For Quick Alerts
ALLOW NOTIFICATIONS  
For Daily Alerts

ಆಯುರ್ವೇದದ ಪ್ರಕಾರ ನವಜಾತ ಶಿಶುಗಳನ್ನು ಹೀಗೆಯೇ ಬೆಳೆಸಬೇಕು

|

ಹಳೆಯ ಸಾಕಷ್ಟು ಸಂಪ್ರದಾಯ, ಆಹಾರಶೈಲಿಗಳು ನಮ್ಮ ಆರೋಗ್ಯಕ್ಕೆ ಉತ್ತಮ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ನಮ್ಮ ಬದಲಾದ ಜೀವನಶೈಲಿಯಿಂದ ಹಳೆಯ ಪದ್ಧತಿಗಳನ್ನು ಕಡೆಗಣಿಸಿ ಅನುಕೂಲಕ್ಕೆ ಅನುಗುಣವಾಗಿ ಹೊಸ ಜೀವನಶೈಲಿಗೆ ಬದಲಾಗಿದ್ದೇವೆ. ಇಂಥಾ ಸಾಕಷ್ಟು ವಿಚಾರಗಳಲ್ಲಿ ಮಕ್ಕಳನ್ನು ಬೆಳೆಸುವ ಪದ್ಧತಿ ಸಹ ಒಂದು.

ಮಗು ಹುಟ್ಟಿದ ದಿನನಿಂದ ಮೊದಲ ಮೂರು ಅಥವಾ ಆರು ತಿಂಗಳು ಬಹಳ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಮಗುವಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆದ್ದರಿಂದ ಹಿರಿಯರು ಈ ಸಂದರ್ಭದಲ್ಲಿ ಮಕ್ಕಳಿಗೆ ವಿಶೇಷ ಕಾಳಜಿ ತೋರಿಸುತ್ತಿದ್ದರು. ನಮ್ಮ ಪುರಾತನ ಆಯುರ್ವೇದ ಪದ್ಧತಿ ಮಕ್ಕಳನ್ನು ಬೆಳೆಸುವಲ್ಲಿ ತೋರುತ್ತಿದ್ದ ಕಾಳಜಿಗಳು ಯಾವುವು, ಅದು ಮಕ್ಕಳಿಗೆ ಹೇಗೆ ಪ್ರಯೋಜನಕಾರಿ ಹಾಗೂ ಇದೆಲ್ಲಾ ಇಂದಿಗೂ ಏಕೆ ಪ್ರಸ್ತುತ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ:

1. ಮಗು ಹಾಗೂ ತಾಯಿಯನ್ನು ಪ್ರತ್ಯೇಕವಾಗಿಡಿ

1. ಮಗು ಹಾಗೂ ತಾಯಿಯನ್ನು ಪ್ರತ್ಯೇಕವಾಗಿಡಿ

ಹಿಂದಿನಿಂದಲೂ ತಾಯಿ ಹಾಗೂ ನವಜಾತ ಶಿಶುವನ್ನು ಪ್ರತ್ಯೇಕವಾದ ಕೋಣೆಯಲ್ಲಿ ಇರಿಸಲಾಗುತ್ತಿತ್ತು ಮತ್ತು ಮಗುವನ್ನು ನೋಡಲು ಎಲ್ಲರಿಗೂ ಅವಕಾಶ ಇರಲಿಲ್ಲ. ತಾಯಿ ಅಥವಾ ಕುಟುಂಬದ ಇತರ ಹಿರಿಯ ಮಹಿಳೆಯರು ಮಾತ್ರ ಬಾಣಂತಿ ಕೋಣೆಯನ್ನು ಪ್ರವೇಶಿಸುತ್ತಿದ್ದರು.

ಇದಕ್ಕೆ ಬಹುಮುಖ್ಯ ಕಾರಣ ಮಗುವಿನಲ್ಲಿ ಇರುವ ರೋಗನಿರೋಧಕ ಶಕ್ತಿಯ ಕೊರತೆ. ಈ ಸಂದರ್ಭದಲ್ಲಿ ಜನರು ಮಗುವನ್ನು ಮುಟ್ಟದಂತೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹೀಗೆ ಮಾಡಲಾಗುತ್ತಿತ್ತು. ಮಗುವಿನ ರೋಗನಿರೋಧಕ ಶಕ್ತಿ ಆರು ತಿಂಗಳ ನಂತರ ಅಭಿವೃದ್ಧಿಯಾಗುತ್ತದೆ, ಆದ್ದರಿಂದ ಇಂಥಾ ಆಚರಣೆ ರೂಢಿಯಲ್ಲಿತ್ತು, ಆದರೆ ಈಗ ಮಗು ಹುಟ್ಟಿದ ನಂತರ ಆಸ್ಪತ್ರೆಯಲ್ಲಿ ಹತ್ತಾರು ಸಂಬಂಧಿಕರು ಬಂದು ಮಗುವನ್ನು ನೋಡುವಂತಾಗಿದೆ.

2. ಸಿಹಿಯಾದ ಮಾತು, ಇಂಪಾದ ಸಂಗೀತ ಮತ್ತು ಹಿತವಾದ ವರ್ತನೆ

2. ಸಿಹಿಯಾದ ಮಾತು, ಇಂಪಾದ ಸಂಗೀತ ಮತ್ತು ಹಿತವಾದ ವರ್ತನೆ

ಮಗು ಮಾತನಾಡಲು ಸಾಧ್ಯವಿಲ್ಲ ಆದರೆ ನಮ್ಮಂತೆಯೇ ಭಯ ಮತ್ತು ಆತಂಕವನ್ನು ಅನುಭವಿಸುತ್ತದೆ. ಮಗುವಿನೊಂದಿಗೆ ಮೃದುವಾಗಿ, ಸಿಹಿಯಾಗಿ ಮಾತನಾಡಬೇಕು. ಮಗು ನಿದ್ರಿಸುವಾಗ ಅಥವಾ ಅವರ ಹತ್ತಿರ ಕುಳಿತಾಗ ತುಂಬಾ ಜೋರಾಗಿ ಕೂಗದಂತೆ ಎಚ್ಚರವಹಿಸಿ.

ಕೆಲವೊಮ್ಮೆ, ಮಗುವನ್ನು ಗಾಳಿಯಲ್ಲಿ ಎಸೆಯುವ, ವಿಚಿತ್ರವಾಗಿ ಆಡಿಸುವ ಸಾಮಾನ್ಯ ತಮಾಷೆಯ ಸೂಚನೆಯು ಮಗುವಿನ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಬಹುದು, ಹೀಗಾಗಿ ಅದನ್ನು ತಪ್ಪಿಸಬೇಕು. ಮಗುವಿಗೆ ಒಂದು ವರ್ಷ ತುಂಬುವವರೆಗೆ ಶಾಂತವಾದ ಸಂಗೀತ, ಲಾಲಿ ಹಾಡಿ ಮತ್ತು ಮಗುವನ್ನು ಗಮನಿಸದೆ ಬಿಡಬೇಡಿ. ಮಗುವಿನ ಮುಂದೆ ಕಠಿಣ ಮತ್ತು ಜೋರಾದ ಮಾತುಗಳನ್ನು ತಪ್ಪಿಸಬೇಕು.

3. ಮಗುವಿನ ಕೋಣೆಗೆ ಸಾಂಬ್ರಾಣಿ/ ಧೂಪ ಹಾಕುವುದು

3. ಮಗುವಿನ ಕೋಣೆಗೆ ಸಾಂಬ್ರಾಣಿ/ ಧೂಪ ಹಾಕುವುದು

ಇದು ಮತ್ತೊಂದು ಹಳೆಯ ಸಂಪ್ರದಾಯವಾಗಿದ್ದು, ಇಂದಿಗೂ ಬಹುತೇಕರು ನವಜಾಶ ಶಿಶುಗಳಿಗೆ ಈ ಪದ್ಧತಿಯನ್ನು ಆಚರಿಸುತ್ತಾರೆ. ಮಗು, ಬಾಣಂತಿ ಇರುವ ಕೋಣೆಯು ಯಾವುದೇ ಹುಳು-ಹುಪ್ಪಟೆ ಇಲ್ಲದಂತೆ ನೋಡಿಕೊಳ್ಳಲು, ಯಾವುದೇ ರೋಗನಿರೋಧಕ ಸಮಸ್ಯೆ ಎದುರಾಗದಂತೆ ಕಾಪಾಡಲು ಹಾಗೂ ಉತ್ತಮ ಪರಿಸರ ಉಂಟುಮಾಡಲು ಮಗುವಿಗೆ ಹಾಗೂ ಬಾಣಂತಿಗೆ ಸಾಂಭ್ರಾನಿ/ಧೂಪ ಹಾಕುತ್ತಿದ್ದರು. ಇದಕ್ಕಾಗಿ, ಮಗುವಿನ ಕೋಣೆಯಲ್ಲಿ ಸಾಂಭ್ರಾಣಿ, ಆಯುರ್ವೇದದ ರಾಳಗಳು ಮತ್ತು ಎಲೆಗಳಿಂದ ಹೊಗೆಯಾಡಿಸಿ ನಕಾರಾತ್ಮಕ ಶಕ್ತಿಗಳನ್ನು ಎದುರಿಸಲು ಮತ್ತು ಕೋಣೆಯಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತಿದ್ದರು.

ಅಷ್ಟೇ ಅಲ್ಲದೆ, ಬ್ರಾಹ್ಮಿ, ಹೀಂಗ್, ಗುಗುಲು ಮತ್ತು ಭಜೆಗಳನ್ನು ಮಗುವಿನ ಕೋಣೆ ಮತ್ತು ಬಟ್ಟೆಗಳನ್ನು ಒಣಗಿಸಲು ಬಳಸಬಹುದು. ಇದು ಗಾಳಿಯಲ್ಲಿರುವ ಸೂಕ್ಷ್ಮಜೀವಿಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

4. ಮೇಲ್ಮುಖ ತೈಲ ಮಸಾಜ್

4. ಮೇಲ್ಮುಖ ತೈಲ ಮಸಾಜ್

ಹೊಕ್ಕುಳಬಳ್ಳಿಯು ಒಣಗಲು ಮತ್ತು ಉದುರಲು ಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತದೆ, ಅದರ ನಂತರ ಮಗುವಿಗೆ ಮಸಾಜ್ ಮಾಡಲು ಪ್ರಾರಂಭಿಸಬೇಕು. ಆಯುರ್ವೇದವು ಅಶ್ವಗಂಧ, ಶಲ್ಪರ್ನಿ, ಹರಳೆಣ್ಣೆ ಗಿಡದ ಬೇರು, ಹರಳೆಣ್ಣೆ, ಎಳ್ಳೆಣ್ಣೆ, ಅರಿಶಿನ ಮತ್ತು ಮೇಕೆ ಹಾಲನ್ನು ಮಗುವಿಗೆ ಮೇಲ್ಮುಖವಾಗಿ ಮಸಾಜ್ ಮಾಡಲು ಹೇಳುತ್ತಿದ್ದರು.

ಇದರಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ರಕ್ತಪರಿಚಲನೆ ಹೆಚ್ಚುತ್ತದೆ, ಮಗವಿನ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ, ತೂಕ ಹೆಚ್ಚಲು ಸೇರಿದಂತೆ ಮಗುವಿನ ಮೂಳೆಗಳಿಗೆ ಇದು ಶಕ್ತಿ ನೀಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಹ ಸಾಬೀತಾಗಿದೆ.

5. ನಾಲ್ಕನೇ ತಿಂಗಳವರೆಗೆ ಮಗುವನ್ನು ಮನೆಯೊಳಗೆ ಇಡುವುದು

5. ನಾಲ್ಕನೇ ತಿಂಗಳವರೆಗೆ ಮಗುವನ್ನು ಮನೆಯೊಳಗೆ ಇಡುವುದು

ಆಯುರ್ವೇದದ ಪ್ರಕಾರ, ಮಗುವನ್ನು ನಾಲ್ಕು ತಿಂಗಳ ತನಕ ಕೋಣೆಯೊಳಗೆ ಮಾತ್ರ ಇಡಬೇಕು. ಈ ಕೋಣೆಗೆ ಪ್ರವೇಶವನ್ನು ಸೀಮಿತಗೊಳಿಸಬೇಕು. ಸಾಂಪ್ರದಾಯಿಕವಾಗಿ ಮಗು ತನ್ನ ನಾಲ್ಕನೇ ತಿಂಗಳನ್ನು ಪೂರ್ಣಗೊಳಿಸಿದ ದಿನ, ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಧರಿಸಿ ಕೋಣೆಯಿಂದ ಹೊರಗೆ ತರಲಾಗುತ್ತದೆ. ಮನೆಯ ಹಿರಿಯರು ಮಗುವನ್ನು ಆಶೀರ್ವದಿಸುತ್ತಾರೆ ಮತ್ತು ಇದನ್ನು ಮಾಡಿದ ನಂತರ, ಮಗುವನ್ನು ಮನೆಯ ಇತರ ಕೋಣೆಗಳಿಗೆ ಕರೆದೊಯ್ಯಲಾಗುತ್ತದೆ.

6. ಸೂರ್ಯ ಮತ್ತು ಚಂದ್ರನಿಗೆ ಒಡ್ಡಿಕೊಳ್ಳುವುದು

6. ಸೂರ್ಯ ಮತ್ತು ಚಂದ್ರನಿಗೆ ಒಡ್ಡಿಕೊಳ್ಳುವುದು

ಆರಂಭಿಕ ತಿಂಗಳುಗಳಲ್ಲಿ ಮಗುವಿಗೆ ಅಗತ್ಯವಿರುವ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸೂರ್ಯ ಮತ್ತು ಚಂದ್ರನ ಬೆಳಕು ಹೊಂದಿದೆ. ಮಗುವನ್ನು ನಾಲ್ಕು ತಿಂಗಳ ಕಾಲ ಕೋಣೆಯೊಳಗೆ ಇರಿಸಲಾಗುತ್ತದೆ, ಆದರೆ ಸೂರ್ಯನ ಬೆಳಕು ಮಗುವಿಗೆ ಬೀಳಲೆಂದು ಕೆಲವು ನಿಮಿಷಗಳ ಕಾಲ ಬೆಳಗಿನ ಸೂರ್ಯನ ಬೆಳಕನ್ನು ತೋರಿಸಲಾಗುತ್ತದೆ. ಕೋಣೆಗೆ ನೇರವಾಗಿ ಸೂರ್ಯನ ಬೆಳಕು ಬೀಳುವಂತಿದ್ದರೆ ಇನ್ನೂ ಉತ್ತಮ. ಹಾಗೆಯೇ, ಚಂದ್ರನ ಬೆಳಕು ಮಗುವಿನ ನರಮಂಡಲಕ್ಕೂ ಪ್ರಯೋಜನಕಾರಿಯಾಗಿದೆ ಮತ್ತು ತಾಯಿಯ ಸ್ತ್ರೀರೋಗ ಚಕ್ರವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

English summary

Forgotten age-old Ayurveda rituals for newborn babies in Kannada

Here we are discussing about Forgotten age-old Ayurvedic rituals for newborn babies in Kannada. Read more.
Story first published: Monday, October 18, 2021, 14:07 [IST]
X
Desktop Bottom Promotion