For Quick Alerts
ALLOW NOTIFICATIONS  
For Daily Alerts

ನಿಮ್ಮ ಆಪ್ತರಿಗೆ ಗಂಡು ಮಗುವಾದಾಗ ಶುಭ ಕೋರಲು ಶುಭಾಶಯಗಳು

|

ಸಾಂಸಾರಿಕ ಜೀವನಾ ಅಂದ್ಮೇಲೆ ಬರೀ ಸತಿಪತಿಗಳಿಬ್ಬರಷ್ಟೇ ಇದ್ರೆ ಅಷ್ಟೇನೂ ಸ್ವಾರಸ್ಯ ಇರೋಲ್ಲ. ಇಬ್ರು ಮೂವರೋ, ನಾಲ್ವರೋ ಆದಾಗ್ಲೇ ಆ ದಾಂಪತ್ಯಕ್ಕೊಂದು ಕಳೆ. ಬರೋ ಅತಿಥಿ "ಹೆಣ್ಣಾದ್ರೇನು, ಗಂಡಾದ್ರೇನು, ಮಕ್ಳು ಮಕ್ಳೇ ಅಲ್ವೇ ?" ಅನ್ನುತ್ತೆ ಇವತ್ತಿನ ಸಮಾಜ. ಅದು ನಿಜಾನೂ ಹೌದು. ಆದ್ರೂ ಇವತ್ತಿಗೂ "ನಮಗೊಂದು ಗಂಡುಮಗು ಇದ್ರೆ ಅದೆಷ್ಟು ಚೆನ್ನ" ಅಂತಾ ಹಪಹಪಿಸೋ ಮಂದಿಗೇನೂ ಕಡಿಮೆಯಿಲ್ಲ.

ಗಂಡುಮಗುವಿನ ಕಡೆಗಿರೋ ಒಲವು, ಕಕ್ಕುಲಾತಿ ಏನೇನೂ ಕಮ್ಮಿ ಆಗಿಲ್ಲ, ಅದರಲ್ಲೂ ವಿಶೇಷವಾಗಿ ತಾಯಂದಿರಿಗೆ!! ಎಷ್ಟೆಂದರೂ ಗಂಡು ವಂಶೋದ್ಧಾರಕನೇ ಅಲ್ವೇ ?! "ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನೋಳು" ಅನ್ನೋ ಭಾವನೇನೂ ಇವತ್ತಿಗೂ ಸಾಕಷ್ಟು ಜನರಲ್ಲಿದೆ. ಹಾಗಾಗಿ ಒಬ್ಳೋ, ಇಬ್ರೋ ಹೆಣ್ಣುಮಕ್ಳಿದ್ರೆ, "ಮಕ್ಳ ಸಂಖ್ಯೆ ಜಾಸ್ತಿಯಾದ್ರೂ ಪರ್ವಾಗಿಲ್ಲ, ಒಬ್ಬ ಕುಮಾರ ಕಂಠೀರವ ಇರ್ಲೀ" ಅಂತಾನೇ ಆಶಿಸ್ತಾರೆ ಜನ.

ಈಗ ನಮ್ಮ ನೆಂಟರಿಷ್ಟರ ಪೈಕಿ ಅಥವಾ ಬಂಧುಬಾಂಧವರಲ್ಲಿ ಯಾರ್ಗಾದ್ರೂ ಗಂಡುಮಗು ಜನಿಸಿದ ಅಂತಾದ್ರೆ ಆ ಮಗುವಿನ ಹೆತ್ತವರಿಗೆ ಯಾವೆಲ್ಲ ರೀತಿಯಲ್ಲಿ ಅಭಿನಂದನೆಗಳನ್ನ, ಶುಭಾಶಯಗಳನ್ನ ಸಲ್ಲಿಸಬಹುದೂಂತ ನಾವೀಗ ನೋಡೋಣ. ಆಯ್ದ ಅಂತಹ ಹತ್ತು ಶುಭಾಶಯ ಸಂದೇಶಗಳನ್ನ ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸಿದ್ದೇವೆ...

1. ನಮ್ಮ ನಡುವೆ ಜನಿಸಿದ ಪುಟ್ಟ ಪೋರನಿಗೆ ಹೃತ್ಪೂರ್ವಕ ಸ್ವಾಗತ ಹಾಗೂ ಈ ತುಂಟನ ಆಗಮನಕ್ಕೆ ಕಾರಣರಾದ ದಂಪತಿಗಳಿಗೆ ಹಾರ್ಧಿಕ ಅಭಿನಂದನೆಗಳು.

2. ನವಜಾತ ರಾಜಕುಮಾರನ ಹೆಮ್ಮೆಯ ಮಾತಾಪಿತರಿಗೆ ನನ್ನ ಹಾರ್ಧಿಕ ಶುಭಾಶಯಗಳು ಮತ್ತು ರಾಜಕುಮಾರನ ಉತ್ತರೋತ್ತರ ಅಭ್ಯುದಯಕ್ಕೆ ಶುಭ ಹಾರೈಕೆಗಳು.

3. ಮಗುವಿನ ಶುಭಜನನಕ್ಕಿಂತ ಸುಂದರವಾದ ಸಂಗತಿ ಇನ್ಯಾವುದೂ ಸಾಟಿಯಲ್ಲ. ಮಗುವಿನ ನಲ್ಮೆಯ ಅಮ್ಮನಿಗೆ, ರೋಮಾಂಚಿತನಾಗಿರೋ ಅಪ್ಪನಿಗೆ, ಹಾಗೂ ಮುದ್ದು ಕೃಷ್ಣನಿಗೆ ಹಾರ್ಧಿಕ ಶುಭಾಶಯಗಳು.

4. ನಿಮ್ಮ ಪುತ್ರಾಗಮನದ ಈ ಶುಭ ಸಂದರ್ಭದಲ್ಲಿ ದಂಪತಿಗಳಿಬ್ಬರಿಗೂ ಹಾರ್ಧಿಕ ಶುಭಾಶಯಗಳು. ಪ್ರತೀ ಬಾರಿಯೂ ಆ ನಿಮ್ಮ ಮುದ್ದು ಕಿಶೋರ ಮುಗುಳ್ನಗುವಾಗ ಅಥವಾ ತನ್ನ ಎಳೆಯ ಬೆರಳುಗಳಿಂದ ನಿಮ್ಮ ಬೆರಳನ್ನು ಹಿಡಿದುಕೊಳ್ಳೋದಕ್ಕೆ ಮುಂದಾದಾಗ ನೀವು ಹಿಗ್ಗಿ ಹೀರೇಕಾಯಿಯಾಗುವಂತಾಗಲಿ!!

5. ಅನೇಕ ವಿಸ್ಮಯ, ಅಚ್ಚರಿಗಳಿಂದ ತುಂಬಿಕೊಂಡಿರೋ ಭವಿಷ್ಯ ನಿಮ್ಮದಾಗಲಿದೆ. ಅದಕ್ಕೆ ಭಾಗಶ: ಕಾರಣ, ಈಗ ನೀವು ನಿಮ್ಮ ಹೃದಯಕ್ಕೆ ಸನಿಹದಲ್ಲಿ ಹಿಡಿದುಕೊಂಡಿರೋ ಶಿಶುರೂಪದ ಆ ಸಂತಸದ ಹೊನಲು. ದಂಪತಿಗಳಿಬ್ಬರಿಗೂ ಶುಭಾಶಯಗಳು.

6. ಹೊಸದಾಗಿ ಆಗಮಿಸಿರೋ ನಿಮ್ಮ ಕುಮಾರ ಕಂಠೀರವ ನಿಮ್ಮ ಮಡಿಲಲ್ಲಿ ಪವಡಿಸಿರುವುದನ್ನು ನೀವು ಕಂಡಾಗಲೆಲ್ಲ ಆನಂದ, ಶಾಂತಿ, ಸಡಗರ, ಮತ್ತು ಪ್ರಸನ್ನತೆಗಳೇ ನಿಮ್ಮ ನಿರಂತರ ಸಂಗಾತಿಗಳಾಗಿರಲಿ. ಅಭಿನಂದನೆಗಳು, ಅನುಗ್ರಹೀತ ಕುಟುಂಬವು ನಿಮ್ಮದಾಗಲಿ.

7. ನವಮಾಸಗಳು ಕಳೆದುಹೋದವು ಮತ್ತು ಈ ದಿನ ನೀವೋರ್ವ ರಾಜಕುಮಾರನನ್ನು ನಿಮ್ಮ ಮನೆಗೆ ಮತ್ತು ನಿಮ್ಮ ಜೀವನಕ್ಕೆ ಬರಮಾಡಿಕೊಂಡಿರುವಿರಿ! ನಿಮ್ಮ ಸಂತಸವನ್ನ ನಾನೂ ಹಂಚಿಕೊಳ್ಳುವೆ ಹಾಗೂ ನಿಮ್ಮ ಕುಟುಂಬಕ್ಕೆ ಈ ರೋಮಾಂಚಕ ಸೇರ್ಪಡೆಯನ್ನ ನೀವು ಸಂಭ್ರಮಿಸುತ್ತಿರುವ ಈ ಶುಭಾವಸರದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಂತೋಷ, ಸಡಗರ, ಸಂಭ್ರಮವನ್ನ ಹಾರೈಸುವೆ.

8. ಈ ಕ್ಷಣ ನೀವಿಬ್ಬರೂ ಅನುಭವಿಸುತ್ತಿರುವ ಆನಂದವನ್ನಷ್ಟೇ ನಾನೀಗ ಕಲ್ಪಿಸಿಕೊಳ್ಳಬಲ್ಲೆ! ನಿಮ್ಮಿಬ್ಬರನ್ನೂ ಚೆನ್ನಾಗಿ ಅರಿತಿರುವ ನನಗೆ, ನೀವೀರ್ವರೂ ನಿಮ್ಮ ಆ ತುಂಟನ ಪಾಲಿನ ಅತ್ಯುತ್ತಮ ಮಾತಾಪಿತರಾಗಲಿರುವಿರೆಂದು ನನಗೆ ಚೆನ್ನಾಗಿ ಗೊತ್ತು. ಹಾಗೇನೇ, ಆ ಪುಟ್ಟ ಕಂದ ಮುಗುಳ್ನಕ್ಕಾಗ ಆ ಕ್ಷಣ ನಿಮ್ಮ ದಿನದ ಸಾರ್ಥಕ್ಯದ ಘಳಿಗೆ. ಅಭಿನಂದನೆಗಳು!

9. ಗಂಡುಮಗುವನ್ನ ಬೆಳೆಸೋದು ಯಾವಾಗ್ಲೂ ಒಂದು ಸವಾಲೇ! ಇನ್ನೂ ಏನೆಲ್ಲ ಸಂಗತಿಗಳ ಜೊತೆಗೆ, ಅವರು ಗಲಾಟೆ ಮತ್ತು ಕಿರಿಕಿರಿ ಮಾಡೋವಂಥವರು, ಹಾಗಾಗಿ ಬಹು ದೀರ್ಘಾವಧಿಯವರೆಗೆ ನಿಮ್ಮ ಶಾಂತಿ ಮತ್ತು ನೆಮ್ಮದೀನಾ ಮರೆತುಬಿಡಿ. ಆದರೆ, ಅದೇ ಆ ನಿಮ್ಮ ಪುಟ್ಟ ಹುಡುಗ ಮುಂದೆ ಸಮರ್ಥ ಮತ್ತು ಸ್ವತಂತ್ರ ಪುರುಷನಾಗಿ ಬೆಳೆದು ನಿಂತಾಗ, ನಿಮ್ಮೆಲ್ಲ ಚಿಂತೆಗಳು ಮಂಗಮಾಯ ಆಗಿಬಿಡುತ್ವೆ. ಅಭಿನಂದನೆಗಳು!

10. ನಿಮ್ಮ ಪುಟ್ಟಪೋರನ ಜನನಕ್ಕೆಂದು ಶುಭ ಹಾರೈಸುತ್ತಿರುವ ಈ ಕ್ಷಣದಲ್ಲಿ ನನಗಾತ್ತಿರೋ ಸಂತೋಷ, ರೋಮಾಂಚನ, ಕೋಟಿಗಟ್ಟಲೆ ನಿಧಿ ಸಿಕ್ಕಿದರೂ ಸಹ ಆಗಲಿಕ್ಕಿಲ್ಲ. ಹಾರ್ಧಿಕ ಶುಭಾಶಯಗಳು ದಂಪತಿಗಳಿಬ್ಬರಿಗೂ!!

English summary

Congratulations on Baby Boy Messages, Messages, Quotes, WhatsApp, Facebook status, Greetings, Images in Kannada

Congratulations on Baby Boy Messages, Messages, Quotes, WhatsApp, Facebook status, Greetings, Images in Kannada.
Story first published: Friday, November 27, 2020, 15:00 [IST]
X
Desktop Bottom Promotion