For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮಗುವಿನ ತ್ವಚೆ, ತುಟಿ ಒಡೆಯುವುದು ತಡೆಗಟ್ಟುವುದು ಹೇಗೆ?

|

ಮಗುವಿನ ಚರ್ಮ ತುಂಬಾ ಸೂಕ್ಷ್ಮ ಹಾಗೂ ಮೃದುವಾಗಿರುತ್ತೆ. ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ಮಗುವಿನ ಚರ್ಮವನ್ನು ಇನ್ನೆಷ್ಟು ಮುತುವರ್ಜಿಯಿಂದ ಆರೈಕೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ತ್ವಚೆ ಒಡೆದು ಮಗುವಿಗೆ ನೋವಾಗುವುದು ಅಲ್ಲದೆ ತ್ವಚೆ ತುಂಬಾ ಬಿಗಿಯಾಗಿ ತುಂಬಾ ಕಿರಿಕಿರಿ ಅನಿಸುವುದು.

ತಣ್ಣನೆಯ ಗಾಳಿಗೆ ಮಗುವಿನ ತ್ವಚೆ ಒಡೆಯದಂತೆ ಕಾಪಾಡಿ, ಅದರ ತ್ವಚೆಯನ್ನು ಮೃದುವಾಗಿಡುವುದು ಹೇಗೆ ಎಂದು ನೋಡೋಣ ಬನ್ನಿ:

ಚಳಿಗಾದಲ್ಲಿ ಮಗುವಿನ ತ್ವಚೆ

ಚಳಿಗಾದಲ್ಲಿ ಮಗುವಿನ ತ್ವಚೆ

ಚಳಿಗಾಲದಲ್ಲಿ ಮಗುವಿನ ಕೆನ್ನೆ, ಕಾಲುಗಳು ಹಾಗೂ ತುಟಿ ಒಡೆಯುವುದು ಅಧಿಕ. ಮಗುವಿನ ಕೆನ್ನೆ ಮುಟ್ಟಿದಾಗ ಒಡೆದು ತರಿ-ತರಿ ಅನಿಸುವುದು. ತ್ವಚೆ ಬಿಗಿದುಕೊಳ್ಳುವುದರಿಂದ ಮಗುವಿಗೆ ನಗುವಾಗ, ಅಳುವಾಗ ನೋವಾಗುವುದು. ಅಲ್ಲದೆ ತುಟಿ ಕೂಡ ಒಡೆದಿರುತ್ತದೆ. ಚಳಿಗಾಲದಲ್ಲಿ ಮಗುವಿನ ತ್ವಚೆಯ ಆರೈಕೆ ಹೀಗೆ ಮಾಡಿ:

ಮಾಯಿಶ್ಚರೈಸರ್‌

ಮಾಯಿಶ್ಚರೈಸರ್‌

ಮಗುವಿಗೆ ಮಾಯಿಶ್ಚರೈಸರ್‌ ಬಳಸಿ. ಪರ್‌ಪ್ಯೂಮ್‌ ಹಾಗೂ ಆಲ್ಕೋಹಾಲ್‌ ಅಮಶವಿರುವ ಉತ್ಪನ್ನಗಳನ್ನು ಬಳಸಬೇಡಿ. ಮಗುವಿಗಾಗಿಯೇ ಇರುವ ಮಾಯಿಶ್ಚರೈಸರ್ ಅಥವಾ ಲೋಷನ್‌ ಹಚ್ಚಿ. ದಿನದಲ್ಲಿ ಎರಡು ಬಾರಿ ಮಗುವಿನ ಮೈ ಪೂರ್ತಿ ಮಾಯಿಶ್ಚರೈಸರ್ ಹಚ್ಚಿ.

ಸ್ನಾನಕ್ಕೆ ಈ ಬಗೆಯ ಉತ್ಪನ್ನಗಳನ್ನು ಬಳಸಬೇಡಿ

ಸ್ನಾನಕ್ಕೆ ಈ ಬಗೆಯ ಉತ್ಪನ್ನಗಳನ್ನು ಬಳಸಬೇಡಿ

* ಮಗುವಿಗೆ ಚಳಿಗಾಲದಲ್ಲಿ ಸೋಪ್‌ ಬಳಸಬೇಡಿ, ಬದಲಿಗೆ ಲೋಷನ್‌ ಬಳಸಿ.

* ತುಂಬಾ ಸುವಾಸನೆ ಇರುವ

* ಸುಗಂಧದ್ರವ್ಯಗಳಿರುವ

* ಡಿಟರ್ಜೆಂಟ್‌ ಅಂಶವಿರುವ ಯಾವುದೇ ಉತ್ಪನ್ನಗಳನ್ನು ಬಳಸಬೇಡಿ.

ಸನ್‌ಸ್ಕ್ರೀನ್‌

ಸನ್‌ಸ್ಕ್ರೀನ್‌

ಸನ್‌ಸ್ಕ್ರೀನ್‌ ಲೋಷನ್ ಬೇಸಿಗೆ ಕಾಲದಲ್ಲಿ ಮಾತ್ರ ಬಳಸಬೇಕು ಎಂದು ಸಾಮಾನ್ಯವಾಗಿ ಜನರು ಯೋಚಿಸುತ್ತಾರೆ. ಆದರೆ ಚಳಿಗಾಲದಲ್ಲೂ ಮಧ್ಯಾಹ್ನ ಹೊತ್ತಿಗೆ ಬಿಸಿಲು ತೀವ್ರವಾಗಿರುತ್ತೆ. ಆದ್ದರಿಂದ ಸನ್‌ಸ್ಕ್ರೀನ್‌ ಲೋಷನ್‌ ಬಲಸಿ.

ಸೂಚನೆ: 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಸನ್‌ಸ್ಕ್ರೀನ್‌ ಲೋಷನ್‌ ಬಳಸಬೇಡಿ.

ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ

ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ

ಮಗುವಿಗೆ ಪ್ರತಿದಿನ ಎಣ್ಣೆ ಸ್ನಾನ ಮಾಡಿಸುವುದರಿಂದ ಅದರ ತ್ವಚೆ ಮೃದುವಾಗಿರುತ್ತೆ ಅಲ್ಲದೆ ಒಡೆಯುವುದನ್ನು ತಪ್ಪಿಸಬಹುದು.

ಸ್ನಾನದ ಸಮಯ:

ಮಗುವನ್ನು ತುಂಬಾ ಚಳಿಯಿರುವಾಗ ಸ್ನಾನ ಮಾಡಿಸಬೇಡಿ. ಮಧ್ಯಾಹ್ನದ ಹೊತ್ತಿನಲ್ಲಿ ಹದ ಬಿಸಿ ನೀರಿನಿಂದ ಸ್ನಾನ ಮಾಡಿಸಿ. ಚಳಿಯಿದೆ ಎಂದು ತುಂಬಾ ಬಿಸಿ ನೀರು ಹಾಕಬೇಡಿ, ತುಂಬಾ ಬಿಸಿ ನೀರು ಮಗುವಿನ ತ್ವಚೆಯನ್ನು ಒಣಗಿಸುತ್ತದೆ.

ಮೃದುವಾದ ಬಟ್ಟೆಯನ್ನು ಧರಿಸಿ

ಮೃದುವಾದ ಬಟ್ಟೆಯನ್ನು ಧರಿಸಿ

ಇನ್ನು ಮಗುವಿಗೆ ಕಿರಿಕಿರಿಯಾಗದಿರಲು ಅದರ ಬಟ್ಟೆಯನ್ನು ಸರಿಯಾಗಿ ಆಯ್ಕೆ ಮಾಡಬೇಕು. ತುಂಬಾ ರಫ್‌ ಆದ ಬಟ್ಟೆ ಮಗುವಿಗೆ ಕಂಫರ್ಟ್ ನೀಡುವುದಿಲ್ಲ. ಚಳಿಗಾಲದಲ್ಲಿ ಮಗುವಿಗೆ ಉಣ್ಣೆಯ ಬಟ್ಟೆ ಧರಿಸಿ ಮೈಯನ್ನು ಬೆಚ್ಚಗಿಡಿ.

ಯಾವಾಗ ಮಕ್ಕಳ ತಜ್ಞರನ್ನು ಭೇಟಿಯಾಗಬೇಕು?

ನಿಮ್ಮ ಮಗುವಿನ ತ್ವಚೆಯನ್ನು ಈ ರೀತಿಯೆಲ್ಲಾ ಆರೈಕೆ ಮಾಡಿಯೂ ತ್ವಚೆ ಒಣಗುತ್ತಿದೆ, ಚಳಿಗಾಲವಲ್ಲದಿದ್ದರೂ ತ್ವಚೆಯಲ್ಲಿ ಬಿರುಕು ಉಂಟಾಗುತ್ತಿದೆ ಎಂದಾದರೆ ಮಕ್ಕಳ ತಜ್ಞರಿಗೆ ತೋರಿಸಿ.

English summary

How to Care for Baby’s Skin in the Winter In Kannada

How to care for baby’s skin in the winter In Kannada, read on,
Story first published: Monday, November 22, 2021, 9:15 [IST]
X
Desktop Bottom Promotion