಾಗಿಲ್ಲ, ಮಕ್ಕಳಿಗೆ ಕಂಫರ್ಟ್‌, ಪೋಷಕರಿಗೂ ಕಂಫರ್ಟ್ ಎಂದು ನ್ಯಾಪೀಸ್ ಬಳಸುತ್ತೇವೆ, ಆದರೆ ಈ ನ್ಯಾಪೀಸ್ ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿ ಎಂಬ ಆಘಾತಕಾರಿ ಅಂಶವನ್ನು ಒಂದು ಅಧ್ಯಯನ ವರದಿ ಹೇಳಿದೆ.

ನ್ಯಾಪೀಸ್‌ನಲ್ಲಿರುವ ರಾಸಾಯನಿಕ ಅಂಶ ಶೇ. 90ರಷ್ಟು ಮಕ್ಕಳಿಗೆ ಅನಾರೋಗ್ಯ ಉಂಟು ಮಾಡುತ್ತೆ ಎಂದು ಈ ವರದಿ ಹೇಳಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ಅಧ್ಯಯನ ವರದಿ

ಅಧ್ಯಯನ ವರದಿ

ಫ್ರಾನ್ಸ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶ ತಿಳಿದು ಬಂದಿದೆ. ANSES ಎಂಬ ಏಜೆನ್ಸಿ ಮಾರಾಟವಾಗುತ್ತಿರುವ ವಿವಿಧ ನ್ಯಾಪೀಸ್ಗಳನ್ನು ಪರೀಕ್ಷೆ ಮಾಡಿತು. ಆಗ ನ್ಯಾಪೀಸ್ನಲ್ಲಿ 38ಕ್ಕೂ ಅಧಿಕ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ನ್ಯಾಪೀಸ್ ತಯಾರಿಸಲಾಗುತ್ತದೆ. ಇವುಗಳುಮಕ್ಕಳಿಗೆ ಬಳಸಲು ಸುರಕ್ಷಿತವಲ್ಲ ಎಂದು ಈ ಅಧ್ಯಯನ ವರದಿ ಹೇಳಿದೆ.

ಹಾರ್ಮೋನ್‌ಗಳನ್ನು ಬದಲಾಯಿಸುತ್ತೆ ನ್ಯಾಪೀಸ್

ಹಾರ್ಮೋನ್‌ಗಳನ್ನು ಬದಲಾಯಿಸುತ್ತೆ ನ್ಯಾಪೀಸ್

ಈ ರಾಸಾಯನಿಕವಿರುವ ನ್ಯಾಪೀಸ್‌ಗಳನ್ನು ಬಳಸುವುದರಿಂದ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು.

ಪ್ರತಿ ನಿಮಿಷಕ್ಕೆ 1000 ನ್ಯಾಪೀಸ್ ಉತ್ಪಾದನೆಯಾಗುತ್ತಿದೆ ಅದರಲ್ಲಿ ಪ್ಯಾಂಪರ್‌ ಹಾಗೂ ಹಗ್ಗೀಸ್‌ ಎಂಬ ಎರಡು ಬ್ರ್ಯಾಂಡ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.

ತುಂಬಾ ಸಮಯದ ಬಳಿಕ ಕಾಡಲಿದೆ ಆರೋಗ್ಯ ಸಮಸ್ಯೆ

ತುಂಬಾ ಸಮಯದ ಬಳಿಕ ಕಾಡಲಿದೆ ಆರೋಗ್ಯ ಸಮಸ್ಯೆ

ಈ ಅಧ್ಯಯನವು 14 ಮಿಲಿಯನ್‌ ಯುರೋಪಿಯನ್‌ ಮಕ್ಕಳು ಈ ನ್ಯಾಪೀಸ್ನಿಂದಾಗಿ ಆರೋಗ್ಯ ಸಮಸ್ಯೆ ಎದುರಿಸಲಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

ಇದರಿಂದ ಕ್ಯಾನ್ಸರ್, ಎಂಡೋಕ್ರೈನ್‌ ಮುಂತಾದ ತೊಂದರೆಗಳು ಕಾಣಿಸಬಹುದು ಅಲ್ಲದೆ ಭವಿಷ್ಯದಲ್ಲಿ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

EU ವಿಷಕಾರಿ ನ್ಯಾಪೀಸ್‌ಗಳನ್ನು ಬ್ಯಾನ್‌ ಮಾಡಲಿದೆಯೇ?

EU ವಿಷಕಾರಿ ನ್ಯಾಪೀಸ್‌ಗಳನ್ನು ಬ್ಯಾನ್‌ ಮಾಡಲಿದೆಯೇ?

ANSES ರಿಸರ್ಚ್ ವರದಿ 2019ರಲ್ಲಿ ಪ್ರಕಟವಾಗಿತ್ತು. ನಂತರ ಪ್ರಮುಖ 9 ಬ್ರ್ಯಾಂಡ್‌ಗಳನ್ನು ಸಂಶೋಧನೆ ಮಾಡಲಾಯಿತು. ಬ್ರ್ಯಾಂಡೆಡ್‌ ನ್ಯಾಪೀಸ್ಗಳಲ್ಲಿ ಫಾರ್ಮಲೀಹೈಡ್, ಕಾರ್ಸಿಜೆನ್‌ ರಾಸಾಯನಿಕ ಅಂಶಗಳು ಪತ್ತೆಯಾಗಿದೆ, ಇವುಗಳು ಕ್ಯಾನ್ಸರ್‌ಗಳಾಗಿವೆ.

EU ರಾಸಾಯನಿಕ ನ್ಯಾಪೀಸ್‌ಗಳನ್ನು ಬ್ಯಾನ್‌ ಮಾಡಲು ಮುಂದಾಗಿದೆ.

 ಪೋಷಕರು ತಿಳಿಯದೆ ಬಳಸುತ್ತಿದ್ದಾರೆ

ಪೋಷಕರು ತಿಳಿಯದೆ ಬಳಸುತ್ತಿದ್ದಾರೆ

ತಾವು ನ್ಯಾಪೀಸ್ಗಳನ್ನು ಬದಲಾಯಿಸಿದಷ್ಟೂ ಮಕ್ಕಳಿಗೆ ಅಪಾಯಕಾರಿ ಎಂಬುವುದು ಎಷ್ಟೋ ಪೋಷಕರಿಗೆ ಗೊತ್ತಿಲ್ಲ, ಈ ರಾಸಾಯನಿಕ ನ್ಯಾಪೀಸ್ ಬದಲಿಗೆ ಮಕ್ಕಳಿಗೆ ಶುಷಿಯಾದ ಬಟ್ಟೆಗಳನ್ನು ಬಳಸಿ ಅಲ್ಲದೆ ಅವರಿಗೆ ಬೇಗನೆ ಟಾಯ್ಲೆಟ್‌ ಟ್ರೈನಿಂಗ್ ಕೊಡಿ, ಒಂದೂವರೆ ವರ್ಷ ಆಗುವಷ್ಟರಲ್ಲಿ ಈ ನ್ಯಾಪೀಸ್ ಬಳಕೆ ಸಂಪೂರ್ಣ ತಡೆಯಬಹುದು.

English summary

Nappies filled with toxic chemicals pose a health risk to 90% of babies - so why isn't the EU acting

France study says nappies filled with toxic chemicals pose a health risk to 90% of babies, read on...
Story first published: Friday, July 22, 2022, 15:20 [IST]
X
Desktop Bottom Promotion