For Quick Alerts
ALLOW NOTIFICATIONS  
For Daily Alerts

ಮಗು ರಾತ್ರಿ ಸುಖವಾಗಿ ನಿದ್ದೆ ಮಾಡುವಂತೆ ಮಾಡುವುದು ಹೇಗೆ?

|

ಮಗುವಿರುವ ಮನೆಯ ಸದಸ್ಯರ ನಿದ್ದೆ ಆಗಾಗ ಭಂಗಗೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರದ ಅಗತ್ಯವಿಲ್ಲ. ಹುಟ್ಟಿದ ದಿನದಿಂದ ಮಗು ದಿನದ ಹೆಚ್ಚಿನ ಹೊತ್ತು ಮಲಗಿಯೇ ಇರುತ್ತದೆ ಮತ್ತು ತನ್ನ ಬೇಡಿಕೆಗಳನ್ನು ಮತ್ತು ಭಾವನೆಗಳನ್ನು ಅಳುವಿನ ಮೂಲಕ ಪ್ರಕಟಿಸುತ್ತದೆ. ಈ ಪ್ರಕಟಣೆಗೆ ಸಮಯದ ಪರಿವೆಯೇ ಇಲ್ಲ.

How To Make your Baby Sleep Properly

ಹಾಗಾಗಿ ಸಾಮಾನ್ಯವಾಗಿ ರಾತ್ರಿಯೂ ಅಳುವ ಮಗು ತಾಯಿಯ ನಿದ್ದೆಯನ್ನೂ ಜೊತೆಗೇ ಮನೆಯ ಸದಸ್ಯರ ನಿದ್ದೆಯನ್ನೂ ಪ್ರಭಾವಿತಗೊಳಿಸುತ್ತದೆ. ಹಾಗಾದರೆ ನಿಮ್ಮ ಮಗು "ಸರಿಯಾಗಿ ನಿದ್ರಿಸಲು" ಯಾವಾಗ ಕಲಿಯುತ್ತದೆ? ಈ ಪ್ರಶ್ನೆಗೆ ತಜ್ಞರು ನೀಡುವ ಉತ್ತರವೆಂದರೆ ಮಗುವಿನ ವಯಸ್ಸು, ಆರೋಗ್ಯ ಮತ್ತು ಬೆಳವಣಿಗೆಯ ಹಂತ ಹಾಗೂ ತಾನಾಗಿಯೇ ಸ್ವಯಂ-ಸಂತೈಸಿಕೊಳ್ಳಲು ಕಲಿತುಕೊಳ್ಳುವ ಸಮಯ ಮೊದಲಾದವುಗಳನ್ನು ಅವಲಂಬಿಸಿರುತ್ತದೆ.

ಬೆಳೆಯುತ್ತಿರುವ ನಿಮ್ಮ ಮಗು ರಾತ್ರಿ ಸುಖವಾಗಿ ನಿದ್ರಿಸಲು, ಉತ್ತಮ ನಿದ್ದೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಮತ್ತು ಮುಂದೆ ಎದುರಾಗಬಹುದಾದ ಸಂಭಾವ್ಯ ನಿದ್ದೆಗೆ ಸಂಬಂಧಿಸಿದ ತೊಂದರೆಗಳಿಂದ ತಪ್ಪಿಸಲು ಕೆಲವು ಸಲಹೆಗಳನ್ನು ತಜ್ಞರು ನೀಡಿದ್ದಾರೆ. ಬನ್ನಿ, ನೋಡೋಣ:

ರಾತ್ರಿ ಸುಖವಾಗಿ ನಿದ್ರಿಸುವುದು : ಏನಿದರ ಅರ್ಥ?

ರಾತ್ರಿ ಸುಖವಾಗಿ ನಿದ್ರಿಸುವುದು : ಏನಿದರ ಅರ್ಥ?

ರಾತ್ರಿ ಸುಖವಾಗಿ ಮಲಗುವುದು ಎಂದರೆ ಸಾಮಾನ್ಯವಾಗಿ ಆರರಿಂದ ಎಂಟು ಗಂಟೆಗಳ ಕಾಲ ಸತತವಾಗಿ ತಡೆಯಿಲ್ಲದೇ ನಿದ್ರಿಸುವುದು ಎಂದು ವ್ಯಾಖ್ಯಾನಿಸಲಾಗುತ್ತದೆ.

ಆದರೆ ನೆನಪಿರಲಿ, ಮಕ್ಕಳಿಗೆ ದಿನದಲ್ಲಿ ಒಟ್ಟು 10 ರಿಂದ 12 ಗಂಟೆಗಳ (ಅಥವಾ ಹೆಚ್ಚಿನ) ನಿದ್ದೆಯ ಅಗತ್ಯವಿರುತ್ತದೆ ಮತ್ತು ಇವೆಲ್ಲವೂ ಹಗಲಿನ ಕೆಲವಾರು ಕಿರು ನಿದ್ದೆಗಳು ಮತ್ತು ರಾತ್ರಿಯ ಒಂದು ದೊಡ್ಡ ನಿದ್ದೆಯ ಮೊತ್ತವಾಗಿದೆ. ಹಾಗಾಗಿ ರಾತ್ರಿಯ ನಿದ್ದೆ ಎಂದರೆ ಮಗುವಿನ ಒಟ್ಟಾರೆ ನಿದ್ದೆಯ ಒಂದು ಭಾಗ ಮಾತ್ರವೇ ಹೊರತು ಇದೇ ಪೂರ್ಣವಾದ ನಿದ್ದೆಯಲ್ಲ. ನಿಮ್ಮ ಮಗು 3 ರಿಂದ 6 ತಿಂಗಳ ವಯಸ್ಸಿನಲ್ಲಿ "ರಾತ್ರಿಯಿಡೀ ಮಲಗುತ್ತಿದ್ದರೂ", ನೀವು ಆ ಸಮಯದಲ್ಲಿ ಮಲಗಲು ಸಾಧ್ಯವಾಗುವುದಿಲ್ಲ (ಉದಾಹರಣೆಗೆ ನಿಮ್ಮ ಮಗು ಸಂಜೆ 7: 30 ಕ್ಕೆ ಮಲಗಿಬಿಟ್ಟರೆ, ಆರು ಗಂಟೆಗಳ ನಂತರ ನಡುರಾತ್ರಿ 1: 30 ಮತ್ತು ಎಂಟು ಘಂಟೆಗಳ ನಿದ್ದೆಯ ಬಳಿಕ ಎದ್ದರೆ ಬೆಳಿಗ್ಗೆ 3:30 ಆಗಿರುತ್ತದೆ).

ಮಗುವಿಗೆ ಈ ಸಮಯ ಸಾಮಾನ್ಯವೇ ಆಗಿದ್ದರೂ ಉಳಿದ ಯಾರಿಗೂ ಈ ಸಮಯಗಳು ಅವೇಳೆಗಳೇ ಸರಿ. 6 ತಿಂಗಳೊಳಗಿನ ಮಕ್ಕಳು ಸಾಮಾನ್ಯವಾಗಿ ವಯಸ್ಸು ಮತ್ತು ಹಂತವನ್ನು ಅವಲಂಬಿಸಿ ರಾತ್ರಿಯಲ್ಲಿ ಮೂರರಿಂದ ಎಂಟು ಗಂಟೆಗಳವರೆಗೆ ಯಾವುದೇ ಸಮಯದಲ್ಲಿ ಮಲಗಿ ಬಿಡಬಹುದು. ಮತ್ತು 4 ರಿಂದ 6 ತಿಂಗಳ ವಯಸ್ಸಿನ ಮಕ್ಕಳು ಆಹಾರವಿಲ್ಲದೆ ರಾತ್ರಿಯಿಡೀ ಮಲಗಲು ಸಮರ್ಥರಾಗಿರುತ್ತಾರೆ. (ಇದೇ ಕಾರಣಕ್ಕೆ ತಾಯಂದಿರಿಗೆ ಆದಷ್ಟೂ ಬೇಗನೇ ಮಕ್ಕಳಿಗೆ ರಾತ್ರಿಯೂಟ ಮಾಡಿಸಿ ಬಿಡಲು ಸಲಹೆ ಮಾಡಲಾಗುತ್ತದೆ).

ಆದರೆ ಇಂದಿನ ಮಕ್ಕಳು ಮನೆಯ ಹಿರಿಯರು ರಾತ್ರಿ ಎಚ್ಚರವಿದ್ದಷ್ಟೂ ಹೊತ್ತು ತಾವೂ ಎಚ್ಚರಾಗಿಯೇ ಇರುವುದನ್ನು ಕಲಿಯುತ್ತಾರೆ. ಮಕ್ಕಳು ಆಹಾರವನ್ನು ಕೇವಲ ಪೋಷಣೆಗಾಗಿ ಅಲ್ಲ, ಆರಾಮ ಮತ್ತು ಸಂತೋಷಕ್ಕಾಗಿಯೂ ತಿನ್ನುತ್ತಾರೆ. ಹಾಗಾಗಿ ಮಕ್ಕಳಿಗೆ ಇಷ್ಟವಾಗದ ಆಹಾರವನ್ನು ತಿನ್ನಿಸಲು ತಾಯಿ ಹರಸಾಹಸ ಪಡುವುದು ಇದೇ ಕಾರಣಕ್ಕೆ.

ನವಜಾತ ಶಿಶು:

ನವಜಾತ ಶಿಶು:

ನವಜಾತ ಶಿಶುಗಳು ರಾತ್ರಿಯಿಡೀ ಮಲಗುವುದಿಲ್ಲ ಏಕೆಂದರೆ ಅವರು ಆಗಾಗ್ಗೆ ಹಾಲು ಕುಡಿಯುತ್ತಿರಬೇಕಾಗುತ್ತದೆ. ವಾಸ್ತವವಾಗಿ, ಒಂದು ಸಮಯದಲ್ಲಿ ಎರಡರಿಂದ ನಾಲ್ಕು ಗಂಟೆಗಳ ಕಾಲ ನಿಮ್ಮ ನವಜಾತ ಮಗು ಆ ಆರಂಭಿಕ ವಾರಗಳು ಮತ್ತು ತಿಂಗಳುಗಳಲ್ಲಿ ನಿದ್ರಿಸುತ್ತದೆ ಎಂದು ನೀವು ನಿರೀಕ್ಷಿಸಬಹುದು. ನಿಮ್ಮ ಮಗು ತಾಯಿಹಾಲನ್ನು ಎಷ್ಟು ಸೇವಿಸುತ್ತಿದೆ ಮತ್ತು ಇತರ ಅಹಾರ ಬೆರೆತ ಹಸುವಿನ ಹಾಲನ್ನು ಎಷ್ಟು ಸೇವಿಸುತ್ತಿದೆ ಅಥವಾ ಇವೆರಡೂ ಆಹಾರಗಳ ಸಂಯೋಜನೆಯ ಪ್ರಮಾಣದ ಮಾಹಿತಿಯನ್ನು ಆಧರಿಸಿ ಈ ಸಮಯ ಹೆಚ್ಚು ಕಡಿಮೆಯಾಗಬಹುದು.

2 ರಿಂದ 3 ತಿಂಗಳ ವಯಸ್ಸು: 2 ರಿಂದ 3 ತಿಂಗಳ ವಯಸ್ಸಿನ ಮಕ್ಕಳು ಐದು ಅಥವಾ ಆರು ಗಂಟೆಗಳ ಕಾಲ ಮಲಗಬಹುದು. 3 ತಿಂಗಳ ವಯಸ್ಸಿನ ಮಕ್ಕಳಿಗೆ, ವಿಶೇಷವಾಗಿ ಈ ಮಕ್ಕಳು ತಾಯಿಹಾಲನ್ನು ಸೇವಿಸುತ್ತಿದ್ದರೆ ರಾತ್ರಿಯಲ್ಲಿ ಒಂದು ಅಥವಾ ಎರಡು ಬಾರಿ ಆಹಾರ ಸೇವಿಸುವ ಅಗತ್ಯವಿರುತ್ತದೆ,

4 ತಿಂಗಳ ವಯಸ್ಸು:

4 ತಿಂಗಳ ವಯಸ್ಸು:

ಈ ವಯಸ್ಸಿನಲ್ಲಿ, ಶಿಶುಗಳು ನೇರವಾಗಿ ಏಳು ಅಥವಾ ಎಂಟು ಗಂಟೆಗಳ ಕಾಲ ಮಲಗಬಹುದು, ಇದರಲ್ಲಿ ರಾತ್ರಿಯಿಡೀ ಮಾಡುವ ನಿದ್ದೆಯೋ ಒಳಗೊಂಡಿರಬಹುದು. ಆದರೂ ಅದು ಕ್ರಮೇಣವಾಗಿ ಸಂಭವಿಸಬಹುದು. ಏಕೆಂದರೆ 4 ತಿಂಗಳ ವಯಸ್ಸಿನ ಶಿಶುಗಳು ಕನಿಷ್ಠ 11 ಪೌಂಡ್‌ಗಳ ಅದ್ಭುತ ತೂಕವನ್ನು ಪಡೆದಿರುತ್ತವೆ. ಅಂದರೆ, ಜೀವ ರಾಸಾಯನಿಕ ಕ್ರಿಯೆಯ ಲೆಕ್ಕದಲ್ಲಿ ಹೇಳುವುದಾದರೆ ಈಗ, ಅವರಿಗೆ ರಾತ್ರಿಯ ಆಹಾರದ ಅಗತ್ಯವಿಲ್ಲ. ಆದರೂ ಕೆಲವು ಮಕ್ಕಳು ರಾತ್ರಿಯ ನಿದ್ದೆಯ ನಡುವೆ ಎದ್ದು ಆಹಾರಕ್ಕಾಗಿ ಬೇಡಿಕೆಯನ್ನು ಸಲ್ಲಿಸಬಹುದು. (ಹೇಗೆ ಎಂದು ನಿಮಗೆ ಗೊತ್ತು)

5 ರಿಂದ 6 ತಿಂಗಳ ವಯಸ್ಸು:

5 ರಿಂದ 6 ತಿಂಗಳ ವಯಸ್ಸು:

ಈ ಸಮಯದಲ್ಲಿ ಮಕ್ಕಳು ರಾತ್ರಿಯಿಡೀ ಮಲಗಲು ಸಮರ್ಥರಾಗಿದ್ದಾರೆ, ಆದ್ದರಿಂದ ನಿಮ್ಮ ಚಿಕ್ಕ ಮಗು ಇನ್ನೂ ಹೆಚ್ಚಾಗಿ ತಿನ್ನಲು ಎಚ್ಚರಗೊಳ್ಳುತ್ತಿದ್ದರೆ, ಅವನು ನಿಜವಾಗಿಯೂ ಹಸಿದಿಲ್ಲ ಎಂದು ನೀವು ಖಚಿತವಾಗಿ ಹೇಳಬಹುದು. ಹೆಚ್ಚಿನ ರಾತ್ರಿಗಳಲ್ಲಿ ಆರರಿಂದ ಎಂಟು ಗಂಟೆಗಳ ಕಾಲ ಮಲಗಲು ಕಲಿಯಲು ಅವನಿಗೆ ಸಹಾಯ ಮಾಡಲು, ಆ ಹೆಚ್ಚುವರಿ ರಾತ್ರಿಯ ಆಹಾರವನ್ನು ಹೇಗೆ ನಿಧಾನವಾಗಿ ಕಡಿಮೆ ಮಾಡಬೇಕು ಎಂಬುದರ ಕುರಿತು ನಿಮ್ಮ ವೈದ್ಯರು ನಿಮಗೆ ಸಲಹೆ ನೀಡಬಹುದು. ದೈಹಿಕವಾಗಿ, ನಿಮ್ಮ ಮಗು ಆ ಸ್ಥಿತ್ಯಂತರಕ್ಕೆ ಸಿದ್ಧವಾಗಲಿದೆ, ಆದರೂ ಕೆಲವು ಮಕ್ಕಳು ಇದಕ್ಕೆ ಒಪ್ಲದೇ ತಮ್ಮ ಹಿಂದಿನ ಚಾಳಿಯನ್ನು ಮುಂದುವರೆಸಬಹುದು. ಒಂದು ವೇಳೆ ಹಿಂದಿನ ದಿನಗಳಲ್ಲಿ ಮಗು ರಾತ್ರಿ ಎಚ್ಚರಾಗಿ ಬೇಡಿಕೆ ಸಲ್ಲಿಸುವ ಮೂಲಕ ದೊರಕುವ ರುಚಿಕರ ಆಹಾರ ಹಾಗೂ ಅಮ್ಮನ ಅಪ್ಯಾಯತೆಯನ್ನು ಬಹಳವಾಗಿ ಇಷ್ಟಪಡುತ್ತಿದ್ದರೆ ಇದನ್ನೇ ಮುಂದಿನ ದಿನಗಳಲ್ಲೂ ಬಯಸಬಹುದು.

ಹಾಗಾದರೆ ರಾತ್ರಿಯಿಡೀ ಮಗು ಸುಖವಾಗಿ ನಿದ್ರಿಸುವಂತೆ ಮಾಡುವುದು ಹೇಗೆ?

ಹಾಗಾದರೆ ರಾತ್ರಿಯಿಡೀ ಮಗು ಸುಖವಾಗಿ ನಿದ್ರಿಸುವಂತೆ ಮಾಡುವುದು ಹೇಗೆ?

ನಿಮ್ಮ ಮಗುವಿನ ನಿದ್ರೆಯ ಅಭ್ಯಾಸದ ಮೇಲೆ ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ನಿಯಂತ್ರಣವನ್ನು ನೀವು ಹೊಂದಿದ್ದೀರಿ - ಮತ್ತು ರಾತ್ರಿ ಪದೇ ಪದೇ ಎಚ್ಚರಗೊಳ್ಳುತ್ತಿರುವುದನ್ನು ಪ್ರೋತ್ಸಾಹಿಸಲು ಪ್ರಾರಂಭಿಸಲು ಮಗು ತನ್ನ ಅರ್ಧ-ಹುಟ್ಟುಹಬ್ಬದ ಗುರುತು ಮುಟ್ಟುವವರೆಗೆ ನೀವು ಕಾಯಬೇಕಾಗಿಲ್ಲ.

ರಾತ್ರಿಯಿಡೀ ಮಗು ಸುಖವಾಗಿ ನಿದ್ರಿಸುವಂತೆ ಮಾಡಲು ಈ ಸಲಹೆಗಳನ್ನು ಅನುಸರಿಸಿ:

ಮಲಗುವ ಸಮಯಕ್ಕೆ ಒಂದು ದಿನಚರಿಯನ್ನು ಪ್ರಾರಂಭಿಸಿ:

ಮಲಗುವ ಸಮಯಕ್ಕೆ ಒಂದು ದಿನಚರಿಯನ್ನು ಪ್ರಾರಂಭಿಸಿ:

ನಿಮ್ಮ ಮಗು ಈ ದಿನಚರಿಯನ್ನು ಅಪ್ಯಾಯತೆ ಎಂದು ಪರಿಗಣಿಸುವುದು ಮಾತ್ರವಲ್ಲದೇ, ಈಗ ನಿದ್ರೆಯ ಸಮಯ ಎಂದು ಮಗುವಿಗೆ ಸಂಕೇತ ನೀಡಿದಂತಾಗುತ್ತದೆ. ಮೊದಲು ಮಗುವಿಗೆ ಚೆನ್ನಾಗಿ ಬೆಚ್ಚನೆಯ ನೀರಿನ ಸ್ನಾನದಿಂದ ಪ್ರಾರಂಭಿಸಿ - ಬೆಚ್ಚಗಿನ ನೀರು ಹಿತವಾದ ಮತ್ತು ನಿದ್ರೆಯನ್ನು ಉಂಟುಮಾಡುತ್ತದೆ. ಕಥೆ, ಮುದ್ದಾಟಗಳು ಮತ್ತು ಲಾಲಿಗಳೊಂದಿಗೆ ಸ್ನಾನ ಮತ್ತು ಮುಂದಿನ ಕಾರ್ಯಗಳನ್ನು ಅನುಸರಿಸಿ. ಪೂರ್ಣ ಆಹಾರ ನೀಡಿ ಮಲಗಿಸಿ. ಒಂದು ವೇಳೆ ನಿಮ್ಮ ಮಗುವಿಗೆ ವಾಯುಪ್ರಕೋಪದ ತೊಂದರೆ ಇದ್ದರೆ, ನೀವು ಮಲಗುವ ಸಮಯದ ಆಹಾರವನ್ನು ದಿನಚರಿಯಲ್ಲಿ ಕೊಂಚ ಹಿಂದಕ್ಕೆ ಹಾಕುವ ಮೂಲಕ ರಾತ್ರಿಯ ನಿದ್ದೆ ಭಂಗಗೊಳ್ಳದಂತೆ ತಡೆಯಬಹುದು.

ಮಧ್ಯರಾತ್ರಿ ಡಯಾಪರ್ ಬದಲಾಯಿಸಬೇಡಿ

ಮಧ್ಯರಾತ್ರಿ ಡಯಾಪರ್ ಬದಲಾಯಿಸಬೇಡಿ

ಮಧ್ಯರಾತ್ರಿಯಲ್ಲಿ ನಿಮ್ಮ ಮಗುವಿನ ಡಯಾಪರ್ ಅನ್ನು ಬದಲಾಯಿಸದಿರಲು ಪ್ರಯತ್ನಿಸಿ. ನಿಮ್ಮ ಮಗು ಸಂಪೂರ್ಣ ಗೋಜಲಿನಲ್ಲಿಲ್ಲದ್ದರೆ ಮಧ್ಯರಾತ್ರಿ ಮಾಡುವ ಈ ಬದಲಾವಣೆಗಳನ್ನು ಬಿಟ್ಟುಬಿಡಿ, ಏಕೆಂದರೆ ಮಕ್ಕಳು ಬಹುಶಃ ಈ ಕಾರಣಕ್ಕೇ ತಾಯಿಯನ್ನು ಎಚ್ಚರಗೊಳಿಸುತ್ತಾರೆ. ರಾತ್ರಿಯಿಡೀ ನೀವು ನಿಜವಾಗಿಯೂ ಅವನ ಡಯಾಪರ್ ಅನ್ನು ಬದಲಾಯಿಸಬೇಕಾದರೆ, ದೀಪಗಳನ್ನು ಮಂದಗೊಳಿಸಿ ಮತ್ತು ಸಾಧ್ಯವಾದಷ್ಟು ಕಡಿಮೆ ಮತ್ತು ಮೆಲುದನಿಯಲ್ಲಿ ಮಾತನಾಡುವ ಮೂಲಕ ಅದನ್ನು ಮಾಡಿ.

ಮಗುವನ್ನು ನಿಮ್ಮಿಂದ ದೂರ ಸರಿಸುವುದನ್ನು ಪರಿಗಣಿಸಿ

ಮಗುವನ್ನು ನಿಮ್ಮಿಂದ ದೂರ ಸರಿಸುವುದನ್ನು ಪರಿಗಣಿಸಿ

ಶಿಶುಗಳು ಕನಿಷ್ಠ 6 ತಿಂಗಳ ವಯಸ್ಸಿನವರೆಗೆ ತಮ್ಮ ಹೆತ್ತವರೊಂದಿಗೆ ಕೊಠಡಿ ಹಂಚಿಕೊಳ್ಳಬೇಕೆಂದು AAP (American Academy of Pediatrics) ಶಿಫಾರಸ್ಸು ಮಾಡುತ್ತದೆ. ಆದರೆ ನಿಮ್ಮ ಮಗು ನಿಮ್ಮ ಕೋಣೆಯಲ್ಲಿ ಮಲಗಿದ್ದರೆ, ಅಥವಾ ತೊಟ್ಟಿಲು ಅಥವಾ ಮಗುವಿನ ಮಂಚ ನಿಮ್ಮ ಹಾಸಿಗೆಗೆ ತುಂಬಾ ಹತ್ತಿರದಲ್ಲಿದ್ದರೆ, ಅವನನ್ನು ದೂರದಿಂದ (ಅಥವಾ ಮಗುವಿನ ಸ್ವಂತ ಕೋಣೆಗೆ) ಸ್ಥಳಾಂತರಿಸುವುದು ಕೆಲವು ಕುಟುಂಬಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ. ನಿಮ್ಮ ಸಾಮೀಪ್ಯವೇ ಮಗು ರಾತ್ರಿಯ ಹೊತ್ತು ಹೆಚ್ಚು ಎಚ್ಚರಗೊಳ್ಳುವಿಕೆಗೆ ಕೊಡುಗೆ ನೀಡುತ್ತಿರಬಹುದು. ಪರಿವರ್ತನೆಯ ಸಹಾಯಕ್ಕಾಗಿ ನಿಮ್ಮ ಶಿಶುವೈದ್ಯರ ಸಲಹೆಯನ್ನು ಪಡೆಯಬಹುದು.

ಹಗಲಿನಲ್ಲಿ ಹೆಚ್ಚಿನ ಕ್ಯಾಲೊರಿಗಳ ಆಹಾರವನ್ನು ನೀಡಿ:

ಹಗಲಿನಲ್ಲಿ ಹೆಚ್ಚಿನ ಕ್ಯಾಲೊರಿಗಳ ಆಹಾರವನ್ನು ನೀಡಿ:

ನಿಮ್ಮ ಮಗುವಿಗೆ ಹಗಲಿನಲ್ಲಿ ಸಾಕಷ್ಟು ಹೊಟ್ಟೆ ತುಂಬಿದರೆ ರಾತ್ರಿಯಲ್ಲಿ ಕಡಿಮೆ ಹಸಿವು ಇರುತ್ತದೆ (ಮತ್ತು ನಿದ್ರೆ ಮಾಡಲು ಉತ್ತಮವಾಗಿದೆ). ತಾಯಿಹಾಲು ಸೇವಿಸುತ್ತಿರುವ ಮಕ್ಕಳು ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ತಿನ್ನಬೇಕಾಗುತ್ತದೆ, ಅಂದರೆ ದಿನದ ಇಪ್ಪತ್ತನಾಲ್ಕು ಘಂಟೆಗಳ ಅವಧಿಯಲ್ಲಿ ಸುಮಾರು ಎಂಟರಿಂದ ಹನ್ನೆರಡು ಬಾರಿ! ಈ ಪ್ರಕ್ರಿಯೆ ಆರು ತಿಂಗಳ ವಯಸ್ಸಾಗುವಾಗ ಕೊಂಚ ಘನ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿದಾಗ ಕಡಿಮೆಯಾಗುತ್ತದೆ. ಬಳಿಕ ಇದು ದಿನಕ್ಕೆ ಆರು ಬಾರಿ ಆಹಾರ ಸೇವಿಸುವುದಕ್ಕೆ ಇಳಿಯುತ್ತದೆ. ಮುಂದಿನ ತಿಂಗಳುಗಳಲ್ಲಿ ಈ ಪ್ರಮಾಣವೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಹಸುವಿನ ಅಥವಾ ಡಬ್ಬಿಯ ಪುಡಿಯ (ಫಾರ್ಮುಲಾ ಆಹಾರ) ಹಾಲನ್ನು ಸೇವಿಸುವ ಮಕ್ಕಳು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ 4 ಔನ್ಸ್ ಪಡೆಯಬೇಕು, ಎಲ್ಲಿಯವರೆಗೆ ಎಂದರೆ ಅವರು 6 ತಿಂಗಳಿನಿಂದ ಘನವಸ್ತುಗಳನ್ನು ಸೇವಿಸಲು ಪ್ರಾರಂಭಿಸುವವರೆಗೆ, ಮಗುವಿನ ಆರೋಗ್ಯ ಅನುಸರಿಸಿ ಇದು ಕೊಂಚ ಬದಲಾಗಬಹುದು (ಮತ್ತು 1 ತಿಂಗಳೊಳಗಿನ ಹೆಚ್ಚಿನ ಮಕ್ಕಳಿಗೆ ಅದಕ್ಕಿಂತಲೂ ಕಡಿಮೆ ಪ್ರಮಾಣದ ಆಹಾರ ಸಾಕಾಗುತ್ತದೆ). ಘನ ಆಹಾರದ ಸೇವನೆ ಪ್ರಾರಂಭಿಸಿದ ಬಳಿಕ ನಂತರ, ಮಕ್ಕಳಿಗೆ ದಿನಕ್ಕೆ ನಾಲ್ಕರಿಂದ ಐದು ಫಾರ್ಮುಲಾ ಆಹಾರಗಳು ಬೇಕಾಗುತ್ತವೆ. ಒಟ್ಟಾರೆ ಶಿಫಾರಸು ಮಾಡಿದ 24 ರಿಂದ 36 ಔನ್ಸ್ ಗಿಂತಲೂ ಕಡಿಮೆ ಆಹಾರ ಸೇವಿಸುತ್ತಿದ್ದರೆ ಹಗಲಿನ ಆಹಾರದ ಸಮಯದಲ್ಲಿ ಮಗುವಿನ ಬಾಟಲಿಗೆ ಹೆಚ್ಚುವರಿಯಾಗಿ ಒಂದು ಅಥವಾ ಎರಡು ಔನ್ಸ್ ಆಹರವನ್ನು ಹೆಚ್ಚುವರಿಯಾಗಿ ಸೇರಿಸಲು ನೀವು ಪ್ರಯತ್ನಿಸಬಹುದು.

ನೀವು ಮಲಗುವ ಮೊದಲು ನಿಮ್ಮ ಮಗುವನ್ನು ಕನಸಿನಿಂದ ಎಚ್ಚರಗೊಳಿಸಿ. ನೀವು ಮಲಗುವ ಮುನ್ನ, ನಿಮ್ಮ ಮಗುವನ್ನು ತಡರಾತ್ರಿಯ ಆಹಾರ ಅಥವಾ ಕನಸಿನ ಅಹಾರ ("ಡ್ರೀಮ್ ಫೀಡ್") ವನ್ನು ನೀಡಿ. ಮಗು ತಕ್ಷಣ ಸಂಪೂರ್ಣವಾಗಿ ಮಲಗದಿರುವಂತೆ ನೀವು ಅವನನ್ನು ಸಾಕಷ್ಟು ಎಚ್ಚರಗೊಳಿಸಬೇಕಾಗುತ್ತದೆ, ಮತ್ತು ಮಗು ಮಲಗಿರುವಾಗ ನೀವು ಆಹಾರವನ್ನು ನೀಡಬಾರದು. ಮಗು ಹೆಚ್ಚು ತಿನ್ನಲು ಅರೆನಿದ್ರಾವಸ್ಥೆಯಲ್ಲಿದ್ದರೂ ಸರಿ, ಹೆಚ್ಚುವರಿ ಒಂದು ಅಥವಾ ಎರಡು ಗಂಟೆಗಳ ನಿದ್ರೆಗೆ ಕೆಲವು ಗುಟುಕುಗಳೇ ಸಾಕು. ಈ ತಂತ್ರದಿಂದಲೂ ನಿಮ್ಮ ಮಗು ಸುಖವಾಗಿ ನಿದ್ರಿಸದೇ ನಡುವೆ ಎಚ್ಚರಗೊಳ್ಳುತ್ತಿದ್ದರೆ ಈ ತಂತ್ರವನ್ನು ಪ್ರಯೋಗಿಸದಿರಿ. ಬದಲಿಗೆ ಮಗುವಿನ ಮಲಗುವ ಸಮಯದಲ್ಲಿ ಸಾಕಷ್ಟು ಪ್ರಮಾಣದ ಆಹಾರ ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಿ.

ಸೂಕ್ತ ವಯಸ್ಸಾಗುವವರೆಗೂ ನಿಮ್ಮ ಮಗುವಿನ ಬಾಟಲಿಯಲ್ಲಿ ಧಾನ್ಯಗಳ ಹಿಟ್ಟನ್ನು ಬೆರೆಸದಿರಿ ಅಥವಾ ಘನವಸ್ತುಗಳ ಸೇವನೆಯನ್ನು ಬೇಗನೆ ಪ್ರಾರಂಭಿಸಲು ಪ್ರಚೋದಿಸಬೇಡಿ. ರಾತ್ರಿಯಿಡೀ ನಿಮ್ಮ ಮಗುವಿಗೆ ನಿದ್ರೆ ಮಾಡಲು ಇದು ಸಹಾಯ ಮಾಡುವುದಿಲ್ಲ ಮಾತ್ರವಲ್ಲ, ಅದು ಮಗುವಿನ ಆರೋಗ್ಯಕ್ಕೂ ಹಾನಿಕರವಾಗಬಹುದು. 4 ರಿಂದ 6 ತಿಂಗಳ ಮೊದಲು ಘನವಸ್ತುಗಳನ್ನು ಪರಿಚಯಿಸುವುದು (AAP ಶಿಫಾರಸು ಮಾಡಿದಂತೆ 6 ತಿಂಗಳುಗಳು) ಹೊಟ್ಟೆಯ ತೊಂದರೆಗಳಿಗೆ ಕಾರಣವಾಗಬಹುದು (ಶಿಶುಗಳು 4 ರಿಂದ 6 ತಿಂಗಳ ಮೊದಲು ಘನ ಆಹಾರಗಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ). ಜೊತೆಗೆ, ನಿಮ್ಮ ಶಿಶು ಈ ದಪ್ಪನಾದ ಮಿಶ್ರಣವನ್ನು ಸೇವಿಸುವಾಗ ಮಗುವಿನ ಶ್ವಾಸಕೋಶಕ್ಕೆ ಹೋಗುವಂತೆ ಮಾಡಬಹುದು ಹಾಗೂ ಇದು ಅಪಾಯಕ್ಕೆ ಕಾರಣವಾಗಬಹುದು.

ಮಗು ನಿಮ್ಮ ಗಮನ ಸೆಳೆಯಲು ನೀಡುವ ಮೊದಲ ಅಳುವಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಬೇಡಿ. ನಿಮ್ಮ ಮಗು ತಾನೇ ಸ್ವಯಂ-ಶಮನಗೊಳಿಸಲು ಅವಕಾಶ ನೀಡಿ ಮತ್ತು ನೀವು ಅವನನ್ನು ಪರೀಕ್ಷಿಸಲು ಹೋಗುವ ಮೊದಲು ನಿಮ್ಮ ನಿದ್ರೆಗೆ ಮರಳಿ. ಸಾಮಾನ್ಯವಾಗಿ ಎಲ್ಲಾ ಶಿಶುಗಳು ರಾತ್ರಿಯಿಡೀ ಎಚ್ಚರಗೊಳ್ಳುತ್ತವೆ (ವಯಸ್ಕರಂತೆ).

ರಾತ್ರಿಯ ಆಹಾರ ಸೇವನೆಯ ಅಭ್ಯಾಸವನ್ನು ತಪ್ಪಿಸಲು ಪ್ರಾರಂಭಿಸಿ:

ರಾತ್ರಿಯ ಆಹಾರ ಸೇವನೆಯ ಅಭ್ಯಾಸವನ್ನು ತಪ್ಪಿಸಲು ಪ್ರಾರಂಭಿಸಿ:

ಮಗು ಸೂಕ್ತ ವಯಸ್ಸಿಗೆ ಬಂದಂತೆ (ನಿಮ್ಮ ವೈದ್ಯರ ಸಲಹೆ ಮತ್ತು ಅನುಮತಿಯನ್ನು ಪಡೆದು) ರಾತ್ರಿ ನೀಡುವ ಅಹಾರಗಳನ್ನು ಮೊಟಕುಗೊಳಿಸುತ್ತಾ ಬನ್ನಿ, ಈ ಕ್ರಿಯೆಗೆ process of weaning ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಗುವಿಗೆ ಮೂರರಿಂದ ನಾಲ್ಕು ತಿಂಗಳಾದಾಗ ರಾತ್ರಿಯ ಆಹಾರಗಳನ್ನು ಮೊಟಕುಗೊಳಿಸಲು ಪ್ರಾರಂಭಿಸಬೇಕು, ಹೀಗೆ ಮೊಟಕುಗೊಳಿಸುವಿಕೆಯನ್ನು ಹೆಚ್ಚಿಸುತ್ತಾ ಆರು ತಿಂಗಳಾಗುವವರೆಗೆ ರಾತ್ರಿಯಿಡೀ ತಡೆರಹಿತವಾಗಿ ನಿದ್ರಿಸಲು ಮಗು ಕಲಿಯುವಂತೆ ಮಾಡಬೇಕು. ಆದರೆ ಮೊದಲು ನಿಮ್ಮ ಶಿಶುವೈದ್ಯರೊಂದಿಗೆ ಮಾತನಾಡಲು ಮರೆಯದಿರಿ, ಏಕೆಂದರೆ ಕೆಲವು ಶಿಶುಗಳಿಗೆ ಆ ರಾತ್ರಿ ಫೀಡ್‌ಗಳು ಮೊದಲ ಕೆಲವು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಬೇಕಾಗಬಹುದು. ಮಗುವಿನ ಆರೋಗ್ಯ ಹಾಗೂ ಇತರ ಅಂಶಗಳನ್ನು ಪರಿಗಣಿಸಿ ವೈದ್ಯರೇ ನಿಮಗೆ ಇದನ್ನು ಮುಂದುವರೆಸಬೇಕೇ ಬೇಡವೇ ಎಂಬುದನ್ನು ಸೂಚಿಸುತ್ತಾರೆ.

English summary

How To Make your Baby Sleep Properly

If your baby not sleeping properly, here are expert tips to make your baby to have souns sleep at night, Read on.
X
Desktop Bottom Promotion