For Quick Alerts
ALLOW NOTIFICATIONS  
For Daily Alerts

6 ತಿಂಗಳ ಮಗುವಿನ ಆಹಾರ ಹೇಗಿರಬೇಕು? ಇಲ್ಲಿದೆ ಹೊಸ ಐಡಿಯಾ

|

ನಿಮ್ಮ ಮಗುವಿಗೆ ಆರನೇ ತಿಂಗಳಾಗುತ್ತಿದ್ದಂತೆ ತಾಯಿಯ ಎದೆಹಾಲಿನ ಜೊತೆಜೊತೆಗೆ ನಿಧಾನವಾಗಿ ಗಟ್ಟಿ ಆಹಾರ ಪದಾರ್ಥಗಳನ್ನು ನೀಡುವುದಕ್ಕೆ ಪ್ರಾರಂಭಿಸಬಹುದು ಎಂದು ಅಮೇರಿಕಾದ ಎಎಪಿ ಅಂದರೆ ಮಕ್ಕಳ ಆರೋಗ್ಯ ಸಂಸ್ಥೆಯೊಂದು ಅಭಿಪ್ರಾಯ ಪಟ್ಟಿದೆ. ಆದರೆ ಈ ಸಂದರ್ಭದಲ್ಲೂ ಕೂಡ ಎದೆಹಾಲು ಮಗುವಿನ ಪ್ರಮುಖ ಆಹಾರವೇ ಆಗಿರಬೇಕು ಮತ್ತು ಎದೆಹಾಲಿನ ಮೂಲಕವೇ ಮಗುವಿಗೆ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುತ್ತಿದ್ದರೂ ಇನ್ನಷ್ಟು ಪೋಷಕಾಂಶಗಳಿಗಾಗಿ ಕೆಲವು ಸ್ಪೂನ್ ಗಳಷ್ಟು ಗಟ್ಟಿ ಆಹಾರ ಪದಾರ್ಥಗಳನ್ನು ಆರನೇ ತಿಂಗಳ ನಂತರದ ದಿನಗಳಲ್ಲಿ ಮಗುವಿಗೆ ಪ್ರಾರಂಭಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ.

6 Month Old Babys Food Chart And Recipes in Kannada

ಹಾಗಾದ್ರೆ ನೀವು ಈ ಸಮಯದಲ್ಲಿ ಮಗುವಿಗೆ ನೀಡಬಹುದಾದ ಆಹಾರ ಪದಾರ್ಥಗಳು ಯಾವುವು? ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ನಿಮಗೆ ಅತ್ಯಮೂಲ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ.

ಆರು ತಿಂಗಳ ಮಗುವಿಗಾಗಿ ಆಹಾರ ತಯಾರಿಸುವ ಉಪಾಯಗಳು

ಆರು ತಿಂಗಳ ಮಗುವಿಗಾಗಿ ಆಹಾರ ತಯಾರಿಸುವ ಉಪಾಯಗಳು

ಆರಂಭಿಕ ದಿನಗಳಲ್ಲಿ ಮಗುವಿಗೆ ನೀಡಲಾಗುವ ಆಹಾರವನ್ನು ಸ್ಟೇಜ್ 1 ಆಹಾರ ಎಂದು ಕರೆಯಲಾಗುತ್ತದೆ.ಸುಲಭವಾಗಿ ಜೀರ್ಣವಾಗಬೇಕು ಮತ್ತು ಮಗುವಿಗೆ ನುಂಗುವುದಕ್ಕೆ ಸುಲಭವಾಗಬೇಕು ಎಂಬ ಕಾರಣಕ್ಕಾಗಿ ಈ ಹಂತದಲ್ಲಿ ಮಗುವಿಗೆ ಆಹಾರವನ್ನು ಪೇಸ್ಟ್ ರೀತಿಯಲ್ಲಿ ನುಣ್ಣಗೆ ರುಬ್ಬಿದ ಸ್ವರೂಪದಲ್ಲಿ ನೀಡಬೇಕಾಗುತ್ತದೆ. ಅವುಗಳು ಮಗುವಿಗೆ ಯಾವುದೇ ರೀತಿಯ ಅಲರ್ಜಿಯನ್ನು ಮಾಡದಂತೆ ಜಾಗೃತೆ ವಹಿಸಬೇಕಾಗಿರುವುದು ಕೂಡ ಮುಖ್ಯ.

ಮಗುವಿಗೆ ಯಾವುದೇ ರೀತಿಯ ಹೊಸ ಆಹಾರವನ್ನು ಪರಿಚಯಿಸಬೇಕಾದಾಗ ಮಕ್ಕಳ ತಜ್ಞರನ್ನು ಒಮ್ಮೆ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ನಾವಿಲ್ಲಿ ಆರು ತಿಂಗಳ ಮಗುವಿಗೆ ಉತ್ತಮವೆನಿಸುವ ಕೆಲವು ಆಹಾರ ಪದಾರ್ಥಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

1. ಹಾಲು

1. ಹಾಲು

ಒಂದು ವರ್ಷದವರೆಗೂ ಎದೆಹಾಲನ್ನು ಮುಂದುವರಿಸಬೇಕಾಗುತ್ತದೆ ಯಾಕೆಂದರೆ ಇದು ಮಗುವಿಗೆ ಪೋಷಕಾಂಶ ಒದಗಿಸುವ ಪ್ರಮುಖ ಮೂಲವಾಗಿರುತ್ತದೆ. ಎರಡರಿಂದ ಮೂರು ಘಂಟೆಗಳಿಗೊಮ್ಮೆ ಎದೆಹಾಲು ಉಣಿಸಿ ಅಥವಾ ಮಗು ಬೇಡಿದಾಗೆಲ್ಲಾ ನೀಡಿದರೂ ತೊಂದರೆಯಿಲ್ಲ. 24-37 ಔನ್ಸ್ ನಷ್ಟು ಫಾರ್ಮುಲಾ ಹಾಲನ್ನು ಕೂಡ ಪ್ರತಿದಿನ ನೀಡಬಹುದು.

2. ಮೊದಲ ಹಂತದಲ್ಲಿ ಹಣ್ಣುಗಳು

2. ಮೊದಲ ಹಂತದಲ್ಲಿ ಹಣ್ಣುಗಳು

ಸೇಬು, ಅವಕಾಡೇ, ಆಪ್ರಿಕಾಟ್, ಬಾಳೆಹಣ್ಣು, ಮಾವಿನಹಣ್ಣು, ಪೀಚ್, ಪಪ್ಪಾಯ, ಪಿಯರ್ಸ್, ಪ್ಲಮ್ ಹಣ್ಣುಗಳು, ಚಿಕ್ಕೂ, ಕಿವಿ ಫ್ರೂಟ್ ಇತ್ಯಾದಿ ಎಲ್ಲಾ ಹಣ್ಣುಗಳನ್ನು ಕೂಡ ಮಗುವಿಗೆ ಪ್ರತಿದಿನ ಆಹಾರವಾಗಿ ಬಳಸಬಹುದು. ಆದರೆ ನೆನಪಿರಲಿ ಹಣ್ಣುಗಳನ್ನು ಕೂಡ ಪ್ಯೂರಿ ಮಾಡಿ ಅಥವಾ ನುಣ್ಣಿಗೆ ಪೇಸ್ಟ್ ರೀತಿಯಲ್ಲಿ ಮಗುವಿಗೆ ನೀಡಬೇಕಾಗುತ್ತದೆ ಎಂಬುದು ಗಮನದಲ್ಲಿ ಇರಲಿ.

3. ಮೊದಲ ಹಂತದ ತರಕಾರಿಗಳು

3. ಮೊದಲ ಹಂತದ ತರಕಾರಿಗಳು

ಮಗುವು ಬೇಯಿಸಿದ ಮತ್ತು ನುಣ್ಣಗೆ ಮಾಡಿದ ತರಕಾರಿಗಳನ್ನು ಉದಾಹರಣೆಗೆ ಬೀನ್ಸ್ ಗಳು, ಕ್ಯಾರೆಟ್, ಗೆಣಸು, ಚೀನಿಕಾಯಿ, ಕುಂಬಳಕಾಯಿ, ಸೌತೆಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಈ ಹಂತದಲ್ಲಿ ಜೀರ್ಣಿಸಿಕೊಳ್ಳಬಲ್ಲರು.

4. ನೀರು

4. ನೀರು

ಕಾದಾರಿಸಿದ ನೀರನ್ನು ಮಗುವಿಗೆ ದಿನಕ್ಕೆ ಮೂರು ಬಾರಿ ನೀಡಿ. ಊಟದ ನಂತರ ನೀರು ಸೇವಿಸುವುದನ್ನು ಮರೆಯಬೇಡಿ. ಊಟದ ಮಧ್ಯಮಧ್ಯ ನೀರು ಕೊಡುವುದನ್ನು ಆದಷ್ಟು ಕಡಿಮೆ ಮಾಡಿ ಯಾಕೆಂದರೆ ಹಾಗೆ ಮಾಡಿದರೆ ಮಗು ಒಟ್ಟು ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗಬಹುದು.

5. ಕಾಳುಗಳು ಮತ್ತು ಧಾನ್ಯಗಳು

5. ಕಾಳುಗಳು ಮತ್ತು ಧಾನ್ಯಗಳು

ಕಾಳುಗಳು ಮತ್ತು ಧಾನ್ಯಗಳನ್ನು ಉದಾಹರಣೆಗೆ ಅಕ್ಕಿ, ಬಾರ್ಲಿ, ಓಟ್ಸ್ ಮತ್ತು ಕೆಲವು ಪ್ರೋಟೀನ್ ಕಾಳುಗಳನ್ನು ಬೇಯಿಸಿ ಅದರ ಪೇಸ್ಟ್ ತಯಾರಿಸಿ ಮಗುವಿಗೆ ನೀಡಬಹುದು. ಅದೆಷ್ಟು ಬೇಯಿಸಬೇಕು ಎಂದರೆ ನೀವು ಬಹಳ ಸುಲಭದಲ್ಲಿ ಅದರ ಪೇಸ್ಟ್ ತಯಾರಿಸುವಂತಿರಬೇಕು.

6. ಮಾಂಸ

6. ಮಾಂಸ

ನಿಮ್ಮ ಮಗುವಿನ ಡಯಟ್ ನಲ್ಲಿ ಮಾಂಸ ಮತ್ತು ಮೀನನ್ನು ಕೂಡ ಸೇರಿಸಬಹುದು. ಆದರೆ ಬಹಳ ಕಡಿಮೆ ಪ್ರಮಾಣದಲ್ಲಿ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಮೂಳೆಗಳನ್ನು ತೆಗೆದು ಆದಷ್ಟು ರಸದ ಸೇವನೆಗೆ ಆದ್ಯತೆ ನೀಡಿ.

ಯಾವಾಗ ಯಾವ ಆಹಾರ ನೀಡಬೇಕು ಎಂಬ ಬಗ್ಗೆ ಗೊಂದಲ ಶುರುವಾಯ್ತಾ? ಮಗುವಿನ ಆಹಾರ ಕ್ರಮದ ಪಟ್ಟಿ ತಯಾರಿಸಿಟ್ಟುಕೊಳ್ಳಲು ನಾವಿಲ್ಲಿ ನಿಮಗೆ ಸಹಾಯ ಮಾಡುತ್ತೇವೆ. ಮುಂದೆ ಓದಿ.

ಆರು ತಿಂಗಳ ಮಗುವಿನ ಆಹಾರದ ಕೋಷ್ಟಕ

ಆರು ತಿಂಗಳ ಮಗುವಿನ ಆಹಾರದ ಕೋಷ್ಟಕ

ನೀವು ಈ ಕೆಳಗಿನ ರೀತಿಯಲ್ಲಿ ಮಗುವಿನ ಆಹಾರದ ಕೋಷ್ಟಕವನ್ನು ತಯಾರಿಸಿಕೊಳ್ಳಬಹುದು.

ಬೆಳಿಗ್ಗೆ ಏಳುವ ಸಮಯ

• ಫಾರ್ಮುಲಾ ಅಥವಾ ಎದೆಹಾಲು. ಮುಂದಿನ ದಿನವೆಲ್ಲಾ ನೀವಿದನ್ನು ಮುಂದುವರಿಸುತ್ತಲೇ ಇರಬೇಕು

• ಉಪಹಾರ (7:30 to 8am)

• ಹಣ್ಣಿನ ಪೇಸ್ಟ್ ಅಥವಾ ತರಕಾಯಿಯ ಪೇಸ್ಟ್

• ಮಧ್ಯಾಹ್ನದ ಊಟ(11:30 to 12:30pm)

• ಧಾನ್ಯಗಳು, ಬಾರ್ಲಿ ಮತ್ತು ಓಟ್ಸ್ ಗಳು

• ಸಂಜೆಯ ತಿನಿಸು (3:30 to 4pm

• ಹಣ್ಣುಗಳು ಮತ್ತು ತರಕಾರಿಯ ಪ್ಯೂರಿ

• ರಾತ್ರಿಯ ಆಹಾರ (6 to 7pm)

• ತರಕಾರಿಗಳು,ಹಣ್ಣುಗಳ ಅಥವಾ ಧಾನ್ಯಗಳ ಮಿಶ್ರಣ

ನೀವು ಈ ಕೋಸ್ಟಕವನ್ನು ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರವೇ ತಯಾರಿಸುತ್ತೀರಿ ಎಂಬುದು ನೆನಪಿನಲ್ಲಿ ಇರಲಿ. ಈ ಕೋಸ್ಟಕಕ್ಕೆ ಬದ್ಧರಾಗಿಯೇ ಇರಬೇಕು ಎಂದೇನಿಲ್ಲ. ನಿಮ್ಮ ಮಗು ಒಂದು ವೇಳೆ ಎದೆಹಾಲನ್ನೇ ಹೆಚ್ಚು ಬಯಸುತ್ತಿದ್ದರೆ ಅದನ್ನೇ ನೀಡಿ ಅಥವಾ ಗಟ್ಟಿ ಆಹಾರ ತಿನ್ನಲು ಇಚ್ಛಿಸಿದರೆ ಅದನ್ನು ನೀಡಿ. ಸುಖಾಸುಮ್ಮನೆ ಮಗುವಿನ ಬಾಯಿಗೆ ತುರುಕುವ ಪ್ರಯತ್ನ ಮಾಡಬೇಡಿ. ಆದರೆ ನೀವು ತಯಾರಿಸುವ ಆಹಾರವನ್ನು ರುಚಿಯಾಗಿ ತಯಾರಿಸಿ ಯಾವುದೇ ಸಮಯದಲ್ಲಿ ಮಗುವು ಆ ಆಹಾರವನ್ನು ಇಷ್ಟಪಟ್ಟು ತಿನ್ನುವಂತೆ ಆಹಾರ ತಯಾರಿಸುವುದು ಬಹಳ ಮುಖ್ಯ.

ಆರು ತಿಂಗಳ ಮಗುವಿನ ಆಹಾರಗಳು

ಆರು ತಿಂಗಳ ಮಗುವಿನ ಆಹಾರಗಳು

ಆರು ತಿಂಗಳ ಮಗುವಿಗೆ ನೀವು ಈ ಕೆಳಗಿನ ಆಹಾರವನ್ನು ರುಚಿರುಚಿಯಾಗಿ, ಶುಚಿಯಾಗಿ ತಯಾರಿಸಿ ಪೋಷಕಾಂಶಗಳು ಒದಗುವಂತೆ ಮಾಡಬಹುದು.

ಬೆಳಗಿನ ಉಪಹಾರ ಮತ್ತು ಸಂಜೆಯ ಸ್ನ್ಯಾಕ್ಸ್

1. ಆಪ್ರಿಕಾಟ್ ಪ್ಯೂರಿ

ನಿಮಗೆ ಬೇಕಾಗಿರುವ ವಸ್ತುಗಳು:

• 1 ಪೌಂಡ್ ನಷ್ಟು ಒಣಗಿದ ಆಪ್ರಿಕಾಟ್

• 2 ಕಪ್ ಪಿಯರ್, ಬಿಳಿ ದ್ರಾಕ್ಷಿ ರಸ ಅಥವಾ ಸೇಬು ರಸ

ತಯಾರಿಸುವ ವಿಧಾನ

1. ಒಂದು ಪಾತ್ರೆಯಲ್ಲಿ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಕುದಿಸಿ. 15 ನಿಮಿಷ ಸಣ್ಣ ಉರಿಯಲ್ಲಿ ಬೇಯಲಿ.

2. ನಂತರ ಬ್ಲೆಂಡರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

3. ತೆಳು ಮಾಡಬೇಕು ಎಂದೆನಿಸದರೆ ಸ್ವಲ್ಪ ನೀರು ಅಥವಾ ಜ್ಯೂಸ್ ಸೇರಿಸಿ. ದಪ್ಪವಾಗಿಸಬೇಕು ಎನ್ನಿಸಿದರೆ ಸಿರೆಲ್ ಸೇರಿಸಬಹುದು.

2. ಸೇಬುಹಣ್ಣಿನ ಸಾಸ್

2. ಸೇಬುಹಣ್ಣಿನ ಸಾಸ್

ನಿಮಗೆ ಬೇಕಾಗಿರುವ ವಸ್ತುಗಳು:

• 1 ಆಪಲ್ (ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ)

• 2 ಕಪ್ ನೀರು

ತಯಾರಿಸುವ ವಿಧಾನ

1. ಸೇಬುಹಣ್ಣಿನ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಸಿ. ಸೇಬು ಹಣ್ಣಿನ ತುಂಡುಗಳು ನೀರಿನಲ್ಲಿ ಬೆಂದು ಪೇಸ್ಟ್ ಆಗುವಷ್ಟು ಮೆತ್ತಗಾಗಲಿ.

2. ಮೇಲಿನ ಹಂತಕ್ಕೆ ಬೆಂದ ನಂತರ ಆಪಲ್ ತುಂಡುಗಳನ್ನು ಪೇಸ್ಟ್ ಮಾಡಿ. ಸ್ವಲ್ಪ ನೀರು ಸೇರಿಸಿ ಸ್ಪೂನ್ ನಲ್ಲಿ ತಿನ್ನಿಸುವ ಹದಕ್ಕೆ ತಯಾರಿಸಿಕೊಂಡು ತಿನ್ನಿಸಬಹುದು.

3. ಬಾಳೆಹಣ್ಣಿನ ಪ್ಯೂರಿ

3. ಬಾಳೆಹಣ್ಣಿನ ಪ್ಯೂರಿ

ನಿಮಗೆ ಬೇಕಾಗಿರುವ ವಸ್ತುಗಳು:

• 1 ಸಿಪ್ಪೆ ತೆಗೆದ ಬಾಳೆಹಣ್ಣು (ಸಣ್ಣಗೆ ಕತ್ತರಿಸಿಕೊಳ್ಳಿ)

ತಯಾರಿಸುವ ವಿಧಾನ:

1. ಒಂದು ಬೌಲ್ ನಲ್ಲಿ ಬಾಳೆಹಣ್ಣುಗಳನ್ನು ಹಾಕಿ ನುಣ್ಣಗೆ ಮಾಡಿಕೊಳ್ಳಿ ಇಲ್ಲವೇ ಫುಡ್ ಪ್ರೊಸೆಸರ್ ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ

2. ಹೆಚ್ಚುವರಿ ಮೆತ್ತನೆಯ ಅನುಭವ ಬರುವುದಕ್ಕಾಗಿ 25 ಸೆಕೆಂಡ್ ಈ ಬಾಳೆಹಣ್ಣುಗಳನ್ನು ಬಿಸಿ ಮಾಡಿ.

3. ಬಾಳೆಹಣ್ಣಿನ ಪೇಸ್ಟ್ ತೆಳ್ಳಗೆ ಮಾಡಲು ಸ್ವಲ್ಪ ನೀರು ಅಥವಾ ಹಾಲು ಸೇರಿಸಿ ತಿನ್ನಿಸಬಹುದು. ದಪ್ಪವಾಗಬೇಕು ಎಂದು ಅನ್ನಿಸಿದರೆ ಸಿರೆಲ್ ಸೇರಿಸಿ ದಪ್ಪ ಮಾಡಿ ತಿನ್ನಿಸಬಹುದು.

4. ಮಾವಿನ ಹಣ್ಣಿನ ರಸ

4. ಮಾವಿನ ಹಣ್ಣಿನ ರಸ

ನಿಮಗೆ ಬೇಕಾಗಿರುವ ವಸ್ತುಗಳು:

• 1 ಸಿಪ್ಪೆ ತೆಗೆದ ಮಾವಿನಹಣ್ಣು (ಸಿಪ್ಪೆತೆಗೆದು, ಗೊರಟು ತೆಗೆದು, ಮತ್ತು ಸಣ್ಣಗೆ ಹೆಚ್ಚಿಕೊಳ್ಳಿ)

ತಯಾರಿಸುವ ವಿಧಾನ:

1. ಫುಡ್ ಪ್ರೊಸೆಸರ್ ನಲ್ಲಿ ಮಾವಿನ ಹಣ್ಣುಗಳನ್ನು ಬ್ಲೆಂಡ್ ಮಾಡಿಕೊಳ್ಳಿ.

2. ಅದಕ್ಕೆ ಎದೆಹಾಲು ಅಥವಾ ಫಾರ್ಮುಲಾ ಮಿಲ್ಕ್ ಸೇರಿಸಿ ಸರಿಯಾದ ರೀತಿಯಲ್ಲಿ ಅಂದರೆ ತಿನ್ನಿಸಲು ಯೋಗ್ಯವಾಗುವಂತಹ ಪೇಸ್ಟ್ ತಯಾರಿಸಿಕೊಳ್ಳಿ

ಮಧ್ಯಾಹ್ನದ ಊಟದ ಪದಾರ್ಥಗಳು

5. ಅಕ್ಕಿಯ ಸಿರಲ್

5. ಅಕ್ಕಿಯ ಸಿರಲ್

ನಿಮಗೆ ಬೇಕಾಗಿರುವ ವಸ್ತುಗಳು:

• 1/4 ಕಪ್ ಅಕ್ಕಿ

• 1 ಕಪ್ ನೀರು

• 2 ಟೇಬಲ್ ಸ್ಪೂನ್ ಫಾರ್ಮುಲಾ ಅಥವಾ ಎದೆಹಾಲು

ತಯಾರಿಸುವ ವಿಧಾನ:

1. ಅಕ್ಕಿಯನ್ನು ತೊಳೆಯಿರಿ ಮತ್ತು ಪ್ರೆಷರ್ ಕುಕ್ಕರ್ ಅಥವಾ ಒಂದು ಪಾತ್ರೆಯಲ್ಲಿ ಅದನ್ನು ಬೇಯಿಸಿ.

2. ಅನ್ನವನ್ನು ಪೇಸ್ಟ್ ನಂತೆ ಮಾಡಿ ಅದಕ್ಕೆ ಹಾಲು ಅಥವಾ ಎದೆಹಾಲನ್ನು ಸೇರಿಸಿ.

6. ಬಾರ್ಲಿ ಮತ್ತು ಸೇಬುಹಣ್ಣಿನ ಪೋರಿಡ್ಜ್

6. ಬಾರ್ಲಿ ಮತ್ತು ಸೇಬುಹಣ್ಣಿನ ಪೋರಿಡ್ಜ್

ನಿಮಗೆ ಬೇಕಾಗಿರುವ ವಸ್ತುಗಳು:

• 1/4 ಕಪ್ ಬಾರ್ಲಿ

• 3.5 ಕಪ್ ನೀರು

• 2ಟೇಬಲ್ ಸ್ಪೂನ್ ಎದೆಹಾಲು ಅಥವಾ ಹಾಲು

• 1 ಕಪ್ ಸಿಪ್ಪೆ ತೆಗೆದ ಪೇಸ್ಟ್ ನಂತೆ ಮಾಡಿಕೊಂಡ ಸೇಬುಹಣ್ಣುಗಳು

ತಯಾರಿಸುವ ವಿಧಾನ:

1. ನೀರನ್ನು ಕುದಿಯಲು ಇಡಿ ಮತ್ತು ಅದಕ್ಕೆ ಬಾರ್ಲಿಯನ್ನು ತೊಳೆದು ಹಾಕಿ.

2. 10 ನಿಮಿಷ ಚೆನ್ನಾಗಿ ಬೇಯಿಸಿ

3. ಸೇಬುಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಅದನ್ನು ಎರಡು ನಿಮಿಷ ಬೇಯಿಸಿ

4. ಹ್ಯಾಂಡ್ ಬ್ಲೆಂಡರ್ ಬಳಸಿ ಅದನ್ನು ಪೇಸ್ಟ್ ಮಾಡಿ ಮಗುವಿಗೆ ತಿನ್ನಿಸಿ

ರಾತ್ರಿಯ ಆಹಾರಗಳು

ರಾತ್ರಿಯ ಆಹಾರಗಳು

7. ಕುಂಬಳಕಾಯಿ ಪ್ಯೂರಿ

ನಿಮಗೆ ಬೇಕಾಗಿರುವ ವಸ್ತುಗಳು:

• 1 ಸಾಧಾರಣ ಸಿಹಿಯಿರುವ ಪಂಪ್ ಕಿನ್ ಅಥವಾ ಚೀನಿಕಾಯಿ (ಕಾಯಿಯನ್ನು ಕತ್ತರಿಸಿ ಬೀಜಗಳನ್ನು ಬೇರ್ಪಡಿಸಿ ಹೋಳುಗಳನ್ನು ತಯಾರಿಸಿಕೊಳ್ಳಿ)

ತಯಾರಿಸುವ ವಿಧಾನ:

1. ಒಂದು ಪಾತ್ರೆಯಲ್ಲಿ ಬೀಜ ತೆಗೆದು ಹೋಳುಗಳನ್ನು ಮಾಡಿಕೊಂಡ ತರಕಾರಿಯನ್ನು ಬೇಯಿಸಿ

2. 40 ನಿಮಿಷ 400°F ನಲ್ಲಿ ಓವನ್ ನಲ್ಲಿ ಬೇಯಿಸಿಕೊಳ್ಳಬಹುದು. ಒಮ್ಮೆ ತರಕಾರಿ ಹೋಳುಗಳು ಮೃದುವಾದ ನಂತರ ಅದನ್ನು ಫುಡ್ ಪ್ರೊಸೆಸರ್ ಬಳಸಿ ಪೇಸ್ಟ್ ಮಾಡಬಹುದು. ಅಥವಾ ನಿಮ್ಮ ಬಳಿ ಹ್ಯಾಂಡ್ ಬ್ಲೆಂಡರ್ ಇದ್ದರೆ ಅದರಲ್ಲೂ ಕೂಡ ಮಾಡಬಹುದು. ಮಗುವಿಗೆ ತಿನ್ನಿಸಲು ಯೋಗ್ಯವಾಗುವಂತಹ ರೀತಿಯಲ್ಲಿ ಅದರ ಪೇಸ್ಟ್ ತಯಾರಿಸಿಕೊಳ್ಳಿ.

8. ಹಸಿರು ಬೀನ್ಸ್ ಗಳ ಪ್ಯೂರಿ

8. ಹಸಿರು ಬೀನ್ಸ್ ಗಳ ಪ್ಯೂರಿ

ನಿಮಗೆ ಬೇಕಾಗಿರುವ ವಸ್ತುಗಳು:

• 1 ಕಪ್ ತಾಜಾ ಬೀನ್ಸ್

ತಯಾರಿಸುವ ವಿಧಾನ:

1. ಒಂದು ಪಾನ್ ಗೆ ತಾಜಾ ಬೀನ್ಸ್ ಹೋಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ.

2. ನೀರಿನ ಮಟ್ಟವನ್ನು ಆಗಾಗ ಪರೀಕ್ಷಿಸಿ ಬೀನ್ಸ್ ಮುಟ್ಟಿದ ಕೂಡ್ಲೆ ಮೃದುವೆನ್ನಿಸುವ ಮಟ್ಟಕ್ಕೆ ಬೇಯಿಸಿ.

3. ಒಮ್ಮೆ ಮುಗಿದ ನಂತರ ಬ್ಲೆಂಡರ್ ನಿಂದ ತೆಗೆದು ಮೃದುವಾದ ಪೇಸ್ಟ್ ನಂತೆ ಮಾಡಿ ಮಗುವಿಗೆ ತಿನ್ನಿಸಿ

11. ಕ್ಯಾರೆಟ್ ಪ್ಯೂರಿ

11. ಕ್ಯಾರೆಟ್ ಪ್ಯೂರಿ

ನಿಮಗೆ ಬೇಕಾಗಿರುವ ವಸ್ತುಗಳು:

• 1 ಕ್ಯಾರೋಟ್ (ಸಿಹಿಯಾದ,ಸಿಪ್ಪೆ ತೆಗೆದ,ಕತ್ತರಿಸಿದ)

ತಯಾರಿಸುವ ವಿಧಾನ:

1. ನೀರು ತುಂಬಿದ ಪಾತ್ರೆಗೆ ಕ್ಯಾರೆಟ್ ಹೋಳುಗಳನ್ನು ಹಾಕಿ ಮತ್ತು ಚೆನ್ನಾಗಿ ಬೇಯಿಸಿ.

2. ಬ್ಲೆಂಡರ್ ಗೆ ಹಾಕಿ ಸರಿಯಾದ ಪೇಸ್ಟ್ ತಯಾರಿಸಿ ಅದಕ್ಕೆ ನೀರನ್ನು ಸೇರಿಸಿ ಮಗುವಿಗೆ ತಿನ್ನಿಸಿ.

12. ತರಕಾರಿಗಳ ಮಿಶ್ರಣ

12. ತರಕಾರಿಗಳ ಮಿಶ್ರಣ

ನಿಮಗೆ ಬೇಕಾಗಿರುವ ವಸ್ತುಗಳು:

• 1/8 ಕಪ್ ತಾಜಾ ಬೀನ್ಸ್

• 1/8 ಕಪ್ ಬಟಾಣಿ

• ¼ ಕಪ್ ಮುಳ್ಳುಸೌತೆ ಮತ್ತು

• 1/8 ಕಪ್ ಹೆಚ್ಚಿದ ಕ್ಯಾರೆಟ್ ಹೋಳುಗಳು

ತಯಾರಿಸುವ ವಿಧಾನ:

1. ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ, ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸಿ.

2. ಎಲ್ಲವೂ ಚೆನ್ನಾಗಿ ಬೇಯುವವರೆಗೂ ಕುದಿಸಿ ನಂತರ ತಣಿಸಿ ಬ್ಲೆಂಡರ್ ಗೆ ಹಾಕಿ.

3. ರುಬ್ಬಿದ ಮಿಶ್ರಣವನ್ನು ಸರಿಯಾದ ರೀತಿಯಲ್ಲಿ ತಿನ್ನಿಸಲು ಯೋಗ್ಯವಾಗುವಂತ ಪೇಸ್ಟ್ ಮಾಡಿಕೊಂಡು ಮಗುವಿಗೆ ಬೇಕಾಗುವಷ್ಟು ತಿನ್ನಿಸಬಹುದು.

ಇಂತಹ ಖಾರವಿಲ್ಲದ ಹೊಸ ಹೊಸ ಆಹಾರವನ್ನು ನಿಮ್ಮ ಮಗು ನಿಧಾನವಾಗಿ ಇಷ್ಟಪಡಲು ಪ್ರಾರಂಭಿಸಿ ತನ್ನ ರುಚಿಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಆದರೆ ನೆನಪಿರಲಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಇವುಗಳನ್ನು ತಿನ್ನಿಸಬೇಕಾಗುತ್ತದೆ. ನಿಧಾನವಾಗಿ ತಿನ್ನಿಸುವ ಪ್ರಮಾಣವನ್ನು ಹೆಚ್ಚಿಸಬೇಕೆ ಹೊರತು ಒಮ್ಮೆಲೆ ಬೌಲ್ ಗಟ್ಟಲೆ ಆಹಾರ ತಿನ್ನಿಸಲು ಪ್ರಾರಂಭಿಸಬೇಡಿ. ಒಂದು ಸ್ಪೂನ್, ಎರಡು ಸ್ಪೂನ್ ನಿಂದ ಆಹಾರ ನೀಡುವಿಕೆ ಪ್ರಾರಂಭವಾಗಬೇಕು ಎಂಬುದು ನೆನಪಿರಲಿ.

ಆರು ತಿಂಗಳ ಮಗು ಎಷ್ಟು ಆಹಾರ ಸೇವಿಸಬೇಕು?

ಆರು ತಿಂಗಳ ಮಗು ಎಷ್ಟು ಆಹಾರ ಸೇವಿಸಬೇಕು?

5-10ಎಂಎಲ್ ಅಥವಾ ಒಂದುಎರಡು ಸ್ಪೂನ್ ನಿಂದ ಆಹಾರ ತಿನ್ನಿಸುವಿಕೆ ಪ್ರಾರಂಭವಾಗಿ ನಂತರ ನಿಧಾನವಾಗಿ ಪ್ರಮಾಣವನ್ನು ಹೆಚ್ಚಿಸಬೇಕು. ಪ್ರಾರಂಭದಲ್ಲಿ ಮಗುವು ಕೇವಲ ಅರ್ಧ ಸ್ಪೂನ್ ತಿನ್ನುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಯಾವುದೇ ಕಾರಣಕ್ಕೂ ಮಗುವು ನೀವು ತಯಾರಿಸದಷ್ಟೂ ಆಹಾರವನ್ನು ತಿನ್ನಬೇಕು ಎಂದು ಒತ್ತಾಯಿಸಬೇಡಿ ಮತ್ತು ಸಾಮಾನ್ಯವಾಗಿ ಯಾವ ಮಗುವೂ ಅಷ್ಟು ಆಹಾರ ಸೇವಿಸುವುದಿಲ್ಲ.

ನೆನಪಿರಲಿ ಮಗುವಿಗೆ ಗಟ್ಟಿ ಆಹಾರ ಪದಾರ್ಥಗಳನ್ನು ಪ್ರಾರಂಭಿಸುವುದು ಅಷ್ಟು ಸುಲಭದ ವಿಚಾರವಲ್ಲ. ಒಮ್ಮೆಲೆ ಜೀರ್ಣಿಸಿಕೊಳ್ಳುವ ಶಕ್ತಿ ಬಂದುಬಿಡುವುದಿಲ್ಲ. ಹಾಗಾಗಿ ಎದೆಹಾಲು ಧಾರಾಳವಾಗಿ ಲಭ್ಯವಿದ್ದರೆ ಗಟ್ಟಿ ಆಹಾರ ಪದಾರ್ಥಗಳಿಗೆ ಹೆಚ್ಚು ಒತ್ತು ನೀಡುವುದೇ ಬೇಡ. ನಿಧಾನವಾಗಿ ಒಂದೊಂದೇ ಸ್ಪೂನ್ ಗಟ್ಟಿ ಆಹಾರಗಳ ಬಳಕೆ ಪ್ರಾರಂಭಿಸಬೇಕು ಎಂಬುದು ನೆನಪಿರಲಿ. ಮಗುವಿಗೆ ಹೊಟ್ಟೆ ಹಾಳಾಗದಂತೆ ನೋಡಿಕೊಳ್ಳಿ.

ಆಹಾರವು ಹದವಾಗಿ ಬೆಚ್ಚಗಿರುವಾಗಲೇ ತಿನ್ನಿಸಿ. ಮೈಕ್ರೋವೇವ್ ನಲ್ಲಿ ಬೇಯಿಸುವುದನ್ನು ಕಡಿಮೆ ಮಾಡಿ. ಬಿಸಿ ಮತ್ತು ರುಚಿಯನ್ನು ಪರೀಕ್ಷಿಸಿ ಯಾವಾಗಲೂ ಮಗುವಿಗೆ ಆಹಾರ ಸೇವಿಸಲು ಪ್ರಾರಂಭಿಸಿ. ದೊಡ್ಡ ಪಾತ್ರೆಯಲ್ಲಿ ನೀರಿಟ್ಟು ಅದರಲ್ಲಿ ಆಹಾರದ ಪಾತ್ರೆ ಇಟ್ಟು ಬಿಸಿ ಮಾಡುವುದು ಒಳ್ಳೆಯದು.

ಮೊದಲ ಹಂತದಲ್ಲಿರುವ ಮಗುವಿನ ಆಹಾರದ ಬಗ್ಗೆ ತೆಗೆದುಕೊಳ್ಳಬೇಕಿರುವ ಜಾಗೃತಿಯ ಅಂಶಗಳು

ಮೊದಲ ಹಂತದಲ್ಲಿರುವ ಮಗುವಿನ ಆಹಾರದ ಬಗ್ಗೆ ತೆಗೆದುಕೊಳ್ಳಬೇಕಿರುವ ಜಾಗೃತಿಯ ಅಂಶಗಳು

1. ಒಂದು ವರ್ಷದ ಒಳಗಿನ ಮಗುವಿಗೆ ದನದ ಹಾಲನ್ನು ನೀಡಬೇಡಿ. ಜೇನುತುಪ್ಪ ನೀಡುವುದನ್ನು ಕೂಡ ಬೇಡ. ಯಾಕೆಂದರೆ ಇದು ಬಾಟುಲಿಸಂ ಸಮಸ್ಯೆಯನ್ನು ಉಂಟು ಮಾಡಬಹುದು.

2. ಆರು ತಿಂಗಳ ಮಗುವಿಗೆ ಹಣ್ಣಿನ ಹೋಳುಗಳನ್ನು ನೀಡುವುದು ಅಥವಾ ಬೆರಳಲ್ಲಿ ಹಿಡಿದುಕೊಳ್ಳುವಂತಹ ಯಾವುದೇ ಆಹಾರವನ್ನು ನೀಡಬೇಡಿ. ಕೈಯಲ್ಲಿ ಹಿಡಿಯುವ ಸಾಮರ್ಥ್ಯವಿದ್ದರೂ ಅದು ಗಂಟಲಲ್ಲಿ ಸಿಲುಕಿ ಅಪಾಯ ಉಂಟು ಮಾಡಬಹುದು.

3. ಅತಿಯಾದ ಸಿಹಿ ಬಳಕೆ ಬೇಡ. ಮಗು ಸಿಹಿಯನ್ನು ಇಷ್ಟಪಡುತ್ತೆ ಅಂತ ಅತಿಯಾಗಿ ಸಿಹಿ ಸೇರಿಸುವುದಕ್ಕೆ ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಿ.

4. ಒಂದು ಹಣ್ಣನ್ನು ಒಂದು ಸಮಯಕ್ಕೆ ಪರಿಚಯಿಸಿ. ಯಾವುದೇ ರೀತಿಯ ಅಲರ್ಜಿಯಾಗುತ್ತದೆಯೇ ಗಮನಿಸಿ. ಹೊಸದಾಗಿ ಯಾವುದೇ ಆಹಾರ ಪರಿಚಯಿಸುವ ಮುನ್ನ ನಾಲ್ಕು ದಿನದ ಅಂತರದ ನಿಯಮ ಪಾಲಿಸಿ.

5. ಉತ್ತಮವಾಗಿರುವ ಮತ್ತು ನೆಮ್ಮದಿಯಾಗಿರುವ ಜಾಗದಲ್ಲಿ ನಿಮ್ಮ ಮಗುವಿಗೆ ಆಹಾರ ತಿನ್ನಿಸಿ.

6. ಸ್ಟೀಲ್ ಅಥವಾ ಗಾಜಿನ ಪಾತ್ರೆಗಳಲ್ಲಿ ನಿಮ್ಮ ಮಗುವಿನ ಆಹಾರ ತಯಾರಿಸಿ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಯಾವುದೇ ಆಹಾರವನ್ನು ಇಡಬೇಡಿ.

7. ಸಿಪ್ಪರ್ ಅಥವಾ ಫೀಡಿಂಗ್ ಬಾಟಲ್ ಬಳಕೆ ಬೇಡ ಬದಲಾಗಿ ಸ್ಟೀಲ್ ಅಥವಾ ಒಡೆಯದ ಗಾಜಿನ ಲೋಟಗಳಲ್ಲಿ ನೀರು ಕುಡಿಸಿ.

8. ಹೆಚ್ಚುವರಿ ಸಕ್ಕರೆ, ಮೈದಾ ಹಿಟ್ಟು ಇತ್ಯಾದಿ ಕೆಮಿಕಲ್ ಮಯ ಸಂರಕ್ಷಕಗಳನ್ನು ಬಳಸಿರುವ ಆಹಾರಗಳಿಂದ ದೂರವಿರಿ.

9. ನಿಮ್ಮ ಮಗುವಿಗೆ ಆಹಾರ ತಿನ್ನಿಸುವ ಮುಂಚೆ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.

10. ಆದಷ್ಟು ಆರೋಗ್ಯಕಾರಿ ಆಹಾರವನ್ನು ನಿಮ್ಮ ಮಗುವಿಗೆ ಪರಿಚಯಿಸಿ. ಸೆರೆಲ್ ಗಳು, ಹಣ್ಣುಗಳು, ತರಕಾರಿಗಳು ಮಗುವಿನ ಆಹಾರದಲ್ಲಿ ಅಧಿಕವಿರಲಿ. ಹಾಡುಗಳು, ಮ್ಯೂಸಿಕ್, ಸ್ತೋತ್ರಗಳು ಇತ್ಯಾದಿಗಳಿಂದ ಮಗುವನ್ನು ಖುಷಿಪಡಿಸುತ್ತಾ ಆಹಾರ ಸೇವಿಸಿ. ನಿಮ್ಮ ಕಾಲುಗಳ ಮೇಲೆ ಮಗುವನ್ನು ಮಲಗಿಸಿಕೊಂಡು ಆಹಾರ ಸೇವಿಸಿ. ಯಾಕಂದ್ರೆ ಅವರಿನ್ನು ನಿಮ್ಮ ತೊಡೆಯ ಮೇಲೆ ಮಲಗಿ ಹಾಲು ಕುಡಿಯುವ ಮುದ್ದು ಕೂಸು ಎಂಬುದು ನಿಮಗೆ ತಿಳಿದೇ ಇದೆ. ಹಾಗಾಗಿ ನಿಮ್ಮ ತೊಡೆ ಮಗುವಿಗೆ ಸುರಕ್ಷತೆ ಇರುವ ತಾಣವಾಗಿರುತ್ತದೆ. ನಂತರದ ದಿನಗಳಲ್ಲಿ ನೀವು ನಿಧಾನವಾಗಿ ಫೀಡಿಂಗ್ ಚೇರ್ ಗಳಿಗೆ ಶಿಫ್ಟ್ ಆಗಬಹುದು.

ಮೇಲಿನವುಗಳಲ್ಲಿ ನಿಮ್ಮ ಮಗುವಿಗೆ ಯಾವುದು ಹೆಚ್ಚು ಪ್ರಿಯವಾಗುತ್ತದೆ ಗಮನಿಸಿ. ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

6 Month Old Baby's Food Chart And Recipes in Kannada

Here we are discussing about 6 Month Old Baby's Food Chart And Recipes in Kannada. The first foods offered to a baby are called stage 1 baby food. They are pureed and strained so that the little ones can gulp and digest them easily. They are low on allergy grade. Read more.
Story first published: Saturday, May 29, 2021, 13:53 [IST]
X
Desktop Bottom Promotion