For Quick Alerts
ALLOW NOTIFICATIONS  
For Daily Alerts

5 ವರ್ಷ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಬೇಕಾಗಿಲ್ಲ, ಏಕೆ?

|

ಕೊರೊನಾ ಬಂದಾಗಿನಿಂದ ಮಾಸ್ಕ್ ಎಂಬುವುದು ನಮ್ಮ ದಿನ ನಿತ್ಯ ಜೀವನಕ್ಕೆ ಅಗ್ಯತವಿರುವ ವಸ್ತುಗಳಲ್ಲಿ ಒಂದಾಗಿದೆ. ಪರ್ಸ್‌ ಇಲ್ಲದೆ ಹೊರಗಡೆ ಕಾಲಿಡಬಹುದು ಆದರೆ ಮಾಸ್ಕ್‌ ಇಲ್ಲದೆ ಹೊರಗಡೆ ಹೋಗಲು ಸಾಧ್ಯವೇ ಇಲ್ಲ. ಮನೆಯಿಂದ ಹೊರಗಡೆ ಹೋಗಬೇಕಾದರೆ ನಮ್ಮ ಸುರಕ್ಷತೆಗಾಗಿ ಮಾಸ್ಕ್‌ ಧರಿಸಲೇಬೇಕಾಗಿದೆ. ಅದರಲ್ಲೂ ಹಚ್ಚಿನ ಸುರಕ್ಷತೆಗಾಗಿ ಡಬಲ್‌ ಮಾಸ್ಕ್‌ ಧರಿಸುತ್ತಿದ್ದೇವೆ.

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮಾಸ್ಕ್ ಧರಿಸಿ ಓಡಾಡುತ್ತಿದ್ದೇವೆ. ಮಕ್ಕಳು ಮಾಸ್ಕ್‌ ಧರಿಸುವಂತೆ ಮಾಡುವುದು ತುಂಬಾ ಚಿಕ್ಕ ಮಕ್ಕಳಿರುವವರಿಗೆ ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಕೆಲ ಮಕ್ಕಳಷ್ಟೇ ಮಾಸ್ಕ್ ಧರಿಸುತ್ತವೆ, ಇನ್ನು ಕೆಲ ಮಕ್ಕಳು ಮಾಸ್ಕ್ ತೆಗೆದು ಬಿಡುತ್ತಾರೆ. ಮೂರನೇ ಅಲೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂಬ ಅಭಿಪ್ರಾಯ ಕೇಳಿ ಬರುತ್ತಿರುವುದರಿಂದ ಪೋಷಕರಿಗೆ ಈ ಆತಂಕ ಬೇರೆ ಕಾಡುತ್ತಿದೆ.

ಆದರೆ ಪೋಷಕರು ನಿಟ್ಟಿಸಿರು ಬಿಡುವ ವಿಷಯವೊಂದನ್ನು ಸರ್ಕಾರ ಹೇಳಿದೆ. 5 ವರ್ಷದ ಕೆಳಗಿನ ಮಕ್ಕಳು ಮಾಸ್ಕ್ ಧರಿಸುವ ಅಗ್ಯತವಿಲ್ಲ ಎಂದು ಸರ್ಕಾರ ಹೇಳಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ, ರೆಮಿಸಿವಿರ್ ನೀಡುವಂತಿಲ್ಲ

5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ, ರೆಮಿಸಿವಿರ್ ನೀಡುವಂತಿಲ್ಲ

ಡಿಹಿಹೆಚ್‌ಎಸ್‌ (Directorate General of Health Services) ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ 5 ವರ್ಷ ಕೆಳಗಿನ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ. 6-11 ವರ್ಷದ ಮಕ್ಕಳು ಮನೆಯಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.

ಅಲ್ಲದೆ 18 ವರ್ಷದ ಕೆಳಗಿನ ಯಾವುದೇ ಮಕ್ಕಳಿಗೆ ರೆಮಿಸಿವಿರ್ ನೀಡುವಂತಿಲ್ಲ ಎಂದು ಸೂಚಿಸಿದೆ.

ಚಿಕ್ಕ-ಪುಟ್ಟ ರೋಗ ಲಕ್ಷಣಗಳಿದ್ದರೆ

ಚಿಕ್ಕ-ಪುಟ್ಟ ರೋಗ ಲಕ್ಷಣಗಳಿದ್ದರೆ

ಕೋವಿಡ್‌ 19 ಪಾಸಿಟಿವ್‌ ಬಂದ್ರೂ ಕೋವಿಡ್‌ 19 ಲಕ್ಷಣಗಳು ಇಲ್ಲದೇ ಇರುವ ಹಾಗೂ ಚಿಕ್ಕ ಪುಟ್ಟ ಲಕ್ಷಣಗಳಿರುವ ಮಕ್ಕಳಿಗೆ ಯಾವುದೇ ಪರೀಕ್ಷೆ ಅಥವಾ ನಿರ್ದಿಷ್ಟ ಔಷಧಿಯನ್ನು ಸೂಚಿಸಿಲ್ಲ. ಇಂಥ ಸಂದರ್ಭದಲ್ಲಿ ಮಕ್ಕಳ ವೈದ್ಯರಿಗೆ ಕರೆ ಮಾಡಿ ಅವರ ಸಲಹೆ ಪಾಲಿಸಬೇಕು ಅಲ್ಲದೆ ಮಕ್ಕಳಿಗೆ ಪೋಷಕಾಂಶವಿರುವ ಆಹಾರ ನೀಡುವಂತೆ ಸೂಚಿಸಲಾಗಿದೆ.

5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ ಏಕೆ?

5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ ಏಕೆ?

5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಬೇಕಾಗಿಲ್ಲ ಎಂದು ಹೇಳಿರುವುದು ಅವರಿಗೆ ಸೋಂಕಿನ ಅಪಾಯ ಇಲ್ಲ ಎಂಬ ಕಾರಣಕ್ಕಲ್ಲ, ಬದಲಿಗೆ ಅವರಿಗೆ ಮಾಸ್ಕ್‌ ಶುಚಿತ್ವದ ಬಗ್ಗೆ ಅರಿವು ಇಲ್ಲದೇ ಇರುವ ಕಾರಣ ಮಾಸ್ಕ್‌ ಧರಿಸುವುದರಿಂದ ಇತರ ಸೋಂಕಿನ ಸಾಧ್ಯತೆ ಕೂಡ ಅಧಿಕ. ಈ ಕಾರಣದಿಂದಾಗಿ ಮಕ್ಕಳಿಗೆ ಮಾಸ್ಕ್ ಧರಿಸಬೇಕಾಗಿಲ್ಲ ಎಂದು ತಜ್ಷರು ಹೇಳಿದ್ದಾರೆ.

5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಬೇಕಾಗಿಲ್ಲ, ಪೋಷಕರು ತುಂಬಾ ಎಚ್ಚರವಹಿಸಬೇಕು.

ಮಕ್ಕಳು ಮನೆಯಲ್ಲಿ ಅಥವಾ ಆಟ ಆಡುವಾಗ ಮಾಸ್ಕ್‌ ಧರಿಸಬೇಕೆ?

ಮಕ್ಕಳು ಮನೆಯಲ್ಲಿ ಅಥವಾ ಆಟ ಆಡುವಾಗ ಮಾಸ್ಕ್‌ ಧರಿಸಬೇಕೆ?

6 ವರ್ಷದ ಮೇಲಿನ ಮಕ್ಕಳಿಗೆ ಬಟ್ಟೆಯ ಮಾಸ್ಕ್ ಸಾಕು. ಆದರೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅಂದ್ರೆ ಹೃದಯ ಸಮಸ್ಯೆ, ಕ್ಯಾನ್ಸರ್ ಮುಂತಾದ ಸಮಸ್ಯೆ ಇರುವ ಮಕ್ಕಳಿಗೆ ತಜ್ಞರ ಸಲಹೆಯಂತೆ ಮಾಸ್ಕ್ ಧರಿಸಬೇಕಾಗುತ್ತದೆ.

ಇನ್ನು ಆರೋಗ್ಯವಂತ ಮಕ್ಕಳಿಗೆ ಮನೆಯಲ್ಲಿ ಕಾಯಿಲೆ ಇರುವ ವ್ಯಕ್ತಿಯ ಹತ್ತಿರ ಹೋಗುವುದಾದರೆ ಮಾಸ್ಕ್ ಧರಿಸಬೇಕು ಹಾಗೇನು ಇಲ್ಲದಿದ್ದಾಗ ಆಟ ಆಡುವಾಗ, ಮನೆಯಲ್ಲಿರುವಾಗ ಮಾಸ್ಕ್ ಅಗ್ಯತವಿಲ್ಲ.

 ಮೂರನೇ ಅಲೆ ಮಕ್ಕಳಿಗೆ ಅಪಾಯ ಎಂಬುವುದಕ್ಕೆ ಯಾವುದೇ ಆಧಾರವಿಲ್ಲ: ಏಮ್ಸ್ ನಿರ್ದೇಶಕ

ಮೂರನೇ ಅಲೆ ಮಕ್ಕಳಿಗೆ ಅಪಾಯ ಎಂಬುವುದಕ್ಕೆ ಯಾವುದೇ ಆಧಾರವಿಲ್ಲ: ಏಮ್ಸ್ ನಿರ್ದೇಶಕ

3ನೇ ಅಲೆ ಮಕ್ಕಳಿಗೆ ಅಪಾಯ ಎಂದು ಹೇಳುವುದಕ್ಕೆ ಯಾವುದೇ ಆಧಾರವಿಲ್ಲ. 2 ಅಲೆ ಮಕ್ಕಳಿಗೆ ಅಪಾಯಕಾರಿಯಾಗಿರಲಿಲ್ಲ, ಮೊದಲನೇ ಅಲೆ ವಯಸ್ಸಾದವರಿಗೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕಾಡಿದರೆ, ಎರಡನೇ ಅಲೆ ಯುವಕ-ಯುವತಿಯರಿಗೂ ಕಾಡಿತ್ತು. ಇದರ ಮೇಲೆ 3ನೇ ಅಲೆ ಮಕ್ಕಳಿಗೆ ಇರಬಹುದು ಎಂದು ಹೇಳಲಾಗುತ್ತಿದೆ, ಆದರೆ ಮಕ್ಕಳಿಗೆ ಬಂದೇ ಬರುತ್ತದೆ ಎಂಬುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಮಕ್ಕಳಿಗೆ ಸ್ಟಿರಾಯ್ಡ್ ನೀಡಬಾರದು

ಮಕ್ಕಳಿಗೆ ಸ್ಟಿರಾಯ್ಡ್ ನೀಡಬಾರದು

DGHS ಕೋವಿಡ್‌ ಸೋಂಕಿತ ಮಕ್ಕಳಿಗೆ ಸ್ಟಿರಾಯ್ಡ್ ಹಾಗೂ ಪ್ರತಿಕಾಯಗಳು (anticoagulants) ನೀಡುವಂತಿಲ್ಲ ಎಂದು ಸೂಚಿಸಿದೆ. ಒಂದು ವೇಳೆ ತುಂಬಾ ಗಂಭೀರವಾಗಿರುವ ಮಕ್ಕಳಿಗೆ ನೀಡಬಹುದಾಗಿದ್ದು ಅದು ನುರಿತ ತಜ್ಞರ ಮಾರ್ಗದರ್ಶನದಲ್ಲಿ ನೀಡುವಂತೆ ಸೂಚಿಸಲಾಗಿದೆ.

English summary

Face Masks Not Recommended For Children Below 5 Years, DGHS Reviews COVID-19 Guidelines

Face Masks not recommended for children below 5 years, DGHS reviews COVID-19 guidelines, read on..
X
Desktop Bottom Promotion