For Quick Alerts
ALLOW NOTIFICATIONS  
For Daily Alerts

ಮಕ್ಕಳು ಕಣ್ಣುಜ್ಜುತ್ತಿದ್ದರೆ ಏನೆಂದು ತಿಳಿಯಬಹುದು?

|

ಸಣ್ಣ ಮಕ್ಕಳು ಆಟವಾಡುತ್ತಿದ್ದರೆ ಅಥವಾ ಏನೇ ಮಾಡಿದರೂ ಅದು ತುಂಬಾ ಚಂದ. ಅದನ್ನು ನೋಡುವುದೇ ಕಣ್ಣುಗಳಿಗೆ ಆನಂದ. ಓಹೋ…! ಕಣ್ಣುಗಳು ಎನ್ನುವ ಪದ ಬಂದಾಗ ಒಂದು ವಿಚಾರ ನೆನಪಿಗೆ ಬಂತು. ಈ ಸಣ್ಣ ಮಕ್ಕಳು ನಿದ್ರೆ ಬಂದಾಗ, ತುಂಬಾ ಅತ್ತಾಗ ಮತ್ತು ಕೆಲವೊಮ್ಮೆ ಹೀಗೆ ಕಣ್ಣುಜ್ಜಿಕೊಳ್ಳುವುದು ಇದೆ. ತಾಯಿ ಇದನ್ನು ನೋಡಿ ಹಾಗೆಲ್ಲಾ ಕಣ್ಣುಜ್ಜಿಕೊಳ್ಳಬಾರದು ಎಂದು ಗದರಿಸುವುದು ಇದೆ.

ಮಕ್ಕಳು ಯಾಕೆ ಹೀಗೆ ಕಣ್ಣುಜ್ಜಿಕೊಳ್ಳುವರು ಎನ್ನುವ ಪ್ರಶ್ನೆ ನಮ್ಮಲ್ಲಿ ಬಂದೇ ಬರುವುದು. ಅವರು ಹೊರಗಡೆ ಆಟವಾಡಲು ಹೋಗಿ ಕಣ್ಣಿಗೆ ಧೂಳು ತುಂಬಿಕೊಂಡರೆ ಆಗ ಕಣ್ಣುಜ್ಜಿಕೊಳ್ಳುವರು ಅಥವಾ ಕಣ್ಣಿನ ನೋವಿನಿಂದಲೂ ಕಣ್ಣು ಉಜ್ಜಿಕೊಳ್ಳಬಹುದು. ಇದರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಮಕ್ಕಳನ್ನು ಕಣ್ಣನ್ನು ಅತಿಯಾಗಿ ಉಜ್ಜಿಕೊಂಡರೆ ಆಗ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳು ಇರುವುದು. ಸಣ್ಣ ಮಕ್ಕಳು ಕಣ್ಣುಜ್ಜುವುದು ಯಾಕೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

Baby Eyes Rubbing

ಸಣ್ಣ ಮಕ್ಕಳು ಕಣ್ಣುಜ್ಜಲು ಕಾರಣವೇನಿರಬಹುದು? ಖಂಡಿತವಾಗಿಯೂ ಇದಕ್ಕೆ ಹಲವಾರು ಕಾರಣಗಳು ಇವೆ. ಅದು ಯಾವುದು ಎಂದು ನೀವೇ ಓದಿ ತಿಳಿಯಿರಿ.


1. ನಿದ್ರೆ ಬರುತ್ತಿರುವುದು

1. ನಿದ್ರೆ ಬರುತ್ತಿರುವುದು

ಸಣ್ಣ ಮಕ್ಕಳಿಗೆ ಮಾತು ಬರದೇ ಇರುವಂತಹ ಸಮಯದಲ್ಲಿ ಹೆಚ್ಚಾಗಿ ನಿದ್ರೆ ಬರುತ್ತಿದ್ದರೆ ಆಗ ಅದು ತನಗೆ ನಿದ್ರೆ ಬರುತ್ತಿದೆ ಎಂದು ತೋರಿಸಲು ಕಣ್ಣುಜ್ಜಿಕೊಳ್ಳುವುದು ಅಥವಾ ಅಳಲು ಆರಂಭಿಸುತ್ತದೆ. ಹಾಗೆ ಮಗು ಕಣ್ಣುಜ್ಜಿದರೆ ಆಗ ಮಗು ತುಂಬಾ ಬಳಲಿದೆ ಮತ್ತು ಅದಕ್ಕೆ ನಿದ್ರೆ ಬರುತ್ತಿದೆ ಎಂದು ತಿಳಿದುಕೊಳ್ಳಬೇಕು.

2. ಕಣ್ಣು ಒಣಗಬಹುದು

2. ಕಣ್ಣು ಒಣಗಬಹುದು

ಸಣ್ಣ ಮಕ್ಕಳು ಆಟವಾಡುತ್ತಿರುವ ವೇಳೆ ಕಣ್ಣು ಗಾಳಿಗೆ ಹೆಚ್ಚು ಒಗ್ಗಿಕೊಳ್ಳುವುದು. ಇಂತಹ ಸಮಯದಲ್ಲಿ ಕಣ್ಣಿನ ತೇವಾಂಶವು ಕಡಿಮೆ ಆಗುವುದು ಮತ್ತು ಅದು ಒಣಗುವುದು. ಕಣ್ಣು ಒಣಗಿದರೆ ಆಗ ಮಗುವಿಗೆ ಕಣ್ಣಿನಲ್ಲಿ ಕಿರಿಕಿರಿ ಎಂದನಿಸಬಹುದು ಮತ್ತು ಇದರಿಂದ ಅದು ಕಣ್ಣು ಉಜ್ಜಿಕೊಳ್ಳುವುದು. ಉಜ್ಜಿದ ವೇಳೆ ಕಣ್ಣೀರು ಬರುವ ಕಾರಣ ಮತ್ತೆ ಕಣ್ಣಿನಲ್ಲಿ ತೇವಾಂಶ ಉಂಟಾಗುವುದು.

3. ಕುತೂಹಲ

3. ಕುತೂಹಲ

ಮಕ್ಕಳಿಗೆ ನೀವು ಏನೇ ವಸ್ತು ತೋರಿಸಿದರೂ ಅದರ ಬಗ್ಗೆ ಕುತೂಹಲವಿರುತ್ತದೆ. ಅದೇ ರೀತಿಯಾಗಿ ಅವರಿಗೆ ತಮ್ಮ ಕಣ್ಣಿನ ಬಗ್ಗೆಯು ಕುತೂಹಲ. ಕಣ್ಣನ್ನು ಉಜ್ಜಿಕೊಂಡರೆ ಆಗ ಕಣ್ಣಗುಡ್ಡೆಯಲ್ಲಿ ಬೆಳಕು ಕಾಣಿಸುವುದು. ಇದರಿಂದ ಮಗು ಈ ಕೂತೂಹಲದಿಂದ ಕಣ್ಣನ್ನು ಉಜ್ಜಿಕೊಳ್ಳುವುದು. ಮತ್ತೆ ಮತ್ತೆ ಇದನ್ನು ಅನುಭವಿಸಲು ಮಗು ಹೀಗೆ ಮಾಡುತ್ತಿರಬಹುದು.

4. ಕಣ್ಣಿಗೆ ಏನೋ ಬಿದ್ದಿರಬಹುದು

4. ಕಣ್ಣಿಗೆ ಏನೋ ಬಿದ್ದಿರಬಹುದು

ಕಣ್ಣಲ್ಲಿ ಕಿರಿಕಿರಿ ಕಾಣಿಸಿಕೊಂಡರೆ ಆಗ ದೊಡ್ಡವರಿಗೂ ಅದನ್ನು ತಡೆಯಲು ಆಗಲ್ಲ. ಹೀಗಾಗಿ ಮಕ್ಕಳಿಗೆ ಕಿರಿಕಿರಿ ಆದ ತಕ್ಷಣವೇ ಅವರು ಕಣ್ಣು ಉಜ್ಜಿಕೊಳ್ಳಲು ಆರಂಭಿಸುವರು. ಆಟವಾಡುವ ವೇಳೆ ಕಣ್ಣಿನ ಒಳಗಡೆ ಧೂಳು ಅಥವಾ ಯಾವುದೇ ವಸ್ತುವಿನ ಕಣ ಹೋಗಿರಬಹುದು, ಕಣ್ಣರೆಪ್ಪೆಯ ಕೂದಲು ಅಥವಾ ಒಣಗಿದ ಕಣ್ಣಿನ ಕೀವು ಕೂಡ ಇರಬಹುದು. ಕಣ್ಣನ್ನು ಪದೇ ಪದೇ ಮುಚ್ಚುವುದು ಮತ್ತು ಕಣ್ಣೀರು ಬರುವುದು ಇದರ ಕಾರಣವಾಗಿರಬಹುದು. ಹೀಗಿದ್ದಲ್ಲಿ ಒಣ ಬಟ್ಟೆಯಿಂದ ಕಣ್ಣು ಮತ್ತು ಮುಖ ಒರೆಸಿ. ಇದರ ಬಳಿಕ ತಣ್ಣೀರು ಬಳಸಿ ಮಗುವಿನ ಮುಖ ತೊಳೆಯಿರಿ. ಬಿಸಿ ನೀರು ಬಳಸಬೇಡಿ. ಹೀಗೆ ಮಾಡುವ ವೇಳೆ ಮಗುವಿನ ತಲೆಯನ್ನು ಬೇರೆ ಯಾರಾದರೂ ಹಿಡಿದುಕೊಳ್ಳಲಿ. ಕಣ್ಣಿನ ಬದಿಯಲ್ಲಿ ಏನಾದರೂ ಇದ್ದರೆ ಆಗ ಒಣ ಹತ್ತಿ ಬಟ್ಟೆ ಬಳಸಿ ಇದನ್ನು ತೆಗೆಯಿರಿ. ಈಗಲೂ ಕಣ್ಣು ಮಿಟುಕಿಸುತ್ತಾ ಮತ್ತು ಕಣ್ಣೀರು ಬರುತ್ತಿದ್ದರೆ ಆಗ ಏನಾದರು ಕಸ ಬಿದ್ದಿರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಕಾಣುವುದು ಸೂಕ್ತ.

5. ನೋವು ಅಥವಾ ಕಣ್ಣಿನ ತುರಿಕೆ

5. ನೋವು ಅಥವಾ ಕಣ್ಣಿನ ತುರಿಕೆ

ನೋವು ಅಥವಾ ತುರಿಕೆಯಿಂದಾಗಿ ಮಗು ಕಣ್ಣು ಉಜ್ಜಿಕೊಳ್ಳಬಹುದು. ಇದಕ್ಕೆ ಮುಖ್ಯ ಕಾರಣ ಯಾವುದಾದರೂ ಸೋಂಕು ಅಥವಾ ಅಲರ್ಜಿ. ಕಣ್ಣು ಕೆಂಪಾಗುವುದು ಅಥವಾ ಊದಿಕೊಳ್ಳುವುದು, ಕೀವು ಬರುವುದು, ಜ್ವರ, ನಿರಂತರವಾಗಿ ಅಳುವುದು ಇದರ ಲಕ್ಷಣಗಳು. ವೈದ್ಯರನ್ನು ತಕ್ಷಣವೇ ಭೇಟಿ ಮಾಡಿ ಅವರಿಗೆ ಇದರ ಬಗ್ಗೆ ತಿಳಿಸಿದರೆ, ಅವರು ಸೋಂಕು ಅಥವಾ ಅಲರ್ಜಿಯನ್ನು ಪತ್ತೆ ಮಾಡಿ ಔಷಧಿ ನೀಡುವರು.

ಮಕ್ಕಳು ಕಣ್ಣು ಉಜ್ಜದಂತೆ ತಡೆಯುವುದು ಹೇಗೆ?

ಮಕ್ಕಳು ಕಣ್ಣು ಉಜ್ಜದಂತೆ ತಡೆಯುವುದು ಹೇಗೆ?

ಮಕ್ಕಳು ಪದೇ ಪದೇ ಕಣ್ಣು ಉಜ್ಜದಂತೆ ತಡೆಯಲು ಕೆಲವು ಕ್ರಮ ತೆಗೆದುಕೊಳ್ಳಬೇಕು. ಯಾಕೆಂದರೆ ಕಣ್ಣು ಉಜ್ಜುತ್ತಲೇ ಇದ್ದರೆ ಆಗ ಕಣ್ಣಗುಡ್ಡೆಯಲ್ಲಿ ಗಾಯ ಅಥವಾ ಗೆರೆ ಬೀಳಬಹುದು. ಇದನ್ನು ಈ ರೀತಿಯಾಗಿ ತಡೆಯಬಹುದು.

• ಕಣ್ಣು ಉಜ್ಜಿಕೊಳ್ಳುವ ಅಭ್ಯಾಸವಿರುವ ಮಕ್ಕಳ ಕೈಗೆ ಸಾಕ್ಸ್ ಹಾಕಬಹುದು. ಇದರಿಂದ ಕಣ್ಣಿಗೆ ಗಾಯ ಅಥವಾ ಗೆರೆ ಬೀಳುವುದು ತಪ್ಪುವುದು.

• ಮಗು ಅಳುತ್ತಾ ಕಣ್ಣು ಉಜ್ಜಿಕೊಳ್ಳುತ್ತಿದ್ದರೆ ಆಗ ತಕ್ಷಣವೇ ಮಲಗಿಸಿ. ಮಗುವಿಗೆ ಮಲಗುವ ಸಮಯ ನಿಗದಿ ಮಾಡಿ ಮತ್ತು ಈ ವೇಳೆ ಮಲಗಿಸಿ. ಇದಕ್ಕೆ ಹೊಂದಿಕೊಂಡರೆ ಆಗ ಬಳಲಿಕೆ ಇರದು ಮತ್ತು ಕಣ್ಣು ಉಜ್ಜುವುದು ತಪ್ಪುವುದು.

• ಯಾವುದೇ ವಸ್ತುವಿನ ಕಣಗಳು ಕಣ್ಣಿನ ಒಳಗೆ ಹೋಗದಂತೆ ಎಚ್ಚರ ವಹಿಸಿ. ಮುಖ್ಯವಾಗಿ ಹೊರಗಡೆ ಮಗುವನ್ನು ಕರೆದುಕೊಂಡು ಹೋಗುತ್ತಲಿದ್ದರೆ ಆಗ ಧೂಳು ಹಾರುವ ಜಾಗಕ್ಕೆ ಮಗುವನ್ನು ಕರೆದುಕೊಂಡು ಹೋಗಬೇಡಿ. ಅನಿವಾರ್ಯವಿದ್ದರೆ ಆಗ ಕಣ್ಣು ಮತ್ತು ಮೂಗನ್ನು ಸರಿಯಾಗಿ ರಕ್ಷಿಸಿಕೊಳ್ಳಿ.

ನಿರಂತರ ಕಣ್ಣು ಉಜ್ಜಿಕೊಂಡರೆ ಆಗುವ ಅಪಾಯ

ನಿರಂತರ ಕಣ್ಣು ಉಜ್ಜಿಕೊಂಡರೆ ಆಗುವ ಅಪಾಯ

ಮಗು ನಿರಂತರವಾಗಿ ಕಣ್ಣು ಉಜ್ಜಿಕೊಂಡರೆ ಆಗ ಕೆಲವೊಂದು ಅಪಾಯಗಳು ಬರಬಹುದು. ಕಣ್ಣನ್ನು ಮಗು ಜೋರಾಗಿ ಉಜ್ಜಿಕೊಂಡರೆ ಆಗ ಯಾವ ಅಪಾಯವಾಗಲಿದೆ ಎಂದು ತಿಳಿಯಿರಿ.

1. ಸೋಂಕು ಹೆಚ್ಚಾಗುವ ಅಪಾಯ

ಸಣ್ಣ ಮಕ್ಕಳಿಗೆ ತಮ್ಮ ಸುತ್ತಲು ಇರುವಂತಹ ಪ್ರತಿಯೊಂದು ವಸ್ತುವನ್ನು ಮುಟ್ಟಿಕೊಂಡು ಕುತೂಹಲ ತಣಿಸಬೇಕು. ಆದರೆ ಕೆಲವೊಂದು ಸಲ ದೊಡ್ಡವರಿಂದಾಗಿಯೇ ಮಕ್ಕಳಿಗೆ ಸೋಂಕು ಹರಡುವುದು ಇದೆ. ಮಗುವನ್ನು ಮುದ್ದು ಮಾಡುವ ಸಂದರ್ಭದಲ್ಲಿ ನಮ್ಮ ಕೈಗಳಲ್ಲಿ ಇರುವ ಕೀಟಾಣುಗಳು ಮಗುವಿನ ದೇಹಕ್ಕೆ ಹೋಗಬಹುದು. ಮಗು ಕಣ್ಣು ಉಜ್ಜಿಕೊಂಡರೆ ಕೀಟಾಣುಗಳು ಕಣ್ಣಿನ ಒಳಗಡೆ ಹೋಗಬಹುದು ಮತ್ತು ಅದರಿಂದ ಸೋಂಕು ಬರಬಹುದು.

2. ಕಣ್ಣಿನ ದೃಷ್ಟಿ ಮೇಲೆ ಪರಿಣಾಮ

ಮಕ್ಕಳು ಜೋರಾಗಿ ಕಣ್ಣು ಉಜ್ಜಿದರೆ ಆಗ ಎಚ್ಚರಿಕೆ ವಹಿಸಿ. ಯಾಕೆಂದರೆ ಹೀಗೆ ಮಾಡಿದರೆ ಮಕ್ಕಳು ಕಾರ್ನಿಯಾದ ಅಂಗಾಂಶವು ತೆಳು ಆಗಬಹುದು ಮತ್ತು ಇದರಿಂದ ದೊಡ್ಡವರಾದ ಮೇಲೆ ದೃಷ್ಟಿದೋಷ ಕಾಣಿಸಬಹುದು. ಸೋಂಕಿನಂತೆ ಇದು ತಕ್ಷಣವೇ ಪರಿಣಾಮ ತೋರಿಸದೆ ಇದ್ದರೂ ಮಗು ಬೆಳೆಯುತ್ತಿರುವಂತೆ ಇದು ಅಪಾಯವನ್ನು ಉಂಟು ಮಾಡಬಹುದು.

3. ಗಾಯವಾಗಬಹುದು

ಮಗು ತುಂಬಾ ಜೋರಾಗಿ ಕಣ್ಣು ಉಜ್ಜಿಕೊಂಡರೆ ಮತ್ತು ನಿರಂತರವಾಗಿ ಉಜ್ಜಿಕೊಳ್ಳುತ್ತಿದ್ದರೆ ಆಗ ಕಾರ್ನಿಯದ ಸವೆತ ಉಂಟಾಗಬಹುದು. ಇದು ತುಂಬಾ ನೋವಿನಿಂದ ಕೂಡಿರಬಹುದು ಮತ್ತು ಗಾಯ ಗುಣವಾಗಲು ದೀರ್ಘ ಸಮಯ ಬೇಕಾಗಬಹುದು.

ಮಗು ಕಣ್ಣುಜ್ಜಿಕೊಳ್ಳುತ್ತಿದೆ ಎಂದು ನೀವು ಭೀತಿ ಅಥವಾ ಗಲಿಬಿಲಿಯಾಗಬೇಡಿ. ಯಾಕೆಂದರೆ ಇದು ಸಾಮಾನ್ಯ. ಕಣ್ಣು ಕೆಂಪಾಗಿದ್ದರೆ ಅಥವಾ ಊತ ಕಾಣಿಸಿದರೆ ಆಗ ಆ ಭಾಗವನ್ನು ಸರಿಯಾಗಿ ತೊಳೆಯಿರಿ. ಕಣ್ಣು ತೊಳೆದ ಬಳಿಕ ಕೂಡ ಊತ ಮತ್ತು ಕಣ್ಣು ಕೆಂಪಾಗುವುದು ಹಾಗೆ ಇದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಊತ ಮತ್ತು ಕಣ್ಣು ಕೆಂಪಾಗದೆ ಮಗು ಕಣ್ಣು ಉಜ್ಜಿಕೊಳ್ಳುತ್ತಿದ್ದರೆ ಆಗ ನೀವು ಒಂದು ಸಲ ವೈದ್ಯರಿಂದ ಪರೀಕ್ಷೆ ಮಾಡಿಸಿ. ಯಾಕೆಂದರೆ ಸಣ್ಣ ಮಕ್ಕಳ ಕಣ್ಣಿನ ಬಗ್ಗೆ ಎಚ್ಚರಿಕೆ ಹಾಗೂ ಕಾಳಜಿ ಅತೀ ಅಗತ್ಯ.

Read more about: baby eyes ಮಗು ಕಣ್ಣು
English summary

Baby Rubbing Eyes Reasons And Prevention

Some time children will rub their eyes.Here are reasons why children will rub the their eyes, how you can prevent it. Read on.
Story first published: Monday, January 20, 2020, 17:40 [IST]
X
Desktop Bottom Promotion