For Quick Alerts
ALLOW NOTIFICATIONS  
For Daily Alerts

ಮಗುವಿನ ಹೊಟ್ಟೆಯೊಳಗೆ ಭ್ರೂಣ, 40 ದಿನಗಳಿಂದ ಬೆಳೆಯುತ್ತಲೇ ಇದೆ!

|

ವೈದ್ಯಕೀಯ ಜಗತ್ತಿನಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ ಹಾಗೂ ಈ ಪ್ರಕರಣ ವೈದ್ಯಕೀಯ ಜಗತ್ತಿಗೆ ಒಂದು ಶಾಕ್ ಕೂಡ. ಹೌದು 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳೆಯುತ್ತಿದೆ.

Foetus Found Inside Baby

40 ದಿನದ ಮಗುವಿಗೆ ಹೊಟ್ಟೆ ಉಬ್ಬುತ್ತಿದೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಎಂದು ಬಿಹಾರದ ಮೋತಿಹರಿಯ ರಹಮಾನಿಯಾ ಮೆಡಿಕಲ್‌ ಸೆಂಟರ್‌ಗೆ ಕರೆತರಲಾಗಿತ್ತು. ಮಗುವಿಗೆ ಹೊಟ್ಟೆ ಉಬ್ಬಲು ಕಾರಣವೇನು, ಏಕೆ ಮೂತ್ರ ವಿಸರ್ಜನೆ ಸರಿಯಾಗುತ್ತಿಲ್ಲ ಎಂದು ಸಂಪೂರ್ಣ ಪರೀಕ್ಷೆ ಮಾಡಲಾಯಿತು. ನಂತರ ಮಗುವಿನ ಹೊಟ್ಟೆಯನ್ನು ಸ್ಕ್ಯಾನ್‌ ಮಾಡಲಾಯಿತು ಆಗ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣವಿರುವುದು ಪತ್ತೆಯಾಗಿದೆ, ಇದು ನಿಜವಾಗಿಯೂ ನಮ್ಮೆಲ್ಲರಿಗೆ ಶಾಕ್‌ ಉಂಟು ಮಾಡಿತ್ತು ಎಂದು ಡಾ. ತರ್ಬೇಜ್‌ ಅಜೀಜ್‌ , ರಹಮಾನಿಯಾ ಮೆಡಿಕಲ್‌ ಸೆಂಟರ್‌ ವೈದ್ಯ ಹೇಳಿದ್ದಾರೆ.

ವೈದ್ಯರ ತಂಡ ಹಲವಾರು ಪರೀಕ್ಷೆಗಳನ್ನು ಮಾಡಲಾಯಿತು ಆಗ ಮಗುವಿನ ಹೊಟ್ಟೆಯೊಳಗೆ ಚಿಕ್ಕ ಭ್ರೂಣ ಪತ್ತೆಯಾಗಿತ್ತು ಮಾತ್ರವಲ್ಲ ಆ ಭ್ರೂಣ ಬೆಳೆಯುತ್ತಿದೆ ಕೂಡ.

ಅಪರೂಪದ ವೈದ್ಯಕೀಯ ಪ್ರಕರಣ

ಐದು ಲಕ್ಷ ಮಕ್ಕಳಲ್ಲಿ ಒಂದು ಮಗುವಿನಲ್ಲಿ ಈ ರೀತಿಯಾಗುವ ಸಾಧ್ಯತೆ ಇದೆ. ಇದು ತುಂಬಾ ಅಪರೂಪದ ಪ್ರಕರಣವಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ fetus-in-fetu ಎಂದು ಕರೆಯಲಾಗುವುದು.

ಈ ಹಿಂದೆಯೂ ಈ ರೀತಿಯ ಪ್ರಕರಣ ನಡೆದಿದೆ. 5 ವರ್ಷದ ಹಿಂದೆ ಹಾಂಗ್‌ಕಾಂಗ್‌ನನಲ್ಲಿ ಇಂಥದ್ದೊಂದು ಪ್ರಕರಣ ದಾಖಲಾಗಿತ್ತು. 2019ರಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಹೊಟ್ಟೆಯೊಳಗೆ ಅವಳಿ ಭ್ರೂಣಗಳಿತ್ತು ಎಂದು ದಿ ಟೈಮ್ಸ್ ಆಫ್‌ ಇಸ್ರೇಲ್‌ ವರದಿ ಮಾಡಿತ್ತು.

English summary

Foetus Found Growing Inside 40 Day Old Baby

Foetus Found Growing Inside 40 Day Old Baby, read on...
X
Desktop Bottom Promotion