For Quick Alerts
ALLOW NOTIFICATIONS  
For Daily Alerts

ಪ್ರಾಯಕ್ಕೆ ತಕ್ಕಂತೆ ಮಗು ಎಷ್ಟು ಹೊತ್ತು ನಿದ್ರಿಸುವುದು ಅವಶ್ಯಕ?

|

ಮೊದಲ ಬಾರಿ ಪೋಷಕರಾದಾಗ ಎಲ್ಲಾ ಇಷಯದಲ್ಲೂ ಒಂಥರಾ ಆತಂಕವೇ... ಮಗು ಅತ್ತರೆ ಅಯ್ಯೋ ಏಕೆ ಅಳುತ್ತಿದೆ ಎಂದು ಗಾಬರಿ ಬೀಳುತ್ತೇವೆ. ಹೆಚ್ಚು ನಿದ್ದೆ ಮಾಡಿದರೆ ಮಗು ಏಕೆ ಇಷ್ಟು ಹೊತ್ತು ನಿದ್ದೆ ಮಾಡುತ್ತಿದೆ ಎಂಬ ಅಚ್ಚರಿ, ನಿದ್ದೆ ಸರಿಯಾಗಿ ಮಾಡದಿದ್ದರೆ ನನ್ನ ಮಗು ಏಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂಬ ಗಾಬರಿ... ಒಟ್ಟಿನಲ್ಲಿ ಮೊದಲ ಮಗು ಜನಿಸಿದಾಗ ಪೋಷಕರು ಚಿಕ್ಕ-ಪುಟ್ಟ ವಿಷಯಕ್ಕೂ ಗಾಬರಿ ಬೀಳುತ್ತಾರೆ. ಈ ಆತಂಕ ಎರಡನೇ ಮಗುವಿನಲ್ಲಿ ಇರಲ್ಲ, ಏಕೆಂದರೆ ನಮಗೆ ಆ ಸಮಯದಲ್ಲಿ ಮಗುವಿನ ಆರೈಕೆ ಬಗ್ಗೆ ಹೆಚ್ಚಿನ ಅರಿವು ಬಂದಿರುತ್ತದೆ.

ಮಗು ಜನಿಸಿದ ಬಳಿಕ ವಾರದಿಂದ ವಾರಕ್ಕೆ ಅದರಲ್ಲಿ ಬದಲಾವಣೆ ಕಂಡು ಬರುತ್ತದೆ. ಮೊದಲಿಗೆ ನಿದ್ದೆ-ಅಳು ಮಾತ್ರ ಇದ್ದ ಮಗು ದಿನಗಳು ಕಳೆಯುತ್ತಿದ್ದಂತರೆ ನಗಲು ಪ್ರಾರಂಭಿಸುತ್ತದೆ, ಕೈ-ಕಾಲು ಆಡಿಸಿ ಆಡಲಾರಂಭಿಸುತ್ತದೆ, ನಂತರ ಮಗುಚಿ ಬೀಳಲಾರಂಭಿಸುತ್ತದೆ ಹೀಗೆ ಆಯಾ ಸಮಯಕ್ಕೆ ತಕ್ಕಂತೆ ಮಗು ತನ್ನ ಚಟುವಟಿಕೆ ಮಾಡಲಾರಂಭಿಸುತ್ತದೆ . ಮಗು ಚಟುವಟಿಕೆಯಿಂದ ಇರಲು ನಿದ್ದೆ ತುಂಬಾನೇ ಅವಶ್ಯಕವಾಗಿದೆ. ಮಗು ನಿದ್ದೆ ಬೆಳೆಯುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು, ಮಗು ಹೆಚ್ಚು ನಿದ್ದೆ ಮಾಡಿದಷ್ಟೂ ಅದರ ಬೆಳವಣಿಗೆಗೆ ಒಳ್ಳೆಯದು.

ನಾವಿಲ್ಲಿ ಒಂದು ವರ್ಷದೊಳಗಿನ ಮಕ್ಕಳ ನಿದ್ದೆ ಸಮಯ ಹೇಗಿರುತ್ತದೆ, ಯಾವ ತಿಂಗಳಿಗೆ ಸಹಜವಾಗಿ ಎಷ್ಟು ಸಮಯ ನಿದ್ದೆ ಮಾಡುತ್ತದೆ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ನವಜಾತ ಶಿಶುವಿನಿಂದ ಹಿಡಿದು 3 ತಿಂಗಳವರೆಗೆ:

ನವಜಾತ ಶಿಶುವಿನಿಂದ ಹಿಡಿದು 3 ತಿಂಗಳವರೆಗೆ:

ಆರೋಗ್ಯಕರ ಮಗು ಈ ಪ್ರಾಯದಲ್ಲಿ 14 ರಿಂದ 17 ತಾಸು ನಿದ್ದೆ ಮಾಡುತ್ತದೆ. ಒಮ್ಮೆ ಮಲಗಿದಾಗ ಎರಡರಿಂದ ನಾಲ್ಕು ತಾಸು ನಿದ್ದೆ ಮಾಡಬಹುದು. ಮಗು ಇದೇ ಸಮಯಕ್ಕೆ ಮಲಗಬೇಕು ಎಂದು ನೀವು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಕೆಲ ಮಕ್ಕಳು ಹಗಲು ಒಳ್ಳೆಯ ನಿದ್ದೆ ಮಾಡಿ ರಾತ್ರಿ ಆಟ((ಕೈ ಕಾಲು ಆಡಿಸುತ್ತಾ) ಆಡಲಾರಂಭಿಸುತ್ತವೆ.

4-6 ತಿಂಗಳ ಮಕ್ಕಳು:

4-6 ತಿಂಗಳ ಮಕ್ಕಳು:

ಈ ಪ್ರಾಯದಲ್ಲಿ ಮಕ್ಕಳು 12-16 ತಾಸು ನಿದ್ದೆ ಮಾಡುತ್ತವೆ. ಈ ಸಮಯದಲ್ಲಿ ಮಕ್ಕಳು ನಮ್ಮ ನಿದ್ದೆಯ ಅಭ್ಯಾಸಕ್ಕೆ ಹೊಂದಿಕೊಂಡಿರುತ್ತವೆ. ಅವು ರಾತ್ರಿ ಹೆಚ್ಚು ನಿದ್ದೆ ಮಾಡುತ್ತವೆ ಹಗಲು ಕಡಿಮೆ ನಿದ್ದೆ ಮಾಡುತ್ತವೆ. ಈ ಪ್ರಾಯದಲ್ಲಿ ಮಕ್ಕಳು ಹಗಲಿನಲ್ಲಿ 2-3 ಬಾರಿ ನಿದ್ದೆ ಮಾಡಬಹುದು, ಒಮ್ಮೊಮ್ಮೆ ರಾತ್ರಿಯೂ ಎಚ್ಚರವಾಗಿ ಆಟ ಆಡಲಾರಂಭಿಸುತ್ತದೆ.

7-11 ತಿಂಗಳು:

7-11 ತಿಂಗಳು:

ಈ ಪ್ರಾಯದಲ್ಲಿ ಮಕ್ಕಳು ರಾತ್ರಿ ಹೊತ್ತು ಹೆಚ್ಚು ನಿದ್ದೆ ಮಾಡುತ್ತವೆ. 10-12 ತಾಸು ನಿದ್ದೆ ಮಾಡುತ್ತವೆ. ಮಕ್ಕಳು ಬೆಳೆಯುತ್ತಿದ್ದಂತೆ ಹಗಲಿನಲ್ಲಿ ನಿದ್ದೆ ಕಡಿಮೆ ಮಾಡಿ ರಾತ್ರಿ ಹೊತ್ತು ಮಾತ್ರ ನಿದ್ದೆ ಕಡಿಮೆ ಮಾಡಲಾರಂಭಿಸುತ್ತವೆ.

ಇನ್ನು ಮಕ್ಕಳ ನಿದ್ದೆ ಈ ಕೆಳಗಿನ ಕಾರಣಗಳು ಪ್ರಭಾವ ಬೀರುತ್ತವೆ

ಅವಧಿ ಪೂರ್ವ ಹುಟ್ಟಿದ ಮಗು

ಅವಧಿ ಪೂರ್ವ ಹುಟ್ಟಿದ ಮಗು

ಅವಧಿ ಪೂರ್ವ ಹುಟ್ಟಿದ ಮಕ್ಕಳು ಹೆಚ್ಚು ಸಮಯ ನಿದ್ದೆ ಮಾಡುತ್ತವೆ. ಈ ಮಕ್ಕಳು 22 ಗಂಟೆ ನಿದ್ದೆ ಮಾಡಬಹುದು. ಅವರ ಬೆಳೆಯುತ್ತಿದ್ದಂತೆ ಇತರ ಮಕ್ಕಳಂತೆ ನಿದ್ದೆ ಮಾಡಲಾರಂಭಿಸುತ್ತವೆ.

ಹಾಲು ಕೊಡುವ ವಿಧಾನ:

ಎದೆ ಹಾಲು ಕುಡಿದು ಮಲಗಿದರೆ ಮಕ್ಕಳಿಗೆ ಬೇಗನೆ ಹಸಿವಾಗುತ್ತದೆ, ಆದ್ದರೆ ಬೇಗನೆ ಎಚ್ಚರವಾಗುತ್ತಾರೆ, ಬಾಟಲಿ ಹಾಲು ಕೊಟ್ಟರೆ ಹೆಚ್ಚು ಹೊತ್ತು ನಿದ್ದೆ ಮಾಡುತ್ತವೆ. ಮಕ್ಕಳಿಗೆ 9 ತಿಂಗಳು ತುಂಬಿದಾಗ ಯಾವ ಹಾಲೇ ಕೊಡಿ ಮಗುವಿನ ನಿದ್ದೆಯಲ್ಲಿ ತುಂಬಾ ವ್ಯತ್ಯಾಸ ಇರುವುದಿಲ್ಲ.

ಮಗು ನಿದ್ದೆ ಮಾಡುವ ಸ್ಥಳ ಬಗ್ಗೆ ಎಚ್ಚರ

ಮಗು ನಿದ್ದೆ ಮಾಡುವ ಸ್ಥಳ ಬಗ್ಗೆ ಎಚ್ಚರ

ಮಗುವನ್ನು ಮಲಗಿಸು ಮುನ್ನ ಆ ಬೆಡ್‌ ಶೀಟ್ ಎಲ್ಲಾ ಕೊಡವಿ ನಂತರ ಹಾಸಬೇಕು, ಅಲ್ಲದೆ ಮಗು ಹೊಟ್ಟೆ ಮೇಲೆ ಮಲಗಿದರೆ ಅದರ ಮೂಗು ಕೆಳಗೆ ತಾಗಿ ಉಸಿರು ಕಟ್ಟದಂತೆ ನೋಡಿಕೊಳ್ಳಬೇಕು. ಒಂದು ವರ್ಷದ ಒಳಗಿನ ಮಕ್ಕಳ ಸಮೀಪ ಮಲಗುವಾಗ ಸಾಫ್ಟ್ ಟಾಯ್ಸ್ (ಆಟಿಕೆ), ದಪ್ಪ ಬೆಡ್‌ಶೀಟ್ ಏನೂ ಇಡಬಾರದು. ಅಲ್ಲದೆ ಮಗು ನಿದ್ದೆಯಿಂದ ಎಚ್ಚೆತ್ತಾದಾಗ ಬೀಳದಂತೆಯೂ ಎಚ್ಚರಿಕೆ ವಹಿಸಿರಬೇಕು.

ಇತರ ಸಲಹೆ

ಇತರ ಸಲಹೆ

ಮಗು ತುಂಬಾ ನಿದ್ದೆ ಮಾಡುತ್ತಿದ್ದರೆ ಏನು ಮಾಡಬೇಕು?

ಮಗು ತುಂಬಾ ನಿದ್ದೆ ಮಾಡುತ್ತಿದ್ದರೆ ನಿದ್ದೆ ಮಾಡಿದೆ ಎಂದು ಹಾಗೆನೇ ಬಿಡಬಾರದಯು. ಪ್ರತೀ ಎರಡು ಗಂಟೆಗೊಮ್ಮೆ ಎದೆ ಹಾಲು ಕೊಡಬೇಕು.

ಮಗು ಸರಿಯಾಗಿ ನಿದ್ದೆ ಮಾಡದಿದ್ದರೆ ಏನಾಗುತ್ತೆ?

ಮಗುವಿಗೆ ನಿದ್ದೆ ಕಡಿಮೆಯಾದಾಗ ಮಗು ಬೇಗನೆ ಸುಸ್ತಾಗುವುದು. ಆದ್ದರಿಂದ ಮಗುವಿನ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ನಿದ್ದೆ ಮಾಡಬೇಕು.

Read more about: pregnancy
English summary

How Much Sleep Do Babies Need by Age

Here is information about how much sleep do babies need by age, read on.
X
Desktop Bottom Promotion