For Quick Alerts
ALLOW NOTIFICATIONS  
For Daily Alerts

ಯಾವ ಅಂಶಗಳು ಎದೆ ಹಾಲಿನ ಗುಣಮಟ್ಟ ಕುಗ್ಗಿಸುತ್ತೆ

|

ನಿಮ್ಮ ಎದೆಹಾಲಿನ ಉತ್ಪತ್ತಿಯ ಕುರಿತು ನೀವು ಚಿಂತಿತರಾಗಿರುವಿರಾ ? ನಿಮ್ಮ ಬಗ್ಗೆ ಸ್ವಯಂ ಕಾಳಜಿ ವಹಿಸಿಕೊಳ್ಳುವುದು, ಸಾಧ್ಯವಾದಷ್ಟು ಮಾನಸಿಕ ಒತ್ತಡವನ್ನು ತಗ್ಗಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು, ಅಥವಾ ಒತ್ತಡದೊಂದಿಗೆ ಇನ್ನಷ್ಟು ಆರೋಗ್ಯಪೂರ್ಣವಾಗಿ ವ್ಯವಹರಿಸುವುದು ಹಾಗೂ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರೊಂದಿಗೆ, ನೀವು ಒಂದು ವಿಭಿನ್ನ ಲೋಕವನ್ನೇ ಸೃಷ್ಟಿಸಿಕೊಳ್ಳಬಹುದು.

List of factors That can affect your breastmilk

ಜೀವನದ ಆರಂಭದ ದಿನಗಳಲ್ಲಿ, ಪ್ರತಿಯೊಂದು ಶಿಶುವಿಗೂ ಅತ್ಯಗತ್ಯವಾಗಿರುವ ಪ್ರಮುಖ ಖನಿಜಾಂಶಗಳನ್ನು ಮತ್ತು ಜೀವಸತ್ತ್ವಗಳನ್ನು ಒಳಗೊಂಡಿರುತ್ತದೆ ಎದೆಹಾಲು. ಇವುಗಳನ್ನೂ ಹೊರತುಪಡಿಸಿ, ಮಗುವಿನ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾಗಿರುವ ಮಹತ್ವದ ಧಾತುಗಳನ್ನು ನವಜಾತ ಶಿಶುವಿಗೆ ಎದೆಹಾಲು ಒದಗಿಸುತ್ತದೆ. ಆದರೆ, ತಾಯಿಯ ಎದೆಹಾಲಿನ ಉತ್ಪಾದನೆಯು ಇನ್ನಿತರ ಹಲವಾರು ಅಂಶಗಳ ಮೇಲೂ ಅವಲಂಬಿತವಾಗಿದೆ.

ಈ ಅಂಶಗಳು ಎದೆಹಾಲಿನ ವಾಸನೆ ಮತ್ತು ರುಚಿಯನ್ನು ಋಣಾತ್ಮಕವಾಗಿ ಪ್ರಭಾವಿಸಬಲ್ಲವು ಹಾಗೂ ಆ ಹಾಲನ್ನು ಕುಡಿಯುವ ಮಗುವಿನ ಆರೋಗ್ಯದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರಬಲ್ಲವು. ಈ ಅಂಶಗಳ ಪೈಕಿ ಕೆಲವು ತಾಯಿಯ ನಿಯಂತ್ರಣದಲ್ಲಿರಲಾರವಾದರೂ ಕೂಡ, ಇತರ ಕೆಲವನ್ನು ಇನ್ನಷ್ಟು ಯೋಜನಾಬದ್ಧತೆಯೊಂದಿಗೆ ಹಾಗೂ ಕುಟುಂಬ ಹಾಗೂ ಒಡನಾಡಿಗಳ ಬೆಂಬಲದೊಂದಿಗೆ ನಿಭಾಯಿಸುವುದಕ್ಕೆ ಸಾಧ್ಯವಿದೆ.

ಎದೆಹಾಲಿನ ಬಣ್ಣ, ಗಾತ್ರ, ಮತ್ತು ಆವೃತ್ತಿಗಳನ್ನು ಪ್ರಭಾವಿಸಬಲ್ಲ ಅಂಶಗಳ ಪಟ್ಟಿಯನ್ನು ನಾವಿಲ್ಲಿ ಕೊಟ್ಟಿದ್ದೇವೆ:

 ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಎದೆಹಾಲಿನ ಪೂರೈಕೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಒಂದು ಮಾನಸಿಕ ಒತ್ತಡ. ಒತ್ತಡ ಹಾಗೂ ಉದ್ವೇಗಗಳೆರಡೂ ತಾಯಿಯ ದೇಹದಲ್ಲಿ ಅಡ್ರಿನಾಲಿನ್ ಉತ್ಪಾದನೆಯ ಮಟ್ಟವನ್ನು ದ್ವಿಗುಣಗೊಳಿಸುತ್ತವೆ. ಇದು ಒಂದು ವಿಧದಲ್ಲಿ ಎದೆಹಾಲ ಹೊರಹೊಮ್ಮುವಿಕೆಯ ನೈಸರ್ಗಿಕ ಪ್ರಕ್ರಿಯೆಯನ್ನು ನಿರ್ಬಂಧಿಸುತ್ತದೆ.

ಸರಿಯಾದ/ಆರೋಗ್ಯದಾಯಕವಾದ ಆಹಾರ ಪದ್ಧತಿಯನ್ನು ಅನುಸರಿಸದಿರುವುದು

ಸರಿಯಾದ/ಆರೋಗ್ಯದಾಯಕವಾದ ಆಹಾರ ಪದ್ಧತಿಯನ್ನು ಅನುಸರಿಸದಿರುವುದು

ಆಹಾರಪದ್ಧತಿಯು ನಮ್ಮ ಜೀವನದ ವಿಚಾರದಲ್ಲಿ ಬಹು ಪ್ರಧಾನವಾದ ಪಾತ್ರವಹಿಸುತ್ತದೆ. ಓರ್ವ ತಾಯಿಯಾಗಿ ನಿಮ್ಮ ಮಗುವಿಗೆ ಅಗತ್ಯವಿರುವಷ್ಟು, ಸರಿಯಾದ ಪ್ರಮಾಣದ ಎದೆಹಾಲನ್ನೂಡಿಸುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವ ದಿಶೆಯಲ್ಲಿ ಒಂದು ಉತ್ತಮ ಆಹಾರ ಪದ್ಧತಿಯನ್ನು ನೀವು ಅನುಸರಿಸುವುದು ತುಂಬಾ ಮುಖ್ಯ. ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಯೋಗ್ಯವಾದ ಮತ್ತು ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಒಂದು ಆರೋಗ್ಯಯುತ ಆಹಾರಪದ್ಧತಿಯು ನಿಮಗೆ ಒದಗಿಸುತ್ತದೆ ಹಾಗೂ ನಿಮ್ಮ ನವಜಾತ ಶಿಶುವಿಗೆ ಒದಗಿಸುವುದಕ್ಕಾಗಿ ಒಳ್ಳೆಯ ಗುಣಮಟ್ಟದ ಎದೆಹಾಲನ್ನು ನಿಮ್ಮ ದೇಹವು ಉತ್ಪಾದಿಸುವ ರೀತಿಯಲ್ಲಿ ಅನುವು ಮಾಡಿಕೊಡುತ್ತದೆ. ನಿಮ್ಮ ದೈನಂದಿನ ಭೋಜನ ಯೋಜನೆಯಲ್ಲಿ ಸೇಬಿನೊಂದಿಗೆ ಒಂದಿಷ್ಟು ಶೇಂಗಾ ಬೆಣ್ಣೆ ಅಥವಾ ಒಂದಿಷ್ಟು ಹಮ್ಮಸ್ ನ ಜೊತೆಗೆ ಒಂದಿಷ್ಟು ಕ್ವಿನೊವಾ ಕ್ರ್ಯಾಕರ್ಸ್ ನಂತಹ ಆರೋಗ್ಯದಾಯಕ ತಿನಿಸುಗಳನ್ನು ನೀವು ಸೇರಿಸಿಕೊಳ್ಳಬಹುದು. ನೀವು ಸೇವಿಸುವ ಆಹಾರದ ಪ್ರಕಾರವು ನಿಮ್ಮ ಎದೆಹಾಲಿನ ಸ್ವಾದವನ್ನು ಬದಲಾಯಿಸಬಲ್ಲದು ಎಂಬ ಅಂಶವನ್ನು ನೆನಪಿಟ್ಟುಕೊಳ್ಳಿರಿ.

ಧೂಮಪಾನವನ್ನು ನಿಲ್ಲಿಸಿರಿ

ಧೂಮಪಾನವನ್ನು ನಿಲ್ಲಿಸಿರಿ

ಯಾರ ವಿಚಾರದಲ್ಲೇ ಆಗಿರಲೀ, ಧೂಮಪಾನವು ಆರೋಗ್ಯಕ್ಕೆ ಹಾನಿಕರ ಎಂದೇ ಪರಿಗಣಿತವಾಗಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿ ಸ್ತ್ರೀಯರ ಅಥವಾ ಹೊಸ ತಾಯಂದಿರ ವಿಚಾರದಲ್ಲಂತೂ ಧೂಮಪಾನವು ಅವರ ಎದೆಹಾಲಿನ ಉತ್ಪಾದನೆಯ ಪ್ರಮಾಣವನ್ನು ದಿಢೀರನೇ ತಗ್ಗಿಸಬಲ್ಲದು. ಏಕೆಂದರೆ, ಧೂಮಪಾನವು ಶರೀರದಲ್ಲಿ ಪ್ರೊಲಾಕ್ಟಿನ್ ಮತ್ತು ಆಕ್ಸಿಟೋನಿನ್ ಹಾರ್ಮೋನುಗಳ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಪ್ರೊಲಾಕ್ಟಿನ್ ಹಾರ್ಮೋನು ಸ್ತನಗಳ ಬೆಳವಣಿಗೆಯಲ್ಲಿ ಮತ್ತು ಎದೆಹಾಲಿನ ಉತ್ಪಾದನೆಯಲ್ಲಿ ನೆರವಾಗುತ್ತದೆ. ನಿಕೋಟಿನ್ ಮತ್ತು ತಂಬಾಕುಗಳು ಪ್ರೊಲಾಕ್ಟಿನ್ ಹಾರ್ಮೋನಿನ ಉತ್ಪಾದನೆಯನ್ನು ನಿರ್ಬಂಧಗೊಳಿಸುವುದರ ಮೂಲಕ, ಎದೆಹಾಲಿನ ಒಟ್ಟಾರೆ ಉತ್ಪಾದನೆಯನ್ನು ಪ್ರಭಾವಿಸುತ್ತವೆ. ಗರ್ಭಿಣಿ ಸ್ತ್ರೀಯೋರ್ವಳು ಧೂಮಪಾನ ಮಾಡುತ್ತಿದ್ದಲ್ಲಿ, ಅದು ಆಕೆಯ ಗರ್ಭಸ್ಥ ಶಿಶುವಿನ ಬೆಳವಣಿಗೆ ಮತ್ತು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.

ಕೆಫೀನ್‍ಯುಕ್ತ ಪಾನೀಯಗಳನ್ನು ವರ್ಜಿಸಿರಿ

ಕೆಫೀನ್‍ಯುಕ್ತ ಪಾನೀಯಗಳನ್ನು ವರ್ಜಿಸಿರಿ

ಮಧ್ಯರಾತ್ರಿಯ ಹೊತ್ತಲ್ಲಿ ಮಗುವಿಗೆ ಮೊಲೆಹಾಲುಣಿಸಿ ಬಳಲಿರಬಹುದಾದ ಮೊಲೆಹಾಲುಣಿಸುವ ತಾಯಂದಿರಿಗೆ ಮುಂಜಾನೆಯ ಹೊತ್ತಲ್ಲಿ, ಒಂದು ಕಪ್‍ನಷ್ಟು ಬಿಸಿ ಬಿಸಿ ಕಾಫಿಯನ್ನು ಆನಂದಿಸುವ ಮನಸ್ಸಾದೀತು. ಆದರೆ ಹೀಗೆ ಮಾಡುವುದರಿಂದ ಅದು ಎದೆಹಾಲಿನ ಘಟಕಗಳನ್ನೇ ಬದಲಾಯಿಸುವ ಸಾಧ್ಯತೆ ಇದೆ. ಕೆಫೀನ್ ನಿಮ್ಮ ಎದೆಹಾಲಿನೊಂದಿಗೆ ಬೆರೆತುಕೊಳ್ಳುತ್ತದೆ ಹಾಗೂ ಈ ಹಾಲನ್ನು ನೀವು ನಿಮ್ಮ ಶಿಶುವಿಗೆ ಉಣಿಸಿದಾಗ, ಅದು ನಿಮ್ಮ ಶಿಶುವಿನ ನಿದ್ರಾಚಕ್ರವನ್ನು ಬದಲಾಯಿಸುತ್ತದೆ. ಜೊತೆಗೆ, ದೊಡ್ಡ ಪ್ರಮಾಣಗಳಲ್ಲಿ ಕೆಫೀನ್‍ನ ಸೇವನೆಯು ಒಳಗಿನಿಂದಲೇ ನಿಮ್ಮ ಶರೀರವನ್ನು ನಿರ್ಜಲೀಕರಣಗೊಳಿಸಬಲ್ಲದು ಹಾಗೂ ಇದರಿಂದ ನಿಮ್ಮ ಎದೆಹಾಲಿನ ಉತ್ಪಾದನೆಯು ಕುಂಠಿತಗೊಳ್ಳುತ್ತದೆ.

ಗರ್ಭನಿರೋಧಕ ಗುಳಿಗೆಗಳ ಸೇವನೆ

ಗರ್ಭನಿರೋಧಕ ಗುಳಿಗೆಗಳ ಸೇವನೆ

ಮತ್ತೊಮ್ಮೆ ಗರ್ಭಿಣಿಯಾಗುವುದನ್ನು ತಡೆಯುವುದಕ್ಕೆಂದು ನೀವು ಈಗಾಗಲೇ ಗರ್ಭನಿರೋಧಕ ಗುಳಿಗೆಗಳ ಸೇವನೆಯನ್ನು ಆರಂಭಿಸಿದ್ದಲ್ಲಿ, ದಯವಿಟ್ಟು ಅದನ್ನು ನಿಲ್ಲಿಸಿರಿ! ಎದೆಹಾಲಿನ ಉತ್ಪಾದನೆಯ ಮೇಲೆ ಪರಿಣಾಮವನ್ನುಂಟು ಮಾಡಬಲ್ಲ ಈಸ್ಟ್ರೋಜನ್ ಎಂಬ ಹೆಸರಿನ ಹಾರ್ಮೋನು ಈ ಗರ್ಭನಿರೋಧಕ ಗುಳಿಗೆಗಳಲ್ಲಿರುತ್ತವೆ. ಇದು ಕ್ರಮೇಣವಾಗಿ ಎದೆಹಾಲಿನ ಉತ್ಪಾದನೆಯನ್ನು ತಗ್ಗಿಸುತ್ತದೆ.

ಇವೆಲ್ಲದರ ಜೊತೆಗೆ, ಮೊಲೆಹಾಲುಣಿಸುವ ತಾಯಿಯು, ಆಗಾಗ್ಗೆ ಪಂಪಿಂಗ್ ಕ್ರಿಯೆಯನ್ನು ಕೈಗೊಳ್ಳುವ ಮೂಲಕ ಎದೆಹಾಲನ್ನು ಉತ್ಪಾದಿಸಬಹುದು. ಕೆಲವೊಮ್ಮೆ, ಕೆಲವೊಂದು ವಿಚಾರಗಳು ನಿಮ್ಮ ಕೈಯ್ಯಲ್ಲಿರುವುದಿಲ್ಲ ಎಂಬುದಂತೂ ಸತ್ಯ. ಅಂತಹ ಸಂದರ್ಭಗಳಲ್ಲಿ ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

English summary

List Of Factors That Can Affect the Colour, Volume And Frequency of Breastmilk in Kannada

List of factors That can affect the colour, volume and frequency of breastmilk,Read on..
X
Desktop Bottom Promotion