For Quick Alerts
ALLOW NOTIFICATIONS  
For Daily Alerts

ಹಾಲುಣಿಸುವ ತಾಯಿಗೆ ಕೊರೋನಾ ಪಾಸಿಟಿವ್ ಆದಾಗ ಆಕೆ ತನ್ನ ಮಗುವಿಗೆ ಎದೆಹಾಲು ನೀಡಬಹುದೇ? ಈ ಕುರಿತು WHO ಏನು ಹೇಳುತ್ತೆ?

|

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ತಾಯಿಯಾದವಳು ತನ್ನ ರಕ್ತವನ್ನೇ ಬಸಿದು ಹಾಲಾಗಿ ಮಾರ್ಪಡಿಸಿ ತನ್ನ ಮಗುವಿಗೆ ನೀಡುತ್ತಾಳೆ. ಇಂತಹ ತಾಯಿ ರೂಪದ ದೇವರಿಗೆ ಕೊರೋನಾ ಉಂಟಾದರೆ, ಆ ಎಳೆ ಕಂದಮ್ಮದ ಗತಿಯೇನು? ಹಾಲುಣಿಸುವ ತಾಯಿಗೆ ಕೊರೋನಾ ಪಾಸಿಟಿವ್ ಆದರೆ ಆಕೆ ತನ್ನ ಮಗುವಿಗೆ ಹಾಲು ನೀಡಬಹುದೇ? ಇಂತಹ ಪ್ರಶ್ನೆ ಹಲವಾರು ತಾಯಂದಿರನ್ನು ಕಾಡುತ್ತಿರಬಹುದು. ಈ ಕುರಿತು ಡಬ್ಲ್ಯೂಎಚ್ಒ ಎನು ಹೇಳುತ್ತೆ ಗೊತ್ತಾ? ಮುಂದೆ ಓದಿ ನಿಮಗೆ ತಿಳಿಯುತ್ತೆ.

ಹಾಲುಣಿಸುವ ತಾಯಿಗೆ ಕೊರೋನಾ ಪಾಸಿಟಿವ್ ಆದರೆ ಆಕೆ ತನ್ನ ಮಗುವಿಗೆ ಹಾಲು ನೀಡಬಹುದೇ? ಇಲ್ಲಿದೆ ಉತ್ತರ.

ಹಾಲುಣಿಸುವ ತಾಯಿಗೆ ಕೊರೋನಾ ಪಾಸಿಟಿವ್ ಆದರೆ ಆಕೆ ತನ್ನ ಮಗುವಿಗೆ ಹಾಲು ನೀಡಬಹುದೇ? ಇಲ್ಲಿದೆ ಉತ್ತರ.

ದೇಶದಲ್ಲಿ ಪ್ರತಿ 4 ಜನರಲ್ಲಿ ಒಬ್ಬರು ವೈರಸ್‌ಗೆ ತುತ್ತಾಗುತ್ತಿರುವುದರಿಂದ ಬಹಳಷ್ಟು ತಾಯಂದಿರು ಕೊರೋನಾ ಪಾಸಿಟಿವ್ ಪಡೆಯುತ್ತಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ, 14 ದಿನಗಳ ಕ್ಯಾರಂಟೈನ್ ಸಮಯದಲ್ಲಿ ತನ್ನ ಮಗುವಿಗೆ ಹಾಲುಣಿಸುವುದು ಸುರಕ್ಷಿತವೇ?

ತಾಯಿಯು ತನ್ನ ಸೋಂಕನ್ನು ಎದೆ ಹಾಲಿನ ಮೂಲಕ ಮಗುವಿಗೆ ವರ್ಗಾಯಿಸಬಹುದು ಎಂಬುದು ನಿಜವಾಗಿದ್ದರೂ ಸಹ, ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ವಿಭಿನ್ನ ಅಭಿಪ್ರಾಯವನ್ನು ನೀಡುತ್ತದೆ. ಮೊದಲನೆಯದಾಗಿ, ಎದೆ ಹಾಲು SARS-CoV-2 ವೈರಸ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಆದ್ದರಿಂದ, ನಿಮ್ಮ ಮಗುವಿಗೆ ಆರಾಮವಾಗಿ ಹಾಲುಣಿಸಿ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎದೆಹಾಲಿನಿಂದ ಸಿಗುವ ಪ್ರಯೋಜನಗಳು ಕೊರೋನಾದ ಅಪಾಯವನ್ನು ಕಡಿಮೆ ಮಾಡುತ್ತವೆ. ತಾಯಿಗೆ ಕೊರೋನಾ ಪಾಸಿಟಿವ್ ಆಗಿದ್ದರೂ ತಮ್ಮ ಮಗುವಿಗೆ ಹಾಲುಣಿಸಬಹುದು. ಏಕೆಂದರೆ ಎದೆ ಹಾಲು ಶಕ್ತಿಯುತವಾಗಿದ್ದು, ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೀಗಾಗಿ, ಕೊರೋನಾದಿಂದ ಬಳಲುತ್ತಿರುವ ತಾಯಂದಿರು ತಮ್ಮ ಮಗುವಿಗೆ ಇತರ ಮಹಿಳೆಯಂತೆ ಹಾಲುಣಿಸಬೇಕು.

ನವಜಾತ ಶಿಶುಗಳಿಗೆ ಹಾಲುಣಿಸುವ ಅನೇಕ ಪ್ರಯೋಜನಗಳು ಇಲ್ಲಿವೆ:

ನವಜಾತ ಶಿಶುಗಳಿಗೆ ಹಾಲುಣಿಸುವ ಅನೇಕ ಪ್ರಯೋಜನಗಳು ಇಲ್ಲಿವೆ:

ಪೌಷ್ಠಿಕಾಂಶದ ಮೂಲ:

ತಾಯಿ ತನ್ನ ಮಗುವಿಗೆ ನೀಡುವ ಅತ್ಯಂತ ಪೌಷ್ಠಿಕ ಆಹಾರವೆಂದರೆ ಎದೆಹಾಲು. ನೀರಿನ ಜೊತೆಗೆ, ಇದು ಕೊಬ್ಬುಗಳು, ಕಾರ್ಬ್ಸ್, ಖನಿಜಗಳು, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೋಡಿಯಂ ಮತ್ತು ವಿಟಮಿನ್ ಎ, ಸಿ ಮತ್ತು ಡಿ ಗಳನ್ನು ಹೊಂದಿದೆ. ನವಜಾತ ಶಿಶುಗಳಿಗೆ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎದೆ ಹಾಲು ಅತ್ಯುತ್ತಮ ಮತ್ತು ಏಕೈಕ ಪೋಷಣೆಯ ಮೂಲವಾಗಿದೆ.

ಮಾರಣಾಂತಿಕ ವೈರಲ್ ಸೋಂಕಿನಿಂದ ರಕ್ಷಿಣೆ:

ಮಾರಣಾಂತಿಕ ವೈರಲ್ ಸೋಂಕಿನಿಂದ ರಕ್ಷಿಣೆ:

ತಾಯಿಯ ಹಾಲು ಮಗುವಿಗೆ ಮುಖ್ಯವಾಗಿದೆ ಏಕೆಂದರೆ ಇದು ಎಲ್ಲಾ ಪೋಷಕಾಂಶಗಳನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದ್ದು, ಅದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಮಗುವಿಗೆ ಯಾವುದೇ ಸೋಂಕು ಅಪಾಯವನ್ನುಂಟುಮಾಡುವುದಿಲ್ಲ. ತಾಯಿಯೊಬ್ಬಳು ತಮ್ಮ ಮಗುವಿಗೆ ಕನಿಷ್ಠ ಆರು ತಿಂಗಳವರೆಗೆ ಹಾಲುಣಿಸಬೇಕು ಎಂದು ವೈದ್ಯರು ಮತ್ತು ತಜ್ಞರು ಶಿಫಾರಸು ಮಾಡುತ್ತಾರೆ.

ರೋಗ ನಿರೋಧಕ ಶಕ್ತಿಯ ವೃದ್ಧಿ:

ರೋಗ ನಿರೋಧಕ ಶಕ್ತಿಯ ವೃದ್ಧಿ:

ನಿಮ್ಮ ಮಗುವಿನ ರೋಗನಿರೋಧಕ ಶಕ್ತಿಯ ವಿಚಾರಕ್ಕೆ ಬಂದಾಗ ಎದೆಹಾಲು ಅಮೃತದಂತೆ. ಇಮ್ಯುನೊಲಾಜಿಯಲ್ಲಿ ಫ್ರಾಂಟಿಯರ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಎದೆ ಹಾಲಿನ ಸಹಜ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳ ವಿರುದ್ಧದ ಹೋರಾಡುವಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಹಾಲು ಕುಡಿದ ಕೆಲವೇ ನಿಮಿಷಗಳಲ್ಲಿ ಸಕ್ರಿಯಗೊಳ್ಳುತ್ತದೆ.

English summary

Is it Safe to Breastfeed If You Are COVID-19 Positive? Here is What WHO Suggests

Here we talking about Is it Safe to Breastfeed if you are COVID-19 positive? Here is what WHO suggests, read on
Story first published: Thursday, May 6, 2021, 16:51 [IST]
X
Desktop Bottom Promotion