For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಬಾಯಿ ಹುಣ್ಣಿನ ಸಮಸ್ಯೆ: ಕಾರಣ ಹಾಗೂ ತಡೆಗಟ್ಟುವುದು ಹೇಗೆ?

|

ಬಾಯಲ್ಲಿ ಹುಣ್ಣಿನ ಸಮಸ್ಯೆ ದೊಡ್ಡವರಿಗೆ ಮಾತ್ರವಲ್ಲ ಕೆಲವೊಮ್ಮೆ ಚಿಕ್ಕ ಮಕ್ಕಳಲ್ಲಿಯೂ ಕಂಡು ಬರುತ್ತದೆ. ಮಗುವಿಗೆ ಬಾಯಲ್ಲಿ ಹುಣ್ಣಾದಾಗ ತುಂಬಾನೇ ಕಿರಿಕಿರಿ ಮಾಡುತ್ತದೆ. ತುಂಬಾ ಅಳುವುದು, ತಿನ್ನಲು, ಕುಡಿಯಲು ಹಿಂದೇಟು ಹಾಕುವುದು. ಮಗುವಿನಲ್ಲಿ ಫಾಲಿಕ್‌ ಆಮ್ಲದ ಕೊರತೆ ಉಂಟಾದರೆ, ವಿಟಮಿನ್ ಬಿ 12 ಮತ್ತು ಕಬ್ಬಿಣದಂಶದ ಕೊರತೆಯುಂಟಾದರೆ ಈ ರೀತಿ ಉಂಟಾಗುವುದು.

ಮಗುವಿಗೆ ಬಾಯಿ ಹುಣ್ಣು ಏಕೆ ಬರುತ್ತದೆ, ಇದಕ್ಕೆ ಪರಿಹಾರವೇನು ತಿಳಿದುಕೊಂಡರೆ ಈ ರೀತಿಯ ಸಮಸ್ಯೆ ಮರುಕಳಿಸುವುದನ್ನು ತಡೆಗಟ್ಟಬಹುದು. ನಾವಿಲ್ಲಿ ಮಕ್ಕಳಲ್ಲಿ ಬಾಯಿ ಹುಣ್ಣಿನ ಸಮಸ್ಯೆ ತಡೆಗಟ್ಟಲು ಪೋಷಕರು ತಿಳಿದಿರಬೇಕಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ, ಇದರಿಂದ ನಿಮಗೆ ಮಕ್ಕಳಿಗೆ ಬಾಯಿ ಹುಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯವಾದೀತು.

ಬಾಯಿ ಹುಣ್ಣು ಎಂದರೇನು?

ಬಾಯಿ ಹುಣ್ಣು ಎಂದರೇನು?

ಬಾಯಲ್ಲಿ ಏನಾದರೂ ಗಾಯವಾದಾಗ ಅಂದ್ರೆ ಹಲ್ಲುಜ್ಜುವಾಗ ಬ್ರೆಷ್‌ ತಾಗಿ ಗಾಯವಾದರೆ ಉಂಟಾಗುವುದು ಅಥವಾ ಕೆಲವೊಮ್ಮೆ ಹಲ್ಲಿನ ಚಿಕಿತ್ಸೆಯಿಂದಾಗಿ ಬಾಯಲ್ಲಿ ಹುಣ್ಣುಗಳು ಕಂಡು ಬರುವುದು. ಕೆಲ ಮಕ್ಕಳಲ್ಲಿ ವಿಟಮಿನ್‌ ಕೊರತೆ ಹಾಗೂ ಸೋಂಕಿನ ಕಾರಣದಿಂದ ಬಾಯಿ ಹುಣ್ಣು ಉಂಟಾಗುವುದು.

ಬಾಯಿ ಹುಣ್ಣಿನ ವಿಧಗಳು

ಬಾಯಿ ಹುಣ್ಣಿನ ವಿಧಗಳು

ಮಕ್ಕಳಿಗೆ ಬರುವ ಬಾಯು ಹುಣ್ಣನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಬಾಯಿ ಹುಣ್ಣು ಕಾಣಿಸುವ ರೀತಿ ಹಾಗೂ ಗುಣವಾಗಲು ತೆಗೆದುಕೊಳ್ಳುವ ಸಮಯದ ಅನುಸಾರ ಇದರ ಬಗೆಗಳನ್ನು ಹೆಸರಿಸಲಾಗಿದೆ.

* ಅಲ್ಪ ಪ್ರಮಾಣದ ಬಾಯಿ ಹುಣ್ಣು: ಈ ಹುಣ್ಣು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತದೆ. ಇದು ವೃತ್ತಾಕಾರವಾಗಿ ಅಥವಾ ಮೊಟ್ಟೆಯ ಆಕಾರದಲ್ಲಿರುತ್ತದೆ. ಈ ಹುಣ್ಣು ಒಂದರಿಂದ ಎರಡು ವಾರಗಳಲ್ಲಿ ಒಣಗುವುದು, ಕಲೆ ಕೂಡ ಇರುವುದಿಲ್ಲ.

* ದೊಡ್ಡ ಗಾತ್ರದ ಬಾಯಿ ಹುಣ್ಣು: ಇದು ಚಿಕ್ಕ ಗಾತ್ರದ ಬಾಯಿ ಹುಣ್ಣಿಗಿಂತ ದೊಡ್ಡದಾಗಿರುತ್ತದೆ, ಈ ರೀತಿಯ ಹುಣ್ಣು ಒಣಗಲು ಕೆಲವು ವಾರಗಳೇ ಬೇಕಾಗುವುದು ಜೊತೆಗೆ ಹುಣ್ಣು ದೊಡ್ಡದಾಗಿರುವುದರಿಮದ ಗಾಂದ ಕಲೆ ಉಳಿಯುವ ಸಾಧ್ಯತೆ ಇದೆ.

ಹರ್ಪೀಸ್‌ ರೀತಿಯ ಬಾಯಿ ಹುಣ್ಣು: ಈ ಬಾಯಿ ಹುಣ್ಣಿನ ಹೆಸರೇ ಸೂಚಿಸುವಂತೆ ಇದು ಹರ್ಪೀಸ್ ರೀತಿಯಲ್ಲಿರುತ್ತದೆ. ಹೆಚ್ಚಿನ ಕೇಸ್‌ಗಳಲ್ಲಿ ಬಾಯಿ ಹುಣ್ಣಿಗೆ ವೈದ್ಯಕೀಯ ಚಿಕಿತ್ಸೆಯ ಅಗ್ಯತವಿಲ್ಲ, ಆದರೆ ಮಗುವಿಗೆ ಇದರಿಂದ ತುಂಬಾ ಕಿರಿಕಿರಿಯಾಗುತ್ತಿದ್ದರೆ ಕೂಡಲೇ ಮಕ್ಕಳ ತಜ್ಞರಿಗೆ ತೋರಿಸಿ.

ಮಕ್ಕಳಲ್ಲಿ ಬಾಯಿ ಹುಣ್ಣಿಗೆ ಕಾರಣಗಳು

ಮಗುವಿನ ಬಾಯಿ ಒಳಗೆ ಗಾಯವಾದಾಗ ಬಾಯಿ ಹುಣ್ಣು ಉಂಟಾಗುವುದು. ಇನ್ನು ಕೆಲ ಮಕ್ಕಳಿಗೆ ವಂಶಪಾರಂಪರ್ಯವಾಗಿ ಸಿಗುವುದು. ಮಗುವಿನಲ್ಲಿ ಈ ಕಾರಣದಿಂದಾಗಿ ಬಾಯಿ ಹುಣ್ಣಿನ ಸಮಸ್ಯೆ ಉಂಟಾಗುವುದು.

* ಮಗುವಿಗೆ ವಿಟಮಿನ್‌ಗಳ ಕೊರತೆ ಉಂಟಾದಾಗ

* ಅಲರ್ಜಿ ಉಂಟು ಮಾಡುವ ಆಹಾರಗಳು

* ಬಾಯಿ ಒಳಗೆ ಬ್ರೆಷ್ ತಾಗಿ ಗಾಯವಾದರೆ

* ವಂಶಪಾರಂಪರ್ಯವಾಗಿ

* ಕೆಲವೊಮ್ಮೆ ವೈರಲ್ ಸೋಂಕಿನಿಂದಾಗಿ ಉಂಟಾಗುವುದು.

ಮಗುವಿಗೆ ಬಾಯಿ ಹುಣ್ಣಾಗಿದೆ ಎಂದು ಹೇಳುವ ಲಕ್ಷಣಗಳು

ಮಗುವಿಗೆ ಬಾಯಿ ಹುಣ್ಣಾಗಿದೆ ಎಂದು ಹೇಳುವ ಲಕ್ಷಣಗಳು

* ಬಾಯಿ ಒಳಗಡೆ ನಾಲಗೆ ಹಾಗೂ ದವಡೆ ಭಾಗದಲ್ಲಿ ಕೆಂಪು ಗುಳ್ಳೆಗಳು ಎದ್ದಿರುತ್ತದೆ. ಅದರ ಸುತ್ತ ಹಳದಿ ಅಥವಾ ಬಿಳಿ ಬಣ್ಣ ಇರುತ್ತದೆ.

* ಬಾಯಿ ಒಳಗಡೆ ಉರಿ ಹಾಗೂ ನೋವಿನ ಅನುಭವ

* ಗುಳ್ಳೆ ಎದ್ದ ಭಾಗದಲ್ಲಿ ಊತ

* ಬಾಯಿ ಹುಣ್ಣಾದಾಗ ಊಟ ಮಾಡುವಾಗ ಅಥವಾ ಹಲ್ಲುಜ್ಜುವಾಗ ರಕ್ತ ಬರುವುದು.

ಜ್ವರ ಬಂದಾಗ ಬರುವ ಹುಣ್ಣಿಗಿಂತ ಭಿನ್ನ ಈ ಬಾಯಿ ಹುಣ್ಣು

ಕೆಲ ಮಕ್ಕಳಿಗೆ ಜ್ವರ ಬಂದಾಗ ತುಟಿಯ ಸಮೀಪ ಗುಳ್ಳೆಗಳು ಬರುತ್ತದೆ, ಇದು ಬಾಯಿ ಹುಣ್ಣಿಗಿಂತ ಭಿನ್ನವಾಗಿರುತ್ತೆ. ಬಾಯಿ ಹುಣ್ಣು ಬಾಯಿ ಒಳಗಡೆ ಮೃದುವಾದ ಭಾಗದಲ್ಲಿ ಕಮಡು ಬರುವುದು.

ಚಿಕಿತ್ಸೆ:

ಚಿಕಿತ್ಸೆ:

* ಬಾಯಿ ಹುಣ್ಣು ಬಂದಾಗ ಹೆಚ್ಚಿನ ಸಂದರ್ಭದಲ್ಲಿ ಹಾಗೇ ಒಣಗುವುದು.

* ಬಿಸಿಯಾದ, ಖಾರವಾದ, ಹುಳಿಯ ಆಹಾರ ನೀಡಬೇಡಿ.

* ಮಕ್ಕಳ ತಜ್ಞರು ಸೂಚಿಸಿದ ಜೆಲ್‌ ಅಥವಾ ಕ್ರೀಮ್ ಹಚ್ಚಿ ಕೊಡಿ.

* ಮಕ್ಕಳಿಗೆ ನೀವು ಸ್ವ ಚಿಕಿತ್ಸೆ ಮಾಡಬೇಡಿ.

 ಬಾಯಿ ಹುಣ್ಣಿಗೆ ಮನೆಮದ್ದು

ಬಾಯಿ ಹುಣ್ಣಿಗೆ ಮನೆಮದ್ದು

* ಬಾಯಿ ಹುಣ್ಣು ಬಂದಾಗ ಐಸ್‌ಕ್ಯೂಬ್‌ ಇಡಿ.

* ಬಾಯಿ ಹುಣ್ಣಿನ ಮೇಲೆ ಸ್ವಲ್ಪ ತುಪ್ಪ ಸವರಿ (6 ತಿಂಗಳು ಕಳೆದ ಮೇಲೆ ಮಾತ್ರ ಈ ಮನೆಮದ್ದು ಮಾಡಿ)

* ಕುಡಿಯಲು ನೀರು ಕೊಡಿ.

* ಖಾರ ಹಾಗೂ ಹುಳಿ ಪದಾರ್ಥಗಳನ್ನು ನೀಡಬೇಡಿ.

ಮಗುವಿಗೆ ಬಾಯಿ ಹುಣ್ಣು ಬರುವುದನ್ನು ತಡೆಗಟ್ಟುವುದು ಹೇಗೆ?

ಮಗುವಿಗೆ ಬಾಯಿ ಹುಣ್ಣು ಬರುವುದನ್ನು ತಡೆಗಟ್ಟುವುದು ಹೇಗೆ?

* ಮಗುವಿಗೆ ಆಹಾರ ನೀಡುವಾಗ, ಎದೆ ಹಾಲುಣಿಸುವ ಮುನ್ನನಿಮ್ಮ ಕೈಗಳನ್ನು ತೊಳೆಯಿರಿ.

* ಮಗುವಿಗೆ ಬಾಯಿ ಹುಣ್ಣಾದಾಗ ಅದನ್ನು ಮುಟ್ಟಿ, ನಂತರ ಕೈ ತೊಳೆಯದೆ ಮಗುವಿನ ಕಣ್ಣು ಮುಟ್ಟಬೇಡಿ.

* ಮಗುವಿಗೆ ಆರೋಗ್ಯಕರ ಆಹಾರ ನೀಡಿ, ಕುಡಿಯಲು ಸಾಕಷ್ಟು ನೀರು ಅಥವಾ ತಾಜಾ ಜ್ಯೂಸ್ ನೀಡಿ.

* ಮಕ್ಕಳ ಆಟಿಕೆ, ಆಡುವ ಸ್ಥಳ ಸ್ವಚ್ಛವಾಗಿರಲಿ.

ಮಗುವನ್ನು ಯಾವಾಗ ವೈದ್ಯರಿಗೆ ತೋರಿಸಬೇಕು?

ಮಗುವನ್ನು ಯಾವಾಗ ವೈದ್ಯರಿಗೆ ತೋರಿಸಬೇಕು?

* ಕಡು ಬಣ್ಣದ ಮೂತ್ರ, ಬಾಯಿ ಒಣಗಿರುವುದು, ಕಣ್ಣುಗಳಲ್ಲಿ ನೀರಿಲ್ಲದಿದ್ದರೆ ವೈದ್ಯರಿಗೆ ತೋರಿಸಿ, ಇವುಗಳು ದೇಹದಲ್ಲಿ ನೀರಿನಂಶ ಕಡಿಮೆಯಾಗಿರುವುದರ ಲಕ್ಷಣಗಳಾಗಿವೆ.

* ಮಗು ತುಂಬಾ ಸುಸ್ತಾಗಿದ್ದರೆ

* ಮಗುವಿನ ತುಟಿಯಲ್ಲೂ ಕೂಡ ಕೆಂಪು ಗುಳ್ಳೆಗಳು ಇದ್ದರೆ

* ಔಷಧಿ ನೀಡಿದ ಬಳಿಕ ಬಾಯಿ ಹುಣ್ಣಿನ ಸಮಸ್ಯೆ ಉಂಟಾಗಿದ್ದರೆ

* ಏನಾದರೂ ರಾಸಾಯನಿಕದಿಂದ ಉಂಟಾಗಿರಬಹುದು ಎಂದು ನೀವು ಭಾವಿಸಿದ್ದರೆ

* ಹಲ್ಲು ನೋವು ಕೂಡ ಇದ್ದರೆ

* ಬಾಯಿ ಹುಣ್ಣಿನ ಜೊತೆಗೆ ಜ್ವರ ಇದ್ದರೆ

ಈ ಎಲ್ಲಾ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ.

English summary

Mouth Ulcers in Babies Causes, Signs, Symptoms and Treatment in Kannada

Mouth Ulcers in Babies Causes, Signs, Symptoms & Treatment, Read on....
X
Desktop Bottom Promotion