Just In
- 15 min ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 1 hr ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 9 hrs ago
ಶನಿವಾರದ ದಿನ ಭವಿಷ್ಯ (14-12-2019)
- 19 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
Don't Miss
- News
ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮಲ ವಿಸರ್ಜನೆ ವೇಳೆ ಮಗು ಅಳುವುದು ಯಾಕೆ?
ನವಜಾತ ಶಿಶುಗಳ ಆರೈಕೆ ಮಾಡುವುದು ಒಂದು ಅಗ್ನಿಪರೀಕ್ಷೆ ಎಂದರೆ ತಪ್ಪಾಗದು. ಯಾಕೆಂದರೆ ಕೇವಲ ತನ್ನ ಅಳುವಿನ ಮೂಲಕ ಮಾತ್ರ ಎಲ್ಲವನ್ನು ತಿಳಿಸುವ ಶಿಶುಗಳು ಯಾವ ಸಂದರ್ಭದಲ್ಲಿ ಯಾಕಾಗಿ ಅಳುತ್ತಿವೆ ಎಂದು ತಿಳಿಯುವುದು ತುಂಬಾ ಕಠಿಣ ಕೆಲಸ. ನವಜಾತ ಶಿಶುವಿಗೆ ಎಲ್ಲವೂ ಹೊಸತು ಆಗಿರುವ ಕಾರಣದಿಂದಾಗಿ ಪ್ರತಿಯೊಂದಕ್ಕೂ ಅದು ಅಳುವುದು. ಇದೇ ವೇಳೆ ಅದು ಮಲ ವಿಸರ್ಜನೆ ಮಾಡಿದರೂ ಅಳುವುದು. ಪ್ರತೀ ಸಲ ಮಲ ವಿಸರ್ಜನೆ ವೇಳೆ ಮಗು ಅಳುತ್ತಾ ಇದ್ದರೆ ಆಗ ಹೊಸ ಅನುಭವಕ್ಕೆ ಅದರ ಪ್ರತಿಕ್ರಿಯೆ ಆಗಿದೆ. ಮಗು ಅಳುತ್ತಿದ್ದರೆ ಆಗ ಅದಕ್ಕೆ ನೋವಾಗುತ್ತಿದೆ ಎಂದು ಹೇಳಲು ಬರದು. ಹೀಗಾಗಿ ಮೊದಲ ಸಲ ತಾಯಿ ಆಗುತ್ತಿರುವವರು ಮಗು ಮಲ ವಿಸರ್ಜನೆ ವೇಳೆ ಅಳುವುದು ಯಾಕೆ ತಿಳಿಯಿರಿ.

ಅಪ್ರೌಢ ದೇಹ
ಮಲಗಿರುವ ವೇಳೆ ಮಲ ವಿಸರ್ಜನೆ ಮಾಡುವುದು ತುಂಬಾ ಕಠಿಣ. ಕರುಳಿನ ಕ್ರಿಯೆಗಳಿಂದಾಗಿ ಮಗುವಿಗೆ ಮಲ ವಿಸರ್ಜನೆ ವೇಳೆ ಹೆಚ್ಚು ಒತ್ತಡ ಬೀಳಬಹುದು. ಮಗು ಕುಳಿತುಕೊಂಡು ಮಲ ವಿಸರ್ಜನೆ ಮಾಡುವುದಿಲ್ಲ. ಇದರಿಂದಾಗಿ ಮಗುವಿಗೆ ಮಲ ವಿಸರ್ಜನೆ ಮಾಡಲು ಹೆಚ್ಚು ಶಕ್ತಿ ಬೇಕಾಗುವುದು. ಮಗು ಬೆಳವಣಿಗೆ ಆಗದೆ ಇರುವ ಕಾರಣದಿಂದಾಗಿ ಇದು ತುಂಬಾ ಕಠಿಣವಾಗಿರುವುದು. ಇದರಿಂದಾಗಿ ಮಗು ಮಲ ವಿಸರ್ಜನೆ ವೇಳೆ ಅಳುವುದು.

ಮಗುವಿನ ಮಲಬದ್ಧತೆ
ಮಲ ಹೊರಹಾಕಲು ಮಗು ತುಂಬಾ ಅಳುತ್ತಿದ್ದರೆ ಆಗ ನೀವು ಮಗುವಿಗೆ ಮಲಬದ್ಧತೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಗಟ್ಟಿ, ಒಣ ಮಲ ವಿಸರ್ಜನೆ ಮಾಡುತ್ತಲಿದ್ದರೆ, ಸ್ತನಪಾನ ಮಾಡುತ್ತಿರುವ ಮಗು ಒಂದು ವಾರ ಅಥವಾ ಬಾಟಲಿ ಹಾಲು ಕುಡಿಯುವ ಮಗು ಮೂರು ದಿನಗಳ ಕಾಲ ಮಲ ವಿಸರ್ಜನೆ ಮಾಡದೆ ಇದ್ದರೆ ಆಗ ಮಗುವಿಗೆ ಮಲಬದ್ಧತೆ ಆಗಿದೆ ಎಂದು ತಿಳಿಯಬೇಕು. ಮಲಬದ್ಧತೆ ಪರಿಣಾಮವಾಗಿ ಮಗುವಿಗೆ ಮಲ ವಿಸರ್ಜನೆ ಮಾಡಲು ತುಂಬಾ ಕಷ್ಟವಾಗಬಹುದು. ಇದರಿಂದ ಅದಕ್ಕೆ ನೋವು ಆಗಬಹುದು.
Most Read:ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

ಆಹಾರಕ್ರಮ ಹೀಗಿರಲಿ
ಮಗುವಿಗೆ ಮಲಬದ್ಧತೆ ಕಡಿಮೆ ಮಾಡಲು ತಾಯಂದಿರು ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಬೇಕು. ಮಗುವಿಗೆ ನೀಡುವಂತಹ ಆಹಾರದಲ್ಲಿ ಸಕ್ಕರೆ ದ್ರಾವಣ ಬೆರೆಸಿಕೊಳ್ಳಿ. ನಾಲ್ಕು ತಿಂಗಳಿಗಿಂತ ದೊಡ್ಡ ಮಗುವಾಗಿದ್ದರೆ ಆಗ ತಾಜಾ ಹಣ್ಣಿನ ಜ್ಯೂಸ್ ನೀಡಿ. ಮಗು ಘನ ಆಹಾರ ಸೇವನೆ ಮಾಡುತ್ತಲಿದ್ದರೆ ಆಗ ನೀವು ಮಗುವಿಗೆ ನಾರಿನಾಂಶವು ಹೆಚ್ಚಾಗಿರುವ ಆಹಾರ ನೀಡಬೇಕು. ಇದರಲ್ಲಿ ಮುಖ್ಯವಾಗಿ ಬಸಳೆ, ಬಟಾಣಿ ಕಾಳು ಇತ್ಯಾದಿಗಳು. ಈ ಮದ್ದುಗಳು ಫಲ ನೀಡದೆ ಇದ್ದರೆ ಆಗ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಮಕ್ಕಳಲ್ಲಿ ಮಲಬದ್ಧತೆ ಕಾಡಲು ಪ್ರಮುಖ ಕಾರಣವೆಂದರೆ ಅವರ ದೇಹಕ್ಕೆ ಸರಿಯಾಗಿ ದ್ರವಾಹಾರ ಸಿಗದೆ ಇರುವುದು ಮತ್ತು ಹೊಸ ಆಹಾರ ಅಥವಾ ಬೇರೆ ಯಾವುದೇ ಆಹಾರ ನೀಡಿದರೆ ಹೀಗೆ ಆಗಬಹುದು.

ಗ್ಯಾಸ್ನ ನೋವು
ಮಲ ವಿಸರ್ಜನೆ ವೇಳೆ ಮಗು ಅಳಲು ಮತ್ತೊಂದು ಕಾರಣವೆಂದರೆ ಅದು ಗ್ಯಾಸ್ ನ ನೋವು. ಮಲ ವಿಸರ್ಜನೆ ಮಾಡುವ ವೇಳೆ ನೋವು ಹೆಚ್ಚಾಗುವುದು. ಗ್ಯಾಸ್ ಹೊಟ್ಟೆಯಲ್ಲಿ ತುಂಬಿರುವ ಕಾರಣದಿಂದಾಗಿ ಮಗು ಅಳುತ್ತಾ ಇರಬಹುದು. ಸ್ತನದ ಹಾಲು ಅಥವಾ ಹಾಲು ಅತಿಯಾಗಿ ಸೇವನೆಯಿಂದಾಗಿ ಕೆಲವೊಂದು ಪೋಷಕಾಂಶಗಳು ಕರಗದೆ ಗ್ಯಾಸ್ ನಿರ್ಮಾನವಾಗಬಹುದು. ಆಹಾರ ನೀಡುವ ಕ್ರಮ, ಮಲಬದ್ಧತೆ ಮತ್ತು ಕರುಳಿನ ಸೋಂಕು ಮಗುವಿನಲ್ಲಿ ಗ್ಯಾಸ್ ಉಂಟು ಮಾಡಬಹುದು.
Most Read: ಮಗುವಿನ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳು ಮತ್ತು ಚಿಕಿತ್ಸೆಗಳು

ಗ್ಯಾಸ್ನ ನೋವು
ಮಗುವಿಗೆ ಆಹಾರ ನೀಡಿದ ಬಳಿಕ ತೇಗು ಬರಿಸಿದರೆ ಮಗುವಿಗೆ ಗ್ಯಾಸ್ ಸಮಸ್ಯೆ ಕಡಿಮೆ ಆಗುವುದು. ಹೊಟ್ಟೆಯಲ್ಲಿ ಕಟ್ಟಿಕೊಂಡಿರುವ ಗ್ಯಾಸ್ ಹೊರಗಡೆ ಬರಲು ಮಸಾಜ್ ಮಾಡಬೇಕು ಮತ್ತು ಸಾಕಷ್ಟು ನೀರು ಕುಡಿಸಿ. ಕೆಲವು ಹನಿ ಸಕ್ಕರೆ ನೀರು ನೀಡಿದರೆ ಇದು ಪರಿಹಾರ ನೀಡುವುದು.
ಮಲ ವಿಸರ್ಜನೆ ವೇಳೆ ಮಗು ತುಂಬಾ ಅಳುತ್ತಿದ್ದರೆ ಅಥವಾ ಕಿರುಚಿದರೆ, ಮುಖದಲ್ಲಿನ ಹಾವಭಾವ ಬದಲಾದರೆ ಆಗ ನೀವು ಚಿಂತೆ ಮಾಡಬೇಕಾಗಿಲ್ಲ. ಇದು ಒಂದು ವೈದ್ಯಕೀಯ ಸಮಸ್ಯೆ ಎಂದು ಭಾವಿಸಬೇಕಾಗಿಲ್ಲ. ಆದರೆ ಕೆಲವು ದಿನಗಳಿಂದ ಮಗು ಮಲ ವಿಸರ್ಜನೆ ಮಾಡದೆ ಇದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಮಗುವಿನ ಹೊಟ್ಟೆಗೆ ನೀವು ಮಸಾಜ್ ಮಾಡಿ ಗ್ಯಾಸ್ ಹೊರಗೆ ಬರಲು ಪ್ರಯತ್ನಿಸಬಹುದು ಅಥವಾ ಮಗುವಿಗೆ ನೀಡುವಂತಹ ಆಹಾರದಲ್ಲಿ ಬದಲಾವಣೆ ಮಾಡಿ ಪರೀಕ್ಷಿಸಬಹುದು.